ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದೇವರಿಗೆ ವೀಳ್ಯದೆಲೆ ಹಾರ ಹಾಕಿಸಿದರೆ ಸಿಗುವ ಫಲ

ಶನಿವಾರ ಹನುಮನಿಗೆ ಎಲೆಯ ಹಾರ ಹಾಕುವುದರಿಂದ ಅಥವಾ ಎಲೆ ಅಲಂಕಾರವನ್ನು ನೇೂಡುವುದರಿಂದ ಶುಭವಾಗುತ್ತದೆ.

ಆಂಜನೇಯನಿಗೆ ಈ ಎಲೆಯ ಹಾರವು ಅತ್ಯಂತ ಪ್ರಿಯವಾದ ಮತ್ತು ಮುಖ್ಯವಾದ ಹರಕೆ ಆಗಿದೆ.

ಬೆಳಗಿನ ಜಾವ ನಾಲಕ್ಕು ಗಂಟೆಗೆ ಅಂದರೆ ಸೂರ್ಯ ಉದಯಿಸುವ ಮುನ್ನವೇ ಎದ್ದು ತಣ್ಣೀರಿನಿಂದ ಸ್ನಾನ ಮಾಡಿ

2 ವೀಳ್ಯದೆಲೆ ಅನ್ನು ತೆಗೆದುಕೊಂಡು ಅಕ್ಷತೆ ಕಾಳುಗಳನ್ನು ಹಾಕಿ ಅದನ್ನು ದಾರದಿಂದ ಕಟ್ಟಿ

ನೀವು ಮಾಡಿರುವ ವೀಳ್ಯದೆಲೆ ಹಾರಕ್ಕೆ ಈ 2 ಅಕ್ಷತೆ ಸೇರಿರುವ ಎಲೆಯನ್ನು ಹಾರದ ಮಧ್ಯ ಭಾಗಕ್ಕೆ ಕಟ್ಟಿ

ನಿಮ್ಮ ಮನೋ ಇಚ್ಛೆ ನೀಡಿರುವಂತೆ ಏನಾದರೂ ಪ್ರಾರ್ಥಿಸಿ ಮನೆಯ ಹತ್ತಿರ ಇರುವ ಯಾವುದಾದರೂ ಆಂಜನೇಯನ ದೇವಸ್ಥಾನಕ್ಕೆ ಹೋಗಿ ಅಲ್ಲಿ ಈ ವೀಳ್ಯದೆಲೆ ಹಾರವನ್ನು ಅರ್ಪಿಸಬೇಕು

ಆಂಜನೇಯನ ಹೆಸರಿನಲ್ಲಿ ಅರ್ಚನೆ ಮಾಡಿಸಬೇಕು ನಂತರ ಮೂರು ಪ್ರದಕ್ಷಿಣೆ ಹಾಕಿ ಬಂದು ಈ ಸ್ಥಳಕ್ಕೆ ಅಂದರೆ ದೇವಸ್ಥಾನದಲ್ಲಿ ಕುಳಿತು ಹನುಮಾನ್ ಚಾಲೀಸವನ್ನು ಭಕ್ತಿ ಇಂದ ಪಠಿಸಬೇಕು

  ಲಿಂಗ ಪೂಜೆಯು ಮತ್ತು ಪಾರ್ವತಿಯು ಬಾಣ ರೂಪಳೆಂದು ಪ್ರಸಿದ್ಧಿಯಾಗಲು ಕಾರಣವೇನು ?

ಹೀಗೆ ಸತತ ಮೂರು ವಾರ ಇಲ್ಲವಾದರೆ 5 ವಾರ ಮಾಡುವುದರಿಂದ ನೀವು ಅಂದುಕೊಂಡ ಕೆಲಸಗಳು ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಬರುವುದು ಖಚಿತ.

ನೀವು ಮಾಡಲೇಬೇಕಾದ ಶುಭ ದಿನಗಳು ಅಂದರೆ ಮಂಗಳವಾರ ಹಾಗೂ ಶನಿವಾರದ ದಿನಗಳು ಈ ರೀತಿ ವ್ರತ ಪಾಲನೆ ಮಾಡಿ ಹನುಮನ ಕೃಪೆಗೆ ಪಾತ್ರ ರಾಗುವುದಲ್ಲದೆ ನಿಮ್ಮ ಜೀವನದ ಸಕಲ ಸಂಕಷ್ಟಗಳು ದೂರ ಆಗಿ ಶುಭ ಫಲವನ್ನು ಕಾಣುತ್ತೀರಿ.

ಹತ್ತು ನಿಯಮಗಳನ್ನು ಪಾಲಿಸಿದರೆ ನಿಮಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ !!

ಸ್ವಾಮಿಗೆ ಚಿಗುರು ವೀಳ್ಯದೆಲೆ ಹಾರವನ್ನು ಹಾಕಿದರೆ ಖಾಯಿಲೆಯಿಂದ ನರಳುವವರು ಬೇಗ ಗುಣಮುಖರಾಗುತ್ತಾರೆ.

ಮನೆಯಲ್ಲಿ ಮಾಂತ್ರಿಕ ಕಾಟ ಇರುವವರು ಆಂಜನೇಯ ಸ್ವಾಮಿಗೆ ಚಿಗುರು ವೀಳ್ಯದೆಲೆ ಹಾರ ಹಾಕಿದರೆ ಮಾಂತ್ರಿಕ ಭಾದೆ ನಿವಾರಣೆಯಾಗುತ್ತದೆ.

  ಯಾವ ದೇವರಿಗೆ ಯಾವ ಕಾಷ್ಠ ?

ಸಂಸಾರದಲ್ಲಿ ನೆಮ್ಮದಿ ಇಲ್ಲದವರು ಸ್ವಾಮಿಗೆ ವೀಳ್ಯದೆಲೆ ಹಾರ ಹಾಕಿಸಿದರೆ ಸಂಸಾರದಲ್ಲಿ ನೆಮ್ಮದಿ ಸಿಕ್ಕುತ್ತದೆ.

ಸಣ್ಣಮಕ್ಕಳು ಎಷ್ಟೇ ಆಹಾರ ತಿಂದರೂ ತುಂಬಾ ಸಣ್ಣಗಿದ್ದು ನಿಶ್ಯಕ್ತರಾಗಿದ್ದರೆ, ಇಂತಹ ಸಮಯದಲ್ಲಿ ಸ್ವಾಮಿಗೆ ವೀಳ್ಯದೆಲೆ ಹಾರ ಹಾಕಿಸಿ ಪ್ರಾರ್ಥಿಸಿದರೆ , ಮಕ್ಕಳ ಆರೋಗ್ಯ ಚೆನ್ನಾಗಿದ್ದು, ಚೆನ್ನಾಗಿ ಬೆಳೆಯುತ್ತಾರೆ.

ವ್ಯಾಪಾರ ಮಾಡುವಾಗ ತುಂಬಾ ನಷ್ಟವಾದರೆ, ಅಂಥವರು ಸ್ವಾಮಿಗೆ ವೀಳ್ಯದೆಲೆ ಹಾರ ಹಾಕಿಸಿ, ವೀಳ್ಯದೆಲೆ, ಹಣ್ಣುಗಳು, ಹಾಗೂ ದಕ್ಷಿಣೆ ಸಮೇತ ತಾಂಬೂಲ ದಾನ ಮಾಡಿದರೆ, ವ್ಯಾಪಾರ ಚೆನ್ನಾಗಿ ಆಗುತ್ತದೆ.

ಯಾವುದೇ ವ್ಯಕ್ತಿಯನ್ನು ತಾತ್ಸಾರದಿಂದ ನೋಡುತ್ತಿದ್ದರೆ, ಅಂಥವರು ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಹಾರ ಹಾಕಿಸಿ ಪ್ರಾರ್ಥಿಸಿದರೆ , ಬಹಳ ಗೌರವಾನ್ವಿತ ವ್ಯಕ್ತಿಯಾಗುತ್ತಾರೆ.

ಶನೈಶ್ಚರ ದೃಷ್ಟಿ ಇರುವವರು, ಆಂಜನೇಯನಿಗೆ ವೀಳ್ಯದೆಲೆ ಹಾರ ಹಾಕಿಸಿ, ತುಳಸಿ ಅರ್ಚನೆ ಮಾಡಿಸಿದರೆ, ಶನಿದೋಷ ನಿವಾರಣೆಯಾಗುತ್ತದೆ.

  ಮನೆಗೆ ಯಾವ ಗಣಪತಿ ಶುಭ..? ಬಲಮುರಿಯೋ ಅಥವಾ ಎಡಮುರಿಯೋ..?

ಸುಂದರಕಾಂಡ ಪಾರಾಯಣ ಮಾಡಿ, ಸ್ವಾಮಿಗೆ ವೀಳ್ಯದೆಲೆ ಹಾರ ಹಾಕಿಸಿದರೆ ಸಕಲ ಕಾರ್ಯಗಳೂ ಖಂಡಿತವಾಗಿಯೂ ವಿಜಯ ವಾಗುತ್ತದೆ

ಹನುಮಾನ್ ಚಾಲೀಸಾ ಓದಿ ಸ್ವಾಮಿಗೆ ವೀಳ್ಯದೆಲೆ ಹಾರ ಹಾಕಿಸಿ, ಪೂಜಿಸಿದರೆ, ಪರಮಾತ್ಮನ ಅನುಗ್ರಹ ಎಂದೆಂದೂ ಇರುತ್ತದೆ.

ನ್ಯಾಯಾಲಯದ ನಡೆಯುವ ವಾದ ವಿವಾದಗಳಲ್ಲಿ ಸ್ವಾಮಿಯನ್ನು ಪ್ರಾರ್ಥಿಸಿ, ವೀಳ್ಯದೆಲೆ ಹಾರ ಹಾಕಿಸಿ, ಪೂಜಿಸಿ ಪ್ರಸಾದ ತಿಂದರೆ ಜಯವು ಸತ್ಯದ ಕಡೆ ಆಗುತ್ತದೆ.

ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು
‘ಸರ್ವೇ ಜನಾಃ ಸುಖಿನೋ ಭವಂತು’

Leave a Reply

Your email address will not be published. Required fields are marked *

Translate »