ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸಂತೋಷ ⇄ ದುಃಖ | Happiness ⇄ Sadness

ಡಿವಿಜಿರವರು ಈ ಮಂಕುತಿಮ್ಮನ ಕಗ್ಗದಲ್ಲಿ ಮನುಷ್ಯನ ಆಸೆಗಳು ಹೇಗೆ ದುಃಖಕ್ಕೆ ಮೂಲ ಎಂಬುದನ್ನು ಪ್ರತಿ ಮನುಷ್ಯನ ಜೀವನದಲ್ಲಿ ನಡೆಯಬಹುದಾದ ಸಣ್ಣ ಘಟನೆಯನ್ನು ಉದಾಹರಸಿ ಈ ಕಗ್ಗವನ್ನು ಬರೆದಿದ್ದಾರೆ.

ಸಂತೋಷದಿಂದ ದುಃಖ – ದುಃಖದಿಂದ ಸಂತೋಷ | Happy to Sadness – Sad to Happiness

ಮಿಡಿಚೇಪೆಕಾಯಿಗಳ ತಡಬಡದೆ ನುಂಗುವುದು ।
ಕಡಿಯೆ ಹೊಟ್ಟೆಯಲಿ ಹರಳೆಣ್ಣೆ ಕುಡಿಯುವುದು ।।
ಬಿಡುತಿರಲು ನೋವಾಗ ಸುಖವೀಗಳೆನ್ನುವುದು ।
ಪೊಡವಿಗಿದೆ ಭೋಗವಿಧಿ ಮಂಕುತಿಮ್ಮ ।।

To Swallow raw guava fruits without delay, after that,
When the stomach is upset, to drink castor oil ;
As pain subsides, to delight in the relief:
This is the way of indulgence. — Mankuthimma

  ಡಿವಿಜಿ ಕಗ್ಗ - ವಿಚಿತ್ರ ರಹಸ್ಯ - Tricky secret

ಈ ಕಗ್ಗದಲ್ಲಿ , ಮಕ್ಕಳು ಅಥವಾ ದೊಡ್ಡವರು , ಇನ್ನು ಹಣ್ಣಾಗದ ಮಿಡಿ ಸೀಬೆಕಾಯಿ / ಪೇರಲ [raw guava ] ಕೈಗೆ ಸಿಕ್ಕಾಗ ಅದರ ರುಚಿಗೆ ಮಾರುಹೋಗಿ ಇಷ್ಟಪಟ್ಟು ಬಡಬಡನೆ ತಿಂದುಬಿಡುತ್ತಾರೆ , ಆದರೆ ನಂತರ ಹಣ್ಣಾಗದ ಕಾಯಿ ತಿಂದ ಕಾರಣಕ್ಕೆ ಸಾಮಾನ್ಯವಾಗಿ ಹೊಟ್ಟೆನೋವು ಬರುತ್ತದೆ. ಈ ಹೊಟ್ಟೆನೋವನ್ನು ಹೋಗಿಸಲು ಮೊದಲೆಲ್ಲ ಹಳ್ಳಿ ಕಡೆ ಮನೆ ಮದ್ದಿನ ರೀತಿಯಲ್ಲಿ ಹರಳೆಣ್ಣೆಯನ್ನು ಸ್ವಲ್ಪ ಕುಡಿಸುತ್ತಿದ್ದರು ಆದ್ದರಿಂದ ಹೊಟ್ಟೆನೋವು ಸ್ವಲ್ಪ ಕಮ್ಮಿಯಾಗುತ್ತಲಿತ್ತು. ಮೊದಲು ರುಚಿಯಾದ ಸೀಬೆಕಾಯಿ ತಿನ್ನುವುದು ಆಮೇಲೆ ತಿಂದ ಕಾರಣಕ್ಕೆ ಹೊಟ್ಟೆನೋವು ಶಾಮನ ಮಾಡಲಿಕ್ಕೆ ಒಗರು ರುಚಿಯ ಹರಳೆಣ್ಣೆ ಕುಡಿಯುವುದನ್ನು ವಿವರಿಸಿ ಹೇಳಿದ್ದಾರೆ. ಯಾವಾಗ ಹೊಟ್ಟೆನೋವು ಶಮನವಾಗಲು ಪ್ರಾಂಭವಾಗುತ್ತದೆಯೋ , ಸ್ವಲ್ಪ ಹೊಟ್ಟೆನೋವು ಕಮ್ಮಿಯಾದರೂ , ಕೆಲವೊಮ್ಮೆ ಗ್ಯಾಸ್ ಹೊರ ಹೋಗುವುದರ ಮೂಲಕ ಕೂಡ ಸ್ವಲ್ಪ ಉಪಶಮನ ಸಿಗುತ್ತದೆಯೋ ಇದನ್ನೇ ಡಿವಿಜಿ ರವರು ಬೋಗಕ್ಕೆ ಹೋಲಿಸಿದ್ದಾರೆ ಅಂದರೆ ಸುಖದಿಂದ [ ರುಚಿಯಾದ ಸೀಬೆಕಾಯಿ ಇಂದ ] ಹೊಟ್ಟೆನೋವಿನ ದುಃಖ ತದನಂತರ ಆ ದುಃಖದಿಂದ [ ಒಗರು ರುಚಿಯ ಹರಳೆಣ್ಣೆ] ಸುಖ [ ಹೊಟ್ಟೆನೋವು ಉಪಶಮನ ] ದ ಕಡೆಗೆ ಜೀವನದ ಪಯಣ ಸಾಗುತ್ತಿರುತ್ತದೆ ಎಂದು ಸೊಗಸಾಗಿ ಬಣ್ಣಿಸಿದ್ದಾರೆ. ಸರಳವಾಗಿ ಹೇಳಬೇಕೆಂದರೆ ಆಸೆಯೇ ದುಃಖಕ್ಕೆ ಮೂಲ ಎಂಬ ನಾಣ್ಣುಡಿಯೆಂತೆ ಈ ಕಗ್ಗವನ್ನು ಬರೆದಿದ್ದಾರೆ.

Leave a Reply

Your email address will not be published. Required fields are marked *

Translate »