ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶಾಸಕ – ಸಂಸದರಿಗೆ ವಿದ್ಯಾಬ್ಯಾಸ ಏಕೆ ಬೇಡ?

ಸಂವಿಧಾನದಲ್ಲಿ ಯಾಕೆ ಯಾವುದೇ ವಿದ್ಯಾಭ್ಯಾಸ ಮಟ್ಟ ಅಥವಾ ತಿಳುವಳಿಕೆ ಮಟ್ಟ, ಶಾಸಕ – ಸಂಸದರಾಗುವವರಿಗೆ ಕೇಳಲಿಲ್ಲ ?

ಭಾರತದ ಸಂವಿಧಾನದಲ್ಲಿ ನಾಲ್ಕು ಸ್ತಂಭಗಳು.

1. ಶಾಸಕಾಂಗ – MLA, MP -Legislation- Legislators.
2. ಕಾರ್ಯಾಂಗ – Government Employees – Administrators.
3. ನ್ಯಾಯಾಂಗ- Judiciary- Court & Judges.

4. ಮಾಧ್ಯಮ -Media- Press. ( ಇದು ಖಾಸಾಗಿ ವ್ಯವಸ್ಥೆ – Controlled by Government – Ministry of Information).

ಎಲ್ಲರೂ, ಮುಖ್ಯವಾಗಿ ತಿಳಿದಿರ ಬೇಕಾದ ವಿಷಯ- ಕಾರ್ಯಾಂಗ -Administration. ಇಲ್ಲಿ ಎಲ್ಲಾ ರೀತಿಯ ಪರಿಣಿತರು ಇರುವರು. IAS, IPS, DOCTORS, ENGINEERS, ECONOMIST, AGRICULTURIST, SCIENTISTS, ಹೀಗೆ ಎಲ್ಲಾ ಪರಿಣಿತಿಯವರು ಇರುವರು. ಅವರನ್ನು, ಅವರ ಕೆಲಸಕ್ಕೆ ತಕ್ಕ ವಿಧ್ಯಾಭ್ಯಾಸ, ಪರಿಣಿತಿ, ರಿಟರ್ನ್ ಟೆಸ್ಟ್, ಇಂಟರ್ವ್ಯೂ ಹಾಗು ಸಾವಿರದಲ್ಲಿ ಒಬ್ಬರನ್ನು ಆಯಿಕೆ (Selection) ಮಾಡಲಾಗುವುದು. ಯಾಕೆಂದರೆ, ರಾಜ್ಯದ-ದೇಶದ ಕಾರ್ಯ (Administration) ಮಾಡುವವರು ಅವರು. ಕರ್ನಾಟಕದಲ್ಲಿ ಸುಮಾರು 9,00,000(9 ಲಕ್ಷ) ಪ್ರಜೆಗಳು, ಈ ಸ್ತಂಭದ ಕಾರ್ಯದಲ್ಲಿ ನಿರತರಾಗಿರುವರು. ಎಲ್ಲಾ ಯೋಜನೆ ಹಾಗು ಅದರ ನಿರ್ವಹಣೆ ಇವರೇ ಮಾಡುವುದು. ಇವರ ಕೆಲಸ ಪರ್ಮನೆಂಟ್ ಹಾಗು ಕಡೆಗೆ, ಜೀವನವಿಡೀ ಪಿಂಚಣಿ ಪಡೆಯುವರು. ಖಂಡಿತಾ ಶಾಸಕರಲ್ಲ.

ಆದರೆ, ಶಾಸಕರು, ತಾವೇ ರಾಜರೆಂದು ತೋರಿಸಿಕೊಳ್ಳುತ್ತಿದ್ದಾರೆ.

*ಶಾಸಕರು, ಚುಣಾಯಿತ ಪ್ರತಿನಿಧಿ, MLA-MP, ಇವರು ಸಾಮಾನ್ಯ ಪ್ರಜೆಗಳಲ್ಲಿ ಒಬ್ಬನಾಗಿದ್ದು, ಪ್ರಜೆಗಳಲ್ಲಿ ಬೆರೆತು, ಪ್ರಜೆಗಳ ಅವಶ್ಯಕತೆಯನ್ನು ಅರಿತು, ಅದನ್ನು ಕಾರ್ಯಾಂಗದಲ್ಲಿ ಚರ್ಚಿಸಿ, ಅದಕ್ಕೆ ಬೇಕಾದ ಹಣವನ್ನು ಕಾರ್ಯಾಂಗದಿಂದಲೆ ವ್ಯವಸ್ಥೆ ಮಾಡಿ, ಕಾರ್ಯಾಂಗದಿಂದಲೆ ಮಾಡಿಸಿ ತೆಗೆದು ಕೊಳ್ಳಬೇಕು. ಆದ್ದರಿಂದ, ಅವನು, ಯಾವುದೇ ವಿಷಯದಲ್ಲಿ ಪರಿಣಿತನಾಗಿರುವ ಅವಶ್ಯಕತೆ ಖಂಡಿತಾ ಇಲ್ಲ. ಅವನೊಬ್ಬ ಪ್ರಜೆಗಳ ಪ್ರತಿನಿಧಿ. ಆದ್ದರಿಂದ ಇಲ್ಲಿ ಆಯಿಕೆ(Selection) ಇಲ್ಲ. ಇಲ್ಲಿ ಪ್ರಜೆಗಳಿಂದ *ಚುನಾಯಿತ(Election)* ಆಗಬೇಕು.

  PRAJAAKEEYA (Uttama Prajaakeeya Party) official social media accounts

ಶಾಸಕರ ಇನ್ನೊಂದು ಮುಖ್ಯ ಕಾರ್ಯ, ಶಾಸನ (ಕಾನೂನು) ಮಾಡುವುದು. ಇದು ಕೂಡಾ, ಕಾರ್ಯಾಂಗದಲ್ಲಿರುವ ಕಾನೂನು ಪರಿಣಿತರಿಂದ ತಯಾರಿಸಿ, ವಿಧಾನ ಸಭೆಯಲ್ಲಿ, ವಿಧಾನ ಪರಿಷತ್ತ್ ಹಾಗು ರಾಜ್ಯಪಾಲರ ಅನುಮತಿ ಪಡೆಯುವುದು, ಶಾಸಕಾಂಗದ ಜವಾಬ್ದಾರಿ. ಮೊಟ್ಟ-ಮೊದಲು, ಇಂತಹ ವಿಷಯ, ಸಂಬಂದ ಪಟ್ಟ ಪ್ರಜಾ ಸಮೂಹದ ಅಭಿಪ್ರಾಯ ತಿಳಿದು ಮುಂದುವರಿಯಬೇಕು.

ಆದ್ದರಿಂದ, ಸಂವಿಧಾನದಲ್ಲಿ, ಶಾಸಕರಿಗೆ ಯಾವುದೇ ವಿಧ್ಯಾಭ್ಯಾಸ ಮಟ್ಟ ಕೇಳಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಯಾಕೆಂದರೆ, ಕಾರ್ಯಾಂಗದಲ್ಲಿ ಎಲ್ಲಾ ಪರಿಣಿತರು ಇರುವರು. ಅವನು, ಪ್ರಜೆಗಳಲ್ಲಿ ಒಬ್ಬನಾಗಿರಬೇಕು. ಪ್ರಜೆಗಳಿಗಾಗಿ ಮಿಡಿಯುವ ಮನಸ್ಸು ಇರಬೇಕು.

ಸಂವಿಧಾನ ಬರೆದವರು, ಪ್ರಜೆಗಳು, ಒಳ್ಳೆಯವರನ್ನು ಆರಿಸುವರು ಹಾಗು ಸಮಾಜಕ್ಕಾಗಿ ಮಿಡಿಯುವ ಮನಸ್ಸುಳ್ಳವರನ್ನು ಆರಿಸುವರೆಂದು ತಿಳಿದಿದ್ದರು. ಆದರೆ, ಚುಣಾವಣೆಯಲ್ಲಿ ಹಣದ ಹೊಳೆ ಹರಿದು, ಮೂರ್ಖ-ಕ್ರಿಮಿನಲನ್ನು, ಮೆಧಾವಿ ಎಂದು ತೋರಿಸಲಾಗುತ್ತಿದೆ.

  ನೀಲಕೋಡು ಗ್ರಾಮದ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯ

ಇಲ್ಲಿ ಬದಲಾವಣೆ ಆಗಬೇಕಾಗಿರುವುದು, ಹಣದಿಂದ ನಡೆಯುವ ಚುಣಾವಣೆ.

ಪ್ರಜಾಕೀಯ ಸಿಧ್ಧಾಂತದ ಪ್ರಕಾರ ನಡೆಯುವ, ಉತ್ತಮ ಪ್ರಜಾಕೀಯ ಪಕ್ಷ ವು ಹಣ ಉಪಯೋಗಿಸದೆ, ಚುಣಾವಣೆಯಲ್ಲಿ ಭಾಗವಹಿಸುತ್ತಿರುವುದು. ಶಾಸಕರಿಗೆ, ಕಾನೂನು ಬದ್ದ ಸಿಗುವ ಸಂಭಾವನೆಗಾಗಿ ಪ್ರಜಾ ಕಾರ್ಮಿಕ ನಾಗಿ ಕೆಲಸ ಮಾಡುವರು. ನಿರಂತರ, ಪ್ರಜೆಗಳ ಸಂಪರ್ಕದಲ್ಲಿದ್ದು, ಯಾವುದೇ ಭ್ರಷ್ಟಾಚಾರದಲ್ಲಿ ಅಳವಡಿಸಿ ಕೊಳ್ಳದೆ, ಪ್ರಜೆಗಳ ಮೂಲಭೂತ ಸೌಕರ್ಯ-ಸೌಲಭ್ಯಗಳನ್ನು, ಕಾರ್ಯಾಂಗದಿಂದ ಮಾಡಿಸಿಕೊಳ್ಳವುದು.

ಖಂಡಿತಾ, ಕ್ರಿಮಿನಲ್ ಗಳು ಹಾಗು ಅಸಾಮಾಜಿಕ ತತ್ವಗಳು ಶಾಸಕಾಂಗದಲ್ಲಿ ಬರಬಾರದು.

ಹಣದ ವ್ಯವಸ್ಥೆ ಇಲ್ಲದೆ, ಸಾಮಾನ್ಯ ಪ್ರಜೆ ಚುಣಾವಣೆಗೆ ನಿಲ್ಲುವಂತಾದರೆ, ಇವೆಲ್ಲದಕ್ಕೂ ಅವಕಾಶ ಇರುವುದಿಲ್ಲ.

ಇಲ್ಲಿ ಮೂಲ, ಹಣದಿಂದ ನಡೆಯಲ್ಪಡುವ ಚುಣಾವಣೆ. ಅದು ನಿಲ್ಲಬೇಕು. ಹಣವಂತರ ಹಾಗು ಹಣದಿಂದ ಆಡುವ ರಾಜಕೀಯ ಪಕ್ಷಗಳು ಬದಲಾವಣೆ ಆಗಬೇಕು. ಅವಶ್ಯವಾಗಿ, ಚುಣಾವಣಾ ಸಮಿತಿ (Election Commission), ಈ ನಿಟ್ಟಿನಲ್ಲಿ ಕಾರ್ಯ ಮಾಡಬೇಕು. ಅಭ್ಯರ್ಥಿಗಳನ್ನು ಪ್ರಜೆಗಳಿಗೆ ಮಾಧ್ಯಮದ ಮೂಲಕ, ಪರಿಚಯಿಸುವ ಕೆಲಸ, ಇವರು ಮಾಡಬೇಕು ಹಾಗು ಚುಣಾವಣೆಯ ಖರ್ಚು ಬಹಿಸ್ಕರಿಸಬೇಕು. ಪಕ್ಷಗಳಿಗೆ ಸಿಗುವ ದೇಣಿಗೆಗಳು ಚುಣಾವಣಾ ಸಮಿತಿಗೆ ಬರುವಂತಾಗಬೇಕು.

ಸಂವಿಧಾನದಲ್ಲಿ, ಎಲ್ಲಿಯೂ, ಹಣದ ವ್ಯವಸ್ಥೆ ತಿಳಿಸಿಲ್ಲ. ಇದು, ಕೆಲವೊಂದು ರಾಜಕೀಯ ಪಕ್ಷಗಳು, ಕೇವಲ ಗೆಲ್ಲಲೇ ಬೇಕೆಂದು ಮಾಡಿರುವ ರಾಜ ತಂತ್ರ. ಹೆಸರಿಗೆ ಮಾತ್ರ ಪ್ರಜಾಪ್ರಭುತ್ವ. ಅವರಿಗೆ ಪ್ರಜೆ, ರಾಜ್ಯ ಹಾಗು ದೇಶ ಪ್ರಾಮುಖ್ಯವಲ್ಲ.

  ಶ್ರೀ ಕ್ಷೇತ್ರ ಗೋಕರ್ಣ ಇತಿಹಾಸ

ಜೈ ಪ್ರಜಾಕೀಯ

ಜೈ ಉತ್ತಮ ಪ್ರಜಾಕೀಯ ಪಕ್ಷ (ಉ.ಪಿ.ಪಿ.)

Leave a Reply

Your email address will not be published. Required fields are marked *

Translate »