ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕರ್ಮ ಅಂದರೇನು ? ರಾಜ ಮತ್ತು ಮಂತ್ರಿಯರ ಕಥೆ

ರಾಜ ಮತ್ತು 3 ಮಂತ್ರಿಯರು

ಗೊತ್ತಿಲ್ಲದೇ ಹೋದರೆ ಈ ಕಥೆಯನ್ನು
ಓದಿಕೊಂಡು ತಿಳಿಯಿರಿ.

ಒಂದು ಊರಿನಲ್ಲಿ ಒಬ್ಬ ಪ್ರಜಾಪಾಲಕನಾದ ರಾಜನಿದ್ದ. ಅವನಿಗೆ
ಮೂರು ಜನ ಮಂತ್ರಿಗಳಿದ್ದರು. ಈ ಮೂರು ಜನ
ಮಂತ್ರಿಗಳಲ್ಲಿ, ಒಳ್ಳೆಯವರೂ ಮತ್ತು ಕುತಂತ್ರಿಗಳು
ಇದ್ದರು.

ಆದರೆ …

ರಾಜನ ಎದುರಲ್ಲಿ ಸಭ್ಯನಂತೆ ವರ್ತಿಸಿ,
ಒಳಗಳೊಗೆ ರಾಜನ ಆಜ್ಞೆಯನ್ನು ನಿರ್ಲಕ್ಷಿಸುತ್ತಿದ್ದರು .

ರಾಜ ಅದೊಂದು ದಿನ ತನ್ನ ಮೂರು
ಮಂತ್ರಿಗಳನ್ನು ಬಳಿಗೆ ಕರೆಯುತ್ತಾನೆ. ಮೂರು ಜನರಿಗೆ
ಒಂದೊಂದು ಗೋಣಿಯನ್ನು ಕೊಟ್ಟು,
ಕಾಡಿಗೆ ಹೋಗಿ ನಾಳೆ ಸಂಜೆಯೊಳಗೆ ಕಾಡಿನಲ್ಲಿ ಸಿಗುವ
ಅತ್ಯುತ್ತಮವಾದ ಹಣ್ಣುಗಳನ್ನು ಆಯ್ದು
ತುಂಬಿಕೊಂಡು ಬರುವಂತೆ ಆಜ್ಞೆ ಮಾಡುತ್ತಾನೆ .

ಮೂರು ಮಂತ್ರಿಗಳಲ್ಲಿ
ಒಬ್ಬ ರಾಜನ ಆಜ್ಞೆಯನ್ನು
ನಿಯತ್ತಿನಿಂದ ಕಾಡು ಸುತ್ತಿ ಒಳ್ಳೆಯ ಮತ್ತು ತಿನ್ನಲು
ಯೋಗ್ಯವಾದ ಹಣ್ಣುಗಳನ್ನು ಆಯ್ದು
ತುಂಬಿಸಿಕೊಳ್ಳುತ್ತಾನೆ.

ಎರಡನೆಯವನು ‘ ಅಯ್ಯೋ
ರಾಜರು ಒಳಗೆಲ್ಲಿ ನೋಡುತ್ತಾರೆ?’ ಮೇಲೆ ಸ್ವಲ್ಪ ಒಳ್ಳೆಯ
ಹಣ್ಣುಗಳನ್ನು ತುಂಬಿಸಿ ಕೆಳಗೆ ಕೊಳೆತ
ಹಣ್ಣುಗಳನ್ನು ತುಂಬಿಸಿಕೊಳ್ಳುತ್ತಾನೆ. ಇನ್ನು

  ಕಾಗೆಯ ಕಥೆ

ಮೂರನೆಯವನು ‘ ಅಯ್ಯೋ ರಾಜ ನೋಡುವುದೇ ಇಲ್ಲ. ಯಾರು ಕಾಡು
ಸುತ್ತಿ ಹಣ್ಣು ಆರಿಸಿ ತರೋದು ? ‘ ಎಂದು ತರಗೆಲೆ ಮತ್ತು
ಕಸಕಡ್ಡಿ ತುಂಬಿಸಿಕೊಂಡು ಹೋಗುತ್ತಾನೆ.

ಮಾರನೇ ದಿನ…

ಮಂತ್ರಿಗಳು ಗೋಣಿಯ ಮೂಟೆಯನ್ನು ಅರಸನ
ಮುಂದಿಡುತ್ತಾರೆ.

ಅರಸ ಅದನ್ನು ಪರೀಕ್ಷಿಸುವುದಿಲ್ಲ.
ಬದಲಾಗಿ ಭಟರನ್ನು ಕರೆದು ಹೇಳುತ್ತಾನೆ ” ಈ ಮೂರು ಜನರನ್ನು
ಜೈಲಿಗಟ್ಟಿ, ಅವರವರು ತಂದ ಹಣ್ಣಿನ ಮೂಟೆ ಅವರವರ
ಬಳಿ ಇರಲಿ. ಸ್ವಲ್ಪದಿನ ತಿನ್ನಲು ಏನನ್ನೂ
ಕೊಡಬೇಡಿ ಎಂದು ಆಜ್ಞೆಯನ್ನು ಕೊಡುತ್ತಾನೆ .

ಸ್ವಲ್ಪ ದಿನದ ನಂತರ ಬಾಗಿಲು ತೆರೆದಾಗ,

ಪ್ರಾಮಾಣಿಕವಾಗಿ
ಉತ್ತಮವಾದ ಹಣ್ಣುಗಳನ್ನು ತಂದವ
ಆರೋಗ್ಯವಂತನಾಗಿ ಹೊರ ಬರುತ್ತಾನೆ.
ಕೊಳೆತ ಹಣ್ಣುಗಳನ್ನು ಪೇರಿಸಿಟ್ಟ ಮಂತ್ರಿ
ರೋಗಗ್ರಸ್ತನಾಗಿದ್ದ. ಇನ್ನು ತಿನ್ನಲು ಯೋಗ್ಯವಲ್ಲದ
ವಸ್ತುಗಳನ್ನು ತಂದ ಮಂತ್ರಿ
ಕೊನೆಯುಸಿರೆಳೆದಿರುತ್ತಾನೆ .

ಇದೆ #ಕರ್ಮ,
ಉತ್ತಮವಾದ ಕೆಲಸಕ್ಕೆ ಉತ್ತಮವಾದ
ಪರಿಣಾಮ, ಕೆಟ್ಟ ಕೆಲಸದಿಂದ ಕೆಟ್ಟ ಪರಿಣಾಮ .

  ಲಕ್ಷ್ಮಿ ಜಯಂತಿ ಎಂದರೆ ಲಕ್ಷ್ಮಿ ದೇವಿಯ ಜನ್ಮದಿನ

ನಮಗೆ ಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ಅದು ಎಂದಿದ್ದರೂ ನಮಗೇ ಒಳ್ಳೆಯ ದಾಗುತ್ತದೆ ಇಲ್ಲ ಹೀಗಾಗುತ್ತದೆ .

ಹೀಗೆ ಒಬ್ಬ ಮನೆ ಕಟ್ಟುವ ಗಾರೆಯವನಿದ್ದ . ಅವನು ಹಲವಾರು ಮನೆಗಳನ್ನು ಕಟ್ಟಿ ಕೊಡುತ್ತಿದ್ದ ತನ್ನ ಯಜಮಾನನಿಗೆ .

ಹೀಗೆ ಅವನಿಗೂ ವಯಸ್ಸಾಯ್ತು ಆಗ ಅವನು ಯಜಮಾನನಿಗೆ ಅಯ್ಯಾ ಇನ್ನು ನನ್ನಿಂದ ಮನೆಕಟ್ಟಲು ಸಾಧ್ಯವಿಲ್ಲ ಕೆಲಸದಿಂದ ವಿಶ್ರಾಂತಿ ಪಡೆಯುವೆ ಅಂದಾಗ ಅವನ ಯಜಮಾನ ಸರಿನಪ್ಪಾ ಆದರೆ ಇದೊಂದು ಮನೆ ಕಟ್ಟಿ ಕೊಡು ಇದೇ ಕಡೆ ನಂತರ ವಿಶ್ರಾಂತಿ ಪಡೆ ಅಂದಾಗ .

ಬಹಳಷ್ಟು ಮನೆ ಕಟ್ಟಿದ್ದ ಇವನಿಗೆ ಇಂದೇಕೋ ಕಡೆಯ ಮನೆ ಎಂದು ನಿರ್ಲಕ್ಷಿಸಿ ಸರಿಯಾದ ಗುಣ ಮಟ್ಟದಲ್ಲಿ ಕಟ್ಟುವುದಿಲ್ಲ .

ಮನೆ ಅಷ್ಟು ಗುಣಮಟ್ಟದ್ದಾಗಿರಲಿಲ್ಲ ಹೇಗೋ ಇಷ್ಟ ವಿಲ್ಲದೆ ಗಮನ ಕೊಡದೆ ಬಯ್ದು ಕೊಂಡೆ ಕಟ್ಟಿ ಯಜಮಾನನಿಗೆ ಕೊಟ್ಟ .

ಆಗ ಆ ಯಜಮಾನ ಅಯ್ಯಾ ತೆಗೆದುಕೋ ಈ ಮನೆಯ ಕೀಲಿ ಕೈ ಇಷ್ಟು ದಿನ ನನಗಾಗಿ ನೂರಾರು ಮನೆ ಕಟ್ಟಿ ಕೊಟ್ಟೆ .

  ಸುರಂಗ ಮಾರ್ಗ - - ಒಂದು ಝೆನ್ ಕಥೆ

ಅದಕ್ಕಾಗಿ ಈಗ ಕಟ್ಟಿದ ಈ ಮನೆಯ ಯಜಮಾನ ನೀನೆ ಎಂದಾಗ ಗಾರೆ ಕೆಲಸದವ ಕಣ್ಣಲ್ಲಿ ನೀರಾಕಿ ಕೊಳ್ಳುವ ಅಯ್ಯೋ ನನ್ನ ಮತಿಗೇಡಿ ಬುದ್ದಿ ಗಿಷ್ಟಿ .

ಇಷ್ಟು ವರ್ಷ ಎಂತೆಂತ ಚೆನ್ನಾಗಿ ರುವ ಮನೆ ಕಟ್ಟಿದೆ ಆದರೆ ಈ ಮನೆ ಕಡೆಯದು ಎಂದು ನಿರ್ಲಕ್ಷಿಸಿದೆ ನೋಡಿದರೆ ನನಗೆ ಬಹುಮಾನ ವಾಗಿ ಬಂದ ಮನೆಯನ್ನು ನಾನೆ ನನ್ನ ಕೈಯಾರ ಹಾಳು ಮಾಡಿಕೊಂಡೆನಲ್ಲಾ ಎಂದು ಒಳಗೆ ತನ್ನನ್ನು ಶಪಿಸುತ್ತಾ ಮನೆಯೊಳಗೆ ಹೋಗುತ್ತಾನೆ .

ಇದೇ ಕರ್ಮ . ಒಳ್ಳೆಯ ಕೆಲಸಕ್ಕೆ ಒಳ್ಳೆಯ ಪ್ರತಿಫಲ‌ಸಿಗುತ್ತದೆ .

ನಮ್ಮ ಸ್ವಾರ್ಥಕ್ಕೆ ಕೆಟ್ಟ ಫಲ ಸಿಗುತ್ತದೆ.

Leave a Reply

Your email address will not be published. Required fields are marked *

Translate »