ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸರ್ಪ ಸುತ್ತು ವೈರಸ್ ಸೋಂಕಿಗೆ ಇಲ್ಲಿದೆ ಮನೆಮದ್ದು

ಸರ್ಪ ಸುತ್ತು ವೈರಸ್ ಸೋಂಕಿಗೆ ಇಲ್ಲಿದೆ ಮನೆಮದ್ದು

ಬೆಂಗಳೂರು : ಸರ್ಪ ಸುತ್ತು (herpes-zoster)ಎನ್ನುವುದು ಅದು ಒಂದು ವೈರಸ್ ಸೋಂಕು. ಇದರಿಂದ ಶರೀರದಲ್ಲಿ ನೋವು ಹಾಗು ಉರಿಯಿಂದ ಕೂಡಿರುವ ಚಿಕ್ಕ ಚಿಕ್ಕ ಗುಳ್ಳೆಗಳು ಏಳುತ್ತವೆ. ಹಾಗೇ ಅದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಡುತ್ತದೆ. ಅದನ್ನು ಕೆಲವು ಮನೆಮದ್ದಿನಿಂದ ಹೋಗಲಾಡಿಸಬಹುದು.

1. ಬೇವಿನ ಎಲೆಯ ರಸವನ್ನು ಮೈಗೆಲ್ಲಾ ಹಚ್ಚುವುದರಿಂದ ಈ ಸೋಂಕಿನಿಂದ ಮುಕ್ತಿಹೊಂದಬಹುದು.

2. ಗರಿಕೆಯನ್ನು ಬೇರು ಸಮೇತ ಕಿತ್ತು ಚೆನ್ನಾಗಿ ನೀರಿನಲ್ಲಿತೊಳೆದು ನುಣ್ಣಗೆ ಅರೆದು ಸರ್ಪ ಸುತ್ತು ಇರುವ ಜಾಗಕ್ಕೆ ಹಚ್ಚಬೇಕು.

  40 ವಯಸ್ಸು ದಾಟಿದವರಿಗೆ ಆರೋಗ್ಯ ಸಲಹೆ

3. ಗೋಟು ಅಡಿಕೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ಸರ್ಪ ಸುತ್ತುಇರುವ ಜಾಗಕ್ಕೆ ದಿನಕ್ಕೆ ಸರ್ಪ ಸುತ್ತುಜಾಗಕ್ಕೆ 4 ಬಾರಿ ಹಚ್ಚಬೇಕು.

4. ಕೆಂಪು ಅಥವಾ ಬಿಳಿ ಅಗಸೆ ಸೊಪ್ಪನ್ನು ತಣ್ಣೀರಿನಲ್ಲಿ ನುಣ್ಣಗೆ ಅರೆದು ಹಚ್ಚಬೇಕು.

5. ನೆಲ್ಲಿ ಪುಡಿ , ಲಾವಂಚ , ಸೊಗದೆ ಬೇರು ಪ್ರತಿಯೊಂದನ್ನು 10-15 ಗ್ರಾಂ ನಷ್ಟು ತೆಗೆದುಕೊಂಡು ಬೇರೆ ಬೇರೆಯಾಗಿ ಪುಡಿ ಮಾಡಿ 8ರಷ್ಟು ನೀರು ಬೇರೆಸಿ ಕುದಿಸಿ ಅದು ಅರ್ಧದಷಗಟು ಆದ ಮೇಲೆ ಇಳಿಸಿ ಆರಿಸಿ ದಿನಕ್ಕೆ 2 ಬಾರಿ ಸೇವಿಸಬೇಕು , 2 ಚಮಚಕ್ಕಿಂತ ಜಾಸ್ತಿ ಸೇವಿಸಬಾರದು.

  ಆರೋಗ್ಯಕಾರಿ ನಿಂಬೆರಸ !!!!

ಇವುಗಳನ್ನು 21ದಿನ ಮಾಡಬೇಕು.

ಈ ಸಮಯದಲ್ಲಿ ಉದ್ದಿನಕಾಳು , ಹುರುಳಿಕಾಳು , ಈರುಳ್ಳಿ , ಬೆಳ್ಳುಳ್ಳಿ , ಜಿಡ್ಡು ಪದಾರ್ಥ , ಬೆಲ್ಲ , ಸಿಹಿ ಪದಾರ್ಥ ಹಾಗು ಹಗಲು ನಿದ್ದೆ ಮಾಡಬಾರದು.

Leave a Reply

Your email address will not be published. Required fields are marked *

Translate »

You cannot copy content of this page