ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಭಾರತದ ಸಾಮಾನ್ಯ ನೌಕರ – Indian Common Labour – Worker – ಪ್ರಜಾಕೀಯ

ಭಾರತದ ಸಾಮಾನ್ಯ ನೌಕರ – Indian Common Labour – Worker.

ನಾವೆಲ್ಲಾ ಬ್ಯುಸಿನೆಸ್ ಮ್ಯಾನ್, ರಾಜಕಾರಣಿ, ಚಲನಚಿತ್ರ ತಾರೆಯರು, ಸೈಂಟಿಸ್ಟ್, ಸಮಾಜ ಸೇವಕರು, ಸಾಧಕರು- ಬೋಧಕರು, ಲೇಖಕರು, ಹೀಗೆ ನಮ್ಮ ರಾಜ್ಯದ- ದೇಶದ ಕೇವಲ 5% ಪ್ರಜೆಗಳ ವಿಷಯ ಕಳೆದ 72 ವರ್ಷದಿಂದ ಮಾತನಾಡುತ್ತಾ… ನಮ್ಮ ದೇಶದ 95% ಕಾರ್ಮಿಕರನ್ನು ಮರೆತೇ ಬಿಟ್ಟೆವು.

ಜೀವನ ಪರ್ಯಾಂತ ಸೆಣಸುವ ಪ್ರಜೆಯನ್ನು ನಾವೆಲ್ಲಾ ಎಂದೊ ಮರೆತಿರುವೆವು. ಮಾಧ್ಯಮಗಳಂತೂ ಈ 5% ಪ್ರಜೆಗಳ ಬಕೆಟ್ಗಳಾಗಿ ಪರಿವರ್ತನೆ ಹೊಂದಿರುವುದು. TRP ಬಿಟ್ಟರೆ ರಾಜ್ಯ ಹಾಗು ದೇಶದ ಪ್ರಜೆಗಳು ನೆರೆಯಲ್ಲಿ ಹೋದರೂ ಅವರಿಗೆ ಅವಶ್ಯಕತೆ ಇಲ್ಲ. TRP ಬೇಕಲ್ಲ !

ಆ 5% ಪ್ರಜೆಗಳ ಹಣ ಹಾಗು ಐಡಿಯಾ ಇರಬಹುದು. ಆದರೆ, ದೇಶದ ಉತ್ಪಾದನೆ ಉಳಿದ 95 % ಪ್ರಜೆಗಳಿಂದಲೆ ನಡೆಯಬೇಕು. ಯಾವುದೇ ಪ್ರಚಾರ ಬಯಸದೆ, ದಿನಾಲು ಮೆಶೀನ್ನಂತೆ ಕೆಲಸ ಮಾಡುವ ಆ ಕಾರ್ಮಿಕನೆ ದೇಶವನ್ನು ಬದಲಾವಣೆ ಮಾಡುತ್ತಿರುವನು. ಅದು ರಾಜಕೀಯಾವಾಗಲಿ, ಅಬಿವ್ರದ್ದಿಯಾಗಲಿ ಅಥವಾ ಯಾರನ್ನೋ ತಾರೆಯಾಗಿ ಮಾಡುವುದಾಗಲಿ, ಎಲ್ಲವೂ ಕಾರ್ಮಿಕನಿಂದಲೆ ಆಗಬೇಕು.

ಆದರೆ ನಾವೆಲ್ಲರೂ ಇವರನ್ನು ಮರೆತು ಬಿಟ್ಟಿರುವೆವು.

ಕಾರ್ಮಿಕರು( ಎಲ್ಲಾ ರೀತಿಯ ಕೆಲಸಗಾರರು, ರೈತನೂ ಸೇರಿ) ಯಾವಾ ದೇಶದಲ್ಲಿ ಆತ್ಮ ಸಮ್ಮಾನದಿಂದ ಜೀವಿಸುವರೊ, ಆ ದೇಶ ಅಬಿವ್ರದ್ದಿ ಹೊಂದಿದ ದೇಶವಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

  ದೇಶ ಉದ್ದಾರವಾಗುವುದಾದರೂ ಹೇಗೆ ?

ಅಂದರೆ ಅವನ ಮೂಲಭೂತ ಸೌಕರ್ಯ- ಸೌಲಭ್ಯಗಳ ಪೂರೈಕೆಯಾಗುವುದೋ, ಅಂದು ದೇಶ- ರಾಜ್ಯದಲ್ಲಿ ಸುಬಿಕ್ಷೆ ಇರುವುದು.

ಕಟ್ಟ ಕಡೆಯ ಸಹಾಯಕ( Helper) ನಿಗೂ ತನ್ನ ಹಾಗು ಕುಟುಂಬದ ಮೂಲಭೂತ ಅವಶ್ಯಕತೆಗೆ ಬೇಕಾದಷ್ಟು, ಕನೀಷ್ಟ ವೇತನ ಹಾಗು ಮೂಲಭೂತ ಸೌಕರ್ಯ – ಸೌಲಭ್ಯ ಒದಗಿಸಿದಾಗ, ಅವನ ಜೀವನ ನೆಮ್ಮದಿ ಹಾಗು ಆತ್ಮ ಸಮ್ಮಾನದಿಂದ ಬದುಕುವಂತಾಗುವುದು.

ಈಗ- ಇಂದು- ಇವತ್ತಿನ ಸಮಯದಲ್ಲಿ ಒಂದು ಕುಟುಂಬವು ನೆಮ್ಮದಿಯಿಂದ ಬದುಕಲು ಕನೀಷ್ಟ
₹ 20,000 ( 20ಸಾವಿರ) ತಿಂಗಳಿಗೆ ಬೇಕಾಗುವುದು.

ದಿನಕೂಲಿಯಾದರೆ ₹ 800 ರಿಂದ 1,000 ( 24- 25ದಿನ ಪ್ರತೀ ತಿಂಗಳು). ….continued next.

Continued from Early Post.

ಇದು ಕನೀಷ್ಟ ವೇತನವಾಗ ಬೇಕು. ಯಾವ ಕೆಲಸವೂ ಇದಕ್ಕಿಂತ ಕಡಿಮೆ ವೇತನದ್ದಾಗಿರ ಬಾರದು. ಇದು ಎಲ್ಲದ್ದಕ್ಕೂ ಮೂಲವಾಗಬೇಕು.ಇದರ ಮೇಲೆ 125% Skilled Labour( ₹ 25,000) 175% ಇಂಜಿನಿಯರ್ ಗಳಿಗೆ ( ₹ 35,000) 200% ಡಾಕ್ಟರ್ ಗಳಿಗೆ ( ₹ 40,000) ಕನೀಷ್ಟ ವೇತನ ನಿರ್ಧರಿಸಿ, ಅದನ್ನು ಚಾಚು ತಪ್ಪದೆ ಪಾಲಿಸುವಂತೆ, ಎಲ್ಲಾ ಬುಸಿನೆಸ್ನವರಿಗೂ ತಾಕೀತು ಮಾಡಬೇಕು.
ಈಗಾಗಲೇ ಅದಕ್ಕಿಂತ ಜಾಸ್ತಿ ವೇತನ+ ಭತ್ಯೆ ಕೊಡುವ ಕಂಪೆನಿಗಳಿಗೆ ಇದರಿಂದ ಯಾವುದೇ ಬದಲಾವಣೆ ಮಾಡುವ ಅವಶ್ಯಕತೆ ಇರುವುದಿಲ್ಲ.

  ಪ್ರಜಾಕೀಯದಿಂದ ಗ್ರಾಮ ಅಭಿವೃದ್ಧಿ ಯೋಜನೆ ಹೇಗಿರುತ್ತೆ ?

ಈ ಕನಿಷ್ಟ ವೇತನ ಜಾರಿಯಾದರೆ, ಹಳ್ಳಿಗಳಲ್ಲಿ ಈ ವೇತನ ಸಿಕ್ಕಿದರೆ, ಪ್ರಜೆಗಳ ಪಟ್ಟಣ ಪಲಾಯಣ ತನ್ನಷ್ಟಕ್ಕೆ ನಿಲ್ಲುವುದು.
ಪ್ರತೀಯೊಬ್ಬ ಕಾರ್ಮಿಕನು ನೆಮ್ಮದಿಯಿಂದ ಜೀವನ ನಡೆಸುವಂತಾಗುವುದು.
ಈ ಸಂದರ್ಭದಲ್ಲಿ ಎಲ್ಲಾ ಬುಸಿನೆಸ್ಗಳು ಸ್ವಲ್ಪ ಬದಲಾವಣೆ ಮಾಡಬೇಕಾಗುವುದು. ಅವರ ಆದಾಯದ ಶೇಖಡಾ ಹೆಚ್ಚಿಸಬೇಕಾಗುವುದು. ಆವಾಗ ಹಣದುಬ್ಬರ( Inflation) ಖಂಡಿತಾ ಆಗುವುದು. ಕೆಲವೇ ಸಮಯದಲ್ಲಿ ಮಾರ್ಕೇಟ್ ಇದನ್ನು ಅಳವಡಿಸಿ ಕೊಂಡಿರುತ್ತದೆ. 6 ತಿಂಗಳಿಂದ 1ವರ್ಷದೊಳಗೆ ಇದು ಸಮತೋಲನಕ್ಕೆ ಬರುವುದು.
ಇದರೊಂದಿಗೆ ಗುಣಮಟ್ಟದ ಸರ್ಕಾರಿ ವಿಧ್ಯಾಭ್ಯಾಸ ಹಾಗು ಆರೋಗ್ಯ ಉಚಿತವಾಗಿ ಸಿಕ್ಕರೆ, ಕಾರ್ಮಿಕನ ಜೀವನ ಅತೀ ನೆಮ್ಮದಿ ಹಾಗು ಸುಖಮಯವಾಗುವುದು.

ನಮ್ಮ ರಾಜಕಾರಣಿಗಳು ಹಾಗು ಸರ್ಕಾರಗಳು ಇದನ್ನು ಮಾಡುವುದನ್ನು ಬಿಟ್ಟು, ಪ್ರಜೆಗಳ ನಾಲಗೆಗೆ ಬೆಲ್ಲ ಸವರಿ ಆನಂದ ಪಡುತ್ತಿದೆ.

ಬಿದ್ದವರನ್ನು ಏಳಿಸದಿದ್ದರೆ, ದೇಶದ ಯಾವುದೂ ಸರಿಯಾಗಿ ನಡೆಯಲು ಸಾಧ್ಯವಿಲ್ಲ.
ಪ್ರಜೆಗಳ ಕೈಯಲ್ಲಿ ಹಣ ಬಂದರೆ, ಮಾರ್ಕೇಟ್ ಗಳು ತುಂಬಿ ತುಳುಕುವುದು. ಆವಾಗ ಪ್ರೋಡಕ್ಷನ್ ಜಾಸ್ತಿಯಾಗಿ, ಉದ್ಯೋಗ ನಿರ್ಮಾಣವಾಗುವುದು ಖಂಡಿತಾ. ಆದರೆ ಮೊದಲು 6 ರಿಂದ 12 ತಿಂಗಳು ಸ್ವಲ್ಪ ಹಿನ್ನಡೆಯಾಗ ಬಹುದು. ನಂತರ ಗ್ರೋತ್ ನಾಗಾಲೋಟ ಮಾಡುವುದು.
ಆವಾಗಲೆ ಸಣ್ಣ ಕೆಲಸ- ದೊಡ್ಡ ಕೆಲಸವೆಂಬ ಭೇದ ಭಾವವೂ ಇರುವುದಿಲ್ಲ.
ಬೇಸಿಕ್ ಬಟ್ಟೆ, ಊಟ, ಶಾಲೆ, ಆರೋಗ್ಯ, ಸೌಕರ್ಯ- ಸೌಲಭ್ಯ ಎಲ್ಲರೂ ಅನುಭವಿಸುವಾಗ ಆ ಭಾವನೆ ಬರುವುದೇ ಇಲ್ಲ. ಆಗಲೆ ರಾಮರಾಜ್ಯ ವಾಗುವುದು ಬಿಟ್ಟು, ದೇವಾಸ್ಥಾನ ಕಟ್ಟಿದ್ದರಿಂದ ಅಥವಾ ಜೈ ಶ್ರೀರಾಮ್ ಹೇಳಿದಾಗ ಅಥವಾ ಪೂಜೆ ಮಾಡಿದಾಗ ರಾಮರಾಜ್ಯವಾಗುವುದಿಲ್ಲ.

  ಪ್ರಜಾಕೀಯದ ಪರಿಕಲ್ಪನೆ

ಯಾವ ದೇಶದಲ್ಲಿ ಪ್ರಜೆಗಳಿಗೆ ಮೂಲಭೂತ ಸೌಕರ್ಯ- ಸೌಲಭ್ಯಗಳು ಒದಗಿ, ದೇಶದ ಕಾನೂನು ಪಾಲನೆಯಾಗುವುದೋ, ಆ ದೇಶ ರಾಮರಾಜ್ಯ ಆಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

ರಾಜಕಾರಣಿಗಳೇ, ಕೇವಲ ನಿಮ್ಮ ಪ್ರತೀಷ್ಟೆ ಹಾಗು ಸ್ವಾರ್ಥಕ್ಕಾಗಿ ಕೆಲಸ ಮಾಡುವುದನ್ನು ಬಿಟ್ಟು ಪ್ರಜೆಗಳ ಕಷ್ಟ ಪರಿಹಾರ ಮಾಡಲು ಗಮನ ಕೊಡಿ.
ಇನ್ನೂ ಸಮಯ ಮೀರಿಲ್ಲ. ನೀರು ಕುತ್ತಿಗೆಯವರೆಗೆ ತಲುಪಿರುವುದು. ರಾಜಕೀಯಾ ಮುಳುಗಲು ಹೆಚ್ಚು ಸಮಯ ಉಳಿದಿಲ್ಲ.

72 ವರ್ಷದ ಮತ್ತು ಬರುವ( Anesthatic Effect) ರಾಜಕೀಯಾದಿಂದ, ಪ್ರಜೆ ಎದ್ದೇಳುತೀದ್ದಾನೆ, ಜಾಗ್ರತನಾಗುತ್ತಿದ್ದಾನೆ.

ಜೈ ಪ್ರಜಾಕೀಯಾ.
ಜೈ ಉತ್ತಮ ಪ್ರಜಾಕೀಯಾ ಪಕ್ಷ (UPP).

Reference : Suresh Kunder

Leave a Reply

Your email address will not be published. Required fields are marked *

Translate »