ಪಂಚಭೂತ ಕ್ಷೇತ್ರಗಳು ..!
ಪ್ರಪಂಚದ ಎಲ್ಲ ವಸ್ತುಗಳೂ ಈ ಐದು ಮೂಲವಸ್ತುಗಳಿಂದ ಮಾಡಲ್ಪಟ್ಟಿವೆ ಎಂದು ನಂಬಿಕೆ. ಇದೇ ಕಾರಣಕ್ಕೆ ಈ ಐದು ವಸ್ತುಗಳನ್ನು ದೇವರೆಂದೂ ಪೂಜಿಸುತ್ತಾರೆ. ದಕ್ಷಿಣ ಭಾರತದಲ್ಲಿ ಶಿವನ ಆರಾಧನೆಯ ಐದು ಪ್ರಮುಖ ಪವಿತ್ರ ಸ್ಥಳಗಳನ್ನು ಒಟ್ಟಾಗಿ “ಪಂಚಭೂತ- ಕ್ಷೇತ್ರಗಳು” ಎಂದು ಕರೆಯಲಾಗುತ್ತದೆ.
1.. ಏಕಾಮ್ರೇಶ್ವರ ದೇವಸ್ಥಾನ
ಕ್ಷೇತ್ರ – ಕಂಚಿ, ತಮಿಳುನಾಡು
ಪೃಥ್ವೀತತ್ತ್ವ.
ಭೂಮಿಯು ಈ ಪಂಚಭೂತಗಳಲ್ಲಿ ಮೊದಲನೆಯ ಮತ್ತು ಅತ್ಯಂತ ಕನಿಷ್ಠ (ಕೆಳಗಿನ) ಮೂಲವಸ್ತು. ಇದು ಪ್ರತಿನಿಧಿಸುವ ಆಕಾರ ಚೌಕ, ಬಣ್ಣ ಹಳದಿ, ಇಂದ್ರಿಯ ಅಥವಾ ಗ್ರಹಿಕೆ ವಾಸನೆ, ಕಾರ್ಯ ವರ್ಜಿಸುವಿಕೆ (ಗುದ), ಚಕ್ರ ಮೂಲಾಧಾರ, ದೇವರು ಗಣೇಶ, ಬೀಜ “ಲಾಂ”
2..ತಿರುವಣ್ಣೈಕ್ಕಾವಲ್ ದೇವಸ್ಥಾನ
ತಿರುಚಿರಾಪಳ್ಳಿ, ತಮಿಳುನಾಡು. ಜಲತತ್ತ್ವ
ಜಲ ಅಥವಾ ನೀರು ಪಂಚಭೂತಗಳಲ್ಲಿ ಎರಡನೆಯ ಮೂಲವಸ್ತು. ಇದು ಪ್ರತಿನಿಧಿಸುವ ಆಕಾರ ಅರ್ಧ ಚಂದ್ರಾಕೃತಿ, ಬಣ್ಣ ಬೆಳ್ಳಿ, ಇಂದ್ರಿಯ ಅಥವಾ ಗ್ರಹಿಕೆ ರುಚಿ, ಕಾರ್ಯ ಸಂತಾನೋತ್ಪತ್ತಿ (ಲೈಂಗಿಕ ಅಂಗ), ಚಕ್ರ ಸ್ವಾಧಿಷ್ಠಾನ, ದೇವರು ವಿಷ್ಣು, ಬೀಜ “ವಾಂ”
3.. ಅರುಣಾಚಲೇಶ್ವರ ತ್ತಿರುಕ್ಕೋಯಿಲ್ .
ತಿರುವಣ್ಣಾಮಲೈ, ತಮಿಳುನಾಡು. (ತೇಜಸ್ಸು) ಅಗ್ನಿತತ್ತ್ವ
ಅಗ್ನಿ ಅಥವಾ ತೇಜಸ್ಸು ಅಥವಾ ಬೆಂಕಿ ಪಂಚಭೂತಗಳಲ್ಲಿ ಮೂರನೆಯ ಮೂಲವಸ್ತು. ಇದು ಪ್ರತಿನಿಧಿಸುವ ಆಕಾರ ತ್ರಿಕೋನ, ಬಣ್ಣ ಕೆಂಪು, ಇಂದ್ರಿಯ ಅಥವಾ ಗ್ರಹಿಕೆ ದೃಷ್ಟಿ, ಕಾರ್ಯ ಚಲನೆ (ಪಾದಗಳು), ಚಕ್ರ ಮಣಿಪೂರ, ದೇವರು ಸೂರ್ಯ, ಬೀಜ “ರಾಂ”
4…ಕಾಳಹಸ್ತೀಶ್ವರ ದೇವಸ್ಥಾನ.
ಕಾಳಹಸ್ತಿ (ತಿರುಪತಿ ಹತ್ತಿರ), ಆಂಧ್ರಪ್ರದೇಶ
ವಾಯುತತ್ತ್ವ.
ವಾಯು ಅಥವಾ ಗಾಳಿ ಪಂಚಭೂತಗಳಲ್ಲಿ ನಾಲ್ಕನೆಯ ಮೂಲವಸ್ತು. ಇದು ಪ್ರತಿನಿಧಿಸುವ ಆಕಾರ ವರ್ತುಲ, ಬಣ್ಣ ನೀಲಿ ಅಥವಾ ಕಪ್ಪು, ಇಂದ್ರಿಯ ಅಥವಾ ಗ್ರಹಿಕೆ, ಸ್ಪರ್ಶ, ಕಾರ್ಯ ನಿರ್ವಹಣೆ (ಕೈಗಳು), ಚಕ್ರ ಅನಾಹತ, ದೇವರು ಶಿವ, ಬೀಜ “ಯಾಂ”
5.. ನಟರಾಜ ದೇವಸ್ಥಾನ
ಚಿದಂಬರಂ, ತಮಿಳುನಾಡು .
ಆಕಾಶತತ್ತ್ವ
ಆಕಾಶ ಅಥವಾ ಅಂತರಿಕ್ಷ ಪಂಚಭೂತಗಳಲ್ಲಿ ಐದನೆಯ ಅಥವಾ ಉನ್ನತ ಮೂಲವಸ್ತು. ಇದು ಪ್ರತಿನಿಧಿಸುವ ಆಕಾರ ಜ್ವಾಲೆ, ಬಣ್ಣ ನೇರಳೆ, ಇಂದ್ರಿಯ ಅಥವಾ ಗ್ರಹಿಕೆ ಶ್ರವಣ (ಕೇಳಿಸಿಕೊಳ್ಳುವದು), ಕಾರ್ಯ ಸಂಪರ್ಕ (ಗಂಟಲು), ಚಕ್ರ ವಿಶುದ್ಧ, ದೇವರು ದೇವಿ, ಬೀಜ “ಹಾಂ”
………………………………..