ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸಾರಂಗಪಾಣಿ ಶ್ರೀ ಲಕ್ಷ್ಮೀ ದೇವಸ್ಥಾನ

ಸಾರಂಗಪಾಣಿ ಶ್ರೀ ಲಕ್ಷ್ಮೀ ದೇವಸ್ಥಾನ

ಶ್ರೀಲಕ್ಷ್ಮಿಯು ಹೇಮ ಋಷಿಯ ಮಗಳಾಗಿ ಮತ್ತೆ ವಿಷ್ಣುವಿನ ಕೈಹಿಡಿದ ಈ ಸ್ಥಳಕ್ಕೆ ಅಪರೂಪದ ಕಥೆಯನ್ನು ಸಾರುವ ಅದ್ಭುತ ದೇವಾಲಯವೇ #ಸಾರಂಗಪಾಣಿ_ದೇವಸ್ಥಾನ’.

ಇದೇ ದೇವಾಲಯಲ್ಲಿ ಶ್ರೀ ವಿಷ್ಣು, ಅಳಿಯನಾಗಿದ್ದು, ಈ ಪುಣ್ಯಸ್ಥಳಕ್ಕಿದೆ, ಮಹತ್ವದ ಹಿನ್ನಲೆಯನ್ನು ಗಮನಿಸೋಣ.

ಒಮ್ಮೆ #ಭೃಗು ಮಹರ್ಷಿ ವಿಷ್ಣುವನ್ನು ಕಾಣಲು ವೈಕುಂಠಕ್ಕೆ ಬಂದಾಗ, ವಿಷ್ಣುವು ಭೃಗು ಮಹರ್ಷಿ ಬಂದಿದ್ದನ್ನು ಗಮನಿಸದೇ ಆದಿಶೇಷನ ಮೇಲೆ ಮಲಗಿದ್ದನು.
ವಿಷ್ಣುವಿನ ಜೊತೆ ಲಕ್ಷ್ಮೀದೇವಿ ವಿಷ್ಣುವಿನ ಕಾಲನ್ನು ಒತ್ತುತ್ತಿದ್ದಳು.

ತಾನು ಬಂದಿದ್ದನ್ನು ಗಮನಿಸದೇ ಇದ್ದ ವಿಷ್ಣುವನ್ನು ಕಂಡ ಭೃಗು ಮಹರ್ಷಿಗಳ ಕಣ್ಣು ಕೆಂಪಾಯಿತು. ಕೋಪಗೊಂಡಿದ್ದ ಭೃಗುಮಹರ್ಷಿ ಶ್ರೀ ಲಕ್ಷ್ಮೀದೇವಿಯ ವಾಸಸ್ಥಳವಾದ ವಿಷ್ಣುವಿನ ಎದೆಗೆ ಒದೆಯುತ್ತಾನೆ. ವಿಷ್ಣುವು ಭೃಗು ಮುನಿಯನ್ನು ಸಮಾಧಾನಪಡಿಸಲೋಸುಗ ಅವನ ಕಾಲುಗಳನ್ನು ಕೈಗೆ ತೆಗೆದುಕೊಂಡು ಒತ್ತಲು ಪ್ರಾರಂಭಿಸುತ್ತಾನೆ.

ಮುನಿಯ ಬಲಗಾಲಲ್ಲಿದ್ದ, ಅಹಂಕಾರವನ್ನು ಪ್ರತಿನಿಧಿಸುತ್ತಿದ್ದ ಕಣ್ಣನ್ನು ಹಿಸುಕುತ್ತಾನೆ. ಆಗ ಭೃಗ ಋಷಿಗೆ ತನ್ನ ತಪ್ಪಿನ ಅರಿವಾಗಿ, ವಿಷ್ಣುವನ್ನು ಮೋಕ್ಷಕ್ಕಾಗಿ ಕೇಳಿಕೊಳ್ಳುತ್ತಾನೆ.

  ಊಟದ ನಿಯಮಗಳು

ಭೃಗುಮುನಿ ಸಣ್ಣ ದೇವಾಲಯದಲ್ಲಿ ಕುಳಿತು ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ಕಡೆಗೆ ಆತನಿಗೆ ವಿಷ್ಣುವಿನ ದರ್ಶನ ಕೂಡ ಪ್ರಾಪ್ತಿಯಾಗುತ್ತದೆ.

ನಂತರ ಭೃಗು ಮಹರ್ಷಿ ಇದೇ ಸ್ಥಳದಲ್ಲಿ ವಿಷ್ಣುವಿನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಾನೆ. ಇದೇ ವೇಳೆ ಲಕ್ಷ್ಮೀ ದೇವಿಯು ತಾವರೆ ಹೂವಿನ ಮಧ್ಯದಿಂದ ಉದ್ಭವಿಸುತ್ತಾಳೆ.

ತಂದೆಯಾಗಿ ಎಲ್ಲಾ ಸೇವೆಗಳನ್ನು ಮಾಡುತ್ತಾನೆ. ಇನ್ನು ಯುಕ್ತ ವಯಸ್ಸು ಬಂದ ಮೇಲೆ ಆಕೆಗೆ ವರನನ್ನು ಹುಡುಕುವುದನ್ನು ಪ್ರಾರಂಭಿಸುತ್ತಾನೆ.

ಇತ್ತ ಲಕ್ಷ್ಮೀದೇವಿಯನ್ನು ಹುಡುಕುತ್ತಾ ಶ್ರೀನಿವಾಸನು ಭೂಲೋಕಕ್ಕೆ ಬರುತ್ತಾನೆ. ಲಕ್ಷ್ಮೀ ದೇವಿಯನ್ನು ಹುಡುಕುತ್ತಾ ಬಂದ ಶ್ರೀನಿವಾಸನಿಗೆ ಭೃಗುಮುನಿ ತಪಸ್ಸು ಮಾಡಿದ ಸ್ಥಳದಲ್ಲಿ ಕೋಮಲಾಂಬೆ ಕಾಣಿಸುತ್ತಾಳೆ.

ಆಕೆಯು ಲಕ್ಷ್ಮೀದೇವಿಯೇ ಎಂದು ಗುರುತಿಸಿ ಶ್ರೀನಿವಾಸನು ಆಕೆಯನ್ನು ಪಡೆಯುವ ಉದ್ದೇಶದಿಂದ ಮರದ ಪೊದೆಯಲ್ಲಿ ಕೆಲವು ಸಮಯ ಅಡಗಿಕೊಳ್ಳುತ್ತಾನೆ. ಇದರಿಂದಾಗಿ ಶ್ರೀನಿವಾಸನಿಗೆ ಪಾತಾಳ ಶ್ರೀನಿವಾಸ ಎಂದು ಹೆಸರು ಬಂದಿದೆ.

  ಮಹಾಲಕ್ಷ್ಮಿ ದೇವಸ್ಥಾನ, ಗುಬ್ಬಿ

ಅಲ್ಲಿರುವ ಈ ದೇವಾಲಯದಲ್ಲಿ ಶ್ರೀಲಕ್ಷ್ಮೀ ದೇವಿಯು ಕಮಲದಲ್ಲಿ ಹುಟ್ಟಿದಳಾದ್ದರಿಂದ ಲಕ್ಷ್ಮೀದೇವಿಯ ಹುಟ್ಟಿದ ಸ್ಥಳ ಸಾರಂಗಪಾಣಿ ಅಂತ ಪ್ರಖ್ಯಾತಿ ಪಡೆಯಿತು.

ಸಂಸ್ಕೃತದಲ್ಲಿ ‘ಸಾರಂಗ’ ಎಂದರೆ ಧನಸ್ಸು ಎಂತಲೂ ಪಾಣಿ ಅಂದರೆ ಅದನ್ನು ಹಿಡಿದವನೆಂತಲೂ ಅರ್ಥವಿದೆ. ಹಾಗಾಗಿ ಇಲ್ಲಿ ವಿಷ್ಣು ಸಾರಂಗಪಾಣಿಯಾಗಿ ಭಕ್ತರನ್ನು ಹರಸುತ್ತಿದ್ದಾನೆ ಎಂಬ ವಾಡಿಕೆ. ಈ ಪವಿತ್ರಸ್ಥಳವಿರುವುದು

ತಮಿಳುನಾಡಿನ ಕುಂಭಕೋಣಂ ರಾಜ ಗೋಪುರ

ಕುಂಭಕೋಣಂ ಪಟ್ಟಣದಲ್ಲೆ ಅತಿ ಎತ್ತರದ ರಾಜ ಗೋಪುರ ಹೊಂದಿರುವ ದೇವಾಲಯ ಇದಾಗಿದ್ದು ಇದರ ಆವರಣದಲ್ಲಿ ನಾಲ್ಕು ಚಿಕ್ಕ ಗೋಪುರಗಳೂ ಸಹ ಇರುವುದನ್ನು ಕಾಣಬಹುದು.

ಅಲ್ಲದೆ ಕೆಲವು ಕಲ್ಯಾಣಿಗಳು ದೇವಾಲಯದ ಆವರಣದಲ್ಲಿದ್ದು ಪವಿತ್ರಮಯ ‘ಪೊಟ್ರಮರೈ ಕಲ್ಯಾಣಿ’ಯಲ್ಲಿ ಶ್ರೀಲಕ್ಷ್ಮೀದೇವಿಯ ಉತ್ಸವ ನಡೆಸಲಾಗುತ್ತದೆ.

  ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸ್ಥಳ ಪುರಾಣ

ಇಲ್ಲಿ ಶ್ರೀನಿವಾಸ ತನ್ನ ಶಯನ ಸ್ಥಿತಿಕ್ಕಿಂತ ಸ್ವಲ್ಪ ಮೇಲೆ ಎದ್ದ ಸ್ಥಿತಿಯಲ್ಲಿ ದರ್ಶನವನ್ನು ನೀಡುತ್ತಾನೆ. ಇದನ್ನು ‘ಉದ್ದಾನ ಶಯನ ಭಂಗಿ’ ಅಂತಲೂ ಕರೆಯುತ್ತಾರೆ. ಇಂತಹ ಸ್ಥಿತಿಯಲ್ಲಿ ವಿಷ್ಣುವಿನ ವಿಗ್ರಹ ಇರುವುದು ಪ್ರಪಂಚದಲ್ಲಿ ಇದೊಂದೇ ಸ್ಥಳದಲ್ಲಿ.

ಜನರ ಪಾಲಿಗೆ ಅರಾಧ್ಯ ದೇವಿಯಾಗಿದ್ದು, ತಮ್ಮನ್ನು ನಂಬಿ ಬರುವ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಹೋಗಲಾಡಿಸುವ ಮಹಾಶಕ್ತಿಯಾಗಿದ್ದಾಳೆ.

ಪ್ರತಿದಿನ ಲಕ್ಷ್ಮೀದೇವಿಗೆ ತಾವರೆ ಹೂವುಗಳಿಂದ ಅಲಂಕಾರ ಮಾಡಲಾಗುತ್ತದೆ. ಸಾವಿರಾರು ಭಕ್ತರು ಈಕೆಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಸಾರಂಗಪಾಣಿ ಕ್ಷೇತ್ರದಲ್ಲಿ ಬರುತ್ತಾರೆ.

Leave a Reply

Your email address will not be published. Required fields are marked *

Translate »