*ಪ್ರಜಾಕೀಯಾ*
*ಉತ್ತಮ ಪ್ರಜಾಕೀಯಾ ಪಕ್ಷ ( UPP).**
*ಮುಖ್ಯ ತತ್ವ- ನೀತಿ- ನಿಯಮಗಳು.*
1. ಆರ್ಟ್ ಆಫ್ ಗೌವರ್ನೆನ್ಸ್/ ART of Governance (ಕಲಾತ್ಮಕ ಆಡಳಿತ)- ಹೊಣೆಗಾರಿಕೆ, ಜವಾಬ್ದಾರಿ ಹಾಗು ಪಾರದರ್ಶಕ ಸರಕಾರ ರಚನೆ ಮಾಡಿ ಭ್ರಷ್ಟಾಚಾರದ ನಿರ್ಮೂಲನೆ.
2. ಅಧಿಕಾರ ಪ್ರಜೆಗಳಿಗೆ ಹಸ್ತಾಂತರ. ಸರಕಾರದ ಪ್ರತೀಯೊಂದು ಕ್ರೀಯೆಯನನ್ನು ಪ್ರಜೆಗಳಿಗೆ ತಿಳಿಸಿ, ಸಮ್ಮತಿ ಪಡೆದು ಹಾಗು ಪಾರದರ್ಶಕವಾಗಿ ನಡೆಯುವಂತೆ ಮಾಡುವುದು. ತೆರಿಗೆ ಹಣದ ಸಂಪೂರ್ಣ ಲೆಕ್ಕ ಪ್ರಜೆಗಳಿಗೆ ತಲುಪಿಸುವುದು.
3. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೊಸ್ಕರವೆಂಬ ಪ್ರಜಾಪ್ರಭುತ್ವದ ತತ್ವವನ್ನು ನಿಜರೂಪಕ್ಕೆ ತರುವುದು.
4. ಪ್ರಜಾಪ್ರಭುತ್ವದ ನಾಲ್ಕು ಅಭಿನ್ನ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗು ಮಾಧ್ಯಮಗಳಿಗೆ ಸ್ವಾತಂತ್ರವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟು, ಒಬ್ಬರು ಇನ್ನೊಬ್ಬರ ಮೇಲೆ ಕಣ್ಣಿಟ್ಟು ಯಾವುದೇ ಮುಜುಗರ ಹಾಗು ಅಡಚಣೆ ಇಲ್ಲದೆ, ತಪ್ಪು ಮಾಡಿದವರನ್ನು ಹಾಗು ಭ್ರಷ್ಟರನ್ನು ನ್ಯಾಯಾಂಗಕ್ಕೆ ಒಪ್ಪಿಸುವ ಕಾರ್ಯ ಮಾಡಬೇಕು. ಯಾವುದೇ ಒಂದು ಅಂಗವು ಇನ್ನೊಂದು ಅಂಗದ ಕಾರ್ಯ ವೈಖರಿಯಲ್ಲಿ ಕಾಲು ಹಾಕುವಂತಿಲ್ಲ ಅಥವಾ ಗದರಿಸಿ ಬ್ಯ್ಲಾಕ್ ಮೈಲ್ ಮಾಡುವಂತಿಲ್ಲ.
5. ಪ್ರಜಾಕೀಯಾದಲ್ಲಿ ಆರಿಸಿ ಬಂದ ಅಭ್ಯರ್ಥಿಯು “ಪ್ರಜಾಕಾರ್ಮಿಕ” ನಾಗಿ ಪ್ರಜೆಗಳ ಕೆಲಸ ಮಾಡಬೇಕು. ಅವನು ನಾಯಕನೂ ಅಲ್ಲ ಅಥವಾ ಸೇವಕನೂ ಅಲ್ಲ. ತನ್ನ ಕೆಲಸಕ್ಕೆ ಸಂಭಾವನೆ ತೆಗೆದು ಕೊಳ್ಳುವವ ಹೇಗೆ ನಾಯಕ ಅಥವಾ ಸೇವಕನಾಗುವನು ?
6. ಭ್ರಷ್ಟಾಚಾರ ನಿರ್ಮೂಲನೆ ಆದಾಗ ಪ್ರಜೆಗಳು ಕಟ್ಟಿದ ತೆರಿಗೆ ಹಣ ನೂರಕ್ಕೆ ನೂರು ಪಾಲು ಪ್ರಜೆಗಳ ಸೌಲಭ್ಯ-ಸೌಕರ್ಯಗಳಿಗೆ ಪಾರದರ್ಶಕವಾಗಿ ಉಪಯೋಗ ಮಾಡುವುದು.
7.ಮೂಲಭೂತ ಸೌಕರ್ಯಗಳಾದ ನೀರು, ಗಾಳಿ, ವಿಧ್ಯುತ್, ವಿಧ್ಯಾಭ್ಯಾಸ, ಆರೋಗ್ಯ, ವಸತಿ, ರೈತರ ಸೌಲಭ್ಯ, ಉದ್ಯೋಗ, ಸಾರಿಗೆ, ಕಸ ವಿಲೆವಾರಿ ಹಾಗು ಕಾನೂನು ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒದಗಿಸುವುದು.
ಭ್ರಷ್ಟಾಚಾರ ನಿಂತರೆ ಇವೆಲ್ಲವೂ ಸಾಧ್ಯ.
8. ಉತ್ತಮ ಪ್ರಜಾಕೀಯಾ ಪಕ್ಷ (ಉ.ಪಿ.ಪಿ) ಹಣವಿಲ್ಲದ ( Cashless) ಪಕ್ಷ ಹಾಗು ಪ್ರಕ್ರೀಯೆ.
ಸದಸ್ಯತ್ವ ಶುಲ್ಕ ಇಲ್ಲ. ಪಾರ್ಟಿ ಫಂಡ್ ಇಲ್ಲ. ಯಾವುದೇ ದೇಣಿಗೆ ಸ್ವೀಕಾರ ಮಾಡುವುದಿಲ್ಲ.
ಆದ್ದರಿಂದ ಯಾವುದೇ ರೀತಿಯ ಖರ್ಚು ಮಾಡುವ ಮೊದಲು ಪಾರ್ಟಿ ಕಡೆಯಿಂದ ಸಮ್ಮತಿ ಪಡೆಯ ಬೇಕಾಗಿ ಎಲ್ಲರಲ್ಲಿ ವಿನಂತಿ.
9. ಕೇವಲ ಶೋಷಲ್ ಮೀಡಿಯಾ ಹಾಗು ಜನರಿಂದ-ಜನರಿಗೆ ಇದರ ಪ್ರಸಾರ ಹಾಗು ಪರಿಚಯ ಆಗಬೇಕು. ಮೀಡಿಯಾ( ಟಿ.ವಿ. ಪತ್ರಿಕೆ) ಗಳು ಅವರಾಗಿ ಕರೆದರೆ ಹೋಗ ಬಹುದು.
10. ಉತ್ತಮ ಪ್ರಜಾಕೀಯಾ ಪಕ್ಷದ ಕೇವಲ ಒಂದು ಕಚೇರಿ ಬೆಂಗಳೂರಿನಲ್ಲಿ ಶ್ರೀ ಉಪೇಂದ್ರರ ಮನೆಯ ಮೂರನೆ ಮಹಡಿಯಲ್ಲಿ ಇರುವುದು ಹಾಗು ಯಾವುದೇ ಶಾಖೆಗಳು ಇರುವುದಿಲ್ಲ
11. ಕಚೇರಿಯಲ್ಲೂ ಯಾವುದೇ ಪದಾಧಿಕಾರಿಗಳು ಇರುವುದಿಲ್ಲ. ಕೇವಲ ಸ್ವಾಇಚ್ಚೆಯಿಂದ ಬಂದು ಕೆಲಸ ಮಾಡುವ, ಪ್ರಜಾಕೀಯಾವನ್ನು ಸಂಪೂರ್ಣ ಒಪ್ಪಿದ ಪ್ರಜೆಗಳಿಂದ ಪಾರ್ಟಿಯ ಕಾರ್ಯ ಕಲಾಪಗಳು ನಡೆಯುವುದು. ಹೆಚ್ಚಿನವು ಶೋಷಲ್ ಮೀಡಿಯಾದಿಂದಲೆ ನಡೆಯುವುದು.
12. ಅಭ್ಯರ್ಥಿಗಳ ಸಂದರ್ಶನವೂ ( Interview) ಸ್ವಾಇಚ್ಚೆಯಿಂದ ಕೆಲಸ ಮಾಡುವ ನುರಿತ ಕಾರ್ಪೊರೇಟ್ ಕಂಪೆನಿಗಳ ಅಧಿಕಾರಿಗಳಿಂದ ಮಾಡಲ್ಪಡುವುದು. ಈ ಪ್ರಕ್ರೀಯೆಯಲ್ಲಿ ಶ್ರೀ ಉಪೇಂದ್ರರೂ ಸಕ್ರೀಯಾವಾಗಿ ಭಾಗವಹಿಸುವರು.
13. ಆದ್ದರಿಂದ ಯಾರೂ ಪ್ರಜಾಕೀಯಾದ ಕಚೇರಿಗೆ ಬಂದು ಮಾಡುವಂತಹ ಕೆಲಸವಿರುವುದಿಲ್ಲ. ಅವಶ್ಯಕತೆ ಇದ್ದರೆ ಕರೆಸಿ ಕೊಳ್ಳಲಾಗುವುದು.
14. ಪ್ರಜಾಕೀಯಾದಲ್ಲಿ ಯಾರು ತಮ್ಮ ಕೆಲಸ ಅಥವಾ ವ್ಯವಹಾರಗಳನ್ನು ಬಿಟ್ಟು ಪ್ರಜಾಕೀಯಾ ಪಕ್ಷದ ಕೆಲಸದಲ್ಲಿ ತೊಡಗಿಸುವಂತಹ ಅವಶ್ಯಕತೆಯೇ ಇಲ್ಲ. ತಮ್ಮ ಕುಟುಂಬವನ್ನು ತೊಂದರೆಗೆ ಒಳಪಡಿಸಿ ಪಾರ್ಟಿ ಕೆಲಸ ಮಾಡುವ ಅವಶ್ಯಕತೆ ಇಲ್ಲಿ ಖಂಡಿತಾ ಇಲ್ಲ. ಅವರೂ ನಮ್ಮ ಪ್ರಜೆಗಳೇ.
ಅವರವರ ಬಿಡುವಿನಲ್ಲಿ ಪ್ರಜಾಕೀಯಾದ ಪ್ರಚಾರ- ಪ್ರಸಾರ ಮಾಡುವುದು ಉತ್ತಮ.
15. ಕೇವಲ MLA & MP ಗೆ ಪ್ರಜೆಗಳಿಂದ ಆರಿಸಿ ಬಂದ ಕೂಡಲೆ, ಕೆಲಸ ಹಾಗು ವ್ಯವಹಾರವನ್ನು ತ್ಯಜಿಸ ಬೇಕಾಗುವುದು. ಇಲ್ಲಿ ಬೇಕಾದ ಸಂಭಾವನೆ- ಸೌಕರ್ಯಗಳು ಸರಕಾರದಿಂದ ಕೊಡಲಾಗುವುದು ಹಾಗು 5 ವರ್ಷದ ನಂತರ ಪಿಂಚಣಿಯೂ ಸಿಗುವುದು. ತನ್ನ ಸಂಪೂರ್ಣ ಸಮಯ ಪ್ರಜೆಗಳಿಗೆ ಮೀಸಲಿಡಬೇಕು.
ಆದರೆ ಪಂಚಾಯಿತಿ, ಕೌನ್ಸಿಲರ್ ಹಾಗು ಕಾರ್ಪೊರೇಟರ್ ಗೆ ಆರಿಸಿ ಬಂದರೆ ಕೆಲಸ ಬಿಡುವ ಅವಶ್ಯಕತೆ ಇಲ್ಲ. ಇಲ್ಲಿ ಸರಿಯಾದ ಸಂಭಾವನೆ ಇಲ್ಲ ಹಾಗು ಇದು ಫುಲ್ ಸಮಯ ಕೆಲಸವೂ ಅಲ್ಲ.
16. ಪ್ರಜಾಕೀಯಾದಲ್ಲಿ ಯಾವುದೇ ಸ್ವಂತ ಪ್ರತೀಷ್ಟೆ ಹಾಗು ಸ್ವಂತ ಆಸೆ – ಆಕಾಂಕ್ಷೆ ಇಟ್ಟು ಕೊಂಡು ಅಭ್ಯರ್ಥಿ ಸ್ಥಾನಕ್ಕೆ ಅರ್ಜಿ ಹಾಕಬಾರದು. ಕೇವಲ ಇದೊಂದು ಪ್ರಜೆಗಳಿಗಾಗಿ, ರಾಜ್ಯ- ದೇಶಕ್ಕಾಗಿ ಹಾಗು ಸಂಬಳಕ್ಕಾಗಿ ಕೆಲಸ ಮಾಡಲು ಬರುವ “ಪ್ರಜಾಕಾರ್ಮಿಕನಾಗಿ” ಬರುವ ಸ್ವಚ್ಚ ಮನಸ್ಸಿನಿಂದ ಬರಬೇಕು.
17. ಇಲ್ಲಿ ಭೃಷ್ಟಾಚಾರಕ್ಕೆ ಎಳ್ಳಷ್ಟೂ ಅವಕಾಶ ಇರಬಾರದು ಹಾಗು ದೃಡ ಪ್ರಾಮಾಣಿಕ ಆಗಿರ ಬೇಕು.
18. ಅಭ್ಯರ್ಥಿಗಳ ಅರ್ಜಿಯನ್ನು ಪ್ರಜಾಕೀಯಾದ ಆ್ಯಪ್
-Google Play Store ನಲ್ಲಿ
“UPP(i)PRAJAAKEEYA”
ಅಥವಾ ವೆಬ್ ಸೈಟ್
ಮುಖಾಂತರ ತರಿಸಿ ಪರಾಮರ್ಶಿಸಿ, ಪ್ರಜಾಕೀಯಾದ ತತ್ವಕ್ಕೆ ಸರಿಹೊಂದುವ ಅಭ್ಯರ್ಥಿಯನ್ನು ಸಂದರ್ಶನಕ್ಕಾಗಿ ಕರೆಯಲಾಗುವುದು.
19. ಒಂದೆ ಕ್ಷೇತ್ರಕ್ಕೆ ಒಂದರಿಂದ ಹೆಚ್ಚಾಗಿ ಅರ್ಜಿ ಬಂದಲ್ಲಿ ಸಂದರ್ಶನದ ನಂತರ ಸೂಕ್ತವಾದ ಅಭ್ಯರ್ಥಿಯನ್ನು ಆಯಿಕೆ ಮಾಡಲಾಗುವುದು.
20. ಅರ್ಜಿ ಹಾಕುವ ಪ್ರತೀಯೊಂದು ಅಭ್ಯರ್ಥಿಯು ತನ್ನ ಹೆಸರನ್ನು ನಮ್ಮ ಆ್ಯಪ್ ಮುಖಾಂತರ ನೊಂದಾಯಿಸಿ ಕೊಂಡು, ಅದರ ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸುವುದು ಅವಶ್ಯಕತೆ ಇದೆ.
21. ಪ್ರಜಾಕೀಯಾದಲ್ಲಿ ಯಾವುದೇ ಧರ್ಮ, ಜಾತಿ, ಪಂಗಡ, ಪ್ರಾಂತ್ಯವೆಂದು ಮಾತನಾಡುವಂತಿಲ್ಲ. ಕೇವಲ ಪ್ರಜೆ ಎಂಬ ವ್ಯಾಖ್ಯಾನ ಇರಬೇಕು.
22. ಅಭ್ಯರ್ಥಿಯಾಗಿ ಬರುವವರು ಕರ್ನಾಟಕದಲ್ಲಿ ತಮ್ಮ ವೋಟರ್ ಪ್ರಮಾಣ ಪತ್ರ ಹೊಂದಿರ ಬೇಕು. ಕನ್ನಡ ಅಥವಾ ಇಂಗ್ಲೀಷ್ ಭಾಷೆ ಓದಲು , ಬರೆಯಲು ಹಾಗು ಮಾತನಾಡಲು ಬರಬೇಕು. ಎರಡೂ ಭಾಷೆ ಗೊತ್ತಿದ್ದರೆ ಉತ್ತಮ.
ಮುಂದೆ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವಾಗ ಅದಕ್ಕೆ ತಕ್ಕಂತೆ ಅವಶ್ಯಕತೆಯನ್ನು ಪೂರೈಸ ಬೇಕಾಗುವುದು. ಆವಾಗ ಅದನ್ನು ತಿಳಿಸಲಾಗುವುದು.
23. ಅಭ್ಯರ್ಥಿಯು, ಯಾವುದೇ ಕ್ರಿಮಿನಲ್ ಹಿನ್ನೆಲೆ ಅಥವಾ ಕೇಸ್ ಗಳಲ್ಲಿ ಸೇರಿರ ಬಾರದು. ಸ್ವಚ್ಚ ಚರಿತ್ರೆಯವನಾಗಿರ ಬೇಕು. ಪ್ರಜಾಕೀಯಾ ತತ್ವದ ಕಡೆ ದ್ರಡ ಸಂಕಲ್ಪ ಮಾಡಿರಬೇಕು.
24. ಪ್ರಜಾಕೀಯಾ ಹಾಗು ಉತ್ತಮ ಪ್ರಜಾಕೀಯಾ ಪಕ್ಷ ಶ್ರೀ ಉಪೆಂದ್ರರವರ 20 ವರ್ಷದ ಮಂಥನದಿಂದ ಉಧ್ಭವವಾದ ಸ್ವಚ್ಚ ಹಾಗು ಸತ್ಯದ ದಾರಿ. ಹಾಗು ಇದೊಂದು
“ಮೌನ ಕ್ರಾಂತಿ”. ಇದರಲ್ಲಿ ಯಾವ ಬದಲಾವಣೆಯ ಅವಶ್ಯಕತೆ ಇಲ್ಲ. ಇದನ್ನು ಧ್ರಡ ಪಾಲನೆ ಮಾಡಲೆ ಬೇಕು.
25. ರಾಜ್ಯ-ದೇಶವನ್ನು ಭ್ರಷ್ಟಾಚಾರವಿಲ್ಲದೆ, ಕಾನೂನು ಬದ್ಧವಾಗಿ, ಉತ್ಕ್ರಷ್ಟ ಸೌಕರ್ಯ- ಸೌಲಭ್ಯದೊಂದಿಗೆ , ಭಾರತದ ಸಂವಿಧಾನದ ಪ್ರಕಾರ ನಡೆಸಲು ಪ್ರಜೆಗಳ ಸಹಕಾರ, ಉಪದೇಶ ಹಾಗು ಅವಿಸ್ಕಾರಗಳು ಖಂಡಿತಾ ಬೇಕಾಗುವುದು. ಇವೆಲ್ಲವನ್ನೂ ನಮ್ಮ ವೆಬ್ಸೈಟ್ ಹಾಗು ಆ್ಯಪ್ ಗೆ ಕಳುಹಿಸ ಬಹುದು. ಸೂಕ್ತವೆಂದು ಕಂಡು ಬಂದಲ್ಲಿ ಅದಕ್ಕೆ ಸಂಬಂದಪಟ್ಟವರನ್ನು ಕರೆಸಿ ವಿಚಾರ- ವಿನಿಮಯ ಮಾಡಲಾಗುವುದು.
**************************
ಉತ್ತಮ ಪ್ರಜಾಕೀಯ ಪಕ್ಷದ ನಿಲುವುಗಳನ್ನು ತಿಳಿದುಕೊಳ್ಳಲು ಕೆಳಗಿನ ಲಿಂಕ್ ಬಳಸಿ:
https://youtu.be/-0LlbOwuPbU
ಪ್ರಜಾಕೀಯ, ಪ್ರಜಾಕಾರಣ, ಪ್ರಜಾನೀತಿ ಎಂದರೇನು?. ಎಂದು ತಿಳಿಯಲು ಕೆಳಗಿನ ಲಿಂಕ್ ಬಳಸಿ:
https://youtu.be/8BXYJSX413E
ಉತ್ತಮ ಪ್ರಜಾಕೀಯ ಪಕ್ಷದ ಪ್ರಣಾಳಿಕೆಗಳಿಗಾಗಿ ಈ ಕೆಳಗಿನ ಲಿಂಕ್ ಗಳನ್ನು ಬಳಸಿ:
🔸ಸಂಪೂರ್ಣ ಪಾರದರ್ಶಕ ಆಡಳಿತ https://youtu.be/mPvy5SvM544
🔸ಸೂಪರ್ ಹಳ್ಳಿಗಳು:
https://youtu.be/Gid-FFR8Stk
🔸ಸೂಪರ್ ಶಿಕ್ಷಣ:
https://youtu.be/MZBE47StK7k
🔷 ಉತ್ತಮ ಪ್ರಜಾಕೀಯ ಪಕ್ಷದ ಎಲ್ಲಾ ಪ್ರಣಾಳಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಲಿಂಕನ್ನು ಬಳಸಿರಿ : https://drive.google.com/folderview?id=1zGVMZqRidg7HYasPOg1thJxIeZ37RRFk
📧ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಇ-ಮೇಲ್ ವಿಳಾಸ: prajaakeeyainfo@gmail.com
🌎ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ವೆಬ್ ಸೈಟ್ ವಿಳಾಸ: 🖥
https://www.prajaakeeya.org/ 💻🔍
📱ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಆ್ಯಂಡ್ರಾಯ್ಡ್ ಮೊಬೈಲ್ ಆ್ಯಪ್ ಅನ್ನು ಇನ್ಸ್ಟಾಲ್/ ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಬಳಸಿ 👇👇
https://play.google.com/store/apps/details?id=com.app.prajaakeeya
📲ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಐಫೋನ್ ಮೊಬೈಲ್ ಆ್ಯಪ್ ಅನ್ನು ಇನ್ಸ್ಟಾಲ್/ ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಬಳಸಿ 👇👇
https://itunes.apple.com/us/app/prajaakeeya/id1316882222?ls=1&mt=8
📲 ಉತ್ತಮ ಪ್ರಜಾಕೀಯ ಪಕ್ಷವನ್ನು ದೂರವಾಣಿಯ ಮೂಲಕ ಸಂಪರ್ಕಿಸಲು ಈ ಕೆಳಗಿನ ಸಂಖ್ಯೆಗಳನ್ನು ಬಳಸಿ:
📞 +91 79758 22460
📱 +91 98453 96204
☎ +91 98453 96804
ಪ್ರಜಾಕೀಯದ ( ಉತ್ತಮ ಪ್ರಜಾಕೀಯ ಪಕ್ಷದ ) ಪ್ರತಿನಿತ್ಯದ ಅಪ್ಡೇಟ್ ಗಳನ್ನು ಪಡೆಯಲು ಕೆಳಗಿನ ಲಿಂಕ್ ಗಳನ್ನು ಬಳಸಿ…ಲೈಕ್ ಮಾಡಿ ಫಾಲೋ ಮಾಡಿ ಮತ್ತು ಶೇರ್ ಮಾಡಿ 👇👇
🔑ನಿಮ್ಮ ಉಪೇಂದ್ರ ರವರನ್ನು ಫೇಸ್ ಬುಕ್ ನಲ್ಲಿ ಫಾಲೋ ಮಾಡಲು ಈ ಕೆಳಗಿನ ಲಿಂಕ್ ಅನ್ನು ಬಳಸಿ 👇👇
https://www.facebook.com/nimmaupendra/
🔑ನಿಮ್ಮ ಉಪೇಂದ್ರ ರವರನ್ನು ಟ್ವಿಟ್ಟರ್ ನಲ್ಲಿ ಫಾಲೋ ಮಾಡಲು ಈ ಕೆಳಗಿನ ಲಿಂಕ್ ಅನ್ನು ಬಳಸಿ👇👇https://twitter.com/nimmaupendra?s=09
🔑ನಿಮ್ಮ ಉಪೇಂದ್ರ ರವರನ್ನು ಇನ್ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಲು ಈ ಕೆಳಗಿನ ಲಿಂಕ್ ಅನ್ನು ಬಳಸಿ👇👇
https://www.instagram.com/nimmaupendra/
🔑ನಿಮ್ಮ ಉಪೇಂದ್ರ ರವರ ಯೂಟ್ಯೂಬ್ ಅಕೌಂಟನ್ನು ಸಬ್ಸ್ರೈಬ್ ಮಾಡಿಕೊಳ್ಳಲು ಈ ಲಿಂಕ್ ಅನ್ನು ಬಳಸಿ👇👇
https://www.youtube.com/channel/UCJi7qi0fi98vO852usDIcJg
🔑ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಫೇಸ್ ಬುಕ್ ಗುಂಪನ್ನು ಸೇರಲು ಈ ಕೆಳಗಿನ ಲಿಂಕ್ ಅನ್ನು ಬಳಸಿ👇👇
https://www.facebook.com/groups/1278311632233808/
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ಗಳನ್ನು ಮಾಡುವಾಗ ಈ ಕೆಳಗಿನ ಹ್ಯಾಷ್ ಟ್ಯಾಗ್ ಗಳನ್ನು ಬಳಸಿ.
#UttamaPrajaakeeyaParty
#Prajaakeeya #UPP
ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಪ್ರಜಾಕೀಯ…….
ಈ ವೇದಿಕೆ ನಿಮ್ಮದು… ಬನ್ನಿ… ಕೈಜೋಡಿಸಿ.. ಮುನ್ನಡೆಸಿ….
Super.. thank you