ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಅರಳಿ ಮರ ಮತ್ತು ಬೇವಿನ ಮರದ ಬುಡದಲ್ಲೇ ಯಾಕೆ ನಾಗರ ಕಲ್ಲುಗಳನ್ನ ಪ್ರತಿಷ್ಠಾಪನೆ ಮಾಡುತಿದ್ದರು ?

ನಾಗರ ಕಲ್ಲು …

ಪ್ರೀತಿಯ ಸ್ನೇಹ ಭಂದುಗಳೇ ಸಾಮಾನ್ಯವಾಗಿ ನೀವು ನಾಗರ ಮೂರ್ತಿಯ ಕಲ್ಲುಗಳನ್ನು ನೀವು ನೋಡೇ ಇರ್ತೀರಾ… ಇವುಗಳು ದೇವಸ್ಥಾನಕ್ಕಿಂತ ಹೆಚ್ಚಾಗಿ ಹೊರಗಡೆ ಅರಳಿ ಮರ ಬೇವಿನ ಮರ ಇರುವ ಕಟ್ಟೆ ಯಲ್ಲೇ ಇದನ್ನು ಪ್ರತಿಷ್ಠಾಪನೆ ಮಾಡಿರುತ್ತಾರೆ.. ಆದ್ದರಿಂದ ಇದನ್ನು ನಾಗರ ಕಟ್ಟೆ ಎಂದು ಕರೆಯುತ್ತಾರೆ..ಅದನ್ನು ಕೆಲವು ವಿಶೇಷ ದಿನಗಳಲ್ಲಿ ಅದ್ದೂರಿಯಿಂದ ಭಕ್ತಿಯಿಂದ ಪೂಜೆ ಸಲ್ಲಿಸುವುದು ನೀವು – ನಾವು ಮಾಡೇ ಇರ್ತೀವಿ.. ನೋಡು ಇರ್ತೀವಿ..

ಹಾಗೂ ಕೆಲವು ಪರಿಹಾರಕ್ಕಾಗಿ ಅರಳಿ ಮರ ಬೇವಿನ ಮರ 48 ದಿನ ಅಥವಾ 108 ದಿನ ಪ್ರದಕ್ಷಿಣೆ ಮಾಡುವವರು ಇರ್ತಾರೆ.. ಅದರಲ್ಲಿ ನಾವು ಒಬ್ಬರಾಗಿರಬಹುದು.. ಇವೆಲ್ಲ ಸರಿ.. ಇದು ಸತ್ಯವು ಹೌದು.

  ಬುಧವಾರ ಗಣಪತಿಗೆ ಈ ವಸ್ತುಗಳನ್ನು ಅರ್ಪಿಸಿದರೆ, ಗಣೇಶ ಸಂತುಷ್ಟ

ಆದರೆ ಇದರಲ್ಲಿ ನಾವು ಒಂದು ಯೋಚಿಸಬೇಕು ಏನು ಗೊತ್ತಾ?? ನಮ್ಮ ಸನಾತನ ಧರ್ಮದಲ್ಲಿ ಪೂರ್ವಜರು ಅರಳಿ ಮರ ಮತ್ತು ಬೇವಿನ ಮರದ ಬುಡದಲ್ಲೇ ಯಾಕೆ ನಾಗರ ಕಲ್ಲುಗಳನ್ನ ಪ್ರತಿಷ್ಠಾಪನೆ ಮಾಡುತಿದ್ದರು??

ಇದಕ್ಕೆ ಬಹಳ ರೀತಿಯ ಉತ್ತರಗಳು ಆದ್ಯತ್ಮಿಕ ಪಂಡಿತರಿಂದ ಬರಬಹುದು ಅದಕ್ಕೆ ಅದರದೇ ಆದ ನಂಬಿಕೆ ಹಾಗೂ ಗೌರವವು ಇದೆ. ಹಾಗೂ ಸತ್ಯವೂ ಇದೆ…. ಆದರೆ ಇಲ್ಲಿ ಇನ್ನು ಒಂದು ರಹಸ್ಯವಿದೆ.ಏನೆಂದರೆ ಇದರಲ್ಲಿ ನಮ್ಮ ಪೂರ್ವಜರ ವಿಜ್ಞಾನ ಅಡಗಿದೆ ಅದುವೇ ಆದ್ಯಾತ್ಮ ವಿಜ್ಞಾನ ಇದರಿಂದ ತಿಳಿಯುತ್ತೆ ವಿಜ್ಞಾನ ಹೇಳೋದು ಆದ್ಯತ್ಮದ ಒಂದು ಭಾಗ ಎಂದು ಅಷ್ಟೇ..

  ಯಾವ ಕಾರಣಕ್ಕಾಗಿ ಯಾವ ಶಾಂತಿಯನ್ನು ಮಾಡ ಬೇಕು ?

ಹಾಗಾದರೆ ಅಷ್ಟಕ್ಕೂ ಅಲ್ಲಿರುವ ರಹಸ್ಯವಾದರೂ ಏನು?? ಎಂದರೆ ಅಂದು ಪೂರ್ವಜರು ಹಾವು ಕಚ್ಚಿದರೆ ಓರ್ವ ವ್ಯಕ್ತಿಗೆ ಅರಳಿ ಮರದ ಎಲೆ ಹಾಗೂ ಬೇವಿನ ಮರದ ಎಲೆಯನ್ನು ಉಪಯೋಗಿಸಿ ಆ ಎರಡೇ ರೀತಿಯ ಎಲೆಯಿಂದ ತಮ್ಮದೇ ಆದ ಆಯುರ್ವೇದ ಪದ್ಧತಿಯ ವಿಧಾನ ಅನುಸರಿಸಿ ಹಾವು ಕಚ್ಚಿದ ವ್ಯಕ್ತಿಯನ್ನು ಅದು ಯಾವ ರೀತಿಯ ಹಾವಾದರೂ ಅದರಲ್ಲೇ ಗುಣಪಡಿಸುತ್ತಿದ್ದರು..

ಆದ್ದರಿಂದ ನಾಗರ ಹಾವುಗಳ ವಿಷಕ್ಕೆ ಅರಳಿ ಮರ ಹಾಗೂ ಬೇವಿನ ಮರದಲ್ಲಿ ಔಷದಿ ಗುಣ ಅಡಗಿದೆ ಹೇಳುವ ಕಾರಣ ದಿಂದ ಅರಳಿ ಮರ ಹಾಗೂ ಬೇವಿನ ಮರದ ಕೆಳಗಡೆ ನಾಗರ ಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡುತಿದ್ದರು ಎಂದು ಹೇಳಬಹುದು..

  ಶ್ರೀ ಅನಂತೇಶ್ವರ ದೇವಸ್ಥಾನ ಹಿನ್ನಲೆ ಕಥೆ - ಉಡುಪಿ

ಇದು ಕೆಲವು ಆದ್ಯಾತ್ಮಿಕವಾದಿಗಳ ಅಭಿಪ್ರಾಯವಾಗಿದೆ… ಜ್ಞಾನಕ್ಕಾಗಿ ಇಲ್ಲಿ ಕೊಟ್ಟಿದ್ದೇನೆ… 🙏🙏

Leave a Reply

Your email address will not be published. Required fields are marked *

Translate »