ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ತುಳಸಿ ಗಿಡ ಮುಟ್ಟುವ ಮುನ್ನ

ತುಳಸಿ ಗಿಡ ಮುಟ್ಟುವ ಮುನ್ನ ಇವುಗಳನ್ನು ಗಮನದಲ್ಲಿಟ್ಟುಕೊಳ್ಳಿ..!

ಹಿಂದೂ ಧರ್ಮೀಯರ ಪಾಲಿನ ಪವಿತ್ರ ಗಿಡಗಳ ಸಾಲಿಗೆ ತುಳಸಿ ಅಗ್ರಗಣ್ಯ ಸ್ಥಾನವನ್ನು ಸೇರುತ್ತದೆ. ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ತುಳಸಿಯನ್ನು ಪೂಜನೀಯ ಭಾವದಿಂದಲೇ ನೋಡಲಾಗುತ್ತದೆ.

ಹಿಂದೂ ಧರ್ಮೀಯರ ಪಾಲಿಗೆ ತುಳಸಿ ಬರೀ ಗಿಡವಲ್ಲ. ಅದು ದೈವ ಸ್ವರೂಪಿ. ಬಹಳ ಶ್ರದ್ಧೆ, ಭಕ್ತಿಯಿಂದಲೇ ತುಳಸಿಯನ್ನು ಪೂಜಿಸುವ ಪರಿಪಾಠ ನಮ್ಮಲ್ಲಿದೆ. ಪ್ರತಿ ಹಿಂದೂ ಧರ್ಮೀಯರ ಮನೆ ಮುಂದೆ ತುಳಸಿ ಗಿಡ ಇದ್ದೇ ಇರುತ್ತದೆ. ಆಯುರ್ವೇದದಲ್ಲೂ ತುಳಸಿಗೆ ಮಹತ್ವದ ಸ್ಥಾನವಿದೆ. ತುಳಸಿ ಮಾತೆ ಎಂದೇ ಪೂಜನೀಯ ಭಾವದಿಂದ ನೋಡಲ್ಪಡುವ ತುಳಸಿಯ ಆರೈಕೆಯಲ್ಲಿ ಹೆಚ್ಚಿನ ಕಾಳಜಿ ಅಗತ್ಯ. ಜತೆಗೆ, ತುಳಸಿಯ ಆರೈಕೆಯಲ್ಲಿ ಸಾಕಷ್ಟು ನಿಯಮಾವಳಿಗಳೂ ಇವೆ. ಆ ನಿಯಮಗಳಲ್ಲಿ ಕೆಲವನ್ನು ಇಲ್ಲಿ ನೋಡೋಣ.
ಸೂರ್ಯಾಸ್ತದ ನಂತರ ಮುಟ್ಟುವಂತಿಲ್ಲ

ಸೂರ್ಯಾಸ್ತದ ಅವಧಿಯನ್ನೂ ಬಹಳ ವಿಶೇಷ ಎಂದು ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ. ಹೀಗಾಗಿ, ಈ ಸಂದರ್ಭದಲ್ಲಿ ಕೆಲವೊಂದು ಕಾರ್ಯಗಳನ್ನು ಮಾಡಬಾರದು. ತುಳಸಿಯ ವಿಷಯಕ್ಕೂ ಇದು ಅನ್ವಯವಾಗುತ್ತದೆ. ತುಳಸಿ ಎಲ್ಲರ ಪಾಲಿಗೂ ಅತ್ಯಂತ ಪವಿತ್ರ. ತುಳಸಿಯಿಂದ ಆರೋಗ್ಯಕ್ಕೂ ನಾನಾ ಪ್ರಯೋಜನಗಳಿವೆ. ಆದರೆ, ಈ ತುಳಸಿ ಗಿಡವನ್ನು ಮುಟ್ಟುವ ಮುನ್ನ ಕೆಲವೊಂದು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅಂತೆಯೇ, ತುಳಸಿ ಗಿಡವನ್ನು ಸೂರ್ಯಾಸ್ತದ ನಂತರ ಮುಟ್ಟಬಾರದು, ನೀರು ಹಾಕಬಾರದು ಎಂಬ ನಿಯಮ ಇದೆ. ಅನಾದಿ ಕಾಲದಿಂದಲೂ ಈ ನಿಯಮವನ್ನು ಪಾಲಿಸಿಕೊಂಡು ಬರಲಾಗುತ್ತದೆ. ಒಂದೊಮ್ಮೆ ಸೂರ್ಯಾಸ್ತದ ನಂತರ ತುಳಸಿ ಗಿಡವನ್ನು ಮುಟ್ಟಿದರೆ ದೇವಿ ಲಕ್ಷ್ಮೀಯು ಕೋಪಗೊಳ್ಳುತ್ತಾಳೆ ಎಂಬ ನಂಬಿಕೆ ಇದೆ.

  ಏಕಾದಶಿಗಳ ಹೆಸರುಗಳು ಮತ್ತು ಫಲ

ಕೈಗಳ ಸ್ವಚ್ಛತೆ

ಮೊದಲೇ ಹೇಳಿದಂತೆ ತುಳಸಿ ಅತ್ಯಂತ ಪವಿತ್ರ ಸಸಿ. ಹೀಗಾಗಿ, ತುಳಸಿಯನ್ನು ಮುಟ್ಟುವ ವಿಷಯದಲ್ಲೂ ಶುದ್ಧಾಚಾರ ಪಾಲಿಸುವುದು ಬಹಳ ಅಗತ್ಯ. ಎಂದಿಗೂ ಕೊಳಕಾದ ಕೈಗಳಿಂದ ತುಳಸಿ ಗಿಡವನ್ನು ಮುಟ್ಟಬೇಡಿ. ಅದು ಒಳಿತಲ್ಲ. ಕೈಗಳನ್ನು ಚೆನ್ನಾಗಿ ತೊಳೆದ ನಂತರವೇ ತುಳಸಿ ಗಿಡವನ್ನು ಮುಟ್ಟಬೇಕು ಎಂಬ ನಿಯಮವಿದೆ. ಸ್ನಾನ ಮಾಡಿದ ಬಳಿಕವೇ ತುಳಸಿಯನ್ನು ಪೂಜಿಸಬೇಕು. ತುಳಸಿಯ ಆರಾಧನೆಯಲ್ಲಿ ಶುಚಿತ್ವಕ್ಕೆ ಒತ್ತು ನೀಡುವುದು ಬಹಳ ಮುಖ್ಯ.

ತುಳಸಿ ತರಲು ದಿನ

ಹಿಂದೂ ಧರ್ಮೀಯರ ಪ್ರತಿ ಮನೆಯಲ್ಲೂ ತುಳಸಿ ಬೇಕೇಬೇಕು. ಅಂತೆಯೇ ತುಳಸಿಯನ್ನು ಮನೆಗೆ ತರುವುದಕ್ಕೂ ಸೂಕ್ತ ದಿನಗಳಿವೆ. ತುಳಸಿ ಗಿಡವನ್ನು ಖರೀದಿಸಲು ಹೋಗಲು ಬಯಸಿದರೆ ಸರಿಯಾದ ದಿನವನ್ನು ಆಯ್ದುಕೊಳ್ಳಿ. ತುಳಸಿ ಖರೀದಿಸಲು ಗುರುವಾರ ಉತ್ತಮವಾದ ದಿನವೆಂದು ಪರಿಗಣಿಸಲಾಗಿದೆ. ಗುರುವಾರ ವಿಷ್ಣು ದೇವರನ್ನು ಪೂಜಿಸಲಾಗುತ್ತದೆ. ವಿಷ್ಣುವಿಗೆ ತುಳಸಿ ಅತ್ಯಂತ ಪ್ರಿಯ. ಹೀಗಾಗಿ, ಗುರುವಾರದಂದು ತುಳಸಿಯನ್ನು ಮನೆಗೆ ತರುವುದು ಮಂಗಳಕರ ಎಂದು ನಂಬಲಾಗಿದೆ.

  ಕಾಲಗಣನೆ , ಪಂಚಾಂಗ , ವಾರ, ತಿಥಿ, ನಕ್ಷತ್ರ, ಯೋಗ, ಮತ್ತು ಕರಣ ಬಗ್ಗೆ ತಿಳಿಯೋಣ

ಈ ದೇವರುಗಳಿಗೆ ತುಳಸಿ ಅರ್ಪಿಸಬಾರದು ಎಂಬ ನಂಬಿಕೆ ಇದೆ

ಭಗವಾನ್ ವಿಷ್ಣುವಿಗೆ ತುಳಸಿ ಎಂದರೆ ಅತ್ಯಂತ ಪ್ರಿಯ. ಕೃಷ್ಣನ ಪೂಜೆಗೆ ತುಳಸಿ ಅಗತ್ಯವಾಗಿ ಬೇಕೇಬೇಕು. ತುಳಸಿ ಎಲೆಯನ್ನು ವಿಷ್ಣು ಮತ್ತು ವಿಷ್ಣು ಸಂಬಂಧಿಸಿದ ದೇವರಿಗೆ ಅರ್ಪಿಸಲಾಗುತ್ತದೆ. ಆದರೆ, ಕೆಲವು ದೇವರ ಪೂಜೆಯಲ್ಲಿ ತುಳಸಿ ಎಲೆಗಳನ್ನು ಬಳಸುವಂತಿಲ್ಲ. ಶಿವನ ಪೂಜೆಯಲ್ಲಿ ತುಳಸಿಯನ್ನು ಬಳಸುವುದಿಲ್ಲ ಮತ್ತು ಗಣಪತಿಗೂ ತುಳಸಿಯನ್ನು ಅರ್ಪಿಸುವುದಿಲ್ಲ. ಸ್ತೀ ದೇವತೆಗಳ ಪೂಜೆಯಲ್ಲಿ ಸಹ ತುಳಸೀ ಅರ್ಪಿಸಬಾರದು. ಇದಕ್ಕೊಂದು ಕಥೆ ಕೂಡಾ ಸಿಗುತ್ತದೆ. ಗಣಪತಿಯ ಮೇಲೆ ಆಕರ್ಷಿತಳಾದ ತುಳಸಿ ವಿವಾಹವಾಗಲು ಬಯಸುತ್ತಾಳೆ. ಆದರೆ, ಇದನ್ನು ಗಣಪತಿ ವಿನಮ್ರತೆಯಿಂದ ನಿರಾಕರಿಸುತ್ತಾನೆ. ಇದರಿಂದ ಕೋಪಗೊಂಡ ತುಳಸಿ ಗಣೇಶನಿಗೆ ಎರಡೆರಡು ಬಾರಿ ಮದುವೆಯಾಗುವಂತೆ ಆಗಲಿ ಎಂದು ಶಪಿಸುತ್ತಾಳೆ. ಇದರಿಂದ ಸಿಟ್ಟಾದ ವಿನಾಯಕ ನೀನು ರಾಕ್ಷಸನನ್ನು ಮದುವೆಯಾಗುವಂತಾಗಲಿ ಎಂದು ತುಳಸಿಗೆ ಶಾಪಕೊಡುತ್ತಾನೆ. ಇದಾದ ಬಳಿಕ ತುಳಸಿಗೆ ತಪ್ಪಿನ ಅರಿವಾಗಿ ಬೇಸರದಲ್ಲಿ ಗಣಪತಿ ಬಳಿ ಕ್ಷಮೆಯಾಚಿಸುತ್ತಾಳೆ. ಗಣಪತಿಗೂ ಮನಸ್ಸು ಕರಗಿ, ನಿನಗೆ ಪ್ರಪಂಚದಲ್ಲಿ ಮಹತ್ವದ ಸ್ಥಾನ ಸಿಗಲಿ ಎಂದು ವರವನ್ನು ನೀಡುತ್ತಾನೆ ಎಂಬುದು ನಂಬಿಕೆ. ಹೀಗಾಗಿ, ಗಣೇಶನ ಪೂಜೆಯಲ್ಲಿ ತುಳಸಿಯನ್ನು ಬಳಸದೇ ಇದ್ದರೂ ಲಕ್ಷ್ಮೀ, ವಿಷ್ಣುವಿನ ಪೂಜೆಯಲ್ಲಿ ತುಳಸಿ ಬೇಕೇಬೇಕಾಗಿದೆ.

  ಶಿವನ 21 ಹೆಸರುಗಳು ಮತ್ತು ಅರ್ಥ

ತುಳಸಿ ಗಿಡ ನೆಡುವುದು ಹೇಗೆ

ಉತ್ತರ ಹಾಗೂ ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದು ಉತ್ತಮ. ಇದರಿಂದ ಉತ್ತಮ ಫಲಗಳು ದೊರೆಯುತ್ತದೆ ಎಂಬುದು ನಂಬಿಕೆ ಜೊತೆಗೆ, ಇದರಿಂದ ಋಣಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂಬ ನಂಬಿಕೆಯೂ ಆಸ್ತಿಕರಲ್ಲಿದೆ. ಇನ್ನು ತುಳಸಿ ಗಿಡವನ್ನು ಪ್ಲಾಸ್ಟಿಕ್ ಕುಂಡದಲ್ಲಿ ನೆಡುವುದು ಸೂಕ್ತವಲ್ಲ ಎಂದೂ ಹೇಳಲಾಗುತ್ತದೆ. ಮಣ್ಣಿನ ಕುಂಡ ಅಥವಾ ಸರಿಯಾದ ರೀತಿಯಲ್ಲಿ ನಿರ್ಮಿಸಲಾದ ತುಳಸಿಕಟ್ಟೆಯಲ್ಲಿ ತುಳಸಿ ನೆಡುವುದು ಉತ್ತಮ. ಇದಲ್ಲದೆ, ಒಣಗಿದ ತುಳಸಿ ಗಿಡಗಳನ್ನು ಸಾಮಾನ್ಯ ಗಿಡಗಳಂತೆ ಎಸೆಯದೆ, ಅದನ್ನು ನೀರಿನಲ್ಲಿ ವಿಸರ್ಜಿಸುವುದು ಸೂಕ್ತ ಎಂಬ ನಂಬಿಕೆ ಕೂಡಾ ಇದೆ. ಇನ್ನು ತುಳಸಿ ಗಿಡ ನೆಡುವ ಸ್ಥಳ ಸ್ವಚ್ಛವಾಗಿರಲಿ ಮತ್ತು ಸಾಕಷ್ಟು ಸೂರ್ಯನ ಬೆಳಕನ್ನು ಬೀಳುವ ಜಾಗವಾಗಿರಲಿ.

Leave a Reply

Your email address will not be published. Required fields are marked *

Translate »