ಶುಭ ಬುಧವಾರ ವಿಷ್ಣು ದೀಪ ದರ್ಶನ ಶುಭೋದಯ ಸುದಿನಮಸ್ತು ಸರ್ವಜನ ಸುಖಿನೋಭವಂತು
ದೀಪಕ್ಕೊಂದು ಅಜ್ಞಾತ ಅಗಾಧ ಶಕ್ತಿಯಿದೆ. ಕತ್ತಲೆಯನ್ನು ಬೆಳಗುವ ದೀಪ ಮನಸ್ಸಿನ ಎಲ್ಲ ಕಲ್ಮಶಗಳನ್ನೂ ದೂರ ಸರಿಸಿ ಶಾಂತಿ ಮೂಡಿಸುವ ಶಕ್ತಿ ದೀಪಕ್ಕಿದೆ.
ದೀಪ ಎಂದರೆ ಶಾಂತಿ, ದೀಪ ಎಂದರೆ ಸಮೃದ್ಧಿ, ದೀಪ ಎಂದರೆ ಬೆಳಕು, ದೀಪ ಎಂದರೆ ಆರೋಗ್ಯ, ದೀಪ ಎಂದರೆ ಸಂಪತ್ತು, ದೀಪ ಎಂದರೆ ಪ್ರಖರತೆ.. ಹೀಗೆ ದೀಪ ಜೀವನದ ಒಂದು ಸಕಾರಾತ್ಮಕ ಬೆಳವಣಿಕೆ. ಇಂಥ ದೀಪವನ್ನು ಬೆಳಗಿಸುವುದು ದಿನವೂ ನಿಮ್ಮ ಜೀವನಕ್ಕೊಂದು ಸಂತೋಷ, ನೆಮ್ಮದಿ, ಶಾಂತಿಯನ್ನು ತರಬಲ್ಲುದು.
ದೇವರ ಧ್ಯಾನ, ಪ್ರಾರ್ಥನೆಯಲ್ಲಿ ದೊಡ್ಡ ಶಕ್ತಿಯಿದೆ. ಪ್ರಾರ್ಥನೆಯ ಮೂಲಕ ತನ್ನ ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ಶಾಂತಿ, ಸೌಭಾಗ್ಯ ದೊರೆಯುತ್ತದೆ. ವಿದ್ಯಾಭ್ಯಾ, ಉದ್ಯೋಗ, ವೈವಾಹಿಕ ಜೀವನ ಹೀಗೆ ಜೀವನದ ವಿವಿಧ ಮಜಲುಗಳಲ್ಲಿ ಸುಖ, ಸಮೃದ್ಧಿ, ನೆಮ್ಮದಿ ದೊರೆಯಬೇಕೆಂದರೆ ಪ್ರಾರ್ಥನೆಯದೂ ಪಾಲಿದೆ. ಮಂದಿರಗಳಲ್ಲಿ, ಪೂಜ್ಯ ವೃಕ್ಷಗಳ ಎದುರು ಹೀಗೆ ಮನೋ ಇಚ್ಛೆಗಳನ್ನು ಪೂರೈಸಲು ಭಕ್ತರು ದೀಪ ಹಚ್ಚುವುದು ಸಾಮಾನ್ಯ. ಮುಸ್ಸಂಜೆಯ ಹೊತ್ತು ದೇವರ ಬಳಿ ದೀಪ ಹಚ್ಚುವುದರಿಂದ ದೊರೆಯುವ ಲಾಭವನ್ನು ಇಲ್ಲಿ ವಿವರಿಸಲಾಗಿದೆ.
ಸೋಮವಾರ ದಿನ ಶಿವನ ದೇವಸ್ಥಾನಕ್ಕೆ ಹೋಗಿ ದೀಪ ಹಚ್ಚಿದರೆ ಯುವತಿಯರಿಗೆ ತಮ್ಮ ಕನಸಿನ ವರ ದೊರಕುತ್ತಾನೆ. ಪ್ರೀತಿಸಿ ಮದುವೆಯಾಗ ಬಯಸುವ ಯುವತಿಯರಂತೂ ಹೀಗೆ ಮಾಡಿದರೆ ಉತ್ತಮ ಪುರುಷ ಕೈಹಿಡಿಯುತ್ತಾನೆ.
ಮಂಗಳವಾರ ವಿಷ್ಣು ಮಂದಿರದಲ್ಲಿ ಅಥವಾ ಬಾಳೆಹಣ್ಣಿನ ಗಿಡದ ಬಳಿ ತುಪ್ಪದ ದೀಪ ಹಚ್ಚಿದರೆ ಆರೋಗ್ಯ ವೃದ್ಧಿಯಾಗುತ್ತದೆ.
ಬುಧವಾರ ವಿಷ್ಣು ದೇವರು ಅಥವಾ ಗಣೇಶನಿಗೆ ತುಪ್ಪದ ದೀಪ ಹಚ್ಚಿದರೆ ಬಾಧೆಗಳು ದೂರವಾಗುತ್ತದೆ. ಅಲ್ಲದೆ, ಅಧಿಕ ಖರ್ಚಿಗೆ ಕಡಿವಾಣ ಬೀಳುತ್ತದೆ.
ಗುರುವಾರ ದೇವಸ್ಥಾನ ಅಥವಾ ಬಾಳೆಹಣ್ಣಿನ ಗಿಡದ ಬಳಿ ದೀಪ ಉರಿಸಿದರೆ ಎಲ್ಲಾ ಬಾಧೆಗಳೂ ದೂರವಾಗಿ ಸಕಲ ಮನೋಕಾಂಕ್ಷೆಗಳು ಈಡೇರುತ್ತದೆ. ವಿಷ್ಣುವನ್ನು ಪ್ರಸನ್ನರಾಗಿಸಲು ತುಪ್ಪದ ದೀಪ ಹಚ್ಚಿ.
ಶುಕ್ರವಾರದ ದಿನ ದುರ್ಗಾ ಮಾತೆಯ ದೇವಸ್ಥಾನಕ್ಕೆ ಹೋಗಿ ತುಪ್ಪದ ದೀಪ ಹಚ್ಚಿದರೆ ಸಕಲ ಮನೋಭಿಲಾಷೆಗಳೂ ದೂರವಾಗಿ ಸಕಲ ಸಂಪತ್ತು ಹಾಗೂ ಸೌಭಾಗ್ಯ ಲಭಿಸುತ್ತದೆ.
ಶನಿವಾರದಂದು ಹನುಮಂತನ ಗುಡಿಗೆ ಹೋಗಿ ಎಣ್ಣೆಯ ದೀಪ ಉರಿಸಿದರೆ ಶನಿಯ ವಕ್ರದೃಷ್ಟಿಯಿಂದ ನಿಮಗೆ ಮುಕ್ತಿ ದೊರೆಯುತ್ತದೆ. ಹಾಗೂ ಓದಿನಲ್ಲಿ ಏಕಾಗ್ರತೆ ಬಾರದ ವಿದ್ಯಾರ್ಥಿಗಳಿಗೆ ಇದರಿಂದ ಏಕಾಗ್ರತೆ ದಕ್ಕಿ ವಿದ್ಯಾಭ್ಯಾಸ ಸುಗಮವಾಗಿ ಸಾಗುತ್ತದೆ.
ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದಿದ್ದರೆ ಬೇಸರ ಬೇಡ. ಮನೆಯಲ್ಲೇ ದಿನವೂ ದೇವರ ಮುಂದೆ ದೀಪ ಹಚ್ಚಿ. ಕೊಂಚ ಹೊತ್ತು ದೀಪದ ಬೆಳಕಿಗಾಗಿ ಮೀಸಲಿಡಿ.
ದೀಪ ಹಚ್ಚಿ, ಮನ, ಮನೆ ಬೆಳಗಿ. ಆಗ ನೀವು ಬೆಳಗುತ್ತೀರಿ, ಜಗತ್ತೂ ಬೆಳಗುತ್ತದೆ!
ಪವಿತ್ರ ಸ್ನಾನಾನಂತರ, ದೀಪಗಳನ್ನು ಮನೆಯ ಅಂಗಳದಲ್ಲಿ ಮತ್ತು ಮನೆಯ ಸುತ್ತಮುತ್ತ ಬೆಳಗಬೇಕೆಂಬ ನಿಯಮವಿದೆ.
ಶಿವ ಮತ್ತು ವಿಷ್ಣು ಮಂದಿರಗಳಲ್ಲಿ ಸೂರ್ಯೋದಯಕ್ಕೆ ಮುನ್ನ ಮತ್ತು ಸೂರ್ಯೋದಯಕ್ಕೆ ನಂತರ ಭಗವಂತನ ಪ್ರೀತ್ಯರ್ಥವಾಗಿ ಜ್ಯೋತಿಯನ್ನು ಬೆಳಗುತ್ತಾರೆ. ತುಪ್ಪದ ದೀಪವನ್ನು ಬೆಳಗುವುದರಿಂದ ಅಸುರೀ ಶಕ್ತಿಗಳು ನಾಶವಾಗುತ್ತವೆ, ಕ್ರಿಮಿ, ಕೀಟಗಳಿಂದ ಪರಿಸರ ಶುದ್ಧವಾಗುತ್ತವೆ. ಅದರೊಂದಿಗೆ ಮನಸ್ಸಿನ ಅಜ್ಞಾನವು ಕಳೆಯುತ್ತದೆ. ಹೀಗೆ ಮನೆಯಲ್ಲಿ ದೀಪ ಬೆಳಗುವುದರಿಂದ. ಐಶ್ವರ್ಯ, ಸಂಪತ್ತು, ಆರೋಗ್ಯ ಸ್ಥಿರವಾಗುತ್ತದೆ.
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು