ಈ ಝೆನ್ ಕಥೆಯಲ್ಲಿ ಝೆಂಕೈ ಎಂಬ ಸಾಮಾನ್ಯ ವ್ಯಕ್ತಿ , ಕೊಲೆಗಾರನಾಗಿ, ಬಿಕ್ಷುಕನಾಗಿ ತದನಂತರ ಜೀವನ ಪಾಠದಲ್ಲಿ ಒಂದು ಸುರಂಗ ಮಾರ್ಗದಿಂದ ಹೇಗೆ ಝೆನ್ ಗುರುವಾಗುತ್ತಾನೆ ಎಂಬ ಕಥೆ.
ಝೆಂಕೈ ಕೊಲೆಗಾರ
ಒಂದಾನೊಂದು ಕಾಲದ ಪ್ರಸಿದ್ಧ ಜಪಾನಿನ ಕ್ಷತ್ರಿಯ ಮಗನಾದ ಝೆಂಕೈ ನು ಎಡೊ ನಗರಕ್ಕೆ ಪ್ರಯಾಣ ಬೆಳೆಸಿದ ಮತ್ತು ಸೈನ್ಯದ ಅಧಿಕಾರಿಯು ಕೈ ಕೆಳಗೆ ಕೆಲಸಕ್ಕೆ ಸೇರಿಕೊಂಡನು. ಅವನು ಸೈನ್ಯದ ಅಧಿಕಾರಿಯಾ ಪತ್ನಿಯಾ ರೂಪಕ್ಕೆ ಮೋಹಗೊಂಡು ಅವಳನ್ನು ಪ್ರೇಮದಲ್ಲಿ ಬೀಳಿಸಿಕೊಂಡನು. ಕೆಲವು ದಿನಗಳ ನಂತರ ಈ ವಿಷಯ ಅಧಿಕಾರಿಗೆ ತಿಳಿಯಿತು. ಆದರೆ ಝೆಂಕೈ ನು ಸ್ವರಕ್ಷಣೆಗಾಗಿ ಸೈನ್ಯದ ಅಧಿಕಾರಿಯನ್ನು ಕೊಂಡು , ನಂತರ ಅವನ ಪತ್ನಿ ಜೊತೆಗೆ ದೂರ ಓಡಿ ಹೋಗಿ ತಲೆಮರೆಸಿಕೊಂಡನು.
ಕಳ್ಳನಿಂದ ಅಲೆಮಾರಿಯಾಗಿದ್ದು
ಇಬ್ಬರೂ ನಂತರ ಹೊಟ್ಟೆಪಾಡಿಗಾಗಿ ಕಳ್ಳರಾದರು. ಆದರೆ ಅಧಿಕಾರಿಯಾ ಪತ್ನಿ ಬಹಳ ದುರಾಶೆ ಹೊಂದಿದ್ದಳು , ಇದರಿಂದ ಝೆಂಕೈ ಬಹಳ ಅಸಮಾಧಾನಗೊಂಡು ಅಂತಿಮವಾಗಿ, ಅವಳನ್ನು ಬಿಟ್ಟು, ಅವನು ಬುಜೆನ್ ಪ್ರಾಂತಕ್ಕೆ ದೂರ ಪ್ರಯಾಣಿಸಿದನು, ಅಲ್ಲಿ ಅವನು ಕೇವಲ ಅಲೆಮಾರಿಯಾಗಿ ಬದುಕು ಸಾಗಿಸಲು ಪ್ರಾರಂಭಿಸಿದನು.
ಸುರಂಗ ಮಾರ್ಗ ನಿರ್ಮಿಸುವ ಛಲ
ತನ್ನ ಹಿಂದಿನ ಜೀವನದ ದಿನಗಳಲ್ಲಿ ಮಾಡಿದ್ದ ತಪ್ಪುಗಳಿಗೆ ಪ್ರಾಯಶ್ಚಿತ್ತವಾಗಿ , ಝೆಂಕಾಯ್ ತನ್ನ ಜೀವಿತಾವಧಿಯಲ್ಲಿ ಕೆಲವು ಉತ್ತಮ ಕೆಲಸವನ್ನು ಮಾಡಲು ನಿರ್ಧರಿಸಿದನು. ಅವನಿದ್ದ ಊರಿನ ಸುತ್ತ ಅತಿ ಅಪಾಯಕಾರಿ ರಸ್ತೆಯೊಂದು ಬೆಟ್ಟವನ್ನು ಘಾಟಿಯ ರೀತಿಯಲ್ಲಿ ಹಾದುಹೋಗಿತ್ತು, ಅಲ್ಲಿ ಅನೇಕ ವ್ಯಕ್ತಿಗಳ ಸಾವು ಮತ್ತು ಗಾಯವನ್ನು ಉಂಟುಮಾಡಿದ ಜಾಗವಾಗಿತ್ತು. ಅಲ್ಲಿದ್ದ ಬಂಡೆಯ ಮೇಲೆ ಕೂತ ಝೇಂಕೈ , ಅಲ್ಲಿನ ಪರ್ವತದ ಮೂಲಕ ಒಂದು ಸುರಂಗವನ್ನು ಮಾಡಿದರೆ ಜನರಿಗೆ ದಾರಿ ಸುಲಭವಾಗುತ್ತದೆ ಎಂದು ನಿರ್ಧರಿಸಿದನು.
ಹಗಲಿನಲ್ಲಿ ಭಿಕ್ಷೆ ಬೇಡಿ ಆಹಾರವನ್ನು ಭೋಜನ ಮಾಡುವುದರ ಮೂಲಕ, ಝೇಂಕೈ ರಾತ್ರಿಯಲ್ಲಿ ತನ್ನ ಸುರಂಗ ಅಗೆಯುವ ಕೆಲಸ ಮಾಡಿದನು. ಮೂವತ್ತು ವರ್ಷಗಳ ನಂತರ , ಸುರಂಗವು 2,280 ಅಡಿ ಉದ್ದ, 20 ಅಡಿ ಎತ್ತರ ಮತ್ತು 30 ಅಡಿ ಅಗಲವಾಗಿತ್ತು.
ಸೇಡು – ಸಾವು
ಕೆಲಸ ಮುಗಿಯುವ ಎರಡು ವರ್ಷಗಳ ಮುಂಚೆ, ಝೇಂಕೈ ಸಾಯಿಸಿದ ಸೈನ್ಯದ ಅಧಿಕಾರಿಯಾ ಪುತ್ರನು , ಓರ್ವ ಕೌಶಲ್ಯಪೂರ್ಣ ಖಡ್ಗಧಾರಿಯಾಗಿ ಅದೇ ಸೈನ್ಯದಲ್ಲೇ ಉನ್ನತ ಅಧಿಕಾರಿಯಾಗಿದ್ದನು , ಒಂದು ದಿನ ಝೆಂಕೈನನ್ನು ದಾರಿಯಲ್ಲಿ ಕಂಡು ತನ್ನ ತಂದೆಯ ಸಾವಿನ ಸೇಡು ತೀರಿಸಿಕೊಳ್ಳಲು ಬಂದನು.
ಅವನನ್ನು ನೋಡಿ ಹಳೆಯ ವಿಷಯ ತಿಳಿದ ನಂತರ , ” ನೀನು ನನ್ನನ್ನು ಕೊಳ್ಳುವುದು ಬೇಡ,
ನಾನು ನನ್ನ ಜೀವವನ್ನು ಸ್ವಇಚ್ಛೆಯಿಂದ ನೀಡುತ್ತೇನೆ” ಎಂದು ಝೆಂಕೈ ಹೇಳಿದನು. ” ಆದರೆ ಒಂದು ಷರತ್ತು , ನಾನು ಈ ಸುರಂಗ ಮಾರ್ಗದ ಕೆಲಸವನ್ನು ಪೂರ್ಣಗೊಳಿಸಾಲು ಅವಕಾಶ ಕೊಡು . ಅದು ಪೂರ್ಣಗೊಂಡ ದಿನವೇ ನೀವು ನನ್ನನ್ನು ಕೊಲ್ಲುಬಹುದು. ” ಎಂದು ಬೇಡಿಕೊಂಡನು.
ಝೆನ್ ಗುರು
ಇದಕ್ಕೆ ಒಪ್ಪಿದ ಮಗನು ಆ ದಿನಕ್ಕಾಗಿ ಕಾಯುತ್ತಿದ್ದನು. ಹಲವಾರು ತಿಂಗಳುಗಳು ಕಳೆದ ನಂತರ , ಇನ್ನು ಕೆಲಸ ಪೂರ್ತಿ ಆಗದನ್ನು ನೋಡಿ ತಾನು ಕೂಡ ಝೆಂಕೈ ಗೆ ಸುರಂಗ ಅಗೆಯುವುದರ ಜೊತೆ ಕೈ ಜೋಡಿಸಿದನು. ಅವನು ಒಂದು ವರ್ಷಕ್ಕೂ ಹೆಚ್ಚಿನ ಕಾಲ ಸಹಾಯ ಮಾಡಿದ ನಂತರ, ಕೊನೆಗೆ ಸುರಂಗದ ಮಾರ್ಗ ಪೂರ್ಣಗೊಂಡಿತು ಮತ್ತು ಜನರು ಇದನ್ನು ಬಳಸಿಕೊಳ್ಳಬಹುದು ಮತ್ತು ಸುರಕ್ಷಿತವಾಗಿ ಪ್ರಯಾಣಿಸಬಹುದು ಎಂದು ಘೋಷಿಸಿದರು.
ಅದೇ ದಿನ , “ನಾನು ಹಿಡಿದ ಕೆಲಸ ಪೂರ್ಣ ಮಾಡಿದೆ, ಈಗ ನನ್ನ ತಲೆ ಕತ್ತರಿಸಿ,” ಎಂದು ಝೆಂಕೈ ಸೈನ್ಯದ ಅಧಿಕಾರಿಯಾ ಮಗನಿಗೆ ಹೇಳಿದನು.
“ನನ್ನ ಸ್ವಂತ ಶಿಕ್ಷಕನ ತಲೆಯನ್ನು ನಾನು ಹೇಗೆ ಕತ್ತರಿಸಬಲ್ಲೆ?” ಎಂದು ಸೈನ್ಯದ ಅಧಿಕಾರಿಯಾ ಪುತ್ರನು ಕಣ್ಣೀರಿನೊಂದಿಗೆ ಕೇಳಿ ತನ್ನ ಜೀವನದ ಗುರುವನ್ನು ಆಲಂಗಿಸಿಕೊಂಡನು .
😃😃😃 😂😂😂😂
😅😅😄