ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ನಾರಾಯಣ ಸುಪ್ರಭಾತ

ಏಳು ನಾರಾಯಣನೆ…
ಏಳು ಲಕ್ಷ್ಮೀರಮಣ…ಏಳು ಕಮಲಾಕ್ಷ
ಕಮಲನಾಭಾ….
ಏಳಯ್ಯಾ ಬೆಳಗಾಯಿತು…
ಏಳಯ್ಯಾ ಬೆಳಗಾಯಿತು….

ಏಳು ನಾರಾಯಣನೆ ಏಳು ಲಕ್ಷ್ಮೀರಮಣ
ಏಳು ಶ್ರೀಗಿರಿ ಒಡೆಯ ವೆಂಕಟೇಶ
               ‌ ‌‌‌‌        ||ಏಳು ನಾರಾಯಣನೆ||

ಕಾಸಿದ್ದ ಹಾಲನ್ನು ಕಾವಡಿಯೊಳು ಹೆಪ್ಪಿಟ್ಟು
ಲೇಸಾಗಿ ಕಡೆದು ಹೊಸಬೆಣ್ಣೆ ಕೊಡುವೆ
ಶೇಷಶಯನನೆ ಏಳು
ಸಮುದ್ರ ಮಥನವ ಮಾಡು||ಶೇಷ||
ದೇಶ ಕೆಂಪಾಯಿತು ಏಳಯ್ಯ ಹರಿಯೇ
                         ||ಏಳು ನಾರಾಯಣ||

ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ಸುರರು ತಂದಿದ್ದಾರೆ ಬಲು ಭಕುತಿಯಿಂದಾ
ಅರವಿಂದನಾಭಾ….ಆ…
ಅರವಿಂದನಾಭ ಸಿರಿ ವಿಧಿಭವಾದಿಗಳೊಡೆಯ||2||
ಹಿರಿದಾಗಿ ಕೋಳಿ ಕೂಗಿತು ಏಳೋ ಹರಿಯೇ
                         ||ಏಳು ನಾರಾಯಣ||

  ಪ್ರದಕ್ಷಿಣೆ ನಮಸ್ಕಾರದ ಮಹತ್ವ

ದಾಸರೆಲ್ಲರು ಬಂದು ಧೂಳಿ ದರುಶನ ಗೊಂಡು
ಲೇಸಾಗಿ ತಾಳ ದಂಡಿಗೆಯ ಪಿಡಿದು
ಶ್ರೀಶನೆಲೆಯಾದಿ ಕೇಶವ ನಿಮ್ಮ ಪಾದವನು||2||
ಲೇಸಾಗಿ ಸ್ಮರಿಸಿ ಪೊಗಳುವರು ಶ್ರೀಹರಿಯೇ…..
                          ||ಏಳು ನಾರಾಯಣ||

Leave a Reply

Your email address will not be published. Required fields are marked *

Translate »