ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಬಲಮುರಿ ಎಡಮುರಿ ಗಣಪತಿಗಿರುವ ವ್ಯತ್ಯಾಸ

‌ ‌ ‌
ಬಲಮುರಿ-ಎಡಮುರಿ ಗಣಪತಿಗಿರುವ ವ್ಯತ್ಯಾಸ

ಆದಿಪೂಜಿತ ಎಂದು ಕರೆಯಲ್ಪಡುವ ಗಣೇಶ ಹಿಂದೂ ಆರಾಧ್ಯ ದೈವಗಳಲ್ಲಿ ಪ್ರಮುಖ ಅಧಿಪತಿ.

ಎಲ್ಲಾ ಪೂಜೆಗಳಲ್ಲೂ ಪ್ರಥಮ ವಂದ್ಯನೆಂದೇ ಗಣಪತಿಯನ್ನು ಪೂಜಿಸಲಾಗುತ್ತದೆ. ಗಣಪತಿಯನ್ನು ನಾನಾ ರೀತಿಯಲ್ಲಿ ಪೂಜಿಸುವುದುಂಟು. ಗಣಪನ ಪ್ರತಿಯೊಂದು ಆಕಾರಕ್ಕೂ ಅದರದೇ ಆದ ವಿಶೇಷತೆ ಇದೆ.

ಗಣಪತಿಯನ್ನು ಸಾಮಾನ್ಯವಾಗಿ ಎಡಮುರಿ ಗಣಪತಿ ಹಾಗೂ ಬಲಮುರಿ ಗಣಪತಿ ಎಂದು ಕರೆಯುವುದುಂಟು. ಆದರೆ, ಅದೆಷ್ಟೋ ಮಂದಿಗೆ ಬಲಮುರಿ-ಎಡಮುರಿ ಗಣಪತಿಗಿರುವ ವಿಶೇಷತೆ ಎನು ಎಂಬುದು ತಿಳಿದೇ ಇರುವುದಿಲ್ಲ.

ಭಾರತದಲ್ಲಿ ಬಲಮುರಿ ಹಾಗೂ ಎಡಮುರಿ ಗಣಪತಿಗೆ ಸಾಕಷ್ಟು ವಿಶೇಷತೆಯಿದ್ದು ಹೆಚ್ಚಾಗಿ ಎಡಮುರಿ ಗಣಪತಿಯನ್ನೇ ಪೂಜೆ ಮಾಡುತ್ತಾರೆ.

ಗಣಪನ ಸೊಂಡಿಲು ಎಡಕ್ಕೆ ತಿರುಗಿದ್ದರೆ ಎಡಮುರಿ ಗಣಪತಿಯೆಂದು, ಬಲಕ್ಕೆ ತಿರುಗಿದ್ದರೆ ಬಲಮುರಿ ಗಣಪತಿಯೆಂದೂ ಹಾಗೂ ಮಧ್ಯದಲ್ಲಿದ್ದರೆ ಊರ್ಧ್ವ ಮೂಲ ಗಣಪತಿಯೆಂದು ಕರೆಯುವುದುಂಟು.

  ದೇವಸ್ಥಾನದಲ್ಲಿ ರಾಕ್ಷಸ ಕೀರ್ತಿಮುಖನ ಹಿಂದಿದೆ ಅದ್ಭುತ ಜೀವನ ರಹಸ್ಯ

ಬಲಮುರಿ ಗಣಪತಿ ‌ ‌ ಎಡಮುರಿ ಗಣಪತಿಗಿಂತ ಬಲಮುರಿ ಗಣಪತಿಯೇ ವಿಶೇಷವೆಂದು ಹೇಳುವುದುಂಟು. ಇದಕ್ಕೆ ಕಾರಣ, ಬಲಮುರಿ ಗಣಪತಿ ನಮ್ಮ ಜ್ಞಾನ ಸಾಧನೆಯ ವಿಘ್ನಗಳನ್ನು ನಿವಾರಿಸಿ ಬದುಕಿನ ಹಾದಿಯನ್ನು ಸುಗಮವಾಗಿಸುತ್ತಾನೆಂಬ ನಂಬಿಕೆಯಿದೆ.

ಸೊಂಡಿಲು ಬಲಗಡೆಗೆ ತಿರುಗಿದ್ದರೆ ದಕ್ಷಿಣಮೂರ್ತಿ ಎಂದು ಹೇಳಲಾಗುತ್ತದೆ. ದಕ್ಷಿಣ ದಿಕ್ಕು ಅಥವಾ ಬಲಬದಿಯು ಸೂರ್ಯನಾಡಿಗೆ ಸಂಬಂಧಪಟ್ಟಿದ್ದು, ಈ ದಿಕ್ಕು ಯಮಲೋಕದ ಕಡೆಗೆ ಕರೆದೊಯ್ಯುವುದಾಗಿದೆ.

ಯಾರು ಯಮಲೋಕದ ದಿಕ್ಕನ್ನು ಎದುರಿಸಬಲ್ಲರೋ ಅವರು ಬಹಳ ಶಕ್ತಿಶಾಲಿಯಾಗಿರುತ್ತಾರೆ. ಸೂರ್ಯನಾಡಿಯ ಚಲನೆಯಲ್ಲಿರುವವನು ತೇಜಸ್ವಿಯಾಗಿರುತ್ತಾರೆ.

ಸಾತ್ವಿಕತೆ ಹೆಚ್ಚುತ್ತದೆ. ದಕ್ಷಿಣ ದಿಕ್ಕಿನಿಂದ ಬರುವ ಯಾವುದೇ ಕೆಲಸಗಳಿಗೂ ತೊಂದರೆಯಾಗುವುದಿಲ್ಲ ಎಂದು ಹೇಳುತ್ತಾರೆ. ಮತ್ತೊಂದೆಡೆ ಬಲಮುರಿ ಗಣೇಶನಿಂದ ಎಷ್ಟು ಒಳ್ಳೆಯದೋ ಅದೇ ರೀತಿಯಲ್ಲಿ ಕೆಲವರಿಗೆ ತೊಡಕಾಗುವುದೂ ಉಂಟು ಎಂದು ಹೇಳುತ್ತಾರೆ.

  ಬೀರಭೂಮ, ಬಂಗಾಲದ ಮಹಾಸ್ಮಶಾನದಲ್ಲಿ ವಿರಾಜಮಾನಳಾಗಿರುವ ಶ್ರೀ ತಾರಾದೇವಿ

ಕೆಲವು ಶಾಸ್ತ್ರಗಳು ಬಲಮುರಿ ಗಣಪತಿಯನ್ನು ಪ್ರತಿನಿತ್ಯ ಪೂಜಿಸಲು ಒಪ್ಪಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಬಲಮುರಿ ಗಣಪತಿಯು ಉಷ್ಣಕಾರಕನಾಗಿದ್ದು, ಪೂಜೆ ಅಥವಾ ಇನ್ನಿತರ ವಿಷಯಗಳಲ್ಲಿ ಹೆಚ್ಚಿನ ಲೋಪವಾದಲ್ಲಿ ಇದು ಅನಾಹುತಕ್ಕೆ ಕಾರಣವಾಗಬಹುದೆನ್ನುತ್ತಾರೆ.

ಬಲಮುರಿ ಗಣಪತಿಯು ದಕ್ಷಿಣದ ದಿಕ್ಕನ್ನು ಸೂಚಿಸುವುದರಿಂದ ದಕ್ಷಿಣ ದಿಕ್ಕಿನಲ್ಲಿರುವ ಯಮಲೋಕದಲ್ಲಿ ಪಾಪ-ಪುಣ್ಯಗಳು ಪರೀಕ್ಷೆಯಾಗುವುದರಿಂದ ಮೃತ್ಯುವಿನ ನಂತರ ಯಾವ ರೀತಿ ಪರೀಕ್ಷೆ ಆಗುತ್ತದೆಯೋ ಆದೇ ರೀತಿಯ ಪರೀಕ್ಷೆಗಳು ಮೃತ್ಯುವಿಗೂ ಮೊದಲು ಆಗುತ್ತದೆ.

ಹಾಗಾಗಿ ಯಾವುದೇ ಕಾರಣಕ್ಕೂ ದಕ್ಷಿಣಕ್ಕೆ ಮುಖ ಮಾಡಿ ಕುಳಿತುಕೊಳ್ಳಬಾರದು, ಮಲಗಬಾರದು ಎಂದು ಹಿರಿಯರು ಹೇಳುತ್ತಾರೆ. ಹೀಗಾಗಿ ಕೆಲವು ಶಾಸ್ತ್ರಗಳು ಬಲಮುರಿ ಗಣಪತಿಯನ್ನು ಪ್ರತಿನಿತ್ಯ ಪೂಜಿಸಲು ಯೋಗ್ಯವಲ್ಲ ಎಂದು ಹೇಳುತ್ತದೆ.

ಎಡಮುರಿ ಗಣಪತಿ ‌ ‌ ‌ ‌ ಸೊಂಡಿಲಿನ ಪ್ರಾರಂಭದ ತಿರುವು ಎಡಗಡೆಗೆ ಇರುವ ಮೂರ್ತಿ ಎಂದರೆ ವಾಮಮುಖಿ ಮೂರ್ತಿಯನ್ನು ಎಡಮುರಿ ಗಣಪತಿಯೆಂದು ಕರೆಯಲಾಗುತ್ತದೆ. ವಾಮ ಎಂದರೆ ಎಡಬದಿ ಅಥವಾ ಉತ್ತರ ದಿಕ್ಕು.

  ಪುತ್ತೂರಿನ ಭಗವತೀ ದುರ್ಗಾಪರಮೇಶ್ವರಿ ದೇವಸ್ಥಾನ

ಎಡಬದಿಯಲ್ಲಿ ಚಂದ್ರನಾಡಿಯಿರುತ್ತದೆ, ಇದು ಶೀತಲತೆಯನ್ನು ಕೊಡುತ್ತದೆ. ಹಾಗೆಯೇ ಉತ್ತರ ದಿಕ್ಕು ಆಧ್ಯಾತ್ಮಕ್ಕೆ ಪೂರಕವಾಗುತ್ತದೆ ಎಂದು ಹೇಳಲಾಗುತ್ತದೆ. ಎಡಮುರಿ ಗಣಪತಿಯು ಶಾಂತ ಹಾಗೂ ಆನಂದತೆಯನ್ನು ಸೂಚಿಸುವುದರಿಂದ ಎಡಮುರಿ ಗಣಪತಿಯು ದಿನನಿತ್ಯ ಪೂಜೆಗೆ ಯೋಗ್ಯವಾಗಿದೆ ಎಂದು ಹೇಳಲಾಗುತ್ತದೆ.

Leave a Reply

Your email address will not be published. Required fields are marked *

Translate »