ಡಿ ವಿ ಜಿ ಯವರು ಈ ಕಗ್ಗದಲ್ಲಿ ಮನುಷ್ಯನ ಮನಸ್ಸು ತನ್ನ ಹಿಂದಿನ ಅನುಭವದ ಮೇಲೆ ತನಗೆ ಯಾವದು ಸರಿ ಅನ್ನಿಸುವುದೋ ಅದನ್ನೇ ನಿಜ ಎನ್ನುವ ಭ್ರಮೆಯಲ್ಲಿ ಇರುವುದು ಹಾಗು ಅದೇ ಸರಿಯೆಂದು ವಾದ ಮಾಡುವುದು ವಿಚಿತ್ರ ಹಾಗು ವಿಸ್ಮಯ ಎನ್ನುವುದನ್ನ ವಿವರಿಸಿದ್ದಾರೆ.
ಪ್ರಾಕ್ತನದ ವಾಸನೆಯೆ ಮನಕೆ ಮೊದಲಿನ ಮಂತ್ರಿ ।
ಯುಕ್ತಿಗಳ ತನಗೊಪ್ಪುವಂತೆ ತಿರುಗಿಪುದು ।।
ಸೂಕ್ತವೆನಿಪುದು ಸಹಜರುಚಿ ತನ್ನ ತರ್ಕವನೆ ।
ಗುಪ್ತದೊಳು ಕುಟಿಲವಿದು ಮಂಕುತಿಮ್ಮ ।।
One’s past is the mind’s first counsel.
It twists the truths as it sees fit.
One’s nature always argues that it is correct.
This is a tricky secret. — Mankuthimma