*ತುಳುನಾಡು ಪರಶುರಾಮ ಸೃಷ್ಟಿ ಹೇಗೆ ಮತ್ತು ತುಳುನಾಡಿನಲ್ಲಿ ನಾಗದೇವರಿಗೆ ಯಾಕೆ ವಿಶೇಷ ಪೂಜೆಗಳು ಅನ್ನುವುದು ಗೊತ್ತಿಲ್ಲವಾದರೆ ಈ ಕಥೆಯನ್ನು ಓದಿ!*
ತುಳುನಾಡು ಪರಶುರಾಮ ಸೃಷ್ಟಿ. ಪರಶುರಾಮ ಕ್ಷತ್ರಿಯರ ಹತ್ಯೆಯನ್ನು ಮಾಡಿದ ತನ್ನ ಕೊಡಲಿಯನ್ನು ಹಿಡಿದುಕೊಂಡು ಪಶ್ಚಿಮ ಘಟ್ಟದ ಸಹ್ಯಾದ್ರಿ ತಪ್ಪಲಿಗೆ ಬರುತ್ತಾನೆ. ತಾನು ಮಾಡಿದ ಕೊಲೆಗಳಿಗೆ ಬೇಸರಗೊಂಡು ತನ್ನ ಆಯುಧವನ್ನು ತ್ಯಜಿಸಲು ನಿರ್ಧಾರವನ್ನು ತಳೆಯುತ್ತಾನೆ. ಅಂದಿನ ಕಾಲದಲ್ಲಿ ತುಳುನಾಡು ಸಮುದ್ರದ ತೆಕ್ಕೆಯಲ್ಲಿತ್ತು. ಬಯಲುಗಳಲ್ಲಿ ನೀರು ತುಂಬಿಕೊಂಡು ಗುಡ್ಡಗಳು ಅಲ್ಲಲ್ಲಿ ಕುದ್ರುವಿನಂತೆ ಸಮುದ್ರ ಮಧ್ಯೆ ತಲೆ ಎತ್ತಿ ನಿಂತಿದ್ದವು. ತಾನು ಸಹ್ಯಾದ್ರಿ ಪರ್ವತದಲ್ಲಿ ನಿಂತು ತನ್ನ ಕೊಡಲಿಯನ್ನು ಬೀಸಿ ಎಸೆಯುತ್ತೇನೆ. ಕೊಡಲಿ ಎಲ್ಲಿಗೆ ಹೋಗಿ ಬೀಳುತ್ತದೋ ಅಲ್ಲಿಯವರೆಗೆ ಹಿಮ್ಮುಖವಾಗಿ ಚಲಿಸುವಂತೆ ಸಮುದ್ರದ ಒಡೆಯನಾದ ವರುಣ ದೇವನನ್ನು ಬೇಡುತ್ತಾನೆ.ಮಹಾ ಕೋಪಿಯಾದ ಪರಶುರಾಮನಿಗೆ ಇಲ್ಲ ಎಂದು ಹೇಳಲು ವರುಣ ದೇವನಿಗೆ ಸಾಧ್ಯವಾಗುವುದಿಲ್ಲ. ಆದರೆ ಸಮುದ್ರ ಹಿಮ್ಮುಕವಾಗಿ ಚಲಿಸಿದರೂಉಪ್ಪು ಮೆತ್ತಿಕೊಂಡ ಜಾಗ ಯಾವುದೇ ವಾಸಕ್ಕೆ ಯೋಗ್ಯವಾಗಿರುವುದಿಲ್ಲ ಅದರಲ್ಲಿ ಒಂದು ಹುಲ್ಲಿನ ಕಡ್ಡಿಯೂ ಬೆಳೆಯುವುದಿಲ್ಲ. ಬರಡು ಭೂಮಿಯಾಗಿರುತ್ತದೆಎಂದು ವರುಣ ದೇವರು ಪರಶುರಾಮನಿಗೆ ಹೇಳುತ್ತಾನೆ.ತಾನು ಪಡೆದುಕೊಂಡಿದ್ದು ಬರಡು ಭೂಮಿ ಅನ್ನುವುದನ್ನು ತಿಳಿದುಕೊಂಡ ಪರಶುರಾಮ ಸರ್ಪರಾಜನಾದ ವಾಸುಕಿಯನ್ನು ತಪಸ್ಸಿನ ಮೂಲಕ ಒಲಿಸಿಕೊಂಡು ತಾನು ಪಡೆದ ಭೂಮಿಗೆ ಸರ್ಪಗಳನ್ನು ಕಳುಹಿಸಿ ಕೊಡುವಂತೆ ಬೇಡಿಕೊಳ್ಳುತ್ತಾನೆ.
ಸರ್ಪರಾಜ ವಾಸುಕಿ ಒಪ್ಪಿಕೊಳ್ಳುತ್ತಾನೆ.ಲಕ್ಷ ಲಕ್ಷ ನಾಗ ಸರ್ಪಗಳು ಭೂಮಿಗಿಳಿಯುತ್ತವೆ. ಹೀಗಿ ಇಳಿದ ಸರ್ಪಗಳುಸುಮ್ಮನಿರುವುದೇ ಇಲ್ಲ. ಪಾತಾಳಕ್ಕೆ ರಂದ್ರಕೊರೆದು ಸಿಹಿ ನೀರನ್ನು ಬರಿಸುತ್ತವೆ. ಭೂಗರ್ಬವನ್ನು ಬಸಿದು ಮಣ್ಣನ್ನು ತಂದು ಹುತ್ತಕಟ್ಟಿ ಬುಡಮೇಲು ಮಾಡಿಬಿಡುತ್ತವೆ.ದಿನೇ ದಿನೇ ವಾಸ ಯೋಗ್ಯವಾದ ತುಳುನಾಡು ಸೃಷ್ಟಿಯಾಗುತ್ತದೆ. ನಾಗ ದಯೆಯಿಂದ ನೀರು ಉಕ್ಕುತ್ತದೆ. ಗಿಡಗಳು ಬೆಳೆಯುತ್ತವೆ. ನಾಡು ಕಲ್ಮಷಗಳನ್ನು ತೊಳೆದುಕೊಂಡು ಸಮೃದ್ಧಿಯನ್ನು ಪಡೆಯುತ್ತದೆ. ಹೀಗೆ ನಾಗಗಳ ಆವಾಸ ಸ್ಥಾನದಲ್ಲಿ ಯಾರು ಹಾಲೆರೆದು ತಮ್ಮನ್ನು ಭಕ್ತಿಯಿಂದ ಪೂಜಿಸುತ್ತಾರೋ ಅಂತವರಿಗೆ ತಮ್ಮ ವಶದಲ್ಲಿದ್ದ ಜಾಗವನ್ನು ಬಿಟ್ಟುಕೊಟ್ಟು ತುಳುನಾಡಿನ ಪ್ರಧಾನ ದೇವರಲ್ಲಿ ನಾಗದೇವರೂಒಬ್ಬರಾಗುತ್ತಾರೆ.ಇದು ಬರಿ ನಾಗ ಕಥೆಯಲ್ಲತುಳುನಾಡಿನ ಸಮೃದ್ಧಿಯ ಕಥೆಯೂ ಹೌದು.
ನಿಮ್ಮ ನೆಚ್ಚಿನ ಸ್ನೇಹಿತರೊಂದಿಗೆ,ಬಂಧು ಬಳಗದೊಂದಿಗೆ ಈ ಕಥೆಯನ್ನು ಹಂಚಿಕೊಳ್ಳಿ.