ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ವಿಷ್ಣುವಿನ ಅನುಗ್ರಹ ಪ್ರಾಪ್ತಿಗೆ ಏಕಾದಶಿಯಲ್ಲಿ ಏನು ಮಾಡಬೇಕು ?

ವಿಷ್ಣುವಿನ ಅನುಗ್ರಹ ಪ್ರಾಪ್ತಿಗೆ ಈ ಎಲ್ಲಾ ಕೈಂಕರ್ಯಗಳನ್ನು ಮಾಡಬೇಕಂತೆ

ಹಿಂದೂ ಧರ್ಮದಲ್ಲಿ ಪ್ರತಿಯೊಂದು ಏಕಾದಶಿಗೂ ಅದರದ್ದೇ ಆದ ಮಹತ್ವ, ವಿಶೇಷತೆ ಇದೆ. ಹೀಗಾಗಿ, ಏಕಾದಶಿ ವ್ರತವನ್ನು ಎಲ್ಲರೂ ಬಲು ಶ್ರದ್ಧಾ ಭಕ್ತಿಯಿಂದಲೇ ಮಾಡುತ್ತಾರೆ. ಅಂದು ಉಪವಾಸ ವ್ರತವನ್ನಾಚರಿಸಿ, ದೇವರ ಅನುಗ್ರಹ ಪಡೆಯಲು ಹಲವು ಪೂಜಾ ಕೈಂಕರ್ಯಗಳನ್ನೂ ನೆರವೇರಿಸುತ್ತಾರೆ.

ಅಂತೆಯೇ, ಫೆಬ್ರವರಿಯಲ್ಲಿ ಜಯ ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ಏಕಾದಶಿಯನ್ನು ಕೆಲವೆಡೆ ಭೀಷ್ಮ ಏಕಾದಶಿ ಅಥವಾ ಭೂಮಿ ಏಕಾದಶಿ ಎಂದೂ ಕರೆಯಲಾಗುತ್ತದೆ. ಇದು ಭಗವಾನ್ ವಿಷ್ಣುವಿನ ಆರಾಧನೆಗೆ ಅತ್ಯಂತ ಮಂಗಳಕರ ದಿನ. ಜಯ ಏಕಾದಶಿಯ ಸುಸಂದರ್ಭದಲ್ಲಿ ವಿಷ್ಣು ಮತ್ತು ದೇವಿ ಲಕ್ಷ್ಮಿಯನ್ನು ಪೂಜಿಸುವುದು, ಏಕಾದಶಿ ಉಪವಾಸವನ್ನು ಆಚರಿಸುವುದು ಅಶ್ವಮೇಧ ಯಾಗ ಮಾಡಿದಷ್ಟೇ ಫಲ ನೀಡುತ್ತದೆ ಎಂಬುದು ನಂಬಿಕೆ. ಈ ವಿಶೇಷ ದಿನದಂದು ಆಸ್ತಿಕರು ಮಾಡುವ ಪೂಜಾ ಕೈಂಕರ್ಯಗಳಿಂದ ಶ್ರೀಹರಿ ಸಂತುಷ್ಟನಾಗುತ್ತಾರೆ ಮತ್ತು ಸುಖ, ಸಂತೋಷ, ಸಮೃದ್ಧಿಯನ್ನು ಅನುಗ್ರಹಿಸುತ್ತಾರೆ ಎಂಬುದು ಆಸ್ತಿಕರ ಬಲವಾದ ನಂಬಿಕೆ.

  ನವರಾತ್ರಿ 6ನೇ ದಿನ ಕಾತ್ಯಾಯನಿ ದೇವಿ ಪೂಜೆ ವಿಧಾನ

ಇವೆಲ್ಲಾ ಮಂಗಳಕರವಂತೆ :

ಏಕಾದಶಿಯ ದಿನದಂದು ತುಳಸಿ ಗಿಡವನ್ನು ನೆಡುವುದು ಉತ್ತಮವಂತೆ. ತುಳಸಿ ಎಂದರೆ ವಿಷ್ಣುವಿಗೆ ಪ್ರಿಯ. ವಿಷ್ಣು ದೇವರ ಪೂಜೆಗೆ ತುಳಸಿ ಬೇಕೇಬೇಕು. ಹೀಗಾಗಿ, ಜಯ ಏಕಾದಶಿಯಂದು ತುಳಸಿ ನೆಡುವುದು ಮಂಗಳಕರವಂತೆ. ಇದರಿಂದ ವಿಷ್ಣುದೇವರು ಪ್ರಸನ್ನರಾಗುತ್ತಾರೆ ಎಂಬುದು ನಂಬಿಕೆ.

ಈ ದಿನ ಚೆಂಡು ಹೂವಿನ ಗಿಡವನ್ನು ನೆಡುವುದೂ ಒಳ್ಳೆಯದಂತೆ. ಮನೆಯ ಉತ್ತರ ದಿಕ್ಕಿನಲ್ಲಿ ಚೆಂಡು ಹೂವು ಅಥವಾ ಗೊಂಡೆ ಹೂವಿನ ಗಿಡವನ್ನು ನೆಡಬೇಕಂತೆ. ಹಿಂದೂ ಧರ್ಮದಲ್ಲಿ ಈ ಹೂವು ಒಳ್ಳೆಯತನವನ್ನು ಸಂಕೇತಿಸುತ್ತದೆ. ಜೊತೆಗೆ, ಈ ಹೂವು ವಿಷ್ಣುವಿಗೆ ಬಲು ಪ್ರಿಯ. ಈ ಹೂವುಗಳು ಹಳದಿ ಮತ್ತು ಕಿತ್ತಳೆ ಬಣ್ಣವನ್ನು ಹೊಂದಿರುತ್ತವೆ. ಈ ಬಣ್ಣಗಳು ಭಗವಾನ್‌ ವಿಷ್ಣುವಿಗೆ ಅತ್ಯಂತ ಇಷ್ಟ. ಹೀಗಾಗಿ, ಶ್ರೀಹರಿಗೆ ಸಂಬಂಧಿಸಿದ ಪ್ರತಿ ಪೂಜೆಯಲ್ಲೂ ಈ ಹೂವನ್ನು ಬಳಸಲಾಗುತ್ತದೆ.

  ದೀಪ ದರ್ಶನ - ವಿವಿಧ ದೀಪ ಹಚ್ಚುವ ವಿಧಾನ

ಈ ವಿಶೇಷ ದಿನದಂದು ದೇವರ ಅನುಗ್ರಹವನ್ನು ಪಡೆಯಲು ಅಗತ್ಯ ಇರುವವರಿಗೆ ಆಹಾರ, ಹಣ ಅಥವಾ ಬಟ್ಟೆಗಳನ್ನು ದಾನ ಮಾಡುವುದು ಪುಣ್ಯದಾಯಕ ಎನ್ನುತ್ತಾರೆ ಹಿರಿಯರು. ನಾವು ಯಥಾಶಕ್ತಿ ಮಾಡುವ ದಾನಕ್ಕೆ ದೇವರ ಆಶೀರ್ವಾದ ಸದಾ ಇರುತ್ತದೆ ಎಂಬುದು ಜನರ ನಂಬಿಕೆ.

ಜಯ ಏಕಾದಶಿಯ ಪೂಜೆಯ ಸಂದರ್ಭದಲ್ಲಿ ವಿಷ್ಣು ದೇವರಿಗೆ ಹಳದಿ ಬಣ್ಣದ ಹೂವುಗಳನ್ನು ಅರ್ಪಿಸಿ ಮತ್ತು ಪವಿತ್ರ ದಾರಕ್ಕೆ ಕುಂಕುಮವನ್ನು ಹಚ್ಚಿ ದೇವರಿಗೆ ಅರ್ಪಿಸಿ ಪೂಜಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಕೂಡಾ ಇದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ ಅಶ್ವತ್ಥ ಮರದಲ್ಲಿ ವಿಷ್ಣುವಿನ ಸಾನಿಧ್ಯವಿದೆ. ಹೀಗಾಗಿ, ಈ ಮಂಗಳಕರ ದಿನದಂದು ಅಶ್ವತ್ಥ ಮರಕ್ಕೆ ನೀರು ಅರ್ಪಿಸುವುದು ಉತ್ತಮವಂತೆ ಹಾಗೂ ಸಂಜೆ ಈ ಮರದ ಎದುರು ದೀಪವನ್ನು ಹಚ್ಚಿದರೆ ಒಳಿತಾಗುತ್ತದೆ ಎಂಬುದು ನಂಬಿಕೆ. ಹೀಗೆ ಮಾಡಿದರೆ ವಿಷ್ಣು ದೇವರು ಪ್ರಸನ್ನರಾಗುತ್ತಾರೆ ಮತ್ತು ಸಂಪತ್ತು, ಖುಷಿಯನ್ನು ಕರುಣಿಸುತ್ತಾರೆ ಎಂಬುದು ಆಸ್ತಿಕರ ವಿಶ್ವಾಸ.

  ಸಿಡಿಲಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೆ ?

ಜನಮಾನಸದಲ್ಲಿರುವ ಧಾರ್ಮಿಕ ನಂಬಿಕೆ, ಮಾಹಿತಿಯನ್ನು ಆಧರಿಸಿವೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ನೀವು ಇವುಗಳ ಸಂಪೂರ್ಣ ವಿವರಗಳನ್ನು ತಿಳಿಯಲು ಸಂಬಂಧಿತ ಪರಿಣತರನ್ನು ಸಂಪರ್ಕಿಸಬಹುದು.
ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!

Leave a Reply

Your email address will not be published. Required fields are marked *

Translate »