ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ತ್ರಿಕೂಟೇಶ್ವರ ದೇವಸ್ಥಾನ ಗದಗ

ತ್ರಿಕೂಟೇಶ್ವರ ದೇವಸ್ಥಾನ.ಗದಗ.

ತ್ರಿಕೂಟೇಶ್ವರ ದೇವಸ್ಥಾನವು ಶಿವನಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ.
ಈ ದೇವಸ್ಥಾನವು ಹುಬ್ಬಳ್ಳಿ-ಧಾರವಾಡ ದಿಂದ ಆಗ್ನೇಯ ದಿಕ್ಕಿನಲ್ಲಿ ೫೦ ಕಿ.ಮೀ ದೂರದ ಗದಗ ಪಟ್ಟಣದಲ್ಲಿದೆ,ಇಲ್ಲಿ ಒಂದೇ ಕಲ್ಲಿನ ಮೇಲೆ ಮೂರು ಲಿಂಗಗಳನ್ನು ಅಳವಡಿಸಲಾಗಿದೆಯಲ್ಲದೆ
ಈ ದೇವಸ್ಥಾನದಲ್ಲಿ ಸರಸ್ವತಿಗೆ ಸಮರ್ಪಿತವಾದ ಒಂದು ದೇಗುಲವಿದೆ. ಅದರಲ್ಲಿ ಸ್ತಂಭಗಳನ್ನು ಕೆತ್ತಲಾಗಿದೆ.

ವಾಸ್ತುಶಿಲ್ಪ.

ಈ ದೇವಾಲಯದ ವಾಸ್ತುಶಿಲ್ಪವನ್ನು
ಅಮರಶಿಲ್ಪಿ ಜಕಣಾಚಾರಿ ಯೋಜಿಸಿದ್ದಾರೆ.
ಬಾದಾಮಿಯ ಚಾಲುಕ್ಯರು ದಕ್ಷಿಣದ ಆರಂಭಿಕ ವಾಸ್ತುಶಿಲ್ಪದ ಪ್ರವರ್ತಕರು. ಐಹೊಳೆ, ಬಾದಾಮಿ ಮತ್ತು ಪಟ್ಟದಕಲ್ಲು ಅವರ ಕಲಾಕೇಂದ್ರಗಳಾಗಿದ್ದವು. ಅವರ ನಂತರ ರಾಷ್ಟ್ರಕೂಟರು ಮತ್ತು ಕಲ್ಯಾಣಿ ಚಾಲುಕ್ಯರು ಆಳಿದರು .

  ಪುರಿ ಜಗನ್ನಾಥ ದೇವಾಲಯದಲ್ಲಿ ನಡೆಯುವ ಅಚ್ಚರಿಯ ಸಂಗತಿಗಳೇನು ಗೊತ್ತಾ ..?

ದೇವಾಲಯವು ಸಂಕೀರ್ಣವಾದ ಶಿಲ್ಪಕಲೆಯೊಂದಿಗೆ ಅಲಂಕೃತ ಕಂಬಗಳನ್ನು ಹೊಂದಿದೆ.ಗರ್ಭಗೃಹದಲ್ಲಿ ಮೂರು ಶಿವಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ.
ಈ ದೇವಾಲಯದಲ್ಲಿ ನಾವು ಕಲ್ಲಿನ ಪರದೆಗಳನ್ನು,
ಕೆತ್ತಿದ ಪ್ರತಿಮೆಗಳನ್ನು ನೋಡಬಹುದು. ತ್ರಿಕುಟೇಶ್ವರ ದೇವಾಲಯದ ಸಂಕೀರ್ಣದಲ್ಲಿ ಸುಂದರ ಕೆತ್ತನೆಯ ಕಲ್ಲಿನ ಸ್ತಂಭಗಳಿರುವ ಸರಸ್ವತಿಯ ದೇಗುಲವೂ ಇದೆ.

ಬಾಲ್ಕನಿಯ ಆಸನಗಳಂತೆ ಇಳಿಜಾರಾದ ಚಪ್ಪಡಿಗಳನ್ನು ಸಾಂಕೇತಿಕ ಫಲಕಗಳಿಂದ ಅಲಂಕರಿಸಲಾಗಿದ್ದು, ಕಡಿದಾದ ಇಳಿಜಾರಾದ ಸೂರುಗಳ ನಿರ್ಮಾಣವಿದೆ. ಸಭಾಂಗಣದ ಒಳಗೆ, ಸ್ತಂಭಗಳಲ್ಲಿ ಆಳವಿಲ್ಲದ ಗೂಡುಗಳಲ್ಲಿ ಶಿಲ್ಪಗಳನ್ನು ಜೋಡಿಸಲಾಗಿದೆ.

ಪೂರ್ವ ದಿಕ್ಕಿನ ಗರ್ಭಗುಡಿಯಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಪ್ರತಿನಿಧಿಸುವ ಮೂರು ಲಿಂಗಗಳಿವೆ.
ದಕ್ಷಿಣದ ಲಿಂಗವನ್ನು ಸರಸ್ವತಿ ದೇವಿಗೆ ಸಮರ್ಪಿಸಲಾಗಿದೆ.

  ಇಡಗುಂಜಿ ಶ್ರೀಮಹಾಗಣಪತಿ ಕ್ಷೇತ್ರ

ಪಕ್ಕದಲ್ಲಿ ಇನ್ನೊಂದು ದೇವಸ್ಥಾನವು ಸರಸ್ವತಿ, ಗಾಯತ್ರಿ ಮತ್ತು ಶಾರದೆ ಈ ಮೂರು ದೇವತೆಗಳಿಗೆ ಸಮರ್ಪಿತವಾಗಿದೆ .
ಈ ಪ್ರತಿಮೆಗಳು ಮಾತ್ರ ನೂತನ ಶೈಲಿಯಲ್ಲಿದ್ದು ದೇವಸ್ಥಾನವು ಹಳೆಯ ವಾಸ್ತುಶಿಲ್ಪದಂತಿದೆ.

ದೇವಾಲಯವು ಸುಮಾರು ಕ್ರಿ.ಶ.1050 ರಿಂದ 1200 ರವರೆಗೆ ಈ ಪ್ರದೇಶವನ್ನು ಆಳಿದ ಕಲ್ಯಾಣಿ ಚಾಲುಕ್ಯರ ಕಾಲದ್ದಾಗಿದೆ.
ಆ ಸಮಯದಲ್ಲಿ ಸುಮಾರು 50 ದೇವಸ್ಥಾನಗಳನ್ನು ನಿರ್ಮಿಸಲಾಯಿತು.

ಬಹಳ ಹಿಂದೆಯೇ ಸರಸ್ವತಿ ದೇವಸ್ಥಾನವನ್ನು ಧ್ವಂಸ ಮಾಡಲಾಗಿದೆ.ಆದಕಾರಣ ಇಲ್ಲಿ ಪೂಜೆಯನ್ನು ಮಾಡಲಾಗುವುದಿಲ್ಲ. ಕೇವಲ ವಾಸ್ತುಶಿಲ್ಪ ಮಾತ್ರ ಭಗ್ನಾವಶೇಷವಾಗಿ ಅಸ್ತಿತ್ವದಲ್ಲಿದೆ

ತ್ರಿಕೂಟೇಶ್ವರ ದೇವಸ್ಥಾನ ಸಂಕೀರ್ಣ

ತ್ರಿಕೂಟೇಶ್ವರ ದೇವಸ್ಥಾನವು
ಗದಗ ನಗರದಲ್ಲಿನ 11-12ನೇ ಶತಮಾನಗಳ ಹಲವಾರು ಚಾಲುಕ್ಯ ಸ್ಮಾರಕಗಳು ಅದರ ಐತಿಹಾಸಿಕ ಹಿನ್ನೆಲೆಯನ್ನು ಸೂಚಿಸುತ್ತವೆ.

  ಗೋವಿನ ಪ್ರಾಧಾನ್ಯತೆ, ಸಾಕಣೆ, ಉಪಯುಕ್ತತೆ, ಅನಿವಾರ್ಯತೆ - ವೇದ ವಿಜ್ಞಾನ

ಗದಗಿನಲ್ಲಿರುವ ಇತರ ದೇವಾಲಯಗಳೆಂದರೆ ಸೋಮೇಶ್ವರ ಮತ್ತು ವೀರ ನಾರಾಯಣನಿಗೆ ಸಮರ್ಪಿತವಾದ ದೇವಾಲಯಗಳು.
ನಗರದ ಮಧ್ಯದಲ್ಲಿ ಸೋಮೇಶ್ವರ ದೇವಸ್ಥಾನವಿದೆ. ಬಳಕೆಯನ್ನು ಕೈಬಿಟ್ಟಿದ್ದು ಈಗ ಶಿಥಿಲಾವಸ್ಥೆಯಲ್ಲಿದ್ದರೂ, ದೇವಾಲಯದ ಸಂಕೀರ್ಣದ ಕೆತ್ತನೆಗಳನ್ನು ಸಂರಕ್ಷಿಸಲಾಗಿದೆ. ಸಭಾಂಗಣದ ದ್ವಾರಗಳು ದಟ್ಟವಾದ ಕೆತ್ತಿದ ಆಕೃತಿಗಳು ಮತ್ತು ಎಲೆಗಳನ್ನು ಹೊಂದಿವೆ.

Leave a Reply

Your email address will not be published. Required fields are marked *

Translate »