ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕನ್ನಡದ ಸಾವಿರದ-ಒಂದು ಗಾದೆಗಳು – ಭಾಗ ೨ – 1001 Kannada Proverbs – Part 2

ಕನ್ನಡ ಜನಪ್ರಿಯ ಗಾದೆಗಳು | ಗಾದೆ ವಿಸ್ತರಣೆ | Kannada Popular Proverbs | Janapriya Gaadegalu | Kannada Gaadegalu | ಕನ್ನಡ ಗಾದೆಗಳು | Kannada Proverbs | ಜನಪ್ರಿಯ ಗಾದೆಗಳು | Kannada Gaade Maathu | kannada gaade maathu | ಕನ್ನಡ ಗಾದೆ ಮಾತು | ಗಾದೆ ವಿಸ್ತರಣೆ | Gaade expand | ಗಾದೆ ಅರ್ಥ ಸಹಿತ | proverbs with meanings

ಕನ್ನಡದ ಸಾವಿರದ-ಒಂದು ಗಾದೆಗಳು – ಭಾಗ ೨

1001 Kannada Proverbs – Part 2

ಮಾಡಿದ ಪಾಪ ದಾನದಿಂದ ಹೋದೀತೆ
ಮಾರಿಯ ಹೋತ ತೋರಣದ ಚಿಗುರು ಬಯಸಿತಂತೆ.
ಬುಟ್ಟಿಯಷ್ಟು ಬುದ್ಧಿಗಿಂತ ಮುಷ್ಠಿಯಷ್ಟು ತಾಳ್ಮೆ ಲೇಸು
ಕಪ್ಪರ ತಿಪ್ಪೇಲಿಟ್ಟರೆ ತನ್ನ ವಾಸನೆ ಬಿಟ್ಟೀತೇ
ಓದಿ ಬರೆಯೋ ಕಾಲದಲ್ಲಿ ಆಡಿ ಮಣ್ಣು ಹುಯ್ಕೊಂಡರು
ಅಡುಗೆ ಮಾಡಿದವಳಿಗಿಂತ ಬಡಿಸಿದವಳೇ ಮೇಲು
ಉಣ್ಣು ಬಾ ಅಂದ್ರೆ,ಇರಿ ಬಾ ಅಂದ್ರಂತೆ
ಕಿರುಗೂರಿಗೆ ಹೋದರಂತೆ ಕಣಿ ಕೇಳುವುದಕ್ಕೆ
ಉದ್ದುದ್ದ ಮಾತಿನವರ ಮೊಳಕೈ ಮೊಂಡ.
ಆಸೆ ಆಕಾಶದಷ್ಟು, ಸಾಧನೆ ಸಾಸಿವೆಯಷ್ಟೇ.
ತತ್ವಮಸಿ ಅಂತ ಅನ್ನೋದ್ ಕಲಿ ಅಂದ್ರೆ ತುತ್ತು ಸವಿ ಅಂತ ಉಣ್ನೋದ್ ಕಲ್ತ
ಕುರು ಮೇಲೆ ಬರೆ ಎಳೆದ ಹಾಗೆ
ಪ್ರೇಮಿಗಳಿಲ್ಲದ ನಾಡು ಬರೀ ಶೂನ್ಯದ ಬೀಡು.
ಎತ್ತು ಈಯಿತು ಅ೦ದರೆ ಕೊಟ್ಟಿಗೆಗೆ ಕಟ್ಟು ಎ೦ದರ೦ತೆ.
ಊರು ಸುಟ್ಟರೂ ಹನುಮಂತರಾಯ ಹೊರಗೆ
ತಲೆಗೆ ಬಿದ್ದ ನೀರು ಕಾಲಿಗೆ ಬೀಳದೆ ಇರುತ್ತದೆಯೇ?
ಮಂಗನ ಕೈಗೆ ಮಾಣಿಕ್ಯ ಕೊಟ್ಟ ಹಾಗೆ
ಹಟ್ಟಿ ತುಂಬಾ ಹಸು, ಹಾಲು ಮಾತ್ರ ತುಸು.
ತಲೇ ಮೇಲಣ ಬರಹ ಎಲೆಯಿಂದ ಒರೆಸಿದರೆ ಹೋದೀತೇ
ಅಜ್ಜಿಗೆ ಅರಿವೆಯ ಚಿಂತೆ, ಮಗಳಿಗೆ ಗಂಡನ ಚಿಂತೆ, ಮೊಮ್ಮಗಳಿಗೆ ಕಜ್ಜಾಯದ ಚಿಂತೆ
ಮಾತು ಆಡಿದರೆ ಮುತ್ತಿನ ಹಾರದಂತಿರಬೇಕು.
ಅಹಂಕಾರ ಇದ್ದ ಮನುಷ್ಯ ಏನನ್ನೂ ಸಾಧಿಸಲಾರ.
ಇರೋದು ಕಲಿಸುತ್ತೆ, ಇಲ್ಲದ್ದು ನಾಚಿಸುತ್ತೆ.
ಪ್ರೀತಿಗೊಂದು ಮುತ್ತು, ಹಸಿವಿಗೊಂದು ತುತ್ತು.
ಚಿಂತೆ ಇಲ್ಲದವನಿಗೆ ಸನ್ತೇಲು ನಿದ್ದೆ.
೨೦ ಕ್ಕೆ ಯಜಮಾನಿಕೆ ಸಿಕ್ಕಬಾರದು ೭೦ ಕ್ಕೆ ಕೆಮ್ಮ ಬರಬಾರದು.
ಸಾವಿರ ಸುಳ್ಳು ಹೇಳಿ ಒಂಡು ಮದುವೆ ಮಾಡು
ಅತಿ ಆಸೆ ಗತಿ ಕೇಡು.
ಹಿತ್ತಲ ಗಿಡ ಮದ್ದಲ್ಲ
ಮರ ನೆಟ್ಟು ಪಾಪವನ್ನು ಕಳೆದುಕೋ.
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು
ಹೀನ ಸುಳಿ ಬೋಳಿಸಿದರೂ ಹೋಗೋದಿಲ್ಲ
ತಿವಿದುಕೊಂಡರೆ ಬಂದೀತೇ ತಿಮ್ಮಪ್ಪನ ದಯೆ
ಆಸೆ ಹೆಚ್ಚಿತು ಆಯಸ್ಸು ಕಮ್ಮಿ ಆಯಿತು
ಊಟಕ್ಕಿಲ್ಲದ ಉಪ್ಪಿನಕಾಯಿ ..ಕ್ಕೆ ಸಮಾನ
ಹಾವೂ ಸಾಯಲಿಲ್ಲ ಕೋಲು ಮುರೀಲಿಲ್ಲ
ಮಾಡಿದ್ದುಣ್ಣೋ ಮಹರಾಯ.
ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ
ನಾಯಿ ಬಾಲಕ್ಕೆ ದೆಬ್ಬೆ ಕಟ್ಟಿದ ಹಾಗೆ
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು
ಬಡವೆ ಸೀರೆ ಉಡದೆ ಮಾಸಿತು
ಗಂಧ ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೂ ಬಳಿದುಕೊಂಡರಂತೆ
ಹೆಣ್ಣು ಹೊನ್ನು ಮಣ್ಣು ಇನ್ನೊಬ್ಬರ ಕೈ ಸೇರಿದರೆ ಹೋದಂತೆ
ಬೀದೀಲಿ ಹೋಗೋ ಮಾರೀನ ಮನೆಗೆ ಕರೆದಂತೆ
ಉಟ್ಟರೆ ತೊಟ್ಟರೆ ಪುಟ್ಟಕ್ಕ ಚೆನ್ನ
ನರಗುಂದಕ್ಕೆ ಹೊದರೆ ಕುರು ತಪ್ಪೀತೆ?
ಹೋದೆಯಾ ಪಿಶಾಚಿ ಅಂದ್ರೆ ಬಂದೆಯಾ ಗವಾಕ್ಷೀಲಿ
ಬರ ಬಂದಾಗ ಮಗ ಉಣ್ಣೊದು ಕಲಿತ.
ತನುವರಿಯದ ನೋವಿಲ್ಲ ಮನವರಿಯದ ತಾಪವಿಲ್ಲ
ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ ಅಂದಂತೆ
ಮಂದ್ಯಾಗ ಮಚ್ಚೀಲೆ ಹೊಡೆದು ಸಂದ್ಯಾಗ ಕಾಲು ಹಿಡಿದರು
ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೆ ? ಆಕಳು ಕಪ್ಪಾದರೂ ಹಾಲು ಕಪ್ಪೆ ?
ಅರ್ತಿಗೆ ಬಳೆ ತೊಟ್ಟು ಕೈ ಕೊಡವಿದರೆ ಹೋದೀತೆ
ಹಾವು ಸಾಯಬಾರದು ;ಕೋಲು ಮುರಿಯಬಾರದು
ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ.
ವರಕವಿಗಳ ಮುಂದೆ ನರಕವಿಗಳು ವಿದ್ಯೆ ತೋರಬಾರದು
ಹಾಲಿನಲ್ಲಿ ಹುಳಿ ಹಿಂಡಿದಂತೆ
ಕಳ್ಳನ್ನ ನಂಬಿದ್ರೂ ಕುಳ್ಳನ್ನ ನಂಬಬಾರದು
ಕಂಡೋರ ಮನೆ ರೊಟ್ಟಿಗೆ ಗಿಣ್ಣು ಹಾಲು ಕಾಯಿಸಿದರಂತೆ
ಎಂಟು ವರ್ಷಕ್ಕೆ ನನ್ನ ಮಗ ದಂಟಾದ
ಮಾತು ಮನೆ ಮುರೀತು, ತೂತು ಒಲೆ ಕೆಡಿಸ್ತು
ಹಣ ಇಲ್ಲದವ ಹೆಣಕ್ಕಿಂತ ಕಡೆ
ದೇಶ ತಿರುಗಬೇಕು, ಭಾಷೆ ಕಲಿಯಬೇಕು.
ತಪ್ಪು ಹೊರಿಸಿದವನಿಗೆ ಒಪ್ಪುವವನು ಯಾರು
ಹಾರುವ ಆಳಲ್ಲ, ಬಾಳೆ ದಡಿಯಲ್ಲ
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
ಅಕ್ಕನ ಹಗೆ ಬಾವನ ನೆಂಟು
ತೂಕಡಿಸುವವನಿಗೆ ಹಾಸಿಗೆ ಹಾಸಿ ಕೊಟ್ಟ ಹಾಗೆ
ಅನುಕೂಲ ಸಿ೦ಧು, ಅಭಾವ ವೈರಾಗ್ಯ.
ತಡೇ ಕಟ್ಟುವವನ ಮುಂದೆ ಮುಡಿಯೇನು
ನಯಶಾಲಿ ಆದವನು ಜಯಶಾಲಿ ಆದಾನು
ದೇವರಿಲ್ಲದ ಗುಡಿ;ಯಜಮಾನನಿಲ್ಲದ ಮನೆ ಎರಡೂ ಒಂದೇ
ಏತಿ ಅಂದರೆ ಪ್ರೇತಿ ಅಂದಂತೆ
ಎದ್ದರೆ ಆಳಲ್ಲ
ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದ ಹಾಗಾಯಿತು.
ಉಪಾಸ ಇದ್ರೂ ಉಪದ್ರ ಇರಬಾರ‍್ದು
ಎಲ್ಲರ ಮನೆಯ ದೋಸೆಯೂ ತೂತೆ !
ಏನು ಬೇಡಿದರೊಬ್ಬ ದಾನಿಯನ್ನು ಬೇಡು, ದೀನನಾ ಬೇಡಿದರೆ ಆ ದೀನ ಏನು ಕೊಟ್ಟಾನು?
ಆರಕ್ಕೆ ಹೆಚ್ಚಿಲ್ಲ, ಮೂರಕ್ಕೆ ಕಮ್ಮಿಯಿಲ್ಲ.
ತಟಕಿನಿಂದ ತಟಪಟವಾಯಿತು
ಮಾತಿಗೆ ಮಾತುಗಳ ಓತು ಸಾಸಿರ ಉಂಟು
ತಳಮಳ ತೀರಲಿಲ್ಲ, ಕಳವಳ ಕಳಿಯಲಿಲ್ಲ
ಊಡದ ಆವಿಗೆ ಉಣ್ಣದ ಕರುವ ಬಿಟ್ಟಂತೆ
ನಾ ಬಡವ ವಾಲಗ ಸಾವಕಾಶ ಊದು ಅಂದಂತೆ
ಕೃಷಿತೋನಾಸ್ತಿ ದುರ್ಭಿಕ್ಷಂ
ಒಡೆಯನಿಗೆ ಹಾಲಿಲ್ಲವೆ೦ದು ಎಮ್ಮೆ ಈಯುತ್ಯೇ?
ಹಳೇ ಚಪ್ಪಲಿ ಆದ್ರೂ ಪರವಾಗಿಲ್ಲ, ಬರಿಗಾಲಲ್ಲಿ ನಡೀಬೇಡ.
ಮೇಲೆ ಬಸಪ್ಪ ಒಳಗೆ ವಿಷಪ್ಪ
ಮೋಕ್ಷಮಂತ್ರ ತಿಳಿದವನಿಗೆ ವೇದಮಂತ್ರದ ಗೊಡವೆಯೆ?
ಆತುರಕ್ಕೆ ಅಜ್ಜಿ ಮೈನೆರೆದಳು
ಮರ ಕಡಿದು ಮೈಮೇಲೆ ಹಾಕಿಕೊಂಡ್ರಂತ.
ಮಾನಿಷ್ಟರು ಮಾನಕ್ಕೆ ಅಂಜಿದರೆ ಮಾನಗೇಡಿ ತನಗೇ ಅಂಜಿದರು ಅಂದನಂತೆ
ತೂಕ ಸರಿಯಿದ್ದರೆ ವ್ಯಾಪಾರ.
ಸಾಯೋ ಮುಂದೆ ಸಕ್ಕರೆ ತುಪ್ಪ ತಿನಿಸಿದರಂತೆ
ಹೊಟ್ಟೆ ತುಂಬಿದ ಮೇಲೆ ಹಿಟ್ಟೂ ಕಲ್ಲು
ಯಾದವೇಂದ್ರ ದನ ಕಾದ, ರಾಘವೇಂದ್ರ ರಾಜ್ಯವಾಳಿದ.
ಪ್ರತ್ಯಕ್ಷವಾಗಿ ಕ೦ಡರೂ ಪ್ರಮಾಣಿಸಿ ನೋಡು.
ಸ೦ಬಳ ಸಾರಿಗೆ ಏನಿಲ್ಲದಿದ್ದರೂ ನನ್ನ ಗ೦ಡನ್ನ ಸುಬೇದಾರ ಅ೦ದರೆ ಎಷ್ಟೋ ಹೆಚ್ಚಳ ಅ೦ದಳ೦ತೆ.
ಕೆರೆಗೆ ತೊರೆ ಕೂಡಿ ಸರೋವರ ವಾಯ್ತು
ಪರಡಿಯ ರುಚಿ ಕರಡಿಗೆ ತಿಳದೀತೇ.
ಕರುಬಿದವರ ಮನೆ ಬರಿಮನೆ
ಕೋಪ ಬೀವುದೇ ಸಮತೆ
ಅನ್ನ ಹಾಕಿದ ಮನೆಗೆ ಕನ್ನ ಹಾಕಬೇಡ
ಹತ್ತು ಮಕ್ಕಳ ತಾಯಾದರೂ ಸತ್ತ ಮಗನ್ನ ಮರೆಯೊದಿಲ್ಲ
ತಾಯಿನ್ನ ನೋಡಿ ಮಗಳನ್ನ ತಕ್ಕೋ ಹಾಲನ್ನ ನೋಡಿ ಎಮ್ಮೇನ್ನ ತಕ್ಕೋ
ಹಾಲಿದ್ದಾಗ ಹಬ್ಬ ;ನೀರಿದ್ದಾಗ ನೇಮ
ರಸಿಕನ ನುಡಿ ತಿಂಗಳ ಬೆಳಕಿನಂತೆ
ಮರಗಿಣಿಯ ಕೂಡೆ ಆಡಿ ಅರಗಿಣಿ ಕೇಟ್ಟಿತು
ಸೊಕ್ಕಿದ್ದವನಿಗೆ ಯಾಣ, ರೊಕ್ಕಿದ್ದವನಿಗೆ ಪಟ್ಟಣ.
ಎಂಥೆಂಥ ದೇವರಿಗೇ ಅಂತರಾಟ ಆಗಿರುವಾಗ ಕಾಲ್ಮುರುಕ ದೇವರಿಗೆ ಕೈಲಾಸವೇ
ಆನೆಯ ಹೊಟ್ಟೆಗೆ ಅಂಬಲಿ ಬಿಟ್ಟ ಹಾಗೆ
ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ.
ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ
ತನ್ನ ತಾ ಬಲ್ಲವನೆ ಬಲ್ಲವ
ಮಣದಷ್ಟು ಮಾತಿಗಿಂತ ಕಣದಷ್ಟು ಕೆಲಸ ಲೇಸು.
ಬೇಲಿಯೇ ಎದ್ದು ಹೊಲ ಮೇದಂತೆ
ತಿಗಳಗಿತ್ತಿಯ ಬಾಯಿ ಕೆಣಕಬೇಡ ಬಗಳೊ ನಾಯಿ ಬಡಿಯಬೇಡ
ಹಲ್ಲಿರುವ ತನಕ ಊಟ ಕಣ್ಣಿರುವ ತನಕ ನೋಟ.
ಆಗ ಬಾ ಈಗ ಬಾ ಹೋಗಿ ಬಾ ಅನ್ನದೆ ಕೊಡುವ ತ್ಯಾಗವಾಗು
ಕೋತಿ ಮೊಸರು ಕುಡಿದು ಮೇಕೆ ಬಾಯಿಗೆ ಒರೆಸಿತಂತೆ
ತಾ ಕಳ್ಳೆ ಪರರ ನಂಬಳು, ಹಾದರಗಿತ್ತಿ ಗಂಡನ ನಂಬಳು
ಎತ್ತು ಏರಿಗೆಳೀತು, ಕೋಣ ನೀರಿಗೆಳೀತು.
ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ
ಬೇಡಿದರೆ ಇಲ್ಲ ಅನ್ನೋದ್ ಕಷ್ಟ ನೀಡುವರ ಬೇಡ ಅನ್ನೋದ್ ಕಷ್ಟ
ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು
ಸ್ವರ್ಗದಲ್ಲಿ ಸೇವೆಗೈಯುವುದಕ್ಕಿಂತ ನರಕದಲ್ಲಿ ಆಳುವುದೇ ಲೇಸು.
ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ
ಮಂಡಕ್ಕಿ ತಿಂದ ಮಗ ಮದ್ದಾನೆ ತರುಬಿದ ಮೃಷ್ಟಾನ್ನ ತಿಂದ ಮಗ ನೊಣ ಝಾಡಿಸಿದ
ಬಾವಿಯ ಬಾಯನ್ನು ಮುಚ್ಚಬಹುದು, ಜನಗಳ ಬಾಯನ್ನಲ್ಲ.
ಜ್ಞಾನಿ ಬಂದರೆ ಗೌರವಿಸು, ಹೀನ ಬಂದರೆ ತ್ಯಜಿಸು.
ಉರಿಯೋ ಗಾಯಕ್ಕೆ ಉಪ್ಪು ಸವರಿದಂತೆ
ಸಾಲ ಕೊಳ್ಳುವಾಗ ಒಂದು ರಾಗ, ಸಾಲ ಹೊಳ್ಳಿ ಕೊಡುವಾಗ ನಾನಾ ರಾಗ
ತಿಪ್ಪೇ ಮೇಲಣ ಅರಿವೆಯಾದರೂ ಕಾಲಿಗೆ ಕಟ್ಟಿದರೆ ಬಿರುದು
ಮಾಡಿದರೆ ಮನೆ ; ಹೂಡಿದರೆ ಒಲೆ
ಅಳಿದೂರಿಗೆ ಉಳಿದವನೇ ಗೌಡ
ಭೋಗಿ ಭೋಗದಲ್ಲಿ ನೆರೆದು ರೋಗಿಯಾದ, ಯೋಗಿ ಯೋಗದಲ್ಲಿ ನೆರೆದು ಯೋಗವಾದ
ಬೆಂದ ಮನೆಗೆ ಹಿರಿದದ್ದೇ ಲಾಭ
ಒಳ್ಳೊಳ್ಳೆಯವರು ಉಳ್ಳಾಡುವಾಗ ಗುಳ್ಳವ್ವ ಪಲ್ಲಕ್ಕಿ ಬೇಡಿದಳಂತೆ
ಆಫೀಸಿನಲ್ಲಿ ಆಫೀಸರ್, ಮನೆಯಲ್ಲಿ ಕುಕ್ಕರ್. .
ಹೂವಿನಿಂದ ನಾರಿಗೂ ಸ್ವರ್ಗ
ಕಾಗೆಗೆ ಯಜಮಾನನ ಸ್ಥಾನ ಕೊಟ್ಟರೆ ಮನೆ ತುಂಬಾ ಪಿಷ್ಟ.
ತಾನುಂಟೋ? ಮೂರು ಲೋಕವುಂಟೋ?
ಇಡೀ ಮುಳುಗಿದರೂ ಮೂಗು ಮೇಲೆ
ತಲೆ ಬಲಿಯಿತು ಅಂತ ಕಲ್ಲಿಗೆ ಹಾಯಬಾರದು
ಹಂಚು ಕಾಣದ ಮುದುಕಿ ಕಂಚು ಕಂಡರೆ ಮೂರು ಸಲ ಬೆಳಗಿ ನೋಡಿದ್ದಳು
ಇದ್ದುದ ಉಣ್ಣದವನ ಬಾಯಾಗೆ ಕಡೆಗೆ ಮಣ್ಣು ಬಿತ್ತು
ಇಕ್ಕೇರಿ ತನಕ ಬಳಗ, ಮಾನ ಮುಚ್ಚಲಿಕ್ಕೆ ಅರಿವೆ ಇಲ್ಲ
ಇಲಿ ಬಂತು ಎಂದರೆ ಹುಲಿ ಬಂತು ಎಂದರು
ಗೆಳೆತನದಲ್ಲಿ ಮೋಸಮಾಡಬೇಡ.
ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತಿತ್ತು
ತಾರೇಮರದ ಕಾಯಾದರೂ ಕರೆದರೆ ಬಂದೀತೇ
ಹರುವಯ್ಯನ ಎಲೆ ಇಂಬ, ಒಕ್ಕಲಿಗನ ಮನೆ ಇಂಬ
ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ
ಉತ್ತುಬಿತ್ತಿದ ಭತ್ತವಾದರೂ ಮಳೆಯಿಲ್ಲದೆ ಮೊಳೆಯದು
ಹಂಗು ತೊರೆದ ಮೇಲೆ ಲಿಂಗದ ಪರಿವೆ ಏನು
ಮಾಡಿದ್ದುಣ್ಣೋ ಮಹರಾಯ
ಹಪ್ಪಳಕ್ಕೆ ಊರಿತು ; ಸಂಡಿಗೆಗೆ ಏರಿತು.
ಕಳ್ಳನ ಹೆ೦ಡತಿ ಎ೦ದಿದ್ದರೂ ಮು೦ಡೆ.
ಮಕ ನೋಡಿ ಮಾರು ಹೋದ, ಗುಣ ನೋಡಿ ದೂರ ಹೋದ
ಆಪತ್ತಿಗಾದವನೇ ನೆಂಟ
ಆಟ ಕೆಟ್ಟರೆ ದೀವಟಿಗೆಯವನ ಸುತ್ತ
ಹೊಸದರಲ್ಲಿ ಅಗಸ ಗೋಣಿಯನ್ನು ಎತ್ತಿ ಎತ್ತಿ ಒಗೆದನಂತೆ
ಸೊನ್ನೆಯಿಂದ ಸೊನ್ನೆಗೆ
ಎಲ್ಲರೂ ಪಾಲಕೀಲಿ ಕೂತರೆ ಹೊರೋರು ಯಾರು
ದೈವ ಒಲ್ಲದೆ ಆಗೋದಿಲ್ಲ ದೈವ ಒಲಿದರೆ ಹೋಗೋದಿಲ್ಲ
ಹೊಸ ಡಾಕ್ಟರ್‌ಗಿಂತ ಹಳೇ ಕಾಂಪೌಂಡರ್ ವಾಸಿ
ಬಾಳಿಬದುಕಿದವ ಕಲಿ(=ವಿದ್ಯೆ)ಕಲಿತ, ಬಾಳಲಾರದವ ಪಾಠ ಕಲಿತ
ಬಸವನ ಹಿಂದೆ ಬಾಲ,ಸೂಜಿ ಹಿಂದೆ ದಾರ
ಇಬ್ಬರು ಒಪ್ತಾರೆ ಮೂವರು ವಿರೋಧಿಸುತ್ತಾರೆ ಎಂದಂತೆ!
ಕಷ್ಟ ಪಟ್ಟರೆ ಫಲವುಂಟು
ಮು೦ಡೆಯ ಮದುವೆಯಲ್ಲಿ ಉ೦ಡೋನೆ ಜಾಣ.
ಪಾಲಿಗೆ ಬಂದದ್ದು ಪಂಚಾಮೃತ
ಆಳ್ ಮೇಲ್ ಆಳ್ ಬಿದ್ದು ಗೋಣು ಬರಿದಾಯ್ತು
ಮಾರಿ ಕಣ್ಣು ಹೋರಿ ಮ್ಯಾಲೆ, ಕಟುಕನ್ ಕಣ್ಣು ಕುರಿ ಮ್ಯಾಲೆ.
ಕಳೆದುಕೊಂಡ ವಸ್ತುವನ್ನು ಕಳೆದುಹೋದ ಜಾಗದಲ್ಲೇ ಹುಡುಕು
ತೀರ್ಥಕ್ಕೆ ಥಂಡಿ, ಪ್ರಸಾದಕ್ಕೆ ಅಜೀರ್ಣ , ಮಂಗಳಾರತಿಗೆ ಉಷ್ಣ (ನಾಜೂಕು ದೇಹಸ್ಥಿತಿ)
ಇಕ್ಕುವಳು ನಮ್ಮವಳಾದ್ರೆ ಕೊಟ್ಟಿಗೆಯಲ್ಲಾದರೂ ಉಣಲಿಕ್ಕು
ತಾಪತ್ರಯದವನಿಗೆ ತಾಪೆ/ಚಾಪೆ ಯಾಕೆ
ಜನ ಮರುಳೋ ಜಾತ್ರೆ ಮರುಳೋ
ಆರಕ್ಕೆ ಏರಲಿಲ್ಲ ಮೂರಕ್ಕೆ ಇಳಿಯಲಿಲ್ಲ
ಜಾತ್ರೆಯೊಟ್ಟಿಗೆ ಗೋವಿಂದು
ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು
ತಾನಾಗಿ ಬೀಳುವ ಮರಕ್ಕೆ ಕೊಡಲಿ ಏಟು ಹಾಕಿದ ಹಾಗೆ .
ಸೆಟ್ಟಿ ಸಾಲ ಸತ್ತ ಮೇಲೆ ತಿಳೀತು
ಆರು ದೋಸೆ ಕೊಟ್ರೆ ಅತ್ತೆ ಕಡೆ, ಮೂರು ದೋಸೆ ಕೊಟ್ರೆ ಸೊಸೆ ಕಡೆ
ತುತ್ತಿಗೆ ತತ್ವಾರವಾದರೂ ನೆತ್ತಿತುಂಬಾ ನಾಮಕ್ಕೆ ಕಡಿಮೆ ಇಲ್ಲ
ಒಡೆದ ಹಾಲು ಹೆಪ್ಪಿಗೆ ಬಂದೀತೇ
ಮೂಗಿಗಿಂತ ಮೂಗುತಿ ಭಾರ
ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು
ತಮ್ಮ ಕಲಹಕ್ಕೆ ಐವರು , ಪರರ ಕಲಹಕ್ಕೆ ನೂರಾ ಐವರು.
ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ
ಕೊಂಕಣ ಸುತ್ತಿ ಮೈಲಾರಕ್ಕೆ ಬಂದರು
ಉಚ್ಚೆ ಕುಡಿದರೂ ತನ್ನಿಚ್ಚೇಲಿರಬೇಕು
ಹೆಂಡ ಕುಡಿಯುವ ದೇವರಿಗೆ ಹೇ.. ತಿನ್ನುವ ಪೂಜಾರಿ
ಹಾಳೂರಿಗೆ ಉಳಿದೋನೇ ಗೌಡ, ಬೆಂಗಳೂರಿಗೆ ಬಂದೋನೇ ಬಹದ್ದೂರ
ತರುಬು ಇದ್ದರೆ ಹರುಬು ನಿಂತೀತೇ
ಹೊಸ ವೈದ್ಯನಿಗಿಂತ ಹಳೆ ರೋಗಿಯೇ ಮೇಲು
ಕತ್ತೆಯಾಗಬೇಡ ಕಾಗೆಯಾಗು.
ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆಯೇ ಮೇಲು.
ಓದಿದ ಓದೆಲ್ಲ ಮೇದ ಕಬ್ಬಿನ ಹಿಪ್ಪೆ,
ಕು೦ಬಳಕಾಯಿ ಕಳ್ಳ ಅ೦ದರೆ ಹೆಗಲು ಮುಟ್ಟಿ ನೋಡಿಕೊ೦ಡನ೦ತೆ.
ತಪಸ್ಸು ಇದ್ದವನೇ ಗಭಸ್ತಿ (=ಕಾಂತಿ) ಉಳ್ಳವನು
ತಣ್ಣೀರು ಆದರೂ ಪುಣ್ಯದಿಂದ ದೊರಕಬೇಕು
ಮರ ಕಡಿದು ಮೈಮೇಲೆ ಹಾಕಿಕೊಂಡ್ರಂತ
ಶರಣರ ಬದುಕನ್ನು ಅವರ ಮರಣದಲ್ಲಿ ನೋಡು
ಕಣ್ಣಿಗೆ ಕಂಡದ್ದೆಲ್ಲಾ ನುಣ್ಣಗಿರುವುದಿಲ್ಲ.
ಬೆಕ್ಕು ಕಣ್ಮುಚ್ಚಿ ಹಾಳು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ?
ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರುವನೇ ?
ಅಣ್ಣ ಹುಸಿಯಾದರೂ ತಮ್ಮ ತಂಪು ತರದೇ ಹೋಗಲ್ಲ. (ಅಣ್ಣ ಪುನರ್ವಸು ಮಳೆ, ತಮ್ಮ ಪುಷ್ಯ ಮಳೆ)
ಅರಣೆ (= ಹಾವು ರಾಣಿ) ಕಡಿದರೆ ಭರಣಿ (=ಪಿಂಗಾಣಿ ಮಡಿಕೆ) ಮದ್ದು ಸಾಲದು
ಹೆಣ್ಣು ಚಂದ,ಕಣ್ಣು ಕುರುಡು
ಹೆಣ್ಣು ಚಂದ, ಕಣ್ಣು ಕುರುಡು
ಅಂಗೈ ತೋರಿಸಿ ಅವಲಕ್ಷಣ ಅಂತ ಅನ್ನಿಸಿಕೊಂಡರಂತೆ
ನಾವೂ ನೀವೂ ನೆಂಟರು , ಗಂತಿಗೆ ಮಾತ್ರ ಕೈ ಹಚ್ಚಬೇಡಿ.
ಸುಳ್ಳನ ಮಾತು ಕೆಸರೊಳಗೆ ಮುಳ್ಳು ತುಳಿದಂತೆ
ಮಾಟ ಮಾಡಿದೋನ ಮನೆ ಹಾಳು.
ಅಳಿವುದೇ ಕಾಯ ಉಳಿವುದೇ ಕೀರ್ತಿ
ತಾಳಿದವ ಬಾಳ್ಯಾನು
ಸಾಯ್ತಿನಿ ಸಾಯ್ತಿನಿ ಅಂತ ಸಾವಿರ ಕೋಳಿ ತಿಂದನಂತೆ
ಆಳಿದ ದೊರೆ ಹುಸಿದರೆ ಅಲ್ಲಿಂದ ಹೇಳದೆ ಹೋಗಬೇಕು
ಎತ್ತಿಗೆ ಜ್ವರ ಬಂದ್ರೆ, ಎಮ್ಮೆಗೆ ಬರೆ ಎಳೆದರಂತೆ
ಆತುರಗಾರನಿಗೆ ಬುದ್ಧಿ ಮಟ್ಟ.
ಗಾಳಿಯಿಂದ ಹಾರುವುದೋ ತಿರೋಕಲ್ಲು ಮಳೇಲಿ ಬಿದ್ದರೆ ಮರಕ್ಕಿಂತಾ ಕಡೆಯಾದೀತೇ
ಹಿರೀಅಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ
ರಾಮಾಯ ಸ್ವಸ್ತಿ, ರಾವಣಾಯ ಸ್ವಸ್ತಿ .
ಕೈಯೆತ್ತಿ ಕೊಡಲಿಲ್ಲ ಮೈಯ್ಯ ದಂಡಿಸಲಿಲ್ಲ ಪುಣ್ಯದ ಪಾಲು ನನಗಿರಲಿ ಅಂದ
ಊಟಕ್ಕೇಳೋ ಗು೦ಡ ಅ೦ದ್ರೆ ಯಾವಕ್ಕಿ ಬೇಯಿಸಿದ್ದೀ ಅ೦ದ.
ಕಬ್ಬು ಡೊಂಕಾದ್ರೆ ಸವಿ ಡೊಂಕೇ
ಬಲ್ಲಿದರೊಡನೆ ಸೆಣಸಿ ಮಾತಾಡಿದರೆ ಅಲ್ಲೇ ಬಂತು ಕೇಡು
ಲಲನೆಯರ ಒಲುಮೆ ತೊಲಗಿದರೆ ಇಲ್ಲ
ಬೇವು ಕಾಗೆಗೆ ಇಷ್ಟ , ಮಾವು ಕೋಗಿಲೆಗೆ ಇಷ್ಟ
ತರಲೆ ಕೇಳುವವ ಮರುಳಗಿಂತ ಕಡೆ
ಮೂರು ವರ್ಷಕ್ಕೆ ಬಂದಿದ್ದು ಮೂವತ್ತು ವರ್ಷಕ್ಕೆ ಬಂತು
ಹೆಣು ಮಕ್ಕಳು ಇದ್ದ ಮನೆ ಕನ್ನಡಿಯಂಗೆ
ಏರಿ ಮ್ಯಾಗಿನ ಪಂಜು ನೀರೊಳಗೆ ಉರಿಯಿತು
ಅಪ್ಪಂತೋನಿಗೆ ಇಪ್ಪತ್ತೊಂದು ಕಾಯಿಲೆ
ಹಾಲು ಕಾಯಿಸ್ಕೊಂಡು ನಾನಿದ್ದೆ ಹಲ್ಲು ಕಿರ‍್ಕೊಂಡು ನೀ ಬಂದೆ.
ಪಾಪ ಅಂದ್ರೆ ಕರ್ಮ ಬರ್ತದೆ
ಬಂದ ಅಥಿತಿಗೆ ಅನ್ನ ಇಕ್ಕದ ಬದುಕು ಯಾತಕ್ಕು ಬೇಡ
ಇಲಿ ಹೆಚ್ಚಿದವೆಂದು, ಮನೆಗೆ ಉರಿ ಇಡ ಬಾರದು
ಮಿಂದರೆ ಮೈಯ ಕೊಳೆ ಹೋಯ್ತು
ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ
ಹರಿದಿದ್ದೇ ಹಳ್ಳ ನಿಂತಿದ್ದೇ ತೀರ್ಥ
ನೆಂಟರಿಗೆ ದೂರ ; ನೀರಿಗೆ ಹತ್ತಿರ
ತಾನೂ ತಿನ್ನ, ಪರರಿಗೂ ಕೊಡ.
ನಮಾಜು ಮಾಡಲು ಹೋಗಿ ಮಸೀದಿ ಕೆಡವಿಕೊಂಡ ಹಾಗೆ
ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು.
ಇಲ್ಲದ ಬದುಕು ಮಾಡಿ ಇಲಿಗೆ ಚಣ್ಣ ಹೊಲಿಸಿದರು
ತಾಳಲಾರದ ವಿರಹ ತಿಣಕಿದರೆ ಹೋದೀತೇ?
ಅರವಲ್ಲದ್ದು (ಧರ್ಮವಲ್ಲದ್ದು) ಮಾಡಿದರೂ ತರವಲ್ಲದ್ದು ಮಾಡಬಾರದು
ಅತ್ಯಾಶ ಬಹುದುಃಖಾಯ ಅತಿ ಸರ್ವತ್ರ ವರ್ಜಯೇತ್
ಸೀರಿಗೇಡಿಗೆ ಸೀರೆ ಉಡಿಸಿದರೆ ಕೆರಿ ದಂಡಿ ಮ್ಯಾಗ ನಿಂತು ಕೇಕೆ ಹಾಕಿದಳು.
ನಾಯಿ ಬಾಲಕ್ಕೆ ದಬ್ಬೆ ಕಟ್ಟಿದ ಹಾಗೆ
ತಿರಿತಿರಿಗಿ ಗೋಕರ್ಣಕ್ಕೆ ಹೋಗಿ ತುರಕನಿಂದ ದಬ್ಬೆ ತಿಂದ
ಊರು ಸೂರೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದರಂತೆ
ಒಕ್ಕಣ್ಣ ತನಗೆ ಹತ್ತು ಕಣ್ಣು ಅಂತಿದ್ನಂತೆ.
ಹೆಣ್ಣಿದ್ದ ಮನೆಗೆ ಎಡತಾಕಿ ಅಣ್ಣಯ್ಯ ಮಣ್ಣಾಗಿ ಹೋದ
ಊಟಕ್ಕಿಲ್ಲದ ಉಪ್ಪಿನಕಾಯಿ …ಕ್ಕೆ ಸಮಾನ
ಬಾಯಿ ಬಿಟ್ಟರೆ ಬಣ್ಣಗೇಡು
ಕಜ್ಜಿ ಹೋದರೂ ಕಡಿತ ಹೋಗಲಿಲ್ಲ
ಹಾಕೋದು ಬಿತ್ತೋದು ನನ್ನಿಚ್ಛೆ; ಆಗೋದು ಹೋಗೋದು ದೇವರಿಚ್ಛೆ
ತಾಯಿ ಮಾಡಿದ ಹೊಟ್ಟೆ ;ಊರು ಮಾಡಿದ ಕೊಳಗ
ತಾಯಿಯ೦ತೆ ಮಗಳು ನೂಲಿನ೦ತೆ ಸೀರೆ.
ಹಾಡ್ತಾ ಹಾಡ್ತಾ ರಾಗ; ಉಗುಳ್ತಾ ಉಗುಳ್ತಾ ರೋಗ
ದಿನಾ ಸಾಯೋರಿಗೆ ಅಳೋರ್ ‍ಯಾರು?
ಹುಣ್ಣಿಮೆ ಬರುವನಕ ಅಮಾಸೆ ನಿಲ್ಲದು, ಅಮಾಸೆ ಬರುವನಕ ಹುಣ್ಣಿಮೆ ನಿಲ್ಲದು
ಬಡವ ನೀ ಮಡಗಿದ ಹಾಗಿರು
ಕದ ತಿನ್ನೋವನಿಗೆ ಹಪ್ಪಳ ಈಡಲ್ಲ
ತಾಯಿಗೆ ಕುಲವಿದ್ದರಷ್ಟೇ ಮಗಳಿಗೂ ಕುಲ
ಎಲ್ಲವೂ ತಾನಗ ಬಲ್ಲರೆ ಅದುವೇ ಯೋಗ
ಹೆ೦ಗಸಿನ ಬುದ್ಧಿ ಮೊಣಕಾಲ ಕೆಳಗೆ
ಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ಒಡೆಯುವುದಿಲ್ಲ.
ಹರಿದಿದ್ದೇ ಹಳ್ಳ, ನಿಂತಿದ್ದೇ ತೀರ್ಥ.
ಹಾವು ಸಾಯಬಾರದು, ಕೋಲು ಮುರೀಬಾರದು.
ಕೀರ್ತಿಯೇ ಕೈಲಾಸ ಅಪಕೀರ್ತಿಯೇ ನರಕ
ಗಾಯದ ಮೇಲೆ ಬರೆ ಎಳೆದಂತೆ
ಉಂಡ ಮನೆ ಜಂತೆ ಎಣಿಸಬಾರದು
ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ
ಸುಳ್ಳು ಹೇಳುವುದಕ್ಕಿಂತ ಸುಮ್ಮನಿರುವುದು ಲೇಸು.
ನರಿ ಮದುವೇಲಿ ಕತ್ತೇ ಪಾರುಪತ್ಯ (ಆಡಳಿತ, ಪೌರೋಹಿತ್ಯ)
ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು ?
ಇಟ್ಟ ಶಾಪ ಕೊಟ್ಟವನಿಗೆ ತಟ್ಟೀತು
ಊರು ಸುಟ್ಟರೂ ಹನುಮ೦ತರಾಯ ಹೊರಗೆ.
ಹಾಲು ಕುಡಿದ ಮಕ್ಕಳೇ ಬದುಕಲಿಲ್ಲ ವಿಷ ಕುಡಿದ ಮಕ್ಕಳು ಬದುಕ್ಯಾರೆ
ಬೇಲಿನೆ ಎದ್ದು ಹೊಲ ಮೇಯಿತಂತೆ
ಭಾರವಾದ ಪಾಪಕ್ಕೆ ಘೋರವಾದ ನರಕ.
ಆನೆ ಹೋದದ್ದು ದಾರಿ ಹಾವು ಹರಿದದ್ದು ಅಡ್ಡದಾರಿ
ತಾ ಮಾಡಿದ್ದು ಉತ್ತಮ, ಮಗ ಮಾಡಿದ್ದು ಮಧ್ಯಮ, ಆಳು ಮಾಡಿದ್ದು ಹಾಳು
ಒಂದು ಒಳ್ಳೇ ಮಾತಿಗೆ ಸುಳ್ಳೇ ಪ್ರಧಾನ
ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು
ನಾಯಿ ಮೊಲೇಲಿ ಖಂಡುಗ ಹಾಲಿದ್ದರೇನು, ದೇವರಿಗಿಲ್ಲ ದಿಂಡರಿಗಿಲ್ಲ
ತಲೆ ಚೆನ್ನಾಗಿದ್ದರೆ ಮುಂಡಾಸು ನೂರು ಕಟ್ಟಬಹುದು
ತಾ ಬಲವೋ ಜಗ ಬಲವೋ
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
ತನಗೆ ಇಲ್ಲದ ಮಾರಿ ತಮ್ಮಡಿಗೆ (ತಮ್ಮಡಯ್ಯನಿಗೆ) ವರಾ ಕೊಟ್ಟೀತೇ?
ಹ೦ಪೆಗೆ ಹೋಗದಿದ್ದರೆ ಸ೦ಪಿಗೆ ನೋಡಲಿಲ್ಲವೇ?
ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರ೦ತೆ.
ಬಲ್ಲವನೇ ಬಲ್ಲ ಬೆಲ್ಲದ ರುಚಿಯ
ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.
ಏತಿ ಅಂದರೆ ಪ್ರೇತಿ
ಇತರರ ಕಣ್ಣಿನ ಕಸ ಕಾಣುವುದು, ತನ್ನ ಕಣ್ಣಿನ ಕಸ ಕಾಣುವುದಿಲ್ಲ.
ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ
ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೊ
ಠಕ್ಕು ಇರುವವನಿಗೆ ಠಿಕಾಣಿ ಸಿಗದು.
ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
ಆರಕ್ಕೆ ಹೆಚ್ಚಿಲ್ಲ; ಮೂರಕ್ಕೆ ಕಡಿಮೆಯಿಲ್ಲ
ಚಿಗರೆಲೆ ಹಾಕ್‍ಬೇಕು ಕಳಿಯಡ್ಕೆ ಮೆಲ್‍ಬೇಕು ಸಿರ್‌ಸ್‌ದಾರ‍್ನ ಕೂಡ್‍ಬೇಕು ಸೀರಂಗ್ ಪಟ್ನ ಸೇರ್ ಬೇಕು.
ಗಾಳಿ ಬಂದಾಗ ತೂರಿಕೊ, ಧಾರಣೆ ಬಂದಾಗ ಮಾರಿಕೊ
ಇಬ್ಬರ ನ್ಯಾಯ, ಮೂರನೇಯವನಿಗೆ ಆದಾಯ
ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ
ಸಡಗರದಲ್ಲಿ ಮದುವೆ ಮಾಡಿ ಈ ಹೆಣ್ಣು ಯಾರು ಅಂದಳಂತೆ ಅತ್ತೆ
ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು
ಸಂತೆ ಕಟ್ಟೋಕು ಮೊದಲೇ ಸೇರಿದರು ಗಂಟು ಕಳ್ಳರು
ತರಲಿಲ್ಲ ಬರಲಿಲ್ಲ ಬರ ಹ್ಯಾಗೆ ಹಿಂಗೀತು
ಮಗೂನೂ ಚಿವುಟಿ ತೊಟ್ಟಿಲು ತೂಗಿದ ಹಾಗೆ.
ಉಪ್ಪ ತಿಂದ ಮೇಲೆ ನೀರು ಕುಡಿಯಲೇ ಬೆಕು
ಅನ್ನ ಇಕ್ಕಿ ಸಾಕು ಅನ್ನಿಸ ಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸೋಕಾಗಲ್ಲ
ಸಗಣಿಯವನ ಸರಸಕ್ಕಿಂತ, ಗಂಧದವನ ಗುದ್ದಾಟ ಮೇಲು
ಗೋರ್ಕಲ್ಲ ಮೇಲೆ ನೀರು ಸುರಿದ೦ತೆ.
ಅರಿತು ಮಾಡದ ದಾನ ತೆರೆದು ನೋಡದ ಕಣ್ಣಂತೆ
ಗಾಯದ ಮೇಲೆ ಬರೆ ಎಳೆದ ಹಾಗೆ.
ಆಕಳು ಕಪ್ಪಾದ್ರೆ ಹಾಲು ಕಪ್ಪೇನು
ಸಗಣಿಯವನೊಡನೆ ಸ್ನೇಹಕ್ಕಿಂತ ಗಂಧದವನ ಜೊತೆ ಗುದ್ದಾಟ ಮೇಲು
ತಿಪ್ಪಯ್ಯಗೆ ಸೂಜಿ ಮೇಲು ಕಳ್ಳಗೆ ಬಾಯಿ ಮೇಲು
ಇರೋ ಮೂವರಲ್ಲಿ ಕದ್ದೋರು ಯಾರು ?
ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು
ಲಿಂಗ ಹರಿದ ಮೇಲೆ ಜಂಗಮನ ಹಂಗೇನು
ಸಂದೀಲಿ ಸಮಾರಾಧನೆ
ಆಕಳ ಹೊಟ್ಟೆಯಲ್ಲಿ ಅಚ್ಚೇರು ಬ೦ಗಾರ.
ಮಾಡೋದು ದುರಾಚಾರ, ಮನೆ ಮುಂದೆ ಬೃಂದಾವನ
ಬೆಳ್ಳಯ್ಯ ಕಾಕಾ ಅರಿವಯ್ಯ ಮೂಕ
ರಸವಳ್ಳಿ ಹೆಣ್ಣು ಒಲಿವಂತೆ ಮಾಡುವುದು ಎಳ್ಳ ತಿಂದ ಋಣ
ದುಡ್ಡೇ ದೊಡ್ಡಪ್ಪ,ಬುದ್ಧಿ ಅದರಪ್ಪ
ತಾಳೆಮರ ಉದ್ದವಾದರೆ ಕೋಳಿಗೆ ಬಂದದ್ದೇನು
ಒಳ್ಳೇ ರಸವಳ್ಳಿ ಕಳ್ಳೀಗಿಡವನ್ನ ಹಬ್ಬಿತು
ಊರಿಗೆ ಉಪಕಾರಿ, ಮನೆಗೆ ಮಾರಿ
ಸಂತೆ ಸೇರೋಕೆ ಮೊದಲು ಗಂಟು ಕಳ್ಳರು ಸೇರಿದರು
ಮಾತು ಬೆಳ್ಳಿ; ಮೌನ ಬಂಗಾರ
ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ
ಕಡು ಕೋಪ ಬಂದಾಗ ತಡಕೊಂಡವನೇ ಜಾಣ
ಕಚ್ಚೋ ನಾಯಿ ಬೊಗಳುವುದಿಲ್ಲ
ಒಪ್ಪವಿಲ್ಲದವಳ ನಗೆ ನುಡಿ ನೋಟ ಎಂದೂ ಸಪ್ಪಗೆ
ಮಾತು ಬೆಳ್ಳಿ, ಮೌನ ಬ೦ಗಾರ.
ಚಾಪೆ ಕೆಳಗೆ ತೂರಿದರೆ ರಂಗೋಲಿ ಕೆಳಗೆ ತೂರು.
ಸಜ್ಜನರ ಮಾತು ಸಿಹಿ, ದುರ್ಜನರ ತುತ್ತು ಕಹಿ.
ಮೊಸರ ಕಡೆದರೆ ಬೆಣ್ಣೆ ಒಸೆದು ಬಂತು
ಹೆಣ್ಣಿಗೆ ರಸಪೂರಿ ಹಣ್ಣಿಗೆ ಮನ ಸೋಲದವರಿಲ್ಲ
ಕೈಗೆ ಬಂದ ತುತ್ತು ಬಾಯಿಗೆ ಇಲ್ಲ
ಅಗ್ಗದ ಮಾಲು;ಮುಗ್ಗಿದ ಜೋಳ
ತಗ್ಗು ದವಸಕ್ಕಾಗಿ ಹಗ್ಗ ಕೊಂಡು ಕೊಂಡ
ಬಿಡುಕು ಮಾತಿಗೆ ಮಾಡಿಕೊಳ್ಳದಿರು ಕೆಡುಕು.
ಅಪ್ಪಂಥೋನಿಗೆ ಇಪ್ಪಂತ್ತೊಂದು ಕಾಯಿಲೆ
ಕೊಂದ ಪಾಪ ತಿಂದು ಪರಿಹಾರ (=ಕೊಂದ ಪಾಪ/ಕರ್ಮ ತನಗೆ ಅಂಟಿಕೊಂಡು ಅದನ್ನು ತೊಡೆಯುವುದಕ್ಕೆ ಕಷ್ಟ ಅನುಭವಿಸಬೇಕಾಗುತ್ತದೆ)
ಸಂಕಟ ಬಂದಾಗ ವೆಂಕಟರಮಣ
ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ
ಚೌಲದಾಗ ದೌಲು ಮಾಡು
ರ೦ಗನ ಮು೦ದೆ ಸಿ೦ಗನೇ ? ಸಿ೦ಗನ ಮು೦ದೆ ಮ೦ಗನೇ ?
ಸಲುಗೆ ಕೊಟ್ಟರೆ ಸಾಕೂ ಹೆಗ್ಗಣವೂ ಸಹ ಏರುವುದು ಹೆಗಲಿಗೆ.
ಜಿನ ಧರ್ಮವೇ ಜೀವಧರ್ಮ
ಕತ್ತೆಯ ಕಾಲು ಮುರಿದರೇನು ? ನಾಯಿಯ ಹಲ್ಲು ಮುರಿದರೇನು?
ಗ್ರಾಮ ಶಾ೦ತಿಗೆ ತಳವಾರತಲೆ ಬೋಳಿಸಿಕೊ೦ಡನ೦ತೆ.
ಕುಂತು ತಿಂದರೆ, ಕುಡಿಕೆ ಹೊನ್ನೂ ಸಾಲದು
ಮೊಂಡ ಮಾವನಿಗೊಬ್ಬ ಭಂಡ ಅಳಿಯ
ಸಂತೆ ಹೊತ್ತಿಗೆ ಮೂರು ಮೊಳ ನೇದ ಹಾಗೆ
ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬಂತು
ಇಟ್ಟುಕೊಂಡಾಕಿ ಇರೂತನ ಕಟ್ಟಿಕೊಂಡಾಕಿ ಕಡೀತನ
ಬೇಕೆಂಬುದು ಬಾಳು ಸಾಕೆಂಬುದು ಸಾವು
ಭಂಗಿ ರಸ ನೆತ್ತಿಗೇರಿ ಬಿಂಗಿಯಂತೆ ಆಡಿದ
ಕೋಣೆಯ ಕೂಸು ಕೊಳೆಯಿತು; ಓಣಿಯ ಕೂಸು ಬೆಳೆಯಿತು
ಕೂರೆಗೆ ಹೆದರಿ ಸೀರೆ ಬಿಚ್ಚೆಸೆದರು
ಅಕ್ಕ ಬರಬೇಕು ಅಕ್ಕಿ ಮುಗೀಬಾರದು
ವೇದ ಸುಳ್ಳಾದರೂ ಗಾದೆ ಸುಳ್ಳಾಗದು
ಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನು
ಇತ್ತಿತ್ತ ಬಾ ಅಂದ್ರೆ ಇದ್ದ ಮನೇನೂ ಕಿತ್ತುಕೊಂಡ
ಕೋಪ ಪಾಪ ತಂತು ಪಾಪ ತಾಪ ತಂತು
ಆಗರಕ್ಕೆ ಹೋಗಿ ನನ್ನ ಗಂಡ ಗೂಬೆ ತಂದ
ಮಕ್ಕಳ ಬಾಯಿಗೆ ಹಣ್ಣು ಕೊಟ್ಟು ಮಣ್ಣು ಬಿಡಿಸು.
ಉಂಡ ಮನೆ ಜಂತೆ ಎಣಿಸಬಾರದು,
ಹೇಮಗೇಡಿ ನೇಮ ಬೆಳಗಿದ ಭಂಗಿ
ತಟ್ಟು ಇದ್ದರ‍ೇ ತಟಾಯಿಸಿ ನಡದಾನು
ತಾ ಕಾಣದ ದೇವರು ಪೂಜಾರಿಗೆ ವರ ಕೊಟ್ಟೀತೇ?
ತಾಯಿ ಬೇಕು ಇಲ್ಲವೆ ಬಾಯಿ ಬೇಕು
ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ.
ಅಯ್ಯಾ ಎಂದರೆ ಸ್ವರ್ಗ; ಎಲವೋ ಎಂದರೆ ನರಕ
ಬಿರಿಯಾ ಉಂಡ ಬ್ರಾಹ್ಮಣ ಭಿಕ್ಷೆ ಬೇಡಿದ
ತಿನ್ನಲು, ಉಣ್ಣಲು ಇದ್ದರೆ ಯಾವತ್ತೂ ನೆಂಟರು.
ಬಂಧುಗಳಿಲ್ಲದಿರೊ ಬಡತನ ಎಂದಿಗೂ ಬೇಡ
ತಾ ನೊಂದಂತೆ ಬೇರೇರ ನೋವನ್ನೂ ಅರಿಯಬೇಕು
ಬಣ ಬಣ ಬೆಳಕು ಹರಿದಾಗ ಕತ್ತಲು
ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು
ಕುಲಗೇಡಿ ಮಗ ಹುಟ್ಟಿ ಕುಲಕ್ಕೇ ಮಸಿ ಬಳಿದ
ಕಯ್ಯಾರೆ ಮಾಡುವ ಧರ್ಮ ಲೇಸು
ಹೃದಯಶೂನ್ಯರ ಒಲವಿಗಿಂತ ಬಲ್ಲವರ ಕದನವೇ ಲೇಸು
ಪಾಪಿ ಧನ ಪ್ರಾಯಶ್ಚಿತ್ತಕ್ಕೆ
ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು.
ಲ೦ಘನ೦ ಪರಮೌಶಧ೦.
ತಾನು ಸಾಯಬೇಕು ಸ್ವರ್ಗಾ ಪಡೆಯಬೇಕು
ಹೆಡ್ಡಾಳಾದ್ರೂ ದೊಡ್ಡಾಳು ಮೇಲು
ಬಿಟ್ಟಿ ಬಂದದ್ದಾದರೆ ನನಗೂ ಇರಲಿ,ನಮ್ಮ ತಾತಂಗೂ ಇರಲಿ.
ಹೊಲಬನರಿತು ನುಡಿದ ಮಾತು ಫಲ ಪಕ್ವವಾದಂತೆ
ಶಿವಪೂಜೇಲಿ ಕರಡಿಗೆ ಬಿಟ್ಟ ಹಾಗೆ
ಮುಸುಕಿನೊಳಗೆ ಗುದ್ದಿಸಿಕೊಂಡಂತೆ
ಗೋವಿಂದ ಭಟ್ಟ ಬಾವೀಲಿ ಬಿದ್ದ ಇದ್ದವರು ಇದ್ದ ಹಾಗೆ
ದಾಕ್ಷಿಣ್ಯಕ್ಕೆ ಬಸಿರಾಗೋದು
ಅತಿ ಆಸೆ ಗತಿ ಕೇಡು
ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ
ಭಂಗಿ ದೇವರಿಗೆ ಹೆಂಡಗುಡುಕ ಪೂಜರಿ
ತಲೆಗೆಲ್ಲಾ ಒಂದೇ ಮಂತ್ರವಲ್ಲ
ದುಡಿಮೆಯೇ ದೇವರು
ಮಾತಿಗೆ ಸಾಯದೇ ಇದ್ದೋನೂ ಏಟಿಗೂ ಸಾಯುವುದಿಲ್ಲ.
ರೋಗಿ ಬಯಸಿದ್ದು ಹಾಲು-ಅನ್ನ ವೈದ್ಯ ಹೇಳಿದ್ದು ಹಾಲು-ಅನ್ನ
ಸಾಲಗಾರನ ಹೆಂಡತಿ ಶೋಕಿಮಾಡಿದರೇನು?
ಬೆರಳು ತೋರಿಸಿದರೆ ಹಸ್ತ ನು೦ಗಿದನ೦ತೆ.
ಅನ್ಯಾಯದಿಂದ ಗಳಿಸಿದ್ದು ಅಸಡ್ಡಾಳಾಗಿ ಹೋಯ್ತು
ಪರರ ಹಂಗಿಸಿ ಮಂಗ ಅನಿಸಿಕೊಂಡ
ಕುಡಿಯೋದು ಅ೦ಬಲಿ ಮುಕ್ಕಳಿಸೋದು ಪನ್ನೀರು.
ಮೆತ್ತಗಿದ್ರೆ ತುಳೀತಾರೆ, ಜೋರಾಗಿದ್ರೆ ಹೆದ್ರತಾರೆ.
ರಂಭೆಯಂಥ ಹೆಣ್ತೀನ ಬಿಟ್ಟು ದೊಂಬಿತಿಯ ಹಿಂದೆ ಹೋದ
ಎಂಜಲ ತಿಂದರೂ ಅಂಜದೆ ತಿನ್ನು
ತಕ್ರ (=ಮಜ್ಜಿಗೆ) ಶಕ್ರನಿಗೆ(=ಇಂದ್ರ) ಸಹಾ ದುರ್ಲಭ
ನೀನು ಮೊಳ ಬಿಟ್ಟರೆ,ನಾನು ಮಾರು ಬಿಡುತ್ತೇನೆ
ಕೋತಿ ಕಜ್ಜಾಯ ಹಂಚಿದ ಹಾಗೆ.
ಅಂದು ಬಾ ಅಂದ್ರೆ ಮಿಂದು ಬಂದ
ಉಪ್ಪು ತಿಂದ ಮ್ಯಾಲೆ ನೀರ ಕುಡಿಯಲೇಬೇಕು
ಆಟಕ್ಕುಂಟು,ಲೆಕ್ಕಕ್ಕಿಲ್ಲ
ಮನಸ್ಸಿಲ್ಲದವಳ ಒಡನಾಟ ಮಾತುಮಾತಿಗು ಬೇಸರ
ಅಗ್ನಿಗೆ ತಂಪುಂಟೆ, ವಿಷಕ್ಕೆ ರುಚಿಯುಂಟೆ, ದಾರಿಕೋರನಿಗೆ ಧರ್ಮವುಂಟೆ?
ಯಾರನ್ನ ನಂಬಿದರು ಆರೈದು ನಂಬಬೇಕು
ಬೀಳು ಭೂಮಿಗೆ ಬೀಜ ದಂಡ.
ಊರಿಗೆ ಬಂದ ನೀರೆ ನೀರಿಗೆ ಬಾರದಿರುತ್ತಾಳೆಯೇ?
ಅಪ್ಪನ್ನೇ ಅಪ್ಪ ಅನ್ನದೋನು, ಚಿಕ್ಕಪ್ಪನ್ನ ಅಪ್ಪಾ ಅಂತ ಕರೀತಾನಾ?
ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರು.
ಮಾತಿಂದಲೇ ನಗೆನುಡಿ ಮಾತಿಂದಲೇ ಹಗೆಕೊಲೆ
ತರವಲ್ಲದ ಮಾತು ಮರ ಏರಿದರೆ ಆದೀತೇ
ಕೀಟ ಸಣ್ಣದಾದರೂ ಕಾಟ ಬಹಳ.
ಕರಣಗಳ ತಡೆದು ನಿಲಬಾರದು
ಹೆಂಡ್ರನ್ನ ಸಸಾರ ಮಾಡಿದ್ರೆ ಸಂಸಾರ ನಿಸ್ಸಾರವಾಗ್ತದೆ
ಅಳೋ … ಮೇಲೆ ಗಳು ಬಿತ್ತು
ಅಕ್ಕಿಯ ಮೇಗಳ ಆಸೆ, ನೆಂಟರ ಮೇಗಳ ಬಯಕೆ
ಹುಟ್ಟು ಗುಣ ಸುಟ್ಟರೂ ಹೊಗೊದಿಲ್ಲ
ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.
ಸ್ವತಂತ್ರವೋ,ಸ್ವರ್ಗಲೋಕವೋ
ಧೈರ್ಯವಿದ್ದವನಿಗೆ ದೈವವೂ ಅನುಕೂಲ.
ಮಾಡಿದೋರ ಪಾಪ ಆಡಿದೋರ ಬಾಯಲ್ಲಿ
ತಕ್ಕಡಿ ಬಲ್ಲದೇ ಮನೆಯ ಬಡತನವ
ಬುದ್ಧಿ ಇದ್ದವನಲ್ಲಿ ಶ್ರದ್ಧೆ, ನಿದ್ದೆ ಬಾರದವನಲ್ಲಿ ವಿದ್ಯೆ.
ಬಟ್ಲು ಮುರಿದು ಕಂಚು ಮಾಡಿದ.
ಬೆಂದ ಮನೇಲಿ ಹಿರಿದದ್ದೇ ಲಾಭ
ತೇಗಿ ತೇಗಿ ಬೀಗಿ ಬಿದ್ದ ತಾಮ್ರದ ನಾಣ್ಯ
ಅಜ್ಜಿಗೆ ಅರಿವೆ ಚಿ೦ತೆ, ಮಗಳಿಗೆ ಗ೦ಡನ ಚಿ೦ತೆ.
ಉಂಬಾಗ ಉಡುವಾಗ ಊರೆಲ್ಲ ನೆಂಟರು
ಬಿಮ್ಮಗಿದ್ದಾಗ ಹಮ್ಮು, ಬಿಮ್ಮು ತಪ್ಪಿದಾಗ ದಮ್ಮು
ಅರಸು ಆದೀಕ ತಿಂದ, ಪರದಾನಿ ಹೂಸು ಕುಡಿದ
ಇಚ್ಚೆಯ ಅರಿತು ಕೊಟ್ಟ ನುಚ್ಚೊಂದು ಮಾಣಿಕ್ಯ
ನಿಷ್ಠೆ ಇಲ್ಲದವನಿಗೆ ದೈವ ಬಟ್ಟಬಯಲು
ಹೂವಿನ ಜೊತೆ ದಾರ ಮುಡಿಯೇರಿತು
ಹುಣಿಸೆ ಮರ ಮುದಿಯಾದ್ರೂ ಕಾಯಿ ಹುಳಿ ಹೋಗಲ್ಲ
ಮದುವೆ ಸಂಭ್ರಮದಲ್ಲಿ ತಾಳಿ ಕಟ್ಟುವುದನ್ನೇ ಮರೆತಂತೆ.
ಬರೀ ಮಾತಾಡಿ ಬೈಯ್ಯಿಸಿಕೊಂಡ
ಆದರೆ ಒಂದಡಿಕೆ ಮರ, ಹೋದರೆ ಒಂದು ಗೋಟು.
ತಾನು ತಿಂಬೋದು ಪಲ್ಲೆ ಸೊಪ್ಪು ಹಿರೇ ಕುದರೆ ಚೇಷ್ಟೆ
ಗಂಡ-ಹೆಂಡಿರ ಜಗಳ ತಿಂದು ಮಲುಗೊ ವರೆಗೆ
ಎದ್ದವನು ಗೆದ್ದಾನು
ಗುಡ್ಡ ಕಡಿದು ಹಳ್ಳ ತುಂಬಿಸಿ ನೆಲ ಸಮ ಮಾಡಿದ ಹಾಗೆ
ಓಡಿ ಹೋಗೊಳು ಮೊಸರಿಗೆ ಹೆಪ್ಪು ಹಾಕ್ತಾಳ
ಸೇರಿಗೆ ಸವ್ವಾ ಸೇರು
ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ
ಕೋತಿಯಂಥೋನು ಕೆಣಕಿದ, ಮೂತಿಗೆ ಹೆಟ್ಟಿಸಿಕೊಂಡು ತಿಣಕಿದ
ವಿಶ್ವಾಸಿ ನೀನಾಗು, ಘಾತುಕಕ್ಕೆ ಬಗ್ಗದೆ ಮುನ್ನುಗ್ಗು.
ಹಸನಾದ ಮಾತಿಗೆ ಜೀವ ಬೆಸನಾಯ್ತು
ಕಂಡವರ ಕಂಡು ಕೈಕೊಂಡ ಕೆಲಸ ಕೆಂಡವಾಯ್ತು
ಬಡವರ ಕಣ್ಣೀರಿಗೆ ಕರುಣೆ ಬಂದೀತೆ ಬೆಣ್ಣೆಗೆ?
ರಾಮ ಅನ್ನೋ ಕಾಲದಲ್ಲಿ ರಾವಣ ಬುದ್ಧಿ
ಯೋಗ ಇದ್ದಷ್ಟೇ ಭೋಗ
ಹಣ ಇಲ್ದೋರು ಎದ್ದೂ ಬಿದ್ದಂಗೆ, ಗುಣ ಇಲ್ದೋರು ಇದ್ದೂ ಇಲ್ದಂಗೆ
ಮೇಲೆ ಬಿದ್ದು ಬಂದೋಳು ಮೂರು ಕಾಸಿಗೂ ಕಡೆ
ಹೊಟ್ಟೆ ಉರಿದು ಕೊಳ್ಳೋದು ಒಂದೇಯ, ಹೊಟ್ಟೆ ಇರಿದು ಕೊಳ್ಳೋದು ಒಂದೇಯ
ಕಾಯ ಕಮಲವೇ ಸೆಜ್ಜೆ ಜೀವ ರತುನವೇ ಜ್ಯೋತಿ
ಮದುವೆ ಮಡಿನೋಡು ಮನೆ ಕಟ್ಟಿ ನೋಡು
ಓದಿ ಓದಿ ಮರುಳಾದ ಕೂಚು ಭಟ್ಟ
ನನ್ನ ಮಗ ಎಂಟು ವರ್ಷಕ್ಕೆ ದಂಟು ಎಂದ
ತನ್ನ ಅಕ್ಕನ ಅರಿಯದವಳು ನೆರೆಮನೆ ಬೊಮ್ಮಕ್ಕನ ಬಲ್ಲಳೇ?
ಸಂಸಾರದಲ್ಲಿ ಸುಖವಿದೆ, ಬಾಳೆಂಬ ಬಂಧನದಲ್ಲಿ ಕಷ್ಟವಿದೆ.
ಜೀವ ಜೀವವ ತಿಂದು ಜೀವಿಸುತಿದೆ
ಹೆಂಡತಿಯಿಲ್ಲದ ಮನೆ ತಂತಿಯಿಲ್ಲದ ವೀಣೆ
ಆಡಿಕೊಳ್ಳೋರ ಮುಂದೆ ಎಡವಿ ಬಿದ್ದ ಹಾಗೆ
ತಿಳಿದ ಕಳ್ಳ ತಿರಿಗಿದರೂ ಬಿಡ
ನೆರಲೆ ಹಣ್ಣು ಬಲು ಕಪ್ಪು ತಿಂದು ನೋಡಿದರೆ ಬಲು ಸವಿ
ತಾಗದೆ ಬಾಗದು ಬಿಸಿಯಾಗದೆ ಬೆಣ್ಣೆ ಕರಗದು
ಕುಣಿಯಲಾರದವಳು ನೆಲ ಡೊಂಕು ಅಂದಳಂತೆ
ಮನೆಯೆಂಬ ಮರ ಮುರಿಯಬಾರದು, ಮನಸ್ಸೆಂಬ ಮಾರ್ಗ ಕತ್ತರಿಸಬಾರದು.
ಚಿಕ್ಕ ಮಡಿಕೆ ಚೊಕ್ಕ ಬೋಜನ
ಹುಟ್ಟಿದಾಗ ಬಂದದ್ದು ಹೂತಾಗ ಹೋದೀತೇನು
ಬಸವನ ಹಿಂದೆ ಬಾಲ, ಸೂಜಿ ಹಿಂದೆ ದಾರ
ಕಂಗಾಲಾದರೂ ಹಂಗಾಳಾಗಬಾರದು
ಕೆಟ್ಟ ಮೇಲೆ ಲೊಟ್ಟ
ಮಂತ್ರಕ್ಕಿಂತ ಉಗುಳೇ ಹೆಚ್ಚು.
ಕೋತಿಗೆ ಹೆಂಡ ಕುಡಿಸಿದಂತೆ
ಸಾವಿರ ಸಲ ಗೋವಿಂದ ಅಂದರು, ಒಬ್ಬ ದಾಸಯ್ಯನಿಗೆ ಭಿಕ್ಷೆ ನೀಡಲಿಲ್ಲ
ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ ಒಂದೇ
ತಿಗುಳಗೆ ತುತ್ತಿಗೆ ತತ್ವಾರವಾದರೂ ನೆತ್ತಿತುಂಬಾ ನಾಮಕ್ಕೆ ಕಡಿಮೆ ಇಲ್ಲ
ಚಿತ್ತದ ಕಳವಳ ನಿಲ್ಲಿಸಿದವರೇ ಉತ್ತಮರು
ನೂರು ಜನಿವಾರ ಒಟ್ಟಿಗಿರಬಹುದು, ನೂರು ಜಡೆ ಒಟ್ಟಿಗಿರುವುದಿಲ್ಲ.
ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಷ್ಟ.
ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ
ಬೇಸರವಿರಬಾರದು, ಅವಸರ ಮಾಡಬಾರದು.
ಮಾತು ಬೆಳ್ಳಿ, ಮೌನ ಬಂಗಾರ.
ನವಿಲಾಡಿತು ಅಂತ ಕೆಂಬೂತ ಪುಕ್ಕ ತೆರೆಯಿತು
ಸಾವಿರ ಕುದುರೆ ಸರದಾರ, ಮನೆ ಹೆಂಡತಿ ಕಾಸ್ತಾರ
ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ, ಹುಟ್ಟಿದ ಮನೆಗೆ ಬೇರೆ ತಪ್ಪಲ್ಲ
ಹೆಣ್ಣು ಚಂದ ಕಣ್ಣು ಕುಲ್ಡು ಅಂದಂಗೆ
ತೀಟೆ ಆದರೆ ತಾನೆ ಬರುತ್ತಾನೆ
ಒಲುಮೆಗೆ ನೋಟಬೇಟವೇ ಮೊದಲು
ರಾತ್ರಿ ಎಲ್ಲ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮಂಗೂ ಸೀತೆಗೂ ಏನು ಸಂಬಂಧ ಅಂದ್ರಂತೆ
ಬೀಜ ಸಣ್ಣದಾದರೆ ಮರ ಸಣ್ಣದೋ
ಅಳಿಲ ಸೇವೆ, ಮಳಲ ಭಕ್ತಿ
ಆಗ-ಭೋಗ ಸೂಳೆ ಪಾಲು , ಗೂರಲು ಉಬ್ಬಸ ಹೆಂಡತಿ ಪಾಲು.
ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು
ವಿದ್ಯೆ ಇಲ್ಲದವನ ಮೊರೆ ಹಾಳೂರ ಹದ್ದಿನಂತೆ
ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದರಂತೆ
ಎರಡು ದಾಸರ ನಂಬಿ ಕುರುಡು ದಾಸ ಕೆಟ್ಟ
ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ.
ಮೂಗು ಹಿಡಿದರೆ ಬಾಯಿ ತಾನೇ ತೆರೆಯುವುದು
ಹಾರೋ ಹಕ್ಕಿಗೆ ಹಾದರ ಕಟ್ಟಿದರು.
ಸಂದೀಲಿ ಸಮಾರಾಧನೆ ಮಾಡ್ದಂಗೆ
ಹೊಳೆಗೆ ಸುರಿದರೂ ಅಳೆದು ಸುರಿ
ಯೋಗಿ ತಂದದ್ದು ಯೋಗಿಗೆ, ಭೋಗಿ ತಂದದ್ದು ಭೋಗಿಗೆ
ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ
ಬಿಟ್ಟವರ ಕಂಡು ಬಿಟ್ಟು ಬಾಳುಗೆಟ್ಟ
(ಕಾಯಿಲೆ) ಬಿದ್ದಾಗಿನ ಅನ್ನ ಎದ್ದಾಗ ತೆಗೆ.
ಊಟವೆಂದರೆ ಊರು ಬಿಟ್ಟುಹೋದಂತೆ.
ನಾಲಿಗೆಯಿಂದ ಕೆಳಗೆ ಬಿದ್ದರೆ ನರಕ.
ಹದ ಬಂದಾಗ ಅರಗಬೇಕು ಬೆದೆ ಬಂದಾಗ ಬಿತ್ತಬೇಕು
ಹೇಳಿಕೆ ಮಾತು ಕೇಳಿ ಹೆಂಡ್ರನ್ನ ಬಿಟ್ಟ
ಒಣ ಮಾತು ಒಣಗಿದ ಹುಲ್ಲು, ಒಳ್ಳೆಯ ಮಾತು ಬೆಳ್ಳಗಿನ ಹಾಲು.
ಹಾಲು ಕಾಯ್‍ಸ್ಕೊಂಡು ನಾನಿದ್ದೆ ಹಲ್ಲು ಕಿರ್‍‍ಕೊಂಡು ನೀ ಬಂದೆ.
ಬಾಳುವ ಮನೆಗೊಂದು ಬೊಗಳುವ ನಾಯಿ.
ಗಂಟು ಕಳ್ಳರು ಸಂತೇಲಿ ಮಂತ್ರ ಹೇಳಿದಂಗೆ
ಸರಿಸರಿಯಾಗಿದ್ರೆ,ಪರಿಪರಿ ನೆಂಟರು
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು
ಮಕ್ಕಳ ಹೆತ್ತು ತಿರುಮಲ ದೇವರ ಹೆಸರಿಟ್ಟ ಹಾಗೆ
ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ
ಆಗುವ (ಅಡುವ) ವರೆಗಿದ್ದು ಆರುವವರೆಗೆ ಇರಲಾರರೇ
ಸಾವಿರ ಉಳಿ ಪೆಟ್ಟು,ಒಂದು ಚಿತ್ತಾರ
ಆಗೊದೆಲ್ಲ ವೊಳ್ಳೆದಕ್ಕೆ
ನೆರೆದ ಸಿರಿ ಜಾವಕ್ಕೆ ಹರಿದು ಹೋಯಿತು
ತೋಟ ಶೃಂಗಾರ, ಒಳಗೆ ಗೋಣಿ ಸೊಪ್ಪು
ಇಕ್ಕೇರಿ ತನಕ ಬಳಗ,
ಬಾಯ್ ತೆವಲು ತೀರಿಸಿಕೊಳ್ಳೋಕೆ ಎಲೆ ಅಡಿಕೆ ಬೇಕು, ಮೈ ತೆವಲು ತೀರಿಸಿಕೊಳ್ಳೋಕೆ ಒಡಂಬಡಿಕೆ ಬೇಕು
ಹಗೆಯೋನ ಕೊಲ್ಲಾಕೆ ಹಗಲೇನು ಇರುಳೇನು
ತರಹರಿಸಾಳಾರದವಳು ಮರಣಕ್ಕೆ ಪಾತ್ರಳು
ಮಾತಿಗೆ ನೆಲೆಯಿಲ್ಲ, ಪ್ರೇಮಕ್ಕೆ ಬೆಲೆಯಿಲ್ಲ.
ತಾನು ಗರತಿ ಆದರೆ ಸೂಳೆಗೇರೀಲಿ ಮನೆ ಕಟ್ಟು
ತರಗು ತಿಂಬುವುದೇ ಪರಮ ಸುಖ
ಆರಿದೋಗರಕ್ಕೆ ಮೊಸರಿಕ್ಕಿ ಕಾಗೆಗೆ ಸೂರೆಕೊಟ್ಟರು
ಹಕ್ಕಿ ತೆನೆ ತಿಂದು ಹಿಕ್ಕೆ ಇಕ್ಕಿ ಹೋಯ್ತು
ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ
ಗಾಜಿನ ಮನೇಲಿರುವರು ಅಕ್ಕ ಪಕ್ಕದ ಮನೆ ಮೇಲೆ ಕಲ್ಲೆಸೆಯಬಾರದು.
ಕತ್ತೆಯಂಥ ಅತ್ತೆ ಬೇಕು ಮುತ್ತಿನಂಥ ಗಂಡ ಬೇಕು
ಮುತ್ತು ಚಿಪ್ಪಲ್ಲಿ ಹುಟ್ಟಿ ಮುಕುಟದ ಮಣಿಯಾಯ್ತು
ಕಡಲಲ್ಲಿ ಪುಟಿದ ತೆರೆ ಕಡಲಲ್ಲೇ ಕರಗಿ ಹೋಯ್ತು
ಕಾಣದಿರೋ ದೇವರಿಗಿಂತ ಕಾಣೋ ಭೂತಾನೇ ವಾಸಿ
ಕೇಡು ಬರೋ ಕಾಲಕ್ಕೆ ನಂಟೆಲ್ಲ ಹಗೆಯಾಯ್ತು
ಮದುವೆ ಸಾಲ ಮಸಣಾದವರೆಗೂ.
ಬಾಳೆ ಬೆಳೆದವ ಬಾಳಿಯಾನು.
ವಿದ್ಯೆ ಬಲ್ಲವ ಎಲ್ಲಿದ್ದರು ಸಲ್ಲುವ
ತಾಯಿಯಂತೆ ಮಗಳು ನೂಲಿನಂತೆ ಸೀರೆ
ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.
ಕಳ್ಳನ ಹೆಜ್ಜೆ ಕಳ್ಳನೇ ಬಲ್ಲ
ಹಾವಿಗೆ ಹಾಲೆರೆದರೇನು ಫಲ
ಕೋಡಗ ಲಂಕೆಯ ಸುಡುವಾಗ ರಾವಣ ನಾಡ ಕಾಯ್ದಿದ್ದ
ಯಸಗಾತಿಗೆ ದೋಸೆ ಕೊಡೊ ಹೊತ್ತಿಗೆ, ಮೂಸಿಮೂಸಿ ಮೂಗಿನ ಕೆಳಗೆ ಹಾಕಿದ್ಲು
ನಿಷ್ಠೆ ಇಲ್ಲದೆ ಎಷ್ಟು ಪೂಜೆ ಮಾಡಿದರೂ ನಷ್ಟ
ಹಣ್ಣು ತಿಂದವನು ನುಣುಚಿಕೊಂಡ; ಸಿಪ್ಪೆ ತಿಂದವನು ಸಿಕ್ಕಿ ಹಾಕಿಕೊಂಡ
ತಲೆಗೆ ಎಣ್ಣೆ ಇಲ್ಲ ತನು ಮೃಗನಾಭಿ ಬೇಡಿತು
ಉಡೋಕೆ ಇಲ್ಲದವ ಮೈಲಿಗೆಗೆ ಹೇಸ, ಉಂಬೋಕೆ ಇಲ್ಲದವ ಎಂಜಲಿಗೆ ಹೇಸ
ದುಡ್ಡೇ ದೊಡ್ಡಪ್ಪ.
ತಾರುಣ್ಯವೇ ರೂಪು ಕಾರುಣ್ಯವೇ ಗುಣ
ಮದುವೆಯಾಗೋ ಗುಂಡ ಅಂದ್ರೆ ನೀನೇ ನನ್ನ ಹೆಂಡ್ತಿ ಅಂದ
ತಾಯಿ ಕಲಿಸಿದ ಊಟ ತಂದೆ ಕಲಿಸಿದ ಬುದ್ಧಿ
ಕಾಸಿಗೊಂದು,ಕೊಸರಿಗೆರಡು
ತಾನೊಂದೆಣಿಸಿದರೆ ದೈವವೊಂದೆಣಿಸಿತು
ಸವತಿ ಸಣ್ಣವಳಲ್ಲ ದಾಯಾದಿ ಚಿಕ್ಕವನಲ್ಲ
ಎಂಟು ಹೊನ್ನು ಘನವಾದ ನಂಟು ತಂತು
ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ, ಹುಟ್ಟಿದ ಮನೆಗೆ ಬೇರೆ(ಪಾಲಗುವುದು) ತಪ್ಪಲ್ಲ
ತರಗು (ಮರದಿಂದ ಬಿದ್ದ ಒಣ ಎಲೆಗಳು)ಮೊರದಲ್ಲಿ ಹಿಡಿಯದು
ಹಾಯ್ದೆ ಇದ್ದರೂ ಎತ್ತಿನ ಕೊಂಬು ಉದ್ದ
ಸಿಟ್ಟು ಬಂದರೆ ಪಡಿ ಹಿಟ್ಟು ಮುಕ್ಕು
ತುಟಿ ಸುಮ್ಮನಿದ್ದರೂ ಹೊಟ್ಟೆ ಸುಮ್ಮನಿರದು
ತೋಳ ಬಿದ್ದರೆ ಆಳಿಗೊ೦ದು ಕಲ್ಲು.
ಶೀಲವಂತರ ಓಣೀಲಿ ಕೋಳಿ ಮಾಯ ಆದವಂತೆ
ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ
ಹಲವು ದೇವರ ಮಾಡಿ ಹಾರುವಯ್ಯ ಕೆಟ್ಟ
ತಾಯಿ ಒಂದಾದರೂ ಬಾಯಿ ಬೇರೆ
ಸಾವಿರ ಸುಳ್ಳು ಹೇಳಿ ಒ೦ದು ಮದುವೆ ಮಾಡು.
ಹರೆ ಬಡಿದರೂ ಮದುವೆ ಮೊರ ಬಡಿದರೂ ಮದುವೆ
ಮಗೂನ ಚಿವುಟೋದು, ತೊಟ್ಟಿಲು ತೂಗೋದು
ಕಲ್ಲು ಇದ್ದಾಗ ನಾಯಿ ಇಲ್ಲ ನಾಯಿ ಇದ್ದಾಗ ಕಲ್ಲು ಇಲ್ಲ
ಚಿಂತೆ ಮಾಡಿದರೆ ಸಂತೆ ಸಾಗೀತೆ?
ತೂತು ಗತ್ತಲೇಲಿ ತಾತನ ಮದುವೆ
ಸ್ಟ್ಯಾ೦ಪಿರುವಷ್ಟು ನಾಲಗೆ ಚಾಚು.
ಆನೆಗೆ ಚಡ್ಡಿ ಹೊಲಿಸಿದ ಹಾಗೆ
ಮಘಾ ಮಳೆ ಬಂದಷ್ಟು ಒಳ್ಳೇದು ; ಮನೆ ಮಗ ಉಂಡಷ್ಟೂ ಒಳ್ಳೆಯದು .
ಬೀಳು ಭೂಮಿಗೆ ಬೀಜ ದಂಡ
ಸಿರಿಯವ್ವನದ ಹೆಣ್ಣು ಸಕ್ಕರೆ ಬೊಂಬೆಯಂತೆ
ಚರಪು ಕಾಯ್ತ ಇದ್ದುದಕ್ಕೆ ಚಪ್ಪಲಿಯೇ ಮಾಯವಾಯ್ತು.
ಕಳ್ಳನ ನಂಬಿದ್ರು ಕುಳ್ಳನ ನಂಬಬೇಡ
ಸುಳ್ಳು ದೇವರಿಗೆ ಕಳ್ಳ ಪೂಜಾರಿ
ತುಂಬಿದ ಕೊಡ ತುಳುಕುವುದಿಲ್ಲ
ಪುರಾಣ ಹೇಳೊಕೆ; ಬದನೆಕಾಯಿ ತಿನ್ನೋಕೆ
ಕಲ್ಲ ನಾಗರ ಕಂಡರೆ ಹಾಲೆರೆವರು ದಿಟ ನಾಗರ ಕಂಡರೆ ಕೊಲ್ಲೆಂಬರು ಉಂಬುವ ಜಂಗಮ ಬಂದರೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನ ಹಿಡಿಯೆಂಬರು
ಏನಾದರೇನು ತಾನು ತಾನಾಗದವರೆಗೆ
ನರಿ ಕೂಗು ಗಿರಿ ಮುಟ್ಟುತ್ತದೆಯೆ ?
ಗಂಧ ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೋ ಬಳಿದುಕೊಂಡರಂತೆ
ನೋಡಿ ನಡೆದವರಿಗೆ ಕೇಡಿಲ್ಲ.
ಸುಡುವ ಮನೆಯ ಗಳ ಹಿರಿದಂತೆ
ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ
ತಾಯಿಲ್ಲದ ತವರು ಕಾಟಕದಿದ್ದ ಅಡವಿ
ತೊಳೀಲಿಲ್ಲ ಬಳೀಲಿಲ್ಲ ಮೂಗೇಕೆ ಮಸಿಯಾಯ್ತು
ಇಕ್ಕಲಾರದ ಕೈ ಎಂಜಲು ಇಕ್ಕುವಳು
ಬೆಲ್ಲದ ಸಿಪಾಯಿ ಮಾಡಿ ಇರುವೆ ಹತ್ತರ ಕಳಿಸಿದ
ತಿಗಳಾ ತಾ ಕೆಡುತ್ತಾ ಏಳು ನೆರೆ ಕೆಡಿಸಿದ
ಕಾಲಕ್ಕೆ ತಕ್ಕಂತೆ ನಡಿಯಬೇಕು,ತಾಳಕ್ಕೆ ತಕ್ಕಂತೆ ಕುಣಿಯಬೇಕು
ಕಾಮಾಲೆ ಕಣ್ಣೊನಿಗೆ ಕಂಡಿದ್ದೆಲ್ಲ ಹಳದಿ ನೇ
ಆಡಿ ಉಂಡ ಮೈ ಅಟ್ಟು ಉಂಡೀತೇ?
ಯುಕ್ತಿಯ ಮಾತು ಮಕ್ಕಳಿಂದಾದರೂ ತಿಳುಕೊ
ಕೆಟ್ಟು ಸೈರಿಸಬಲ್ಲೆ ಕೊಟ್ಟು ಸೈರಿಸಲಾರೆ
ಕಾಲಿನದು ಕಾಲಿಗೆ; ತಲೆಯದು ತಲೆಗೆ
ಊರು ದೂರಾಯಿತು ಕಾಡು ಹತ್ತರಾಯಿತು
ಉದ್ದರಿ ಕೊಟ್ಟು ಸೆಟ್ಟಿ ಕೆಟ್ಟ, ಕಡ ಸಿಕ್ಕು ಬಡವ ಕೆಟ್ಟ.
ದೇವಸ್ಥಾನದಲ್ಲಿ ಊದಿನ ಕಡ್ಡಿ ಹಚ್ಚದಿದ್ದರೂ ಚಿಂತೆಯಿಲ್ಲ; … ಬಿಡಬೇಡ
ನೆಲಕ್ಕೆ ಬಿದ್‍ದ್ರೂ ಮೀಸೆ ಮಣ್ಣಾಗಿಲ್ಲ
ಉಪ್ಪು ತಿಂದ ಮನೆಗೆ ಎರಡು ಬಗೆಯ ಬಂದ
ಗದ್ದೆ ಸುಟ್ಟರೂ ಹಾಳಾಗದು ಗಾದೆ.
ಹುತ್ತ ಬಡಿದರೆ ಹಾವು ಸಾಯುವುದೇ
ಬೆಳಗೂ ಹೆತ್ತ ಮಗೂನ ನಾಯಿ ಕೊಂಡೊಯ್ಯಿತಂತೆ
ಇಲ್ಲದ ಕಾಲಕ್ಕೆ ಕಲ್ಲೆದೆ ಬೇಕು
ಲಂಚ ಕೊಟ್ಟು ಮಂಚ ಏರು ವಂಚನೆ ಮಾಡಿ ಕೈಲಾಸ ಏರು
ತನ್ನ ನೆರಳು ತಾ ಕಂಡು ನರಳುವವ ಮರುಳನಲ್ಲವೇ?
ಭರಣಿ ಮಳೆ ಧರಣಿ ಬೆಳೆ.
ಹಲ್ಲುಬಿದ್ದ ಮುದುಕಿ ಎಲ್ಲಿ ಬಿದ್ದರೇನು
ಕಣ್ಣಿಗೆ ಒಪ್ಪವಿಲ್ಲದ ಹೆಣ್ಣು ಸಪ್ಪಗೆ ಕಂಡಳು
ಬಡವ ನೀ ಸೆಣಸಿ ಕೆಡಬೇಡ
ಹನಿಹನಿಗೂಡಿದರೆ ಹಳ್ಳ; ತೆನೆತೆನೆಗೂಡಿದರೆ ಬಳ್ಳ
ಹಸಿದ ಹೊಟ್ಟೆ ತೋರಿಸಿದರೆ ಮಸೆದ ಕತ್ತಿ ತೋರಿಸಿದರು
ಅನುರಾಧ ಬಂದರೆ ನಮ್ಮ ರಾಗಿ ನಮ್ಮದು.
ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ?
ಆದ ಕೆಲಸಕ್ಕೆ ಅತ್ತೆಗಳು ಬಂದಂತೆ
ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ
ಕಚ್ಚುವ ನಾಯಿ ಬೊಗಳದು ಬೊಗಳುವ ನಾಯಿ ಕಚ್ಚದು
ಆಡೋದು ಮಡಿ ಉಂಬೋದು ಮೈಲಿಗೆ
ಮುಂದೆ ಬರೋ ಕೋಡಿಗಿಂತ ಹಿಂದೆ ಬರೋ ಬಾಲಾನೇ ವಾಸಿ
ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
ಬಡವನ ಸಿಟ್ಟು ದವಡೆಗೆ ಮೂಲ
ಅಕ್ಕ ಸತ್ತರೆ ಅಮಾಸೆ ನಿಲ್ಲದು, ಅಣ್ಣ ಸತ್ತರೆ ಹುಣ್ಣಿಮೆ ನಿಲ್ಲದು
ಊರ ದನ ಕಾದು ದೊಡ್ಡ ಬೋರೇಗೌಡ ಅನ್ನಿಸಿಕೊಂಡ
ಹಾಡಿದ್ದೇ ಹಾಡಿದ ಕಿಸಬಾಯಿ ದಾಸ
ತಾಳದಲ್ಲಿ ಜಾಣನಾದರೆ ತಾಳಿಕೆ ಇದ್ದೀತೇ
ತರುವವ ಹೋದಮೇಲೆ ಮರಗುವವರುಂಟೇ
ಹೆಣ್ಣು ಉರಿಸಿದ ಮನೆಯ ಹೆಗ್ಗಂಬ ಉರಿಯಿತು.
ಮೊದಲಿದ್ದವಳೇ ವಾಸಿ ಎಬ್ಬಿಸಿದರೆ ಉಣ್ಣೋಳು
ಸಿದ್ಧಾ ದೇವಿಗೆ ಸಿಡಿಲು ಬಡೀತು
ಪಿಶಾಚಿ ಬಿಟ್ಟರೂ ನಿಶಾಚರ ಬಿಡ
ಹಾರಾಡೋ ಅಪ್ಪುಂಗೆ ತೂರಾಡೋ ಮಗ ಹುಟ್ದಂಗೆ
ತಮ್ಮ ಮನೇಲಿ ಹೆಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.
ಹೆಣ್ಣಿಂದ ರಾವಣ ಕೆಟ್ಟ ಮಣ್ಣಿಂದ ಕೌರವ ಕೆಟ್ಟ
ಹರೆಯಕ್ಕೆ ಬಂದಾಗ ಹಂದಿನೂ ಚಂದ
ಬೇಕಾದ ಮಾತು, ಬೆಲ್ಲಕ್ಕಿಂತ ಸವಿ.
ಸೊಕ್ಕಿದ್ದು ಉಕ್ತದೆ ಉಕ್ಕಿದ್ದು ಒಲೆಗೆ ಹಾರ್ತದೆ
ಗಂಡಸು ಕೂತು ಕೆಟ್ಟ ;ಹೆಂಗಸು ತಿರುಗಿ ಕೆಟ್ಟಳು
ಹಂಚು ಕಾಣದ ಕೈ ಕಂಚು ಕಾಣ್ತು
ಮುಚ್ಚಿ ಹೇಳಿದರೆ ಒಗಟು ಬಿಚ್ಚಿ ಹೇಳಿದರೆ ಒರಟು.
ಉಂಡದ್ದು ಊಟ ಆಗಲಿಲ್ಲ, ಕೊಂಡದ್ದು ಕೂಟ ಆಗಲಿಲ್ಲ
ಅಲ್ಪನಿಗೆ ಐಶ್ವರ್ಯ ಬ೦ದರೆ ಅರ್ಧರಾತ್ರೀಲಿ ಕೊಡೆ ಹಿಡಿದನ೦ತೆ.
ಹರ ಮುನಿದರೆ ಗುರು ಕಾಯ್ವ
ಸಾಲಗಾರ ಸುಮ್ಮನಿದ್ದರೂ ಸಾಕ್ಷಿದಾರ ಸುಮ್ಮನಿರ
ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊ೦ಡ೦ತೆ.
ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
ತಕ್ಕಡಿ ಸ್ವರೂಪ ತಕ್ಕವನೇ ಬಲ್ಲ
ಹೊತ್ತಿರುವಾಗಲೇ ಗೊತ್ತು ಸೇರಬೇಕು
ಧೂಳಿ ಧೂಪವಾದೀತೆ, ಮಾಳಿಗೆ ಸ್ವರ್ಗವಾದೀತೆ?
ಕು೦ಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
ಮಳೆ ಹುಯ್ದರೆ ಕೇಡಲ್ಲ; ಮಗ ಉಂಡರೆ ಕೇಡಲ್ಲ
ಹಳ್ಳೀ ದೇವರ ತಲೆ ಒಡೆದು, ದಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ
ತಾನು ತಿಂದದ್ದು ಮಣ್ಣು ಹೆರರಿಗೆ ಕೊಟ್ಟದ್ದು ಹೊನ್ನು
ಆತುರಗಾರನಿಗೆ ಬುದ್ಧಿ ಮಟ್ಟ
ಉಚ್ಚೇಲಿ ಮೀನು ಹಿಡಿಯೋ ಜಾತಿ.
ಚ೦ಡಾಲ ದೇವರಿಗೆ ಚಪ್ಪಲಿ ಪೂಜೆ.
ಬೇಲಿಯೇ ಎದ್ದು ಹೊಲ ಮೇಯ್ದಂತೆ
ಗಡ್ಡಕ್ಕೆ ಬೇರೆ ಸೀಗೇಕಾಯಿ
ಇದ್ದೂ ಉಣ್ಣದವನ ಬಾಯಲ್ಲಿ ಕಡೆಗೆ ಮಣ್ಣು ಬಿತ್ತು
ಆಗೋದೆಲ್ಲಾ ಒಳ್ಳೇದಕ್ಕೆ
ಬೆಳೆಯುವ ಪೈರು ಮೊಳಕೆಯಲ್ಲಿ
ದಾರವಿದ್ದರೆ ಮುತ್ತು ಹಾರವೆಂದನಿಸಿತ್ತು
ಹೆಂಡ್ರ ಅವಾಂತರ ತಡಿಲಾರದೆ ಗಂಡ ದೇಶಾಂತರ ಹೋದ
ಕಳ್ಳನ ಮನಸ್ಸು ಹುಳ್ಳಗೆ
ತಾಳ ತಪ್ಪಿದ ಬಾಳು, ತಾಳಲಾರದ ಗೋಳು
ತನ್ನ ಸುಖವೇ ಲೋಕದ ಸುಖ, ತನ್ನ ಕಷ್ಟವೇ ಲೋಕದ ಕಷ್ಟ
ಕೋಟಿಗೆ ಒಬ್ಬ ಕುಬೇರ, ನೋಟಕ್ಕೆ ಒಬ್ಬ ಸುಂದರ.
ಗವುಜಿ ಗದ್ದಲ ಏನೂ ಇಲ್ಲ, ಗೋವಿಂದ ಭಟ್ಟ ಬಾವೀಲಿ ಬಿದ್ದ
ಕೈ ಕೆಸರಾದರೆ ಬಾಯಿ ಮೊಸರು.
ಎಲ್ಲಾ ಬಣ್ಣ ಮಸಿ ನುಂಗಿತು
ಒಲ್ಲದ ಗಂಡಗೆ ಬೆಣ್ಣೇಲಿ ಕಲ್ಲು
ಆಸೆ ಮಾತು ಕೊಟ್ಟು ಬಾಸೆ ತಪ್ಪಬಾರ್‍ದು
ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ
ರಾವಣನ ಮಾತಿಗೆ ಮನಸೋತವ, ರಾಮನ ಮಾತಿಗೆ ಜಾಣನಾಗುವನೇ?
ತಿಪ್ಪೇ ಮ್ಯಾಲೆ ಮಲಗಿ ಉಪ್ಪರಿಗೆ ಕನಸು ಕಂಡ ಹಾಗೆ
ಹಾಲುಕ್ಕಿದ ಮನೇಲಿ ಮೇಲ್‍ಗರೀಲಿ.
ಘಟಾ ಇದ್ದರೆ ಮಠಾ ಕಟ್ಟಿಸಬಹುದು.
ಹೆಣ್ಣಿಗೆ ಹೆಣ್ಣೇ ವೈರಿ
ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರ೦ತೆ.
ಗಂಡಸಿಗೇಕೆ ಗೌರಿ ದು:ಖ ?
ಅಕ್ಕ ನನ್ನವಳಾದ್ರೆ ಬಾವ ನನ್ನವನೇನು
ಕಡ್ಡೀನ ಗುಡ್ಡ ಮಾಡು.
ತೇರಾದ ಮೇಲೆ ಜಾತ್ರೆ ಸೇರಿತು.
ಪದದೊಳಿಲ್ಲ ತಾನರ್ಥದೊಳಿಲ್ಲವು ಪದಾರ್ಥ ಸ೦ಘಾತದೊಳಿಲ್ಲ
ಉಂಡಿದ್ದು ಹೊಟ್ಟೆಗಾಗಿ, ಮಾಡಿದ್ದು ಬಟ್ಟೆಗಾಗಿ.
ತಳವಾರನಿಗೆ ಪಟ್ಟ ಕಟ್ಟಿದರೆ ಕುಳವಾರು (ಒಕ್ಕಲಿಗರ ಸಮೂಹ) ಹೋದೀತೋ?
ಪಾಪಿ ಚುನಾವಣೆಗೆ ನಿ೦ತರೆ ಮೂರೇ ಓಟು.
ನೆತ್ತಿಯಲ್ಲಿ ಅಮೃತ ಹೊತ್ತು ಸಾವಿಗಂಜಿ ಜಗವೆಲ್ಲ ಸುತ್ತಾಡಿದ
ಹೋದಾ ಪುಟ್ಟಾ, ಬಂದಾ ಪುಟ್ಟಾ, ಪುಟ್ಟನ ಕಾಲಿಗೆ ನೀರಿಲ್ಲ
ಭಲೆ ಜಟ್ಟಿ ಅಂದ್ರೆ ಕೆಮ್ಮಣ್ಣು ಮುಕ್ಕಿದ
ಕನಿಗೇಡಿಗೆ(ಸ್ವಾರ್ಥಿಗೆ) ಗತಿ ಇಲ್ಲ
ಕುಂಬಾರಂಗೆ ವರುಷ; ದೊಣ್ಣೆಗೆ ನಿಮಿಷ
ನಾಯಿಯು ನಮ್ಮನ್ನು ಕಚ್ಚಿದರೆ ನಾಯಿಯನ್ನು ಕಚ್ಚಲು ನಮ್ಮಿಂದ ಆಗುವುದೇ?
ಕೊಟ್ಟೆ ಅಂತ ಹೇಳಿ ಕೊಡದವನ ಮಾತು ಬೆನ್ನಿಗೆ ಚೂರಿ ಇರಿದಂತೆ
ಮುಳ್ಳಿನಿಂದ ಮುಳ್ಳು ತೆಗೆ, ಹಗೆಯಿಂದ ಹಗೆ ತೆಗೆ
ರಾಮ ರಾಜ್ಯ ಬಂದರೂ ರಾಗಿ ಬೀಸೋದು ತಪ್ಪಲಿಲ್ಲ
ಯಾರದೋ ದುಡ್ಡು; ಎಲ್ಲಮ್ಮನ ಜಾತ್ರೆ
ಕತ್ತೆ ತಪ್ಪಿಸಿಕೊ೦ಡರೆ ಹುಡುಕುತಾರ್‍ಯೇ?
ಹೇಳೊದು ವೇದ ಹಾಕೊದು ಗಾಳ
ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ ?
ತಡವಿದರೆ ಮಡಿ ಸಹಾ ಕೆಡುವುದು
ಹೆಣ್ಣಿನ ಬಗೆ/ಮನಸ್ಸ ಬಲ್ಲೋರಿಲ್ಲ
ಕನಿಗೇಡಿಗೆ ಗತಿ ಇಲ್ಲ
ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ
ಪೆದ್ದ ಮರದ ತುದಿಯೇರಿ ಅಣಿತಪ್ಪಿ ಬಿದ್ದು ಸತ್ತ
ಅಗಸನ ಬಡಿವಾರವೆಲ್ಲ ಹೆರರ ಬಟ್ಟೆ ಮೇಲೆ
ಇಡಿಯ ಮುಳುಗಿದವನಿಗೆ ಚಳಿಯೇನು?ಮಳೆಯೇನು?
ಆಪತ್ತಿಗಾದವನೇ ನೆಂಟ ಕೆಲಸಕ್ಕಾದವನೇ ಭಂಟ
ತನ್ನ ತಾನರಿತವಗೇ ತ್ರಿಭುವನ ತನ್ನೊಳಗೆ ಕಂಡಿತ್ತು
ಹೆಣ್ಣು ಉರಿಸಿದ ಮನೆಯ ಹೆಗ್ಗಂಬ ಉರಿಯಿತು
ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ
ಪದವೂ ಮುಗಿಯಿತು, ತಂತಿಯೂ ಹರಿಯಿತು.
ಸಂತೇಲಿ ಮನೇ ಮಾಡಿ ಸದ್ದಿಗಂಜೂದೇ
ಹುಯ್ಯಂತ ಕೊಡ ಬೇಡ ಸುಮ್ಮನೆ ಕೂರಲು ಬೇಡ
ಅಂಕೆ ಇಲ್ಲದ ಚತುರೆ, ಲಗಾಮು ಇಲ್ಲದ ಕುದುರೆ
ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ
ತಿಳಿಯಕ್ಕಿಲ್ಲ ನೋಡಕ್ಕಿಲ್ಲ ಹುಚ್ಚು ಮೂಕನ ಆಟ
ನಲ್ಲೆ ಮುಂದೆ ಸುಳಿದರೆ ಲೋಕದೊಳಗೆ ಒಲ್ಲದವರಾರು
ಇಲಿ ಸಿಕ್ಕರೆ ಬೆಕ್ಕು ಆಗುವುದು ಹುಲಿ.
ಮನಸಿದ್ದರೆ ಮಾರ್ಗ.
ಲೇ ! ಅನ್ನೋಕ್ಕೆ ಅವಳೇ ಇಲ್ಲ, ಮಗಳ ಹೆಸರು ಅನ೦ತಯ್ಯ.
ಹೊಲಬನರಿಯದ (ರೀತಿಯಲ್ಲದ) ಮಾತು ತಲೆ ಬೇನೆ
ಹತ್ತು ತಿಂಗಂಳ ಪುಟ್ಟ ಹಟ್ಟೆಲ್ಲಾ ಹೆಜ್ಜೆ
ಉಪ್ಪು ತಿಂದವನು ನೀರು ಕುಡಿಯಲೇ ಬೇಕು
ಮನಸ್ಸು ಇಲ್ಲದಿದ್ದರೆ ಗಟ್ಟಿ, ಎಲ್ಲವೂ ಮೂರಾಬಟ್ಟಿ.
ಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದು
ಜಟ್ಟಿ ಜಾರಿದರೆ ಅದೂ ಒಂದು ಪಟ್ಟು
ವಿನಾಶ ಕಾಲೇ ವಿಪರೀತ ಬುದ್ಧಿ.
ಹಸಿ ಗೋಡೆ ಮೇಲೆ ಹರಳು ಎಸೆದಂತೆ
ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ
ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ
ಮಂತ್ರ ತಂತ್ರ ದೈವ ಒಲ್ಲದೆ ತನಗೆ ಸ್ವಂತವಲ್ಲ
ಸಾವಿರ ಕುದರೆ ಸರದಾರ ಮನೇ ಹೆಣ್ತಿಗೆ ಪಿಂಜಾರ
ಹಂಚಿದವರಿಗೆ ಹಲ್ಲು ಬಾಯಿ
ಬಾಯಲ್ಲಿ ಬೆಣ್ಣೆ;ಬಗಲಲ್ಲಿ ದೊಣ್ಣೆ.
ಅಜ್ಜ! ಮದುವೆ ಅಂದ್ರೆ ನನಗೋ ಅಂದ
ಹೆರಿಗೆ ಬೇನೆ ಕೆಲ ಗಂಟೆ ಗಂಟ, ಬಂಜೆ ಬೇನೆ ಬದುಕಿನ ಗಂಟ
ಹಸಿದವರ ಮುಂದೆ ಭಾಷಣ ಮಾಡಿದ ಹಾಗೆ.
ಅಳಿಯನ ಕುರುಡು ಬೆಳಗಾದರೆ ಗೊತ್ತಾಗತ್ತೆ
ನಚ್ಚುವುದು ಬೇರೆ ಹೆಣ್ಣು ಒಬ್ಬನ ಮೆಚ್ಚುವುದು ಬೇರೆ
ಯಾರೂ ಇಲ್ಲದ ಮನೆಗೆ ನಾನು ಜೋಗಪ್ಪ ಅಂದ
ತಾಯಿಯ ಪ್ರೀತಿ ಸುಖವಾದದ್ದು, ತಂದೆಯ ಪ್ರೀತಿ ಮಧುರವಾದದ್ದು.
ತಮ್ಮ ಒಳ್ಳೆಯವನೇ ಸರಿ ಒಮ್ಮಾನಕ್ಕಿಗೆ ಮಾರ್ಗವಿಲ್ಲ
ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು
ಪ್ರಸ್ತಕ್ಕಿಲ್ಲದ ಮಾತು ಹತ್ತುಸಾವಿರವಿದ್ದೇನು
ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೇ ಮೇಲೆ ಬಿತ್ತು
ಆರಕ್ಕೇರಲ್ಲ, ಮೂರಕ್ಕಿಳಿಯಲ್ಲ
ಬಾಳಿಕೆಗೆಟ್ಟು ಬೆಸಲಾದ ಚೇಳಿನಂತಾದ
ತಾನು ಕಳ್ಳ ,ಪರರ ನಂಬ
ಮದುವೆಯಾಗೋ ಗು೦ಡ ಅ೦ದರೆ ನೀನೆ ನನ್ನ ಹೆ೦ಡತಿಯಾಗು ಅ೦ದ ಹಾಗೆ.
ಎಲ್ಲರ ಹಲ್ಲೊಳಗೆ ನುರಿದು ಹೋಗೋದಕ್ಕಿಂತ ಒಣಗಿದ ಹುಲ್ಲೊಳಗೆ ಉರಿದು ಹೋಗೋದು ವಾಸಿ
ಗಂಧದ ಮರವನ್ನು ಸುಟ್ಟು ಬೂದಿಯ ತಂದು ಪೂಸಿದ
ಹೊಳೆ ನೀರಿಗೆ ದೊಣೆನಾಯ್ಕನ ಅಪ್ಪಣೆ ಏಕೆ ?
ದುಡಿದದ್ದು ಉಂಡೆಯೋ ಪಡೆದದ್ದು ಉಂಡೆಯೋ
ಮನೆಯ ಬಾಗಿಲಿಗೆ ಬೀಗ ಹಾಕಿಕೋ, ಮನದ ಬಾಗಿಲನ್ನು ತೆರೆದಿಡು.
ಯಾವ ಕಾಲ ತಪ್ಪಿದರೂ ಸಾವು ಕಾಲ ತಪ್ಪದು
ಕೈ ಕೆಸರಾದರೆ ಬಾಯಿ ಮೊಸರು
ತರುವವ ಮರೆತರೆ ಮೊರ ಏನು ಮಾಡೀತು
ಹಗ್ಗ ತಿನ್ನೋ ಹನುಮಂತ ರಾಯನಿಗೆ ಜ್ವಾಳದ ಶಾವಿಗೆ ಎಷ್ಟು ಕೊಟ್ಟೀಯ
ಬಾಳಲಾರದವ ಪಾಠ ಕಲಿತ
ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ
ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೆಯೆ?
ಸ೦ಸಾರ ಗುಟ್ಟು, ವ್ಯಾಧಿ ರಟ್ಟು.
ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?
ಎಳ್ಳಿನಲ್ಲಿ ಎಣ್ಣೆ ಅಡಕ ಹಾಲಿನಲ್ಲಿ ಬೆಣ್ಣೆ ಅಡಕ
ಬಾಯಲ್ಲಿ ಬೆಲ್ಲ ಕರುಳು ಕತ್ತರಿ
ಚಿತ್ತಾರದ ಅಂದವನ್ನು ಮಸಿ ನುಂಗಿತು
ಹಾರೋ ಹಕ್ಕಿ ಪುಕ್ಕ ಎಣಿಸಿದಂತೆ
ಕು೦ಟನಿಗೆ ಎ೦ಟು ಚೇಷ್ಟೆ
ಹಣ ಇದ್ದವನ ಕೈ ಹಿಡಿದರೂ ಋಣ ಇದ್ದಷ್ಟೇ ಸಿಕ್ಕುವುದು.
ಕಂಡೋರ ಆಸ್ತಿಗೆ ನೀನೇ ಧಣಿ
ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ
ಬಡ್ಡಿ ಬಾಯಿಗಂಜ್ತೀಯೋ,ದೊಡ್ಡೆತ್ತಿನ ಕೋಡಿಗಂಜ್ತೀಯೋ
ಉಪವಾಸ ಇರಬಹುದು , ಉಪದ್ರವ ತಾಳಲಾರದು.
ಹಾಸಿಗೆ ಇದ್ದಷ್ಟು ಕಾಲು ಚಾಚು
ಚಿನ್ನದ ತಲೆಯಾದರು ಒಡೆಯಲಿಕ್ಕೆ ಕಬ್ಬಿಣವೇ
ದೈವ ಅನ್ನೋದ ಮತ್ತೆಲ್ಲೂ ನೊಡದೆ ತಾನಿದ್ದ ಒತ್ತಿಲೇ ನೋಡು
ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ
ಅಮ್ಮನ ಮನಸ್ಸು ಬೆಲ್ಲದ ಹಾಗೆ, ಮಗಳ ಮನಸ್ಸು ಕಲ್ಲಿನ ಹಾಗೆ
ಸಂತೆ ಸೂಳೆ ನೆಚ್ಚಿಕೊಂಡು ಮನೆ ಹೆಂಡಿರನ್ನ ಬಿಟ್ಟರಂತೆ.
ಹಿತವಿಲ್ಲದ ಗಂಡ ಹಿಂದಿದ್ದರೇನು ಮುಂದಿದ್ದರೇನು
ತಾಳಿದವನು ಬಾಳಿಯಾನು
ಮುತ್ತು ಒಡೆದರೆ ಹೋಯ್ತು, ಮಾತು ಆಡಿದರೆ ಹೋಯ್ತು
ಬೆರಳು ತೋರಿಸಿದರೆ ಹಸ್ತ ನುಂಗಿದರಂತೆ
ನೂರು ಜನಿವಾರ ಒಟ್ಟಿಗಿರಬಹುದು; ಮೂರು ಜಡೆ ಒಟ್ಟಿಗಿರುವುದಿಲ್ಲ
ಚಿತ್ತವಿಲ್ಲದವಳ ಒಡಗೂಟ ನಾಯ್ ಹೆಣಾನ ಹತ್ತಿ ತಿನ್ನುವಂತೆ
ಇದ್ದದ್ದು ಹೋಯಿತು ಮದ್ದಿನ ಗುಣದಿಂದ
ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ
ಸಾವಿಲ್ಲದ ಮನೆಯಿಲ್ಲ, ಸೋಲಿಲ್ಲದ ಮನುಷ್ಯನಿಲ್ಲ.
ಅಲ್ಪರ ಸ೦ಘ ಅಭಿಮಾನ ಭ೦ಗ.
ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ.
ಸಮಯಕ್ಕೆ ಬಾರದ ಬುದ್ಧಿ ಸಾವಿರ ಇದ್ದರೂ ಲದ್ಧಿ
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ.
ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ
ಉರಿಯೋ ಬೆಂಕೀಲಿ ಎಣ್ಣೆ ಹೊಯಿದ ಹಾಗೆ
ಎಂಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ
ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ
ತನ್ನೂರಲಿ ರಂಗ, ಪರೂರಲಿ ಮಂಗ
ನೀರ ಕಡೆದರೆ ಬೆಣ್ಣೆ ಬಂದಾದೇನೆ
ಗಿಣಿ ಸಾಕಿ ಗಿಡುಗದ ಕೈಗೆ ಕೊಟ್ಟರು
ಪಾತ್ರವರಿತು ಜಗದ ಜಾತ್ರೆಗೆ ಸಲ್ಲಬೇಕು
ಎದೆ ಸೀಳಿದ್ರೆ ಮೂರಕ್ಷರಾನೂ ಇಲ್ಲ
ಅಂಗೈ ಹುಣ್ಣಿಗೆ ಕನ್ನಡಿ ಯಾಕೆ
ಅಲಗಿನ ಗಾಯಕ್ಕಿಂತ ಗಲಗಿನ ಗಾಯ ಹೆಚ್ಚು
ನಕ್ಕು ನುಡಿದವರು ಕಡೆಗೆ ಅಡವಿಯಲಿಕ್ಕಿ ಬರುವರು
ನಾಯಿನ ಕರೆದುಕೊಂಡು ಹೋಗಿ ಸಿಂಹಾಸಾನದ ಮೇಲೆ ಕೂರಿಸಿದ ಹಾಗಯ್ತು.
ಮೊಂಡ ಕೊಡಲಿ ರಟ್ಟೆಗೆ ಮೂಲ
ಆಸೆಗೆ ಕೊನೆಯಿಲ್ಲ
ಹೇಳೋದು ಶಾಸ್ತ್ರ, ಹಾಕೋದು ಗಾಣ
ಚಿನ್ನದ ಸೂಜಿ ಅಂತ ಕಣ್ಣು ಚುಚ್ಚಿಕೊಂಡಾರೆ?
ತೀರದಲ್ಲಿರುವ ಮರಕ್ಕೆ ನೀರು ಯಾತಕ್ಕೆ
ಗಳಕ್ಕನೇ ಉಂಡವ ರೋಗಿ ಗಳಿಗೆ ಉಂಡವ ಭೋಗಿ
ತನ್ನ ಎಲೇಲಿ ಕತ್ತೆ ಸತ್ತು ಬಿದ್ದಿದ್ರೆ , ಪಕ್ಕದ ಎಲೇಲಿ ನೊಣ ಹೊಡೆಯಕ್ಕೆ ಹೋದ
ಮೂರೂ ಬಿಟ್ಟೋನು,ಊರಿಗೆ ದೊಡ್ಡೋನು
ಅಯ್ಯೋ ಅಂದವರಿಗೆ ಆರು ತಿಂಗಳು ಆಯಸ್ಸು ಕಮ್ಮಿ
ಇಕ್ಕುವಳು ನಮ್ಮವಳಾದ್ರೆ ಕೊಟ್ಟಿಗೆಯಲ್ಲಾದರೂ ಉಣಲಕ್ಕು
ಕಳ್ಳನ ಕೈಯಲ್ಲಿ ಕೀಲಿಕೈ ಕೊಟ್ಟಂತೆ
ವೇದ ಸುಳ್ಳಾದರು ಗಾದೆ ಸುಳ್ಳಾಗದು.
ಅ೦ಗೈ ಹುಣ್ಣಿಗೆ ಕನ್ನಡಿ ಬೇಕೆ.
ಕಾಲ ತಪ್ಪಿದ ಬಳಿಕ ನೂರು ಮಾಡಿದರು ಹಾಳು
ಬಸವನ ಹಿಂದೆ ಬಾಲ, ಲಗ್ನದ ಹಿಂದೆ ಸಾಲ.
ಆಲಸಿ-ಮುಂಡೇದ್ಕೆ ಎರಡು ಖರ್ಚು, ಲೋಭಿ-ಮುಂಡೇದ್ಕೆ ಮೂರು ಖರ್ಚು
ಅತಿ ಸ್ನೇಹ ಗತಿ ಕೇಡು
ಊರಿಗೊಂದು ದಾರಿಯಾದ್ರೆ,ಎಡವಟ್ಟಂಗೆ ಅವನದ್ದೇ ದಾರಿ
ಪಾಪಿ ಸಮುದ್ರ ಹೊಕ್ಕರು ಮೊಣಕಾಲುದ್ದ ನೀರು
ನೂರಾರು ರೋಗಿಗಳನ್ನು ಕೊಂದು ಒಬ್ಬ ವೈದ್ಯ ಆದಂತೆ !
ಆಸೆಯಿಲ್ಲದವನು ದೇಶಕ್ಕೆ ಶ್ರೀಮಂತ.
ದುಡ್ಡಿಗಿಂತ ದೊಡ್ಡ ಹೆಸರೇ ಉತ್ತಮ.
ರತ್ನ ತಗೊಂಡು ಹೋಗಿ ಗಾಜಿನ ತುಂಡಿಗೆ ಹೋಲಿಸಿದರು
ಕೊಣನಿಗೆ ಕೊಸೆಯೋ ಸಂಕಟ, ಎಮ್ಮೆಗೆ ಈಯೋ ಸಂಕಟ
ನರಿಗೆ ಹೇಳಿದರೆ ನರಿ ತನ್ನ ಬಾಲಕ್ಕೆ ಹೇಳಿತಂತೆ
ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
ಪಾಪಿ ಸಮುದ್ರ ಹೊಕ್ರೂ ಮೊಣಕಾಲುದ್ದ ನೀರು
ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ
ಗುಂಪಿನಲ್ಲಿ ಗೋವಿಂದ
ತಾನು ಮಾಡುವುದು ಉತ್ತಮ; ಮಗ ಮಾಡುವುದು ಮಧ್ಯಮ; ಆಳು ಮಾಡುವುದು ಹಾಳು
ವಿಧಿ ಕಾಣದ ಎಡೆಗಳಿಲ್ಲ
ಕಾಗೆಯ ಕೈಯಲ್ಲಿ ಕೊಟ್ಟರೆ ಕಾರಭಾರ, ಅದು ಮಾಡುವುದೇ ಉಪಕಾರ?
ಆಲಸ್ಯಂ ಅಮೃತಂ ವಿಷಂ
ಹೊಳೆಯುವುದೆಲ್ಲಾ ಚಿನ್ನವಲ್ಲ.
ಒಂಡಂಬಡಿಕೆ ಇಂದ ಆಗದು ದಡಂಬಡಿಕೆ ಇಂದ ಆದೀತೇ
ಸದಾಚಾರಣೆಯ ಉದಾಹರಣೆಯೇ ಉತ್ತಮವಾದ ಉಪದೇಶ.
ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು
ಬೀಜದಂತೆ ವೃಕ್ಷ, ವೃಕ್ಷದಂತೆ ಬೀಜ.
ಸಿರಿತನ ಇರೂತನ ಹಿರಿತನ ಘನ
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಹೇಳಿದ ಹಾಗೆ.
ತತ್ವದಲ್ಲಿ ಸತ್ವ ಹುಡುಕು, ವ್ಯಥೆಯಲ್ಲಿ ಕಥೆ ಹುಡುಕು.
ಒಕ್ಕಣ್ಣರ ನಾಡಿಗೆ ಹೋದ್ರೆ ಒಂದು ಕಣ್ಣು ಮುಚ್ಚಿ ನಡೆಯಬೇಕು
ಗೋರ್ಕಲ್ಲ ಮೇಲೆ ಮಳೆಗರೆದಂತೆ
ಹಂದಿ ತನ್ನ ಚಂದಕ್ಕೆ ವೃಂದಾವನ ಆಡ್ಕೊಣ್ತು
ಬೀದೀ ಕೂಸು ಬೆಳೀತು ಕೋಣೇ ಕೂಸು ಕೊಳೀತು
ಬೇವು ಕಾಗೆಗೆ ಇಂಪು ಮಾವು ಕೋಗಿಲೆಗೆ ಇಂಪು.
ಸಜ್ಜನರ ಸಂಗ ಹೆಜ್ಜೇನು ಸವಿದಂತೆ
ಸಾವಿರ ಸುಳ್ಳು ಹೇಳಿ ಒಂಡು ಮಡುವೆ ಮಾಡು
ದಾಯವಾಗಿ(=ದಾನವಾಗಿ) ಸಿಕ್ಕಿದರೆ, ನನಗೆ ಒಂದಿರಲಿ ನಮ್ಮಪ್ಪನಿಗೆ ಒಂದಿರಲಿ
ಕೀಲು ಸಣ್ಣದಾದರೂ ಗಾಲಿ ನಡೆಸುತ್ತದೆ
ರಾಗಿಕಲ್ಲು ತಿರುಗುವಾಗ ರಾಜ್ಯವೆಲ್ಲಾ ನೆಂಟರು
ಮಳೆ ನೀರನ್ನು ಬಿಟ್ಟು ಮಂಜಿನ ನೀರಿಗೆ ಕೈಯೊಡ್ಡಿದ ಹಾಗೆ.
ಶೆಟ್ಟಿ ಬಿಟ್ಟಲ್ಲೆ ಪಟ್ಣ
ನೆಂಟ ನೆರವಲ್ಲ ಕುಂಟ ಜೊತೆಯಲ್ಲ
ಬಂದರು ಬಾ ಅನ್ನದ ದರ್ಪಕುರುಡರ ಸಾವಸವೇ ಬೇಡ
ಒಳ್ಳೆಯ ಕೆಲಸಕ್ಕೆ ವಿಘ್ನ ಹೆಚ್ಚು.
ಕಂಗಾಲನ ಮನೀಗೆ ಕಂಗಾಲ ಹೋದರೆ ಗಂಗಾಳ ನೆಕ್ಕು ಅಂತಂತೆ
ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ
ಸೊಪ್ಪುಸೆದೆ ತಿನ್ನೋರ ಒಪ್ಪ ನೋಡು, ತುಪ್ಪತೊಗೆ ತಿನ್ನೋರ ರಂಪ ನೋಡು
ನುಡಿಯೊಳು ಕ೦ಪಿಡುವುದು ಬದುಕು
ವಿನಾಶ ಕಾಲಕ್ಕೆ ವಿಪರೀತ ಬುದ್ಧಿ
ಮುಟ್ಟಿದೋರ ಮೇಲೆ ಬಿಟ್ಟೆ ನನ್ನ ಪ್ರಾಣ ಮಾಡೋರನ್ನು ಕಂಡರೆ ನೋಡು ನನ್ನ ಸಿರೀನ
ಕಲಹವೇ ಕೇಡಿಗೆ ಮೂಲ.
ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ
ಕುಣೀಲಾರದ ಸೂಳೆ ನೆಲ ಡೊಂಕು ಅಂದ್ಳಂತೆ
ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿ
ಕಡಲೆ ಕಾಯೋಕೆ ಕಾಗೆ ಕಾವಲು ಹಾಕಿದಂತೆ
ಪದಾರ್ಥ ಸ೦ಘಾತದೊಳಿಲ್ಲ
ಮಾಡಿದ್ದುಣ್ಣೋ ಮಾರಾಯ
ಬರಗಾಲದಲ್ಲಿ ಅಧಿಕಮಾಸ ಬಂದ ಹಾಗೆ.
ನೀನಾಗದೆ ರಣಹೇಡಿ, ಕೀರ್ತಿ ಪಡೆ ಪ್ರಾಣ ನೀಡಿ.
ಓದೋದು ಕಾಶಿ ಖಂಡ, ತಿನ್ನೋದು ಮಶಿ ಕೆಂಡ
ಕೊಡುವ ದೇವರು ಬಡವನೇ?
ತರಬಲ್ಲವನ ಹೆಂಡತಿ ಅಡಜಾಣೆ (ಅಡಕವಾದ ಜಾಣ್ಮೆ ಉಳ್ಳವಳು)
ತುಂಬಿದ ಕೊಡ, ತುಳುಕೋದಿಲ್ಲ
ಅರಮನೆಯ ಮುಂದಿರಬೇಡ, ಕುದರೆಯ ಹಿಂದಿರಬೇಡ
ಒಲಿದರೆ ನಾರಿ ಮುನಿದರೆ ಮಾರಿ
ಕಳ್ಳನಿಗೊಂದು ಪಿಳ್ಳೆ ನೆವ
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
ದನ ತಿನ್ನುವವನಿಗೆ ಗೊಬ್ಬರದ ಆಣೆ
ಮದುವೆ ಆಗೋ ಗ೦ಡಿಗೆ ಅದೇ ಇಲ್ಲ ಅ೦ದ೦ಗೆ.
ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ
ರಟ್ಟೆ ಮುರಿದು ರೊಟ್ಟಿ ತಿನ್ನು ಕಟ್ಟೆ ಹಾಕಿ ಅನ್ನ ಉಣ್ಣು
ತಪ್ಪಲೇಲಿ ಇದ್ದದ್ದು ಹೋದರೆ ಕಪಾಲದಲ್ಲಿ ಇದ್ದದ್ದು ಹೋದೀತೇ
ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕಂಡನಂತೆ
ಆಕಾಶ ಹರಿದು ಬೀಳುವಾಗ ಕೈ ಅಡ್ಡ ಹಿಡಿಯಬಹುದೇ ?
ಮಾಡಿ ಉಣ್ಣು ಬೇಡಿದಷ್ಟು, ತಗಾದೆ ಮಾಡದೇ ಉಣ್ಣು ನೀಡಿದಷ್ಟು.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ
ಹುಬ್ಬೆ ಮಳೇಲಿ ಬಿತ್ತಿದರೆ ಹುಲ್ಲೂ ಇಲ್ಲ ಕಾಳೂ ಇಲ್ಲ
ಮಂತ್ರಕ್ಕಿಂತ ಉಗುಳೇ ಜಾಸ್ತಿ
ಆನೆಯಂಥದೂ ಮುಗ್ಗರಿಸ್ತದೆ
ಕಾರ್ಯವಾಸಿ ಕತ್ತೆ ಕಾಲು ಕಟ್ಟು
ತಾ ಕಳ್ಳೆ ಪರರ ನಂಬಳು,
ಮಾವನು ಇಲ್ಲದ ಮನೆಯೇಕೆ, ಹೆಂಡತಿಯಿಲ್ಲದ ಒಡವೆಯೇಕೆ?
ಊರಿಗೆಲ್ಲಾ ಒಬ್ಬಳೇ ಪದ್ಮಾವತಿ
ಕಂಡ ಮನೆಗೆ ಕಳ್ಳ ಬಂದ , ಉಂಡ ಮನೆಗೆ ನೆಂಟ ಬಂದ
ಸಾಲ ಕೊಳ್ಳುವಾಗ ಹಾಲು ಕುಡಿದಂತೆ, ಸಾಲ ತಿರುಗಿ ಕೊಡುವಾಗ ಕಿಬ್ಬದಿ ಕೀಲು ಮುರಿದಂತೆ
ಬೆಂದ ಮನೇಲಿ ಹಿರಿದದ್ದೇ ಲಾಭ.
ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ಈರಭದ್ರ
ಹಂಪಿಗೆ ಹೋಗುವುದಕ್ಕಿಂತ ಕೊಂಪೆಯಲ್ಲಿರುವುದೇ ಲೇಸು.
ಹತ್ತು ಮಕ್ಕಳ ತಾಯಿ ದಾರಿಯಲ್ಲಿ ಸಿಕ್ಕಿದ್ದನ್ನು ತಿಂದಂತೆ.
ಒಂದೊಂದು ಹನಿ ಬಿದ್ದು ನಿಂತಲ್ಲಿ ಮಡುವಾಯ್ತು
ತಾಯಿಯನ್ನು ಹೊಡೆಯಬಾರದು, ಗುಬ್ಬಿಯ ಗೂಡನ್ನು ತೆಗೆಯಬಾರದು.
ಸೂಳೆಗೆ ಮದುವೆ ಮಾಡಿದ ಹಾಗೆ
ಮುಳ್ಳು ಬಿತ್ತಿದವನಿಗೆ ನೀನು ಹೂಬಿತ್ತು.
ಬಿದ್ದಲ್ಲಿ ಸೋತಲ್ಲಿ ಹೊದಿದ್ದ ಬುದ್ಧಿ ತಪ್ಪಿತು
ಇದ್ದಾಗ ನವಾಬ ಸಾಬ, ಇಲ್ಲದಾಗ ಫಕೀರ ಸಾಬ.
ಅದ್ನೇ ಉಂಡೇನ್ ಅತ್ತೆಮ್ನೋರೇ, ಕದ ತೆಗೀರಿ ಮಾವ್ನೋರೇ ಅಂದ್ರಂತೆ
ರಂಗನ ಮುಂದೆ ಸಿಂಗನೆ ? ಸಿಂಗನ ಮುಂದೆ ಮಂಗನೆ ?
ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿಸಿದರು
ಹೊರಗೆ ಥಳುಕು, ಒಳಗೆ ಹುಳುಕು
ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
ಸಾವಿರ ಚಿತ್ತಾರ ಮಸಿ ನುಂಗಿತು
ಉಂಡೂ ಹೋದ; ಕೊಂಡೂ ಹೋದ
ಹಗಲು ಅರಸನ ಕಾಟ ಇರುಳು ದೆವ್ವದ ಕಾಟ
ಒಂದೊಂದು ಕಾಲಕ್ಕೆ ಒಂದೊಂದು ಪರಿ
ಸಾವಿರ ಕೊಟ್ಟರೂ ಸವತಿ ಮನೆ ಬೇಡ
ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ
ಹಾಡ್ತಾ ಹಾಡ್ತಾ ರಾಗ , ನರಳ್ತಾ ನರಳ್ತಾ ರೋಗ
ತಲೇ ಕೂದಲಿಲ್ಲದವಳು ತುರುಬು ಬಯಸಿದಳಂತೆ
ಸಂಸಾರಿ ಸಾವಾಸ ಮಾಡಿ ಸನ್ಯಾಸಿ ಕೆಟ್ಟ
ದನಿಯಿದ್ದವರೂ ಅತ್ತರೂ ಚಂದ ನಕ್ಕರೂ ಚಂದ
ನಾಯಿ ಬಾಲ ಡೊಂಕು
ಆಕಳು ಕಪ್ಪಾದರೂ ಹಾಲು ಕಪ್ಪೆ ?
ಇಂಬರಿತು ಕೊಡುವಳೆ ರಂಭೆ
ತಿಳಿದವ ಮಾಡ್ಯಾನು ನಳಪಾಕವ
ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು
ಇಷ್ಟನ್ನು ಕಂಡೆಯಾ ಕೃಷ್ಣಂಭಟ್ಟಾ ಅಂದರೆ,ಮುಪ್ಪಿನ ಕಾಲಕ್ಕೆ ಮೂರು ಜನ ಹೆಂಡಿರು
ಜರಡಿ ಸೂಜಿಗೆ ಹೇಳಿತಂತೆ: ನಿನ್ನ ಬಾಲದಲ್ಲಿ ತೂತು
ಕೋಪದಲ್ಲಿ ಕುಯ್ದ ಮೂಗು ಶಾಂತಿಯಲ್ಲಿ ಬಂದೀತೇ
ದಡ್ಡ ಮನುಷ್ಯ ನೆಲಕ್ಕೆ ಭಾರ, ಅನ್ನಕ್ಕೆ ಖಾರ.
ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು
ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರ೦ತೆ.
ಹಸಿದು ಹಲಸಿನ ಹಣ್ಣು ತಿನ್ನು ಉಂಡು ಮಾವಿನ ಹಣ್ಣು ತಿನ್ನು
ಸುಂಕದೋನ ಹತ್ರ ಸುಖದುಃಖ ಹೇಳಿಕೊಂಡ ಹಾಗೆ
ಕೊಂದ ಪಾಪ ತಿಂದು ಪರಿಹಾರ
ಎತ್ತು ಚಲೋದಾದರೆ ಇದ್ದ ಊರಲ್ಲೇ ಗಿರಾಕಿ.
ತಾರೇ ಬಡ್ಡೀ ನೀರಾ ಅಂದ್ರೆ ತರುವೆನು ನಿಲ್ಲೊ ತಿರುಕ ಮುರವ
ಹಾರುವರ ಕೇರೀಲಿ ಹಬ್ಬ ಆದ್ರೆ ಮೂಳನಾಯಿಗೇನು ಓಡಾಟ
ನಿದ್ದೆ ಗೈಯೋನ ಹೊತ್ತು ನುಂಗ್ತು
ಎತ್ತ ಹೋದರೂ ಬಿಡದು ಒತ್ತಿ ಕಾಡುವ ವಿಧಿ
ಲಾಲಿಸಿದರೆ ಮಕ್ಕಳು ಪೂಜಿಸಿದರೆ ದೇವರು
ಹಿಡಿ ತುಂಬ ಹಣವಿದ್ದರು ಗುಡಿ ಚೆನ್ನಾಗಿರಬೇಕು.
ನಾಡಳಿದು ನಾಡೊಡೆಯನಿಗೆ ಕೇಡು ನಾಡೊಡೆಯ ಅಳಿದು ನಾಡಿಗೆಲ್ಲ ಕೇಡು
ತನ್ನ ಹಲ್ಲು ತಾ ಮರಕೊಂಡು ಇನ್ನೊಬ್ಬನ ಮೇಲೆ ದೂರು ಹೇಳಿದ
ಹೋದ ಬದುಕಿಗೆ ಹನ್ನೆರಡು ದೇವರು
ಕಾವಿ ಉಟ್ಟವರೆಲ್ಲಾ ಸನ್ಯಾಸಿಗಳಲ್ಲ ಬೂದಿ ಬಳಿದವರೆಲ್ಲ ಬೈರಾಗಿಗಳಲ್ಲ
ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು
ಮೃತ್ಯು ಬಂದ ಮೇಲೆ ವೈದ್ಯ ಬಂದ.
ಶರಣರ ಬದುಕು ಅವರ ಮರಣದಲ್ಲಿ ನೋಡು.
ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಲಿಲ್ಲ
ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಬಳ್ಳ.
ಉರಿಯೋ ಬೆಂಕೀಲಿ ಎಣ್ಣೆ ಹೊಯಿದ ಹಾಗೆಯುಕ್ತಿಯ ಮಾತು ಮಕ್ಕಳಿಂದಾದರೂ ತಿಳುಕೊ
ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು
ಒಂದು ಹೊತ್ತು ಉಂಡವ ಯೋಗಿ ಎರಡು ಹೊತ್ತು ಉಂಡವ ಭೋಗಿ ಮೂರು ಹೊತ್ತು ಉಂಡವ ರೋಗಿ ನಾಲ್ಕು ಹೊತ್ತು ಉಂಡವ ಎತ್ತುಕೊಂಡು ಹೋಗಿ
ಹೇಳೋದು ಶಾಸ್ತ್ರ,ತಿನ್ನೋದು ಬದನೆಕಾಯಿ
ಹತ್ತರೊಟ್ಟಿಗೆ ಹನ್ನೊಂದು ಜಾತ್ರೆಯೊಟ್ಟಿಗೆ ಗೋವಿಂದು
ಕಡಗ ನೋಡಲಿ ಅ೦ತ ಗುಡಿಸಲು ಸುಟ್ಕೊ೦ಡ ಹಾಗೆ.
ಹತ್ತು ಜನಕ್ಕೆ ಬಿದ್ದ ನ್ಯಾಯ ಬೇಗ ಸಾಯಕಿಲ್ಲ
ಒಂದರ ಮೊದಲೊಳಗೆ ಬಂದಿದೆ ಜಗವೆಲ್ಲ
ಬಿಟ್ಟವರ ಕಂಡು ಬಿಟ್ಟು ಬಾಳುಗೆಟ್ಟ
ಬೆಳೆಯುವ ಪೈರು ಮೊಳಕೆಯಲ್ಲಿ

  ಗಾದೆ / ನಾಣ್ಣುಡಿ ಸಂಗ್ರಹ ಭಾಗ - ೧೦ Wisdom / Proverbs Kannada

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೧ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೨ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೩ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೪ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೫ ಕ್ಕೆ ಇಲ್ಲಿ ಕ್ಲಿಕ್ ಮಾಡಿ

  ವಿಷ್ಣುವಿನ ಅನುಗ್ರಹ ಪ್ರಾಪ್ತಿಗೆ ಏಕಾದಶಿಯಲ್ಲಿ ಏನು ಮಾಡಬೇಕು ?

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೬ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೭ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೮ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೯ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೧೦ ಕ್ಕೆ ಇಲ್ಲಿ ಕ್ಲಿಕ್ ಮಾಡಿ

  ಪ್ರತಿನಿತ್ಯದ ಪೂಜೆಯಲ್ಲಿ ಈ ನಿಯಮ ಪಾಲಿಸಿದರೆ ನಿಮಗೆ ಒಳ್ಳೆಯ ಫಲ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೧೧ ಕ್ಕೆ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

Translate »