ಇಂದಿನ ಈ ಕಗ್ಗದಲ್ಲಿ ಡಿವಿಜಿ ಯವರು ದೇವರು ಹಾಗು ಆತನ ಮೇಲೆ ಜನರ ನಂಬಿಕೆ ಇದ್ದಾಗ್ಯೂ ಕೂಡ , ಲೋಕದಲ್ಲಿನ ಜನರ ಸ್ವಾರ್ಥದ ಬಗ್ಗೆ ಸೂಕ್ಶ್ಮವಾಗಿ ಹೇಳಿದ್ದಾರೆ
ದೇವರದಿದೆಲ್ಲ ದೇವರಿಗೆಲ್ಲವೆಂದೊರಲು- ।
ತಾವುದನುಮವನ ನಿರ್ಣಯಕೆ ಬಿಡದೆಯೆ ತಾಂ ।।
ದಾವನ್ತಪಡುತ ತನ್ನಿಚ್ಛೆಯನೆ ಘೋಷಿಸುವ ।
ಭಾವವೆಂತಹ ಭಕುತಿ ಮಂಕುತಿಮ್ಮ ।।
All this belongs to God , all this is for Him
Even while saying so, not leaving anything to His judgement,
But agitating oneself and trumpeting one’s own wishes —
What sort of devotion is this? Mankuthimma