ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸಂಕಷ್ಟಹರ ವಿನಾಯಕನ ಭಕ್ತಿಪೂರ್ಣ 32 ಅವತಾರಗಳು

“ಸಂಕಷ್ಟಹರ ವಿನಾಯಕನ ಭಕ್ತಿಪೂರ್ಣ 32 ಅವತಾರಗಳು”..!

ಪ್ರಾಯಶಃ ಪ್ರತಿಯೊಂದು ಹಿಂದುಗಳ ಮನೆಯಲ್ಲಿ ನಾವು ಗಣಪತಿಯ ಮೂರ್ತಿಯನ್ನು ಕಾಣಬಹುದು.ಶಿವ ಮತ್ತು ಪಾರ್ವತಿಯರ ಪುತ್ರನಾದ ಗಣಪತಿಯು ಅಗ್ರ ಪೂಜೆಯನ್ನು ಸಲ್ಲುವ ದೇವರು. ಗಣಪತಿಯ ಪ್ರಾರ್ಥನೆ ಅಥವಾ ಪೂಜೆಯಿಲ್ಲದೆ ಯಾವುದೇ ಪೂಜೆಗಳು ಪ್ರಾರಂಭಗೊಳ್ಳುವುದಿಲ್ಲ. ಹಿಂದೂಗಳ ಇತರ ದೇವರಂತೆ ಗಣಪತಿಯು ಸಹ ವಿವಿಧ ಅವತಾರಗಳನ್ನು ಹೊಂದಿದ್ದಾನೆ. ಈ ಗಜಾನನನ ವಿವಿಧ ಅವತಾರಗಳನ್ನು ಮೂರ್ತಿಗಳ ರೂಪದಲ್ಲಿ ನಮ್ಮ ಮುಂದೆ ಕಲಾವಿದರು ತೆರೆದಿಡುವುದನ್ನು ನಾವು ಗಮನಿಸಬಹುದು.
ಗಣಪತಿಯ ಬಗೆ ಬಗೆಯ ಅವತಾರಗಳು ಇವೆ: ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧ ಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನೂ ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿವೆ.

“ಬಾಲ ಗಣಪತಿ”

ಬಾಲ ಗಣಪತಿ ಹೆಸರೆ ಸೂಚಿಸುವಂತೆ,ಗಣಪತಿಯ ಎಳೆಯ ಮಗುವಿನ ರೂಪ. ಇದರಲ್ಲಿ ಸ್ವಾಮಿಯು ತನ್ನ ಬಾಲ್ಯದ ಸುಂದರವಾದ ಮತ್ತು ಮುದ್ದಾದ ರೂಪವಾಗಿದೆ.

“ತರುಣ ಗಣಪತಿ”

ತರುಣ ಗಣಪತಿಯು ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಇದು 8 ಕೈಗಳು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ.

“ಭಕ್ತಿ ಗಣಪತಿ”

ಭಕ್ತಿ ಗಣಪತಿ ಎಂಬುದು ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿಯ ಅವತಾರವಾಗಿದೆ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನ ಕಾಯಿ ಇರುತ್ತದೆ.

“ವೀರ ಗಣಪತಿ”

ವೀರ ಗಣಪತಿಯ ಅವತಾರದಲ್ಲಿ ಗಣಪತಿಗೆ ಆಯುಧಗಳನ್ನು ಹಿಡಿದ 16 ಕೈಗಳು ಇರುತ್ತವೆ.ಗಣಪತಿಯ ಈ ” ವೀರ” ಅವತಾರವು ಯುದ್ಧಕ್ಕೆ ಸನ್ನದ್ಧವಾಗಿರುವ ರೀತಿಯಲ್ಲಿ ಕಾಣಿಸುತ್ತದೆ.

“ಶಕ್ತಿ ಗಣಪತಿ”

ಶಕ್ತಿ ಗಣಪತಿಯ ಅವತಾರದಲ್ಲಿ ಗಣಪತಿಯ ತೊಡೆಯ ಮೇಲೆ ಸ್ವಾಮಿಯ ಒಬ್ಬ ಪತ್ನಿಯು ಹೂಮಾಲೆಯನ್ನು ಹಿಡಿದು ಕುಳಿತಿರುತ್ತಾಳೆ.ಈತನು ಕುಟುಂಬವನ್ನು ಕಾಪಾಡುವ ದೇವರು ಎಂದು ಪೂಜಿಸಲಾಗುತ್ತದೆ.

  ನಾರಾಯಣ ಸುಪ್ರಭಾತ

“ದ್ವಿಜ ಗಣಪತಿ”

“ದ್ವಿಜ” ಎಂದರೆ ಎರಡು ಬಾರಿ ಜನಿಸಿದವನು ಎಂದರ್ಥ. ಗಣೇಶನು ನಿಜವಾಗಿಯೂ ಎರಡು ಬಾರಿ ಜನಿಸಿದವನು. ಮೊದಲು ಜನಿಸಿ,ನಂತರ ಕೊಲ್ಲಲ್ಪಟ್ಟು ಆ ಮೇಲೆ ಪುನಃ ಜೀವವನ್ನು ಪಡೆದವನು.ಈ ಅವತಾರದಲ್ಲಿ ಗಣಪತಿಗೆ 4 ತಲೆಗಳು ಇವೆ.

“ಸಿದ್ಧಿ ಗಣಪತಿ”

ಸಿದ್ಧಿ ಗಣಪತಿಯನು ಯಶಸ್ಸು ಮತ್ತು ಸಂಪತ್ತಿನ ಸಲುವಾಗಿ ಪೂಜಿಸಲಾಗುತ್ತದೆ. ಈ ಗಣಪತಿಯ ಮೂರ್ತಿಯು ಹಳದಿ ಬಣ್ಣದಲ್ಲಿರುತ್ತದೆ.

“ಉಚ್ಚಿಷ್ಟ ಗಣಪತಿ”

ಈ ಗಣಪತಿಯು ಸಹ ಹಲವು ಕೈಗಳಿಂದ ಸುಂದರವಾಗಿ ಕಾಣುತ್ತಾನೆ.ತಿಳಿ ನೀಲಿ ಬಣ್ಣದ ಈ ಗಣಪತಿಯು 6 ಕೈಗಳನ್ನು ಹೊಂದಿದ್ದು, ಕೈಯಲ್ಲಿ ವೀಣೆಯಂತಹ ಸಂಗೀತ ವಾದ್ಯಗಳನ್ನು ಹಿಡಿದಿರುತ್ತಾನೆ.

“ವಿಘ್ನ ಗಣಪತಿ”

ಗಣಪತಿಯನ್ನು “ವಿಘ್ನೇಶ್ವರ, ವಿಘ್ನನಾಶಕ”ಎಂದು ಸಹ ಕರೆಯುತ್ತಾರೆ.ಚಿನ್ನದ ಬಣ್ಣದ ಈ ಗಣಪತಿಯ ವಿಗ್ರಹವು ನಿಮಗೆ ಎದುರಾಗುವ ಎಲ್ಲಾ ಕಂಟಕಗಳನ್ನು ನಿವಾರಿಸುತ್ತಾನೆ.

“ಕ್ಷಿಪ್ರ ಗಣಪತಿ”

ಕೆಂಪು ವರ್ಣದ ಈ ಗಣಪತಿಯು ಹೆಸರೇ ಸೂಚಿಸುವಂತೆ ಕಾರ್ಯಗಳನ್ನು ಕ್ಷಿಪ್ರವಾಗಿ ಸಿದ್ಧಿಸಿಕೊಳ್ಳಲು ನೆರವಾಗುತ್ತಾನೆ.

“ಹೇರಂಬ ಗಣಪತಿ”

ಹೇರಂಬ ಗಣಪತಿಯು ದೀನರನ್ನು ಉದ್ಧಾರ ಮಾಡಲು ಅವತರಿಸಿದ ಗಣಪತಿಯಾಗಿದ್ದಾನೆ. ಈತನಿಗೆ 5 ತಲೆಗಳು ಇದ್ದು, ನೆಗೆಯಲು ಸಿದ್ಧವಾಗಿರುವ ಸಿಂಹದ ವಾಹನವನ್ನು ಏರಿರುವ ಅವತಾರ ಇದಾಗಿದೆ.

“ಲಕ್ಷ್ಮೀ ಗಣಪತಿ”

ಲಕ್ಷ್ಮೀ ಮತ್ತು ಗಣಪತಿಯನ್ನು ಸಹೋದರ -ಸಹೋದರಿಯರಂತೆ ಕಾಣಲಾಗುತ್ತದೆ.ಚಿನ್ನದ ಬಣ್ಣದ ಈ ಗಣಪತಿಯನ್ನು ಹಣ ಮತ್ತು ಐಶ್ವರ್ಯಗಳ ಸಂಕೇತವಾಗಿ ಪೂಜಿಸಲಾಗುತ್ತದೆ.

“ಮಹಾಗಣಪತಿ”

“ಮಹಾ” ಎಂಬ ಮಾತೇ “ಶ್ರೇಷ್ಟ” ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದಲ್ಲಿರುವ ಈ ಗಣಪತಿಯು,ತನ್ನ ಶಕ್ತಿಯ ಜೊತೆಯಲ್ಲಿ ಕುಳಿತಿರುತ್ತಾನೆ.

“ವಿಜಯ ಗಣಪತಿ”

ವಿಜಯ ಗಣಪತಿಯು ಹೆಸರೇ ಸೂಚಿಸುವಂತೆ “ವಿಜಯ”ದ ಸಂಕೇತ.ಈತನಿಗೆ ನಾಲ್ಕು ಕೈಗಳು ಇದ್ದು,ಮೂಷಿಕ ವಾಹನನಾಗಿ ಕಾಣಿಸುತ್ತಾನೆ.

“ನೃತ್ಯ ಗಣಪತಿ”

ಗಣಪತಿಯು ತನ್ನ ಅಗಾಧ ದೇಹದ ಹೊರತಾಗಿಯೂ ನೃತ್ಯವನ್ನು ಮಾಡುವ ಭಂಗಿಯಲ್ಲಿ ಇಲ್ಲಿ ಕಾಣಿಕೊಳ್ಳುತ್ತಾನೆ.ನೃತ್ಯ ಮಾಡುವ ಗಣಪತಿಯ ಅಂದಕ್ಕೆ ಬೆರಗಾಗದೆ ಇರುವವರು ಯಾರಿದ್ದಾರೆ?

  ಅಜ್ಜಿಕಾನು ಶ್ರೀರಾಜರಾಜೇಶ್ವರಿ ದೇವಸ್ಥಾನ

“ಊರ್ಧ್ವ ಗಣಪತಿ”

ಊರ್ಧ್ವ ಗಣಪತಿ ಎಂದರೆ” ಉದ್ದವಾಗಿ ಇರುವ ಗಣಪತಿ” ಎಂದರ್ಥ.ಈ ಗಣಪತಿಯು ಪ್ರಮುಖವಾಗಿ ಹಿಡುವಳಿಯನ್ನು ಹರಸುವ ಗಣಪತಿಯಂತೆ ಕಾಣುತ್ತಾನೆ. ಈತನ ಕೈಯಲ್ಲಿ ಭತ್ತ, ನೈದಿಲೆ, ಕಬ್ಬಿನ ಜಲ್ಲೆಗಳನ್ನು ನಾವು ಕಾಣಬಹುದು.

“ಏಕಾಕ್ಷರ ಗಣಪತಿ”

“ಏಕಾಕ್ಷರ ಗಣಪತಿ”ಯು ಹೆಸರೇ ಸೂಚಿಸುವಂತೆ “ಒಂದೆ ಅಕ್ಷರದ “ಗಣಪತಿಯಾಗಿರುತ್ತಾನೆ. ಈತನು ಕೆಂಪು ಬಣ್ಣದಲ್ಲಿದ್ದು, ಮೂಷಿಕ ವಾಹನನಾಗಿ ನಮಗೆ ಕಾಣಿಸುತ್ತಾನೆ.

“ವರದ ಗಣಪತಿ”

ಯಾವುದಾದರು ವರ ಬೇಕಾದರೆ, ವರದ ಗಣಪತಿಯನ್ನು ಪೂಜಿಸಬೇಕು.ಈತನಿಗೆ “ಮೂರನೆ ಕಣ್ಣು” ಇದೆ.ಇದು ಜ್ಞಾನವನ್ನು ಪ್ರತಿನಿಧಿಸುತ್ತದೆ.

“ತ್ರಯಾಕ್ಷರ ಗಣಪತಿ”

ಈ ಗಣಪತಿಯು ಮೂರು ಅಕ್ಷರದ ಗಣಪತಿಯಾಗಿದ್ದು, ಕೈಯಲ್ಲಿ ತನ್ನ ಪ್ರೀತಿಯ ತಿನಿಸಾದ ಮೋದಕವನ್ನು ಹಿಡಿದು ತಿನ್ನುತ್ತಿರುವುದನ್ನು ಕಾಣಬಹುದು.

“ಕ್ಷಿಪ್ರ ಪ್ರಸಾದ ಗಣಪತಿ”

ಈ ಗಣಪತಿಯು ನಮ್ಮ ಕೋರಿಕೆಯನ್ನು ಅತಿ ಶೀಘ್ರದಲ್ಲಿಯೇ ಪೂರೈಸುವನೆಂದು ಭಾವಿಸಲಾಗಿದೆ.

“ಹರಿದ್ರ ಗಣಪತಿ”

ಹರಿದ್ರ ಗಣಪತಿಯು ಸುಂದರವಾದ ಚಿನ್ನದ ಬಣ್ಣವನ್ನು ಹೊಂದಿದ್ದು,ಹಳದಿ ಬಣ್ಣದ ರಾಜ ಠೀವಿಯಿಂದ ಕೂಡಿದ ವಸ್ತ್ರವನ್ನು ಧರಿಸಿರುತ್ತಾನೆ.

“ಏಕದಂತ ಗಣಪತಿ”

ಈ ಗಣಪತಿಯು ಒಂದೇ ಒಂದು ದಂತವನ್ನು ಮಾತ್ರ ಹೊಂದಿದ್ದು,ನೀಲಿಬಣ್ಣದಿಂದ ಕೂಡಿರುತ್ತಾನೆ.

“ಸೃಷ್ಟಿ ಗಣಪತಿ”

ಗಣಪತಿಯ ಈ ಸಣ್ಣರೂಪವು ಮೂಷಿಕ ವಾಹನವಾಗಿದ್ದು, ಒಳ್ಳೆಯ ಮೂಡ್‍ನಲ್ಲಿ ಕಾಣಿಸಿಕೊಳ್ಳುತ್ತಾನೆ.

“ಉದ್ಧಂಡ ಗಣಪತಿ”

ಉದ್ಧಂಡ ಗಣಪತಿಯು ವಿಶ್ವದಲ್ಲಿ ‘ಧರ್ಮವನ್ನು ಪರಿಪಾಲಿಸುತ್ತಾನೆ”.ಈ ಗಣಪತಿಯು 10 ಕೈಗಳನ್ನು ಹೊಂದಿದ್ದು,ವಿಶ್ವದಲ್ಲಿರುವ ಎಲ್ಲಾ 10 ಒಳ್ಳೆಯ ಅಂಶಗಳನ್ನು ಪ್ರತಿನಿಧಿಸುತ್ತಾನೆ.

“ಋಣಮೋಚನ ಗಣಪತಿ”

ಈ ಗಣಪತಿಯು ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ. ಗಣಪತಿಯ ಈ ಅವತಾರವು ಬೂದು ಬಣ್ಣದಿಂದ ಕೂಡಿರುತ್ತದೆ.

“ದುಂಧಿ ಗಣಪತಿ”

ದುಂಧಿ ಗಣಪತಿಯು ಕೆಂಪು ವರ್ಣದಲ್ಲಿದ್ದು,ಕೈಗಳಲ್ಲಿ ರುದ್ರಾಕ್ಷದ ಮಾಲೆಯನ್ನು ಹೊಂದಿರುತ್ತಾನೆ.

  ಮಹಾಭಾರತದಲ್ಲಿ ರಚಿತವಾದ ವಿಷ್ಣುಸಹಸ್ರನಾಮ ನಮ್ಮ ವರೆಗೆ ಹೇಗೆ ತಲುಪಿತು ?

“ದ್ವಿಮುಖ ಗಣಪತಿ”

ದ್ವಿಮುಖ ಗಣಪತಿಯು ಹೆಸರೇ ಸೂಚಿಸುವಂತೆ,ಎರಡು ತಲೆಗಳನ್ನು ಹೊಂದಿದ್ದು,ಎರಡು ಕಡೆಗೆ ಮುಖ ಮಾಡಿರುತ್ತಾನೆ. ಈತನ ಬಣ್ಣ ನೀಲಿ.

“ತ್ರಿಮುಖ ಗಣಪತಿ”

ತ್ರಿಮುಖ ಗಣಪತಿಯು ಮೂರು ಮುಖಗಳನ್ನು ಹೊಂದಿದ್ದು,ಚಿನ್ನದ ಕಮಲದ ಹೂವಿನ ಮೇಲೆ ಆಸೀನನಾಗಿರುತ್ತಾನೆ.

“ಸಿಂಹ ಗಣಪತಿ”

ಸಿಂಹ ಗಣಪತಿಯು ತಾನು ಕುಳಿತ ಸಿಂಹದಿಂದಾಗಿ ಈ ಹೆಸರು ಪಡೆದಿರುತ್ತಾನೆ.

“ಯೋಗ ಗಣಪತಿ”

ಯೋಗ ಗಣಪತಿಯು ಪದ್ಮಾಸನದಲ್ಲಿ ಕುಳಿತಿರುತ್ತಾನೆ ಮತ್ತು ಧ್ಯಾನ ಯೋಗ ನಿರತನಂತೆ ಕಾಣುತ್ತಾನೆ.

“ದುರ್ಗಾ ಗಣಪತಿ”

ದುರ್ಗಾ ಗಣಪತಿಯು ಗಣಪತಿಯ ಒಂದು ಅವತಾರವಾಗಿದ್ದು,ಈ ಅವತಾರದಲ್ಲಿ ಈತ ತನ್ನ ಮಾತೆಯಾದ ದುರ್ಗಾ ದೇವಿಯಿಂದ ಶಕ್ತಿಗಳನ್ನು ಸಂಪಾದಿಸಿರುತ್ತಾನೆ.

“ಸಂಕಷ್ಟ ಹರ ಗಣಪತಿ”

ಗಣಪತಿಯ ಈ ಅದ್ಭುತ ಅವತಾರವು ಮಾನವ ಕುಲದ ಸಂಕಷ್ಟಗಳನ್ನು ನಿವಾರಿಸುತ್ತದೆ.
🙏
ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!
ಅಡ್ಮಿನ್ ಬಳಗ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://https://chat.whatsapp.com/FqUi1KzYPujLPayVNuTxRR
⬆️ಇಲ್ಲಿ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *

Translate »