ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮಹಾಭಾರತದಲ್ಲಿ ರಚಿತವಾದ ವಿಷ್ಣುಸಹಸ್ರನಾಮ ನಮ್ಮ ವರೆಗೆ ಹೇಗೆ ತಲುಪಿತು ?

🍁🍁ವಿಷ್ಣುಸಹಸ್ರನಾಮ ನಮ್ಮ ವರೆಗೆ ಹೇಗೆ ತಲುಪಿತು🍁🍁
ಹಿಂದುಗಳಾದ ನಾವು ದಿನಾಲು ಒಮ್ಮೆಯಾದರೂ ವಿಷ್ಣುಸಹಸ್ರನಾಮವನ್ನು ಪಠಣ ಮಾಡುತ್ತೇವೆ.ಮಹಾಭಾರತದಲ್ಲಿ ರಚಿತವಾದ ವಿಷ್ಣುಸಹಸ್ರನಾಮ ನಮ್ಮ ವರೆಗೆ ಹೇಗೆ ತಲುಪಿತು ಎಂಬ ಸ್ವಾರಸ್ಯಕರ ವಿವರ
ಕೆಳಗಿನಂತೆ ಇದೆ.
೧೯೪೦/೫೦ರ ದಶಕದಲ್ಲಿ ಮಹಾಪೆರಿಯಾರರೊಬ್ಬರು ಕಂಚಿ ಕಾಮಕೋಟಿ ಶ್ರೀಗಳ ಸಂದರ್ಶನ ನಡೆಸುತ್ತಿದ್ದರು.ಆಗ ಅವರು ಸಂದರ್ಶನದ ಸಾರಾಂಶವನ್ನು ಟೇಪ್ ರೆಕೊರ್ಡದಲ್ಲಿ ಟೇಪ್ ಮಾಡುತ್ತಿದ್ದರು.ಆಗ ಪೆರಿಯಾರವರು ಜನರನ್ನುದ್ದೇಶಿಸಿ, ಟೇಪ್ ರೆಕಾರ್ಡರ್ ಬಗ್ಗೆ ತಮಗಾರಿಗಾದರೂ ಮಾಹಿತಿ ಇದೆಯಾ?ನಂತರ ವಿಷ್ಣುಸಹಸ್ರನಾಮ ನಮ್ಮ ವರೆಗೆ ಹೇಗೆ ತಲುಪಿತು? ಎಂದು ಪ್ರಶ್ನಿಸಿದರು.ಆಗ ಅದು ಭೀಷ್ಮ ಪಿತಾಮಹರಿಂದ ನಮಗೆ ಬಂದಿತೆಂಬುದರ ಬಗ್ಗೆ ಎಲ್ಲರ ಸಹಮತವಿತ್ತು.ಆಗಮಹಾಪೆರಿಯಾರರು ಭೀಷ್ಮಪಿತಾಮಹರು ವಿಷ್ಣುಸಹಸ್ರನಾಮವನ್ನು ಯುದ್ಧಭೂಮಿಯಲ್ಲಿ ಹೇಳಿದರು.ಅದನ್ನು ಯಾರಾದರೂ ಬರೆದಿಟ್ಟುಕೊಂಡಿದ್ದರಾ? ಆಗ ಮತ್ತೊಮ್ಮೆ ಗಂಭೀರ ಶಾಂತತೆ ಆವರಿಸಿತ್ತು.ಮಹಾಪೆರಿಯಾರರು ಮುಂದೆವರೆದು,ಯಾವಾಗ ಭೀಷ್ಮರು ವಿಷ್ಣುಸ್ತುತಿಯನ್ನು ಹೇಳುತ್ತಿದ್ದರೊ,ಆಗ ಕ್ರಷ್ಣ,ವ್ಯಾಸರಾದಿಯಾಗಿ ಎಲ್ಲರೂ ಭೀಷ್ಮರ ಕಡೆಗೆ ವಿಷ್ಣು ಸಹಸ್ರನಾಮ ಕೇಳುವುದರಲ್ಲಿ ಮಗ್ನನಾಗಿದ್ದರು.ಯಾವಾಗ ಭೀಷ್ಮರು ೧೦೦೦ ಶ್ರೀ ಕೃಷ್ಣನ ನಾಮಗಳನ್ನು ಮುಗಿಸಿದರೋ,ಆಗ ಎಲ್ಲರೂ ಆಶ್ಚರ್ಯಚಕಿತರಾಗಿ ಭೀಷ್ಮರ ಕಡೆಗೆ ನೋಡಿದರು.
ಆಗ ಯುಧಿಷ್ಠಿರನು ಮುಂದೆ ಬಂದು ಸಮ್ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿ, ಭೀಷ್ಮ ಪಿತಾಮಹರು ಶ್ರೀ ಕ್ರಷ್ಣನ ೧೦೦೦ ಹೆಸುಗಳುಳ್ಳ ಉತ್ಕೃಷ್ಟ,ರಮಣೀಯ, ಅಮೂಲ್ಯವಾದ ವಾಸುದೇವ ಸ್ತುತಿ ಯನ್ನು ಚೆನ್ನಾಗಿ
ಹೇಳಿದ್ದಾರೆ.ನಾವೆಲ್ಲರೂ ಕೇಳಿ ಆನಂದ ಪಟ್ಟೆವು.ಆದರೆ ನಾವ್ಯಾರೊಬ್ಬರು ಅದನ್ನು ಬರೆದಿಟ್ಟುಕೊಳ್ಳಲಿಲ್ಲ.ಹೀಗಾಗಿ ಅದರ ಕ್ರಮ ಸಹ ಬಿಟ್ಟು ಹೋಗಿದೆ.
ಆಗ ಎಲ್ಲರೂ ಶ್ರೀ ಕೃಷ್ಣನ ಕಡೆಗೆ ಆಸೆಕಣ್ಣಿನಿಂದ ನೋಡುತ್ತಾ ಸಹಾಯ ಯಾಚಿಸಿದರು.ಆಗ ಶ್ರೀ ಕೃಷ್ಣನು ಯಥಾ ಪ್ರಕಾರ “ನಿಮ್ಮ ಹಾಗೆ ನನಗೂ ರಚನೆ ಬಹಳ ಹಿಡಿಸಿತು.ಆದರೆ ಈಗ ಏನು ಮಾಡಲು ಸಾಧ್ಯವಿಲ್ಲ.ಘಟನೆ ಮುಗಿದು ಹೋಗಿದೆ.ಆಗ ಎಲ್ಲರೂ ಈ ಅಮೂಲ್ಯವಾದ ರಚನೆಯ ಪುನರಪ್ರಾಪ್ತಿಗಾಗಿ ಉಪಾಯದ ಬಗ್ಗೆ ವಿನಂತಿಸಿದರು.ಆಗ ಶ್ರೀ ಕೃಷ್ಣನು,”ಈ ಕಾರ್ಯ ಕೇವಲ ಸಹದೇವನಿಂದ ಮಾತ್ರ ಸಾಧ್ಯ ಹಾಗೂ ಅದನ್ನು ವ್ಯಾಸರು ಬರೆದುಕೊಳ್ಳುವರೆಂದು ತಿಳಿಸಿದನು”. ಆಗ ಎಲ್ಲರೂ ಸಹದೇವನಿಂದ ಇದು ಹೇಗೆ ಸಾಧ್ಯ ಎಂದು ಕೇಳಲು ಉತ್ಸುಕರಾದರು. ಆಗ ಶ್ರೀ ಕೃಷ್ಣನು”ನಮ್ಮೆಲ್ಲರಲ್ಲಿ ಸಹದೇವನೊಬ್ಬನೇ ಮಾತ್ರ ಶ್ವೇತ ಸ್ಪಟಿಕ ಧಾರಣೆ ಮಾಡಿದ್ದಾನೆ. ಒಂದು ವೇಳೆ ಅವನು ಶಿವನ ಪ್ರಾರ್ಥನೆ ಮಾಡಿ ಧ್ಯಾನ ಮಾಡಿದರೆ, ಸ್ಪಟಿಕ ಧ್ವನಿಯಲ್ಲಿ ರೂಪಾಂತರವಾಗುವದು,ಅದನ್ನು ವ್ಯಾಸರು ಬರೆದುಕೊಳ್ಳುತ್ತಾರೆ.”
ಆಗ ಸಹದೇವ ಹಾಗೂ ವ್ಯಾಸರು ಭೀಷ್ಮರು ಹೇಳಿದ ವಿಷ್ಣುಸಹಸ್ರನಾಮವನ್ನು ಯಾವ ಸ್ಥಳದಿಂದ ಕೇಳಿದ್ದರೊ ಅದೇ ಸ್ಥಳದಲ್ಲಿ ಕೆಳಗೆ ಕುಳಿತರು.ಆಗ ಸಹದೇವನು ವಿಷ್ಣುಸಹಸ್ರನಾಮ ವನ್ನು ಸ್ಥಟಿಕದ ಮುಖಾಂತರ ಪ್ರಾಪ್ತಿ ಮಾಡಲು ಶಿವನ ಧ್ಯಾನವನ್ನು ಮಾಡಹತ್ತಿದನು.
“ಸ್ಪಟಿಕದ ವೈಶಿಷ್ಟ್ಯವೆಂದರೆ ಶಾಂತ ವಾತಾವರಣದಲ್ಲಿ ಧ್ವನಿ ಅಸ್ತಗತವಾಗುತ್ತದೆ.”ಯಾರು ಶ್ವೇತಾಂಬರ ಹಾಗೂ ಸ್ಕಟಿಕ ಪ್ರಮಾಣದಲ್ಲಿರುವರೊ,ಅವರು ಶಿವನ ಧ್ಯಾನ ಮಾಡಲಾಗಿ,ಆ ಧ್ವನಿಯ ಲಹರಿ ಪ್ರಾಪ್ತವಾಗುವದು”.
ಈ ಪ್ರಕಾರ ವೀಶ್ವದಲ್ಲಿ ಪ್ರಥಮಬಾರಿಗೆ ಸ್ಪಟಿಕದ ಮೂಲಕ ಧ್ವನಿ ಪ್ರಾಪ್ತಿಯಾಗಿ ವಿಷ್ಣುಸಹಸ್ರನಾಮವನ್ನು ಬರೆದು ವ್ಯಾಸರು ನಮ್ಮ ವರೆಗೆ ಮುಟ್ಟಿಸಿದರು.ಈ ವಿಷಯವನ್ನು ಮಹಾಪೆರಿಯಾರವರು ಎಲ್ಲರಿಗೂ ತಿಳಿಸಿದಾಗ ಎಲ್ಲರೂ ಸ್ಥಂಭೀಭೂತರಾದರು.
ಈಗಲೂ ಸಹ ನಾವು ಉಪಯೋಗಿಸುವ ಹಾರ್ಡ್ಡಿಸ್ಕ,ಮೆಮೊರಿ ಕಾರ್ಡ್ ಗಳಲ್ಲಿ ಸ್ಪಟಿಕದ ಉಪಯೋಗವಿದೆ.
ಸ್ಪಟಿಕ ಎಂದರೆ ಕ್ರಿಸ್ಟಲ್ (crystal.) ಕ್ವಾಟ್ಜಸ್ಟೋನ SIO2,ಅಂದರೆ ಸಿಲಿಕಾನ್ ಅಂದರೆ ಸ್ಪಟಿಕ.ಇಂದಿನ ಆಧುನಿಕ ಟೇಪ್ ರೆಕಾರ್ಡರ್,ರೇಡಿಯೊಗಳಲ್ಲಿ ಇನ್ನೂ ಸ್ಪಟಿಕದ ಉಪಯೋಗವಿದೆ.
ಈ ತಂತ್ರಜ್ಞಾನ ಬಹಳ ಹಳೇ ಕಾಲದಿಂದ,ಮಹಾಭಾರತ ಕಾಲದಿಂದಲೂ ಬಂದಿದೆ.ಅಂದರೆ ನಮ್ಮ ಪೂರ್ವಜರ ಕಾಲದಲ್ಲೂ ಸಹ ತಂತ್ರಜ್ಞಾನ ಬಹಳ ಮುಂದೆವರಿದಿತ್ತು ಅಂತಾ ಹೇಳಲು ಮೇಲಿನ ಉದಾಹರಣೆ ಒಂದುಸಾಕು.
ಮೇಲಿನ ಸಂಗತಿ‌ ತಿಳಿದ ಮೇಲೆ ನಮಗೆ ಇನ್ನು ದಿನಾಲು ವಿಷ್ಣುಸಹಸ್ರನಾಮ ಅನ್ನುವಾಗ ಆನಂದ ದ್ವಿಗುಣವಾಗುವದರಲ್ಲಿ ಸಂದೇಹವೇ ಇಲ್ಲ.
ಓಂ ನಮೋ ಭಗವತೇ ವಾಸುದೇವಾಯ.
ಸಂಗ್ರಹ :
ಶಾಮ.ಕುಲಕರ್ಣಿ.
ಕಲಾಶ್ರೀ.ಧಾರವಾಡ.

Leave a Reply

Your email address will not be published. Required fields are marked *

Translate »