ಬೆಳಗ್ಗೆ ಮತ್ತು ಸಾಯಂಕಾಲ ಎರಡು ಸಲ ಏಕೆ ಆರತಿಯನ್ನು ಮಾಡಬೇಕು…?
ಸೂರ್ಯೋದಯದ ಸಮಯದಲ್ಲಿ ದೇವತೆಗಳ ಲಹರಿಗಳ ಆಗಮನವಾಗುತ್ತಿರುವಾಗ ಪ್ರಕ್ಷೇಪಿತವಾಗುವ ತಾರಕ ಚೈತನ್ಯವನ್ನು ಸ್ವಾಗತಿಸಲು ಮತ್ತು ಸೂರ್ಯಾಸ್ತದ ಸಮಯದಲ್ಲಿ ರಜ-ತಮಾತ್ಮಕ ಲಹರಿಗಳ ಉಚ್ಚಾಟನೆಗಾಗಿ ಆರತಿಯನ್ನು ಮಾಡುವುದು…
ಸೂರ್ಯೋದಯದ ಸಮಯದಲ್ಲಿ ರಾತ್ರಿಯ ರಜ-ತಮಾತ್ಮಕ ವಾತಾವರಣವು ಲಯವಾಗಿ ಬ್ರಹ್ಮಾಂಡದಲ್ಲಿ ದೇವತೆಗಳ ತೇಜತತ್ತ್ವದ ಲಹರಿಗಳ ಆಗಮನವಾಗುತ್ತದೆ. ಬೆಳಗ್ಗೆ ಸೂರ್ಯೋದಯದ ಸಮಯದಲ್ಲಿ ದೇವತೆಗಳ ಲಹರಿಗಳ ಆಗಮನವಾಗುತ್ತಿರುವಾಗ, ಪ್ರಕ್ಷೇಪಿತವಾಗುವ ತಾರಕ ಚೈತನ್ಯವನ್ನು ಸ್ವಾಗತಿಸಲು ಆರತಿಯನ್ನು ಮಾಡಬೇಕು ಮತ್ತು ಸಾಯಂಕಾಲ ಸೂರ್ಯಾಸ್ತದ ಸಮಯದಲ್ಲಿ ರಜ-ತಮಾತ್ಮಕ ಲಹರಿಗಳ ಉಚ್ಚಾಟನೆಯನ್ನು ಮಾಡಲು ದೇವತೆಗಳ ಮಾರಕ ಚೈತನ್ಯದ (ಆವಾಹನಾತ್ಮಕ) ಆರಾಧನೆಯನ್ನು ಆರತಿಯ ಮಾಧ್ಯಮದಿಂದ ಮಾಡಬೇಕು. ಹೀಗೆ ಆರತಿಯನ್ನು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ, ಎರಡು ಸಲ ಮಾಡಬೇಕು.
ಸೂರ್ಯಾಸ್ತದ ಸಮಯದಲ್ಲಿ ಆರತಿಯನ್ನು ಮಾಡುವುದರ ಹಿಂದಿನ ಶಾಸ್ತ್ರವೇನು?
(ಸೂರ್ಯಾಸ್ತದ ಸಮಯದಲ್ಲಿ ಹೆಚ್ಚಾದ ಕೆಟ್ಟ ಶಕ್ತಿಗಳ ಸಂಚಾರದ ಮೇಲೆ ಹಿಡಿತವನ್ನು ಸಾಧಿಸಲು ದೇವತೆಗಳ ಲಹರಿಗಳ ಆಗಮನವಾಗಬೇಕೆಂದು ಆರತಿಯನ್ನು ಮಾಡುವುದು).
ಸೂರ್ಯಾಸ್ತದ ಸಮಯದಲ್ಲಿ ಸೂರ್ಯನ ಕಿರಣಗಳಲ್ಲಿನ ತೇಜತತ್ತ್ವದ ಪ್ರಮಾಣವು ಕಡಿಮೆ ಆಗತೊಡಗುವುದರಿಂದ ವಾಯುಮಂಡಲದಲ್ಲಿನ ರಜ-ತಮ ಕಣಗಳ ಪ್ರಾಬಲ್ಯವು ಹೆಚ್ಚಾಗುತ್ತದೆ, ಅಲ್ಲದೇ ರಜ-ತಮಾತ್ಮಕ ಲಹರಿಗಳ ನಿರ್ಮಿತಿಯ ಪ್ರಮಾಣವು ಹೆಚ್ಚಾಗುತ್ತದೆ. ಇದರ ಲಾಭವನ್ನು ಪಡೆದುಕೊಂಡು ಕೆಟ್ಟ ಶಕ್ತಿಗಳು ವಾತಾವರಣದಲ್ಲಿ ತಮ್ಮ ಸಂಚಾರವನ್ನು ಹೆಚ್ಚಿಸುತ್ತವೆ. ಇಂತಹ ರಜ-ತಮಾತ್ಮಕ ವಾಯುಮಂಡಲದಿಂದ ತೊಂದರೆಯಾಗಬಾರದೆಂದು ಆರತಿಯ ಮಾಧ್ಯಮದಿಂದ ಪ್ರಕ್ಷೇಪಿತವಾಗುವ ನಾದಲಹರಿಗಳಿಂದ ದೇವತೆಗಳ ಲಹರಿಗಳನ್ನು ಆಹ್ವಾನಿಸಿ, ಅವುಗಳನ್ನು ಬ್ರಹ್ಮಾಂಡದ ಕಕ್ಷೆಯಲ್ಲಿ ತರುವುದು ಆವಶ್ಯಕವಾಗಿರುತ್ತದೆ. ಆರತಿಯಿಂದ ವಾಯುಮಂಡಲದಲ್ಲಿನ ದೇವತೆಗಳ ಚೈತನ್ಯಮಯ ಲಹರಿಗಳ ಪ್ರಮಾಣವು ಹೆಚ್ಚಾಗಿ ತ್ರಾಸದಾಯಕ ಸ್ಪಂದನಗಳ ಪ್ರಮಾಣವು ಕಡಿಮೆಯಾಗುತ್ತದೆ ಮತ್ತು ಜೀವದ ಸುತ್ತಲೂ ಸಂರಕ್ಷಣಾಕವಚವು ನಿರ್ಮಾಣವಾಗುತ್ತದೆ.
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!