ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಭಗವಾನ್ ವೆಂಕಟೇಶ್ವರ ಸ್ವಾಮಿ ಅವರ ಗಲ್ಲದ ಮೇಲೆ ಕರ್ಪೂರ ಏಕೆ?

ಭಗವಾನ್ #ವೆಂಕಟೇಶ್ವರನ ಗಲ್ಲದ ಮೇಲೆ ಬಿಳಿ ಚುಕ್ಕೆ ಯಾವುದು ಎಂದು ನಿಮ್ಮ ಮನಸ್ಸಿಗೆ ಎಂದಾದರೂ ಒಂದು ಪ್ರಶ್ನೆ ಬಂದಿದೆಯೇ?

ಅಥವಾ ಭಗವಾನ್ ವೆಂಕಟೇಶ್ವರ ಸ್ವಾಮಿ ಅವರ ಗಲ್ಲದ ಮೇಲೆ ಕರ್ಪೂರ ಏಕೆ?

ತಿಳಿಯಲು ಈ ಕಥೆಯನ್ನು ಓದಬೇಕು…

ಸಾವಿರಾರು ವರ್ಷಗಳ ಹಿಂದೆ ತಿರುಮಲೆಯಲ್ಲಿ ಈಗಿನಂತೆ ಜನದಟ್ಟಣೆಗಳೇನೂ ಇಲ್ಲದ ಕಾಲ ಶ್ರೀ ವೆಂಕಟೇಶ್ವರ ಪೂಜೆಗಳನ್ನು ನಡೆಸುವ ಅರ್ಚಕರಲ್ಲದೆ ಆಗೊಮ್ಮೆ ಈಗೊಮ್ಮೆ ಸ್ವಾಮಿಯ ದರ್ಶನಕ್ಕೆಂದು ಬರುವ ಭಕ್ತರುಗಳನ್ನು ಹೊರತುಪಡಿಸಿದರೆ,ಮತ್ತೆ ಯಾರೂ ಅಲ್ಲಿರುವ ಸಾಹಸಮಾಡದಕಾಲವದು.

 ಆಗ ಅಲ್ಲಿಗೆ ಬಂದ ರಾಮಾನುಜಾಚಾರ್ಯರು,ಯೋಚಿಸಿ ನಿತ್ಯಾಲಂಕಾರಪ್ರಿಯನಾದ ವೆಂಕಟೇಶ್ವರನನ್ನು ಅಲಂಕರಿಸಲು ಬೇಕಾದ ಹೂವುಗಳಿಗಾಗಿ ಅಲ್ಲೇ ನೆಲಸಿ ಹೂ ತೋಟವೊಂದನ್ನು ನಿರ್ಮಿಸಿ ಸ್ವಾಮಿಯ ಸೇವಿಸಲಿಕ್ಕಾಗಿ ತಮ್ಮ ಶಿಷ್ಯರಲ್ಲಿ ವಿಚಾರಿಸಿದಾಗ ಅವರ ಶಿಷ್ಯರಲ್ಲೊಬ್ಬರಾದ ಆನಂದಾಚಾರ್ಯರು ಶ್ರಿನಿವಾಸನ ಸೇವೆ ದೊರೆತಿರುವುದು ನನ್ನ ಪುಣ್ಯ ಎಂದು ಒಪ್ಪಿಕೊಂಡರು.

   ಮೊದಲು ಹೂತೋಟದ ನಿರ್ಮಾಣವಾಗಬೇಕಿತ್ತು. ಹೂವಿನ ಗಿಡಗಳಿಗಾಗಿ ಬಾವಿಯೊಂದನ್ನು ನಿರ್ಮಿಸಲು ಪ್ರಾರಂಭಮಾಡಿದ ಆನಂದಾಚಾರ್ಯರು ಹಾರೆಯಿಂದ ಮಣ್ಣು ತೆಗೆದು ಮಣ್ಣಿನ ಬುಟ್ಟಿಯನ್ನು ತನ್ನ ಗರ್ಭಿಣಿ ಪತ್ನಿಯ ತಲೆಯಮೇಲಿಟ್ಟರೆ,ಆಕೆ ಆ ಮಣ್ಣನ್ನು ಹೊತ್ತೊಯ್ದು ದೂರದಲ್ಲಿ ಬಿಸಾಡಿ ಬರುತ್ತಿದ್ದರು.

ತನಗಾಗಿ ತನ್ನ ಭಕ್ತರು ಪಡುತ್ತಿದ್ದ ಶ್ರಮವನ್ನು ಕಂಡ ಶ್ರೀನಿವಾಸನು ವೇಷಮರೆಸಿ ಬಾಲಕನ ರೂಪಧಾರಿಯಾಗಿ ಆನಂದಾಚಾರ್ಯರ ಬಳಿ ಬಂದು
ಅಯ್ಯಾ..ನಾನೂ ನಿಮ್ಮ ಕೆಲಸದಲ್ಲಿ ಬಾಗಿಯಾಗಲೇ ಪಾಪ ನಿಮ್ಮಿಬ್ಬರ ಶ್ರಮಕಂಡು ನನಗೂ ಸಹಾಯ ಮಾಡಬೇಕೆನ್ನುವ ಮನಸ್ಸಾಗಿದೆ ಎಂದರು.

  ಆನಂದಾಚಾರ್ಯರು ಆ ಹುಡುಗನ ಮಾತನ್ನು ಕೇಳಿ..ಹುಡುಗಾ...ಇದು ಶ್ರೀವಾರಿಗೆ ನಾನೂ ನನ್ನ ಪತ್ನಿಯೂ ಮಾಡುತ್ತಿರುವ ಸೇವೆ ,ಇದರಲ್ಲಿ ನೀನು ಬಾಗಿಯಾಗುವುದೇನು ಬಂತು ಹೊರಡು ಹೊರಡಿಲ್ಲಿಂದ ಅಂದುಬಿಟ್ಟರು.

   ಮತ್ತೆಷ್ಟು ಕೇಳಿದರೂ ಒಪ್ಪದ ಅವರನ್ನು ಬಿಟ್ಟು ಬಾಲಕನಾದ ಶ್ರೀನಿವಾಸದೇವರು ಆತನ ಪತ್ನಿಯ ಬಳಿಹೋಗಿ ಅನುನಯಿಸಿ ಆಕೆಯ ಕೈಲಿದ್ದ ಮಣ್ಣಿನ ಬುಟ್ಟಿಯನ್ನು ಓಯ್ದು ಮಣ್ಣನ್ನು ಹಾಕಿ ಬರುವ ಕೆಲಸ ಪ್ರಾರಂಬಿಸಿದರು.

 ತುಂಬಿ ಕೊಟ್ಟ ಮಣ್ಣನ್ನು ಇಷ್ಟು ಬೇಗ ಬಿಸಾಡಿ ಬರುತ್ತಿದ್ದ ಪತ್ನಿಯನ್ನು ವಿಚಾರಿಸಿದಾಗ ಆಕೆ ತನ್ನ ಸಹಾಯಕ್ಕೆ ಹುಡುಗನೊಬ್ಬ ಬಂದ ವಿಷಯವನ್ನು ಹೇಳಬೇಕಾಯಿತು.

ಆನಂದಾಚಾರ್ಯರ ಕೋಪ ನೆತ್ತಿಗೇರಿತು.ಕೈಲಿದ್ದ ಹಾರೆಯೊಂದಿಗೆ ಆತ ಆ ಹುಡುಗನ ಬೆನ್ನಟ್ಟಿದರು

ತನ್ನನ್ನು ಹೊಡೆಯಲು ಹಾರೆ ಹಿಡಿದು ಅಟ್ಟಿಸಿಕೊಂಡು ಬಂದ ಆಚಾರ್ಯರನ್ನು ಕಂಡು ಆ ಬಾಲಕನಿಗೆ ನಗುವೋ ನಗು.
ಕೈಗೆ ಸಿಗದಂತೆ ತಪ್ಪಿಸಿಕೊಂಡು ಓಡುತ್ತಿದ್ದ ಬಾಲಕನನ್ನು ನೋಡಿ ಕೈಯಲ್ಲಿದ್ದ ಹಾರೆಕೋಲನ್ನೇ ಆ ಬಾಲಕನಿಗೆ ತಾಗುವಂತೆ ಬೀಸಿದರು ಆನಂದಾಚಾರ್ಯರು.

  ಆ ಹಾರೆ ಬಾಲಕನ ಗಲ್ಲವನ್ನು ಸವರಿಕೊಂಡು ಹೋಗೇ ಬಿಟ್ಟಿತು,

ಬಾಲಕನಾದರೂ ಆಗಲೂ ಕೈಗೆ ಸಿಗದೆ ಓಡಿ ಹೋಗಿ ಶ್ರೀ ವೆಂಕಟೇಶ್ವರನ ಗರ್ಭಗುಡಿಗೆ ನುಗ್ಗಿ ಮಾಯವಾಗಿಬಿಟ್ಟ.

ಅಟ್ಟಿಸಿಕೊಂಡು ಬಂದರೂ ಕೈಗೆ ಸಿಗದೆ ತಪ್ಪಿಸಿಕೊಂಡು ಗರ್ಭಗುಡಿಗೆ ಓಡಿಹೋದ ಬಾಲಕನ ಬಗ್ಗೆ ಅರ್ಚಕರಿಗೆ ದೂರು ಹೇಳಿದರು ಆನಂದಾಚಾರ್ಯರು.

   ಸರಿ ಅರ್ಚಕರು ಗರ್ಭಗುಡಿಯಲ್ಲಿ ಹುಡುಕಿದರೂ ಎಲ್ಲೂ ಬಾಲಕನ ಪತ್ತೆಯಿಲ್ಲ.ಆದರೆ ಅಲ್ಲೊಂದು ಘೋರ ಅನರ್ಥವಾಗಿಹೋಗಿತ್ತು.

   ಶ್ರೀ ವೆಂಕಟೇಶ್ವರನ ಗಲ್ಲದಿಂದ ದಳದಳನೆ ರಕ್ತ ಸುರಿಯುತ್ತಿತ್ತು.ಅರ್ಚಕರು ಭಯದಿಂದ ಗಡಗಡನೆ ನಡುಗಿಹೋದರು.ಆನಂತಚಾರ್ಯರು ಸಹ ಈ ಘೋರದೃಶ್ಯವನ್ನು ಕಂಡು  ಭಯದಿಂದ ನಡುಗಿಹೋದರು.

ಕ್ಷಣಾರ್ಧದಲ್ಲಿ ಅವರಿಗೆ ತನ್ನ ಕೋಪಕ್ಕೆ ಗುರಿಯಾದ ಬಾಲಕ ಬೇರೆ ಯಾರೂ ಅಲ್ಲ ಅದು ಶ್ರೀನಿವಾಸನೇ ಎಂದು ತಿಳಿದು ಹೋಯಿತು.

    ಅಯ್ಯೋ..ಯಾವ ಸ್ವಾಮಿಯ ಸೇವೆ ಮಾಡುವುದು ನನಗೊದಗಿದ ಪರಮಬಾಗ್ಯವೆಂದು ಪರಿತಪಿಸಿದೆನೋ ಆತನೇ ನನ್ನ ಸಹಾಯಕ್ಕೆಂದು ಬಂದಾಗ ನಿಶ್ಕರುಣೆಯಿಂದ ಹೊಡೆದುಬಿಟ್ಟೆನೇ,

    ಆಹಾ ನಾನೆಂತ ಪಾಪಿ  ಸದಾ ಶ್ರೀನಿವಾಸನನ್ನು ಅಲಂಕರಿಸುವ ಈ ಕೈಗಳಿಂದ ಪರಮಾತ್ಮನನ್ನು ಹೊಡೆದು ಘಾಸಿಗೊಳಿಸಿದೆನಲ್ಲಾ. 

ಅಯ್ಯೋ ನನ್ನ ಪಾಪಕ್ಕೆ ಪ್ರಾಯಶ್ಚಿತ್ತವೇ ಇಲ್ಲವೇ ಎಂದು ಆರ್ತದನಿಯಿಂದ ಕಣ್ಣೀರು ಸುರಿಸುವಾಗ ಎಚ್ಚೆತ್ತುಕೊಂಡ ಅರ್ಚಕರು ಅಲ್ಲಿಯೇ ಇದ್ದ ಕರ್ಪೂರವನ್ನು ಪುಡಿಮಾಡಿ ಗಾಯಗೊಂಡು ರಕ್ತವೊಸರುತ್ತಿದ್ದ ಗಲ್ಲಕ್ಕೆ ಹಚ್ಚಿದರಂತೆ

    ಆಗ ರಕ್ತಸ್ರಾವ ನಿಂತಿತಂತೆ. ಅಳುತ್ತಿದ್ದ ಆಚಾರ್ಯರಿಗೂ ಅರ್ಚಕರಿಗೂ ಅಶರೀರವಾಣಿಯೊಂದು ಕೇಳಿಸಿ, 

ಇನ್ನು ಮುಂದೆ ವಿಗ್ರಹದ ಗಲ್ಲಕ್ಕೆ ಕರ್ಪೂರದ ಪುಡಿಯದೇ ಅಲಂಕಾರವಾಗಬೇಕೆಂದು ಹೇಳಿತಂತೆ.

  ಯಾರು ವ್ಯಾಸರಾಯರು ..?

ಹೇಗೆ ಶಂಖ ಚಕ್ರಗಳಿಂದಲೂ,ಸರ್ವಾಭರಣಗಳಿಂದಲೂ,ಅಲಂಕಾರ ಮಾಡಲಾಗುವುದೊ ಹಾಗೇ ಗಲ್ಲಕ್ಕೆ ಹಚ್ಚಿದ ಈ ಕರ್ಪೂರವನ್ನೂ ಅಲಂಕಾರ ಸೂಚಕವಾಗಿ ನಾನು ಸ್ವೀಕರಿಸುವೆನೆಂದು ಸ್ವಾಮಿಯ ಆದೇಶವಾಯಿತಂತೆ.

  ಅಂದಿನಿಂದ ಈಗಲೂ ಸಹ ಶ್ರೀವಾರಿ ನಿತ್ಯಾಲಂಕಾರದಲ್ಲಿ ಕರ್ಪೂರವೂ ಸೇರಿದೆ.

ಗೋವಿಂದ ಗೋವಿಂದ ಗೋವಿಂದ

.▬▬▬ஜ۩۞۩ஜ▬▬▬▬▬▬ஜ۩۞۩ஜ▬▬ ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

Leave a Reply

Your email address will not be published. Required fields are marked *

Translate »