ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪರಶುರಾಮ ಇತಿಹಾಸದ ಕಥೆ

“ಪರಶುರಾಮ”..!

ಪರಶುರಾಮ ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದ ಹತ್ತೊಂಭತ್ತನೆಯ ತ್ರೇತಾಯುಗದಲ್ಲಿ ಭೃಗುವಂಶದ ಜಮದಗ್ನಿ ರೇಣುಕೆಯರ ಮಗ. ವಿಷ್ಣುವಿನ ಆರನೆಯ ಅವತಾರ, ದಶಾವತಾರಗಳಲ್ಲೊಂದು. ಅತ್ಯಂತ ಬಲಿಷ್ಠನೂ ವಿನಯಶಾಲಿಯೂ ಆಗಿದ್ದ ಪರಶುರಾಮ ಉದ್ಧತರಾದ ಕ್ಷತ್ರಿಯರನೆಲ್ಲ ನಾಶಮಾಡುವ ಉದ್ದೇಶದಿಂದ ಹುಟ್ಟಿದವನಾದರೂ ತಂದೆಗೆ ಅತ್ಯಂತ ವಿಧೇಯನಾಗಿದ್ದ. ಇವನಿಗೆ ರಮಣ್ವಂತ, ಸುಷೇಣ ವಸು, ವಿಶ್ವಾವಸು ಎಂಬುದಾಗಿ ನಾಲ್ಕು ಜನ ಸಹೋದರರಿದ್ದರು.

ಪ್ರಸೇನಜಿತನ ಮಗಳಾದ ತಾಯಿ ರೇಣುಕ ಒಂದು ದಿನ ಸ್ನಾನಕ್ಕೆ ಹೋದಾಗ ಚಿತ್ರರಥನೆಂಬ ಗಂಧರ್ವನನ್ನು ನೋಡಿ ವ್ಯಾಮೋಹಗೊಂಡು ತಡವಾಗಿ ಆಶ್ರಮಕ್ಕೆ ಬಂದಳು. ಇದನ್ನು ಕಂಡ ತಂದೆ ಜಮದಗ್ನಿ ಅವಳ ಕತ್ತನ್ನು ಕತ್ತರಿಸಲು ಮಕ್ಕಳಿಗೆ ಆಜ್ಞಾಪಿಸಿದ. ನಾಲ್ವರು ಮಕ್ಕಳು ನಿರಾಕರಿಸಿದಾಗ ಪರಶುರಾಮ ತಂದೆಯ ಅಜ್ಞೆಯನ್ನು ನೆರವೇರಿಸಿದ. ತಂದೆ ಆ ನಾಲ್ವರಿಗೆ ಶಾಪವಿತ್ತು ಪರಶುರಾಮನಿಗೆ ವರ ಬೇಡುವಂತೆ ಕೇಳಿದ.

ಕೂಡಲೆ ಈತ ತನ್ನ ತಾಯಿ ರೇಣುಕೆ ಬದುಕುವಂತೆಯೂ ಆಕೆಗೆ ಈ ಘಟನೆ ನೆನಪಿನಲ್ಲಿ ಉಳಿಯದಂತೆಯೂ ತನ್ನ ನಾಲ್ವರು ಅಣ್ಣಂದಿರು ಮೊದಲಿನ ಸ್ಥಿತಿಯನ್ನೇ ಪಡೆಯುವಂತೆಯೂ ಆಗಲೆಂದು ಕೇಳಿಕೊಂಡ. ಕೋಪವನ್ನು ಬಿಡಬೇಕೆಂದು ತಂದೆಯನ್ನು ಬೇಡಿಕೊಂಡ ತಂದೆ ಹಾಗೆಯೇ ಅನುಗ್ರಹಿಸಿದ. ಕಾರ್ತವೀರ್ಯಾರ್ಜುನ ಇವರ ಆಶ್ರಮಕ್ಕೆ ಬಂದು ಅತಿಥಿಸತ್ಕಾರ ಪಡೆದು ಅಲ್ಲಿದ್ದ ಕಪಿಲೆಯನ್ನು ತನಗೆ ಕೊಡಬೇಕೆಂದು ಬೇಡಿದ. ಕೊಡಲು ಒಪ್ಪಲಿಲ್ಲವಾಗಿ ಯುದ್ಧ ಮಾಡಿ ಜಮದಗ್ನಿಯನ್ನು ಕೊಂದ.

ಈ ವಿಷಯ ತಿಳಿದ ಪರುಶರಾಮ ಕೋಪಾವಿಷ್ಟನಾಗಿ ಕೂಡಲೆ ಮಾಹೀಷ್ಮತೀ ನಗರಕ್ಕೆ ಹೋಗಿ ಕಾರ್ತವೀರ್ಯಾರ್ಜುನನ ಸಾವಿರ ತೋಳುಗಳನ್ನು ಕತ್ತರಿಸಿ ಹಾಕಿದ. ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿ ಕ್ಷತ್ರಿಯರನ್ನೆಲ್ಲ ಕೊಂದು ಅವರ ರಕ್ತದಿಂದ ಪಿತೃತರ್ಪಣ ಕೊಟ್ಟ. ಮುಂದೆ ರಾಮಾವತಾರ ಕಾಲದಲ್ಲಿ ವಿವಾಹ ಮಾಡಿಕೊಂಡು ಹಿಂದಿರುಗುತ್ತಿದ್ದ ಶ್ರೀರಾಮನೊಡನೆ ಸೆಣಸಿ ಸೋತು ತನ್ನಲ್ಲಿದ್ದ ವೈಷ್ಣವ ಧನುಸ್ಸನ್ನು ಆತನಿಗೆ ಕೊಟ್ಟ.

  ದೇವಸ್ಥಾನ ಚೆನ್ನಾಗಿದ್ದರೆ ಊರು ಚೆನ್ನಾಗಿರುತ್ತದೆ

ಕೃಷ್ಣಾವತಾರದ ಸಮಯದಲ್ಲಿ ಪಾಂಡವರೊಡನೆ ಕಾಳಗಕ್ಕೆ ಇಳಿಯದೆ ಸಂಧಿ ಮಾಡಿಕೊಳ್ಳಲು ದುರ್ಯೋಧನನಿಗೆ ಬೋಧಿಸಿದ. ಅಂಬೆ ಪ್ರಕರಣದಲ್ಲಿ ಭೀಷ್ಮನೊಂದಿಗೆ ಘೋರ ಕಾಳಗ ಮಾಡಿದ. ಬ್ರಾಹ್ಮಣನ ವೇಷದಲ್ಲಿ ಬಂದು ಶಸ್ತ್ರಭ್ಯಾಸ ಮಾಡಿದ ಕರ್ಣನ ಮೋಸ ಗೊತ್ತಾದಾಗ ತಾನು ಕೊಟ್ಟ ಅಸ್ತ್ರಗಳು ಯುದ್ಧದಲ್ಲಿ ಫಲಿಸದಂತೆ ಶಾಪ ಕೊಟ್ಟ. ಈತ ದ್ರೋಣಗುರು. ಕೊನೆಯಲ್ಲಿ ಅಶ್ವಮೇಧಯಾಗಮಾಡಿ ಭೂಮಿಯನ್ನೆಲ್ಲ ಗೆದ್ದು ಕಶ್ಯಪನಿಗೆ ದಾನ ಮಾಡಿದ.

ತಂದೆಯ ಸಾವಿನಿಂದ ಅತ್ಯಂತ ದುಃಖಿತನಾದ ಈತ ಶಿವನನ್ನು ಸ್ತುತಿಸಿದ. ತಾನು ಮಾಡಿದ ಪಾಪಗಳು ಪರಿಹಾರವಾಗಿರುವುದಾಗಿಯೂ ತನಗೆ ಸಾವಿಲ್ಲವೆಂತಲೂ ಶಿವನಿಂದ ಅನುಗ್ರಹ ಪಡೆದ. ತಪಸ್ಸು ಮಾಡುತ್ತ ಈತ ಈಗಲೂ ಮಹೇಂದ್ರ ಪರ್ವತದಲ್ಲಿ ಇದ್ದಾನೆಂದು ನಂಬಿಕೆ. ಈತನೇ ಎಂಟನೆಯ ಸಾವರ್ಣಿ ಮನ್ವಂತರದಲ್ಲಿ ಸಪ್ತಋಷಿಗಳಲ್ಲಿ ಒಬ್ಬನಾಗುತ್ತಾನೆ ಎನ್ನಲಾಗಿದೆ.

  ವಿಷ್ಣು ವಿಗ್ರಹ ಲಕ್ಷಣಗಳು ..!

Leave a Reply

Your email address will not be published. Required fields are marked *

Translate »