ಇಂದು ಬಹಳ ಜನರಲ್ಲಿ ಕಾಣಿಸುತ್ತಿರುವ ಅಹಂಕಾರ ಅಭಿಮಾನ ದ ಸಮಸ್ಯೆ ಬಗ್ಗೆ..!
ಸಂತ ಶ್ರೀ ಕನಕದಾಸರ ಎರಡು ಘಟನೆಗಳು ತತ್ವಜ್ಞಾನ ದಿಂದ ಕೂಡಿದ್ದು ಅಹಂಕಾರಿ ಅಭಿಮಾನಿಗಳಿಗೆ ಮಾರ್ಗದರ್ಶನ ಕೊಡುವಂತಿವೆ.
ಸಂತ ಶ್ರೀ ಕನಕದಾಸರ ಗುರುಗಳು ಒಮ್ಮೆ ಎಲ್ಲ ಶಿಷ್ಯರು ಕುಳಿತಾಗ ಶಿಷ್ಯರಿಗೆ ಕೇಳಿದರಂತೆ. ವೈಕುಂಠಕ್ಕೆ ಯಾರು ಹೋಗಬಹುದು ಎಂದು. ಆಗ ಬಹಳಷ್ಟು ಶಿಷ್ಯರು ಗುರುಗಳೇ ತಾವೇ ತತ್ವಜ್ಞಾನಿಗಳು, ತಾವು ಮಹಾನುಭಾವರು, ತಪಸ್ವಿ ಗಳು ತಾವು ಮಾತ್ರ ಹೋಗಬಹುದು ನಮ್ಮಂತ ಸಾಮಾನ್ಯರಿಗೆ ವೈಕುಂಠ ಪ್ರಾಪ್ತಿ ಬಹಳ ಕಷ್ಟ ಎಂದರಂತೆ, ಇನ್ನು ಕೆಲ ಶಿಷ್ಯರು ಯಾರ್ಯಾರದೂ ಹೆಸರುಗಳನ್ನು ಹೇಳುತ್ತಾ ತಾವು ಮತ್ತು ಅವರು ಇಬ್ಬರೂ ಹೋಗಬಹುದು ಎಂದು ಹೇಳಿದರಂತೆ. ಕನಕದಾಸರು ಮಾತನಾಡದೆ ಸುಮ್ಮನೆ ಕುಳಿತಿದ್ದರಂತೆ. ಆಗ ಗುರುಗಳು ಕನಕ ನೀನು ಏಕೆ ಮಾತಾಡುತ್ತಿಲ್ಲ ವೈಕುಂಠಕ್ಕೆ ಯಾರು ಹೋಗಬಹುದು ಎಂದು ಕೇಳಿದರಂತೆ. ಅಲ್ಲಿಯವರೆಗೆ ಸುಮ್ಮನೆ ಕುಳಿತಿದ್ದ ಕನಕದಾಸರು ಹೇಳಿದರಂತೆ ನಾನು ಹೋದರೆ ಹೋಗಬಹುದು ಎಂದು ಎಲ್ಲರಿಗೂ ಆಶ್ಚರ್ಯ ಹಾಗೂ ಒಂದು ರೀತಿಯ ಕೋಪ ಗುರುಗಳ ಮುಂದೆ ಅಂತಹ ಮಹಾನುಭಾವರ ಮುಂದೆ ಕನಕದಾಸ ಅಹಂಕಾರದಿಂದ ನಾನು ಹೋದರೆ ಹೋಗಬಹುದು ಎನ್ನುತ್ತಿದ್ದಾನೆ ಈತನಿಗೆ ಎಷ್ಟು ಅಹಂಕಾರ ಎಂದು ಕೆಲವರು ಗುಡುಗಿದರಂತೆ. ಇದೆಲ್ಲವನ್ನು ನಿಧಾನವಾಗಿ ಗಮನಿಸುತ್ತಿದ್ದ ಗುರುಗಳು ಶಿಷ್ಯರಿಗೆ ಸುಮ್ಮನಿರಲು ಹೇಳಿ ಕನಕ ವಿಷಯ ಸ್ಪಷ್ಟವಾಗಿ ಹೇಳು ಎಂದರಂತೆ, ಆಗ ಶ್ರೀ ಕನಕದಾಸರು ಹೇಳುತ್ತಾರೆ ಮನುಷ್ಯನಲ್ಲಿ ನಾನು ಎಂಬುವ ಅಹಂಕಾರ ನಾನು ಎಂಬುವ ಅಭಿಮಾನ ಹೋದಾಗ ಮಾತ್ರ ಮನುಷ್ಯ ವೈಕುಂಠಕ್ಕೆ ಹೋಗಬಹುದು ಎಂದು ನಾನು ಹೇಳಿದೆ ಗುರುಗಳೇ ಎಂದರಂತೆ, ನಾನು ಹೋದರೆ ಇದರ ಅರ್ಥ ಕನಕದಾಸ ಎಂದಲ್ಲ ನಾನು ಎಂಬ ಅಹಂಕಾರ ಎಂದು ಹೇಳಿದರಂತೆ, ನೋಡಿ ಒಂದೇ ಮಾತಿನಲ್ಲಿ ಎಷ್ಟು ತತ್ವ ಅಡಗಿದೆ,
ಇಂದು ಎಲ್ಲಾ ಕಡೆ 12 ವರ್ಷದ ಮಗುವಿನಿಂದ ಹಿಡಿದು 95 ವರ್ಷದ ಮುದುಕನವರಿಗೆ ಎಲ್ಲರಿಗೂ ಕಾಡುತ್ತಿರುವ ದೊಡ್ಡ ರೋಗ,ಸಮಸ್ಯೆ ಎಂದರೆ ಅಹಂ, ಅಭಿಮಾನ, ಅಹಂಕಾರ, ನಾನು, ನನ್ನದು, ನನ್ನ ಹೊಲ, ನನ್ನ ಮನೆ, ನನ್ನ ಹೆಂಡತಿ ,ನನ್ನ ಮಗ, ನನ್ನ ಜಾತಿ, ನನ್ನ ಕುಲ, ನನ್ನ ಗುರು, ಈ ನಾನು ನಾನು,ಈ ನನ್ನದು ,ನನ್ನದು, ನನ್ನ ಗುರು ಮಾತ್ರ ಶ್ರೇಷ್ಠ, ನನ್ನ ಸಿದ್ಧಾಂತ ಮಾತ್ರ ಶ್ರೇಷ್ಠ, ಬೇರೆಯವರ ಗುರುಗಳಲ್ಲಿ, ಬೇರೆಯವರ ಸಿದ್ಧಾಂತಗಳಲ್ಲಿ ಅನೇಕ ಲೋಪಗಳಿವೆ, ನನ್ನದೇ ಮತ ಶ್ರೇಷ್ಠ, ನಮ್ಮ ಜಾತಿಯ ಸಂತರ ಜಯಂತಿ ಆರಾಧನೆ ಮಾತ್ರ ನಾನು ಮಾಡುತ್ತೇನೆ, ನನ್ನ ಪ್ರವಚನಗಳಲ್ಲಿ ಕೇವಲ ನನ್ನ ಜಾತಿಯ ಸಂತರ ಹೆಸರನ್ನು ಮಾತ್ರ ತೆಗೆದುಕೊಳ್ಳುತ್ತೇನೆ, ಈ ಅಭಿಮಾನವೆ ಎಲ್ಲರನ್ನು ಕಾಡುತ್ತಿದೆ, ನನಗೆ ಕರೆದಿಲ್ಲ, ನನಗೆ ಮೊದಲು ಮಾತಾಡಿಸಿಲ್ಲ, ನನಗೆ ಮೊದಲು ನಮಸ್ಕಾರ ಮಾಡಲಿಲ್ಲ ನನಗೆ ಮುಂದಿನ ಸಾಲಿನಲ್ಲಿ ಕೊಡಿಸಲಿಲ್ಲ, ಇದೇ ಮನುಷ್ಯನ ಅಭಿಮಾನಕ್ಕೆ ಮೂಲ, ಹಾಗೂ ಈ ಅಹಂ ಅಭಿಮಾನ ಹೋಗದೆ ಇದ್ದಲ್ಲಿ ನಮ್ಮ ಪೂಜೆ ಪುನಸ್ಕಾರ ಧರ್ಮಚರಣೆ, ನಮ್ಮ ಪಾಂಡಿತ್ಯ, ನಮ್ಮ ಜ್ಞಾನ ಎಲ್ಲ ವ್ಯರ್ಥ, ಮನಸ್ಸು ಪರಿಶುದ್ಧ ಆಗುವವರಿಗೆ ಈ ಅಭಿಮಾನ ಅಹಂಕಾರ ದಿಂದ ನಮ್ಮ ಹೃದಯ ಮುಕ್ತ ಆಗುವ ವರೆಗೆ ನಮ್ಮ ಎಲ್ಲ ಧಾರ್ಮಿಕ ಕಾರ್ಯಗಳು ಕೇವಲ ಆಡಂಬರವಾಗಿ ಉಳಿಯುತ್ತವೆ.
ಉದರ ವೈರಾಗ್ಯವಿದು ನಮ್ಮ ಪದುಮ ನಾಬನಲ್ಲಿ ಲೇಶ ಭಕ್ತಿ ಇಲ್ಲ, ಎಂಬ ಸಂತರ ವಾಣಿ ನೆನಪಿಗೆ ಬರುತ್ತದೆ.
ನೀವು ಪರೀಕ್ಷೆ ಮಾಡಿ ನೋಡಿ ಒಬ್ಬ ದೊಡ್ಡ ಸನ್ಯಾಸಿ ಹತ್ತಿರ 10 ಮಂದಿ ಕಲೆತು ಹೋದಾಗ ಒಂಬತ್ತು ಮಂದಿ ಆ ಸನ್ಯಾಸಿ ಪಾದಗಳಿಗೆ ನಮಸ್ಕರಿಸಿ ಒಬ್ಬ ನಮಸ್ಕರಿಸದೆ ದೂರ ನಿಂತಿದ್ದರೆ ಆ ಸನ್ಯಾಸಿ ಮತ್ತೆ ಮತ್ತೆ ನಮಸ್ಕಾರ ಮಾಡದ ದೂರ ನಿಂತ ವ್ಯಕ್ತಿಯ ಕಡೆ ನೋಡುತ್ತಾ ಇರುತ್ತಾರೆ, ಆತನೇಕೆ ನನಗೆ ನಮಸ್ಕರಿಸಲಿಲ್ಲ ಎಂಬ ಅಭಿಮಾನ ಅವರನ್ನು ಕಾಡುತ್ತದೆ. ಎಲ್ಲ ಸನ್ಯಾಸಿಗಳು ಹೀಗೆ ಎಂದು ನಾನು ಹೇಳುತ್ತಿಲ್ಲ ಬಹಳಷ್ಟು ಸನ್ಯಾಸಿಗಳಿಗೆ ಈ ಅಭಿಮಾನ, ಅಹಂ ಹೋಗಿರುವುದಿಲ್ಲ,
ಬಾಹುಬಲಿ ಎಂಬ ಜೈನ ರಾಜ ಬಹಳ ವರ್ಷ ಭಗವಂತನನ್ನು ಕುರಿತು ತಪಸ್ಸು ಮಾಡುತ್ತಾರೆ, ಮೈಮೇಲೆ ಹುತ್ತು ಬೆಳೆಯುತ್ತದೆ, ಅವನಿಗೆ ಮೋಕ್ಷ ಪ್ರಾಪ್ತಿ ಆಗುವುದಿಲ್ಲ ಭಗವಂತ ಹೇಳುತ್ತಾನಂತೆ ಈತನಿಗೆ ಮೋಕ್ಷ ಏಕೆ ಕೊಟ್ಟಿಲ್ಲ ಎಂದರೆ ಈತ ಬಹಳ ವರ್ಷ ತಪಸ್ಸು ಮಾಡಿದ್ದು ನಿಜ ಆದರೆ ಈತನ ಮನಸ್ಸಿನ ಅಂತರಂಗದಲ್ಲಿ ನಾನು ನನ್ನ ರಾಜ್ಯದ ನನ್ನ ಸ್ಥಳದ ಮೇಲೆ ತಪಸ್ಸಿಗೆ ನಿಂತಿದ್ದೇನೆ, ಈ ಸ್ಥಳವೆಲ್ಲ ನನ್ನದು ಎಂಬ ಅಭಿಮಾನ ಈತನ ಮನಸ್ಸಿನ ಅಂತರಂಗದಲ್ಲಿ ಸ್ವಲ್ಪ ಉಳಿದಿದೆ ಅದು ಹೋದರೆ ಮಾತ್ರ ಮೋಕ್ಷ ಎಂದರಂತೆ, ನೋಡಿ ಅಂತರಂಗದಲ್ಲಿರುವ ಅಭಿಮಾನ ಕೂಡ ಅನೇಕ ಸಮಸ್ಯೆ ತೊಂದರೆಗಳಿಗೆ ಕಾರಣ.
ಕನಕದಾಸರ ಇನ್ನೊಂದು ಚಿಕ್ಕ ಕಥೆ ಗುರುಗಳು ಎಲ್ಲರಿಗೆ ತಿನ್ನಲು ಒಂದೊಂದು ಹಣ್ಣುಕೊಟ್ಟು ಯಾರು ಇಲ್ಲದ ಸ್ಥಳದಲ್ಲಿ ತಿಂದು ಬನ್ನಿ, ಎಂದು ಹೇಳುತ್ತಾರಂತೆ, ಆಗ ಎಲ್ಲರೂ ಹಣ್ಣು ತಿಂದು ಬರುತ್ತಾರೆ. ಎಲ್ಲಿ ತಿಂದಿರಿ ಎಂದು ಗುರುಗಳು ಕೇಳಿದರೆ ಗುರುಗಳೇ ನಾವು ಬಾಗಿಲು ಹಾಕಿಕೊಂಡು ಕೊಣೆಯ ಒಳಗಡೆ ಯಾರು ನೋಡದ ಹಾಗೆ ತಿಂದೆವು, ಅಡವಿಯಲ್ಲಿ ಹೋಗಿ ಯಾರು ಕಾಣದ ಹಾಗೆ ತಿಂದೆವು, ಗುಡ್ಡದ ಮೇಲೇರಿ ಯಾರೂ ಕಾಣದಲ್ಲಿ ತಿಂದೆವು, ಗುಂಪು ಗಿಡಗಳ ಒಳಗೆ ಕೂತು ಯಾರೂ ಕಾಣದಲ್ಲಿ ತಿಂದೆವು, ಹೀಗೆಲ್ಲಾ ಹೇಳುತ್ತಾರೆ ಕನಕ ಮಾತ್ರ ಹಣ್ಣು ತಿನ್ನದೇ ಗುರುಗಳಿಗೆ ತಂದು ವಾಪಿಸ್ ಕೊಡುತ್ತಾನೆ ಯಂತೆ, ಗುರುಗಳು ಕೇಳುತ್ತಾರೆ ಕನಕ ನೀನೆಕೆ ಹಣ್ಣು ತಿನ್ನಲಿಲ್ಲ? ಯಾರೂ ಕಾಣದ ಸ್ಥಳ ನಿನಗೆ ಸಿಗಲಿಲ್ಲವೇ? ಎಂದು ಗುರುಗಳು ಕೇಳುತ್ತಾರೆ ಆಗ ಕನಕದಾಸರು ಕೊಟ್ಟ ಉತ್ತರ ಬಹಳ ತತ್ವ ಭರಿತವಾದದ್ದು, ಕನಕದಾಸರು ಹೇಳುತ್ತಾರೆ ಗುರುಗಳೇ ತಾವೇ ಹೇಳಿದಿರಿ ಅಣು, ರೇಣು, ತೃಣ, ಕಾಷ್ಟ ಎಲ್ಲ ಕಡೆ ಆ ಭಗವಂತನೇ ತುಂಬಿ ಇದ್ದಾನೆ ಎಲ್ಲ ಸೃಷ್ಟಿ ಆತನದೇ ಎಲ್ಲರಲ್ಲೂ ಆತನೇ ಇದ್ದಾನೆ ,ಜ್ಯೋತಿ ಸ್ವರೂಪವಾಗಿ ಎಲ್ಲರ ಆತ್ಮ ಆತನೇ ಬೆಳಗುತ್ತಿದ್ದಾನೆ, ಎಂದು ತಾವೇ ಹೇಳಿದ್ದೀರಲ್ಲ ಹಾಗಾದರೆ ಆತನು ಇಲ್ಲದ ಸ್ಥಳ ನನಗೆ ಕಾಣಿಸಲೇ ಇಲ್ಲ ಎಂದು ಹೇಳಿದರಂತೆ,
ನೋಡಿ ಈ ತತ್ವವನ್ನು ನಾವು ತಿಳಿದುಕೊಂಡರೆ ಜೀವನದಲ್ಲಿ ನಮಗೆ ಯಾರಲ್ಲಿ ಹಾಗೂ ಯಾರ ಮೇಲೆ ಕೋಪ, ದ್ವೇಷ, ವೈರತ್ವ, ಕಾಣಿಸುವುದೇ ಇಲ್ಲ ನಾವೆಲ್ಲ ಒಂದೇ ಆ ಭಗವಂತನ ಮಕ್ಕಳು ಎಂಬ ಭಾವನೆ ಬೆಳೆಯುತ್ತದೆ, ನಮ್ಮ ಮಕ್ಕಳಿಗೆ ಇಂತಹ ಕಥೆಗಳನ್ನು ಹೇಳಬೇಕು,
ಅದಕ್ಕಾಗಿ ನಮ್ಮ ಋಷಿಗಳು ವಸು ದೈವ ಕುಟುಂಬಕಂ, ಈ ಜಗತ್ತೆಲ್ಲ ಒಂದೇ ಕುಟುಂಬ, ಆಕಾಶಾತ ಪತಿತಂ…………
ಎಲ್ಲ ದೇವರು ಒಂದೇ ಎಂದು ಹೇಳಿದ್ದು.
ಸಂಘಕ್ಷದ್ವಂ…………..
ಜೊತೆ ಜೊತೆಯಾಗಿ ನಡೆಯಿರಿ .
ಏಕಮ್ ಸತ್…………
ಒಂದೇ ಸತ್ಯ ಎಂದು ಹೇಳಿದ್ದು ಇವೆಲ್ಲ ನಮ್ಮ ಮಕ್ಕಳಿಗೆ ಹೇಳಬೇಕು
ಹರಿಜನ ಸಮಾಜದ ರವಿ ದಾಸ್ ಎಂಬ ಮಹಾನ್ ಸಂತರು ಉತ್ತರ ಭಾರತದಲ್ಲಿ ಆಗಿ ಹೋದರು, ಕರ್ಮಯೋಗಿಗಳಾಗಿದ್ದರು ಚಪ್ಪಲಿ ಹೊಲಿಯುವ ಕಾಯಕ ಮಾಡುತ್ತಿದ್ದರು, ಒಮ್ಮೆ ಕೆಲವು ಪಂಡಿತರು ಗಂಗಾ ಸ್ನಾನಕ್ಕೆ ಹೋಗುತ್ತಿದ್ದರು. ಆಗ ರವಿ ದಾಸರು ಆ ಪಂಡಿತರ ಹರಿದ ಚಪ್ಪಲಿ ರಿಪೇರಿ ಮಾಡಿ ಕೊಡುತ್ತಾರೆ, ರವಿ ದಾಸರು ಚೆನ್ನಾಗಿ ರಿಪೇರಿ ಮಾಡಿದಾಗ ಆ ಪಂಡಿತ ಒಂದು ದುಡ್ಡು ಕೆಳಗೆ ಒಗಿಯುತ್ತಾನೆ, ತೆಗೆದುಕೋ ಎಂದು, ರವಿ ದಾಸರು ಆ ದುಡ್ಡು ತೆಗೆದುಕೊಂಡು ಕಣ್ಣಿಗೆ ಹಚ್ಚಿಕೊಂಡು ಪಂಡಿತರೆ ತಾವು ಗಂಗಾ ಸ್ನಾನಕ್ಕೆ ಹೋಗುತ್ತಿದ್ದೀರಿ ನನ್ನ ಈ ಒಂದು ದುಡ್ಡು ಆ ಮಹಾತಾಯಿ ಗಂಗಾ ಮಾತಿಗೆ ಕೊಡಿ ನನ್ನ ಕಡೆಯಿಂದ ಸಮರ್ಪಿಸಿ ಎಂದು ಹೇಳುತ್ತಾನೆ, ಪಂಡಿತರು ಆ ದುಡ್ಡನ್ನು ತೆಗೆದುಕೊಂಡು ಹೋಗಿ ಗಂಗೆಯಲ್ಲಿ ತಮ್ಮ ಸ್ನಾನ ಪೂಜೆ ಅರ್ಗ್ಯ ಜಪ ಗಳು ಆದ ನಂತರ ತಾವು ಗಂಗೆಗೆ ಏನು ಸಮರ್ಪಿಸಬೇಕು ಎಲ್ಲ ಸಮರ್ಪಿಸುತ್ತಾರೆ, ವಾಪಸ್ ಹೊರಡುವಾಗ ಜ್ಞಾಪಕ ಬರುತ್ತದೆ ಅಯ್ಯೋ ರವಿ ದಾಸ ಒಂದು ದುಡ್ಡು ಕೊಟ್ಟಿದ್ದಾನೆ ಇದನ್ನು ಗಂಗೆಯಲ್ಲಿ ಹಾಕಬೇಕು ಎಂದು ಗಂಗೆಯಲ್ಲಿ ಒಗೆಯುತ್ತಾರೆ ಆಗ ನೀರಿನ ಒಳಗಿಂದ ಗಂಗಾಮಾತೆಯ ಕೈಬಂದು ಆ ದುಡ್ಡನ್ನು ಸ್ವೀಕಾರ ಮಾಡುತ್ತಾಳಂತೆ,
ಹಾಗೂ ಅದೇ ಕೈಯಿಂದ ಗಂಗಾಮಾತೆ ಒಂದು ರತ್ನ ಭರಿತ ಬಂಗಾರದ ಕಂಕಣ ರವಿ ದಾಸರಿಗೆ ಕೊಡಲು ಪಂಡಿತರಿಗೆ ಗಂಗಾಮಾತೆ ಕೊಡುತ್ತಾಳಂತೆ, ಅದೆಲ್ಲವನ್ನು ನೋಡಿ ಗಾಬರಿಗೊಂಡ ಪಂಡಿತರು ಬಂಗಾರದ ಕಂಕಣವನ್ನು ರಾಜನ ಹತ್ತಿರ ಕೊಡುತ್ತಾರಂತೆ ಮುಂದೆ ಇನ್ನೂ ಕಥೆ ಬರುತ್ತದೆ, ಪೌರಾಣಿಕ ಕಥೆಗಳನ್ನು ಯಥಾವತ ತೆಗೆದುಕೊಳ್ಳಬಾರದು ಆ ಕತೆ ಹಿಂದಿರುವ ನೀತಿ ನಮಗೆ ಮುಖ್ಯ. ಹೇಳುವ ತಾತ್ಪರ್ಯ ಏನೆಂದರೆ ನಾವು ಯಾರನ್ನು ಅಸ್ಪೃಶ್ಯರು ,ಕೇಳ ಜಾತಿಯವರು, ಎಂದು ತಿಳಿಯ ಬಾರದು, ಅಂತಹ ಸಂತರ ಬಗ್ಗೆ ಪ್ರವಚನಗಳು ಮಾಡುತ್ತಾ ಇರಬೇಕು, ಮಕ್ಕಳಿಗೆ ಹೇಳುತ್ತಾ ಇರಬೇಕು,
ಎಲ್ಲ ಸಂತರು ನಮಗೆ ಪೂಜ್ಯರೆ ಎಲ್ಲರ ಆರಾಧನೆ ಎಲ್ಲರ ಜನ್ಮದಿನ ಸಾಧ್ಯವಾದಷ್ಟು ಆಚರಿಸಬೇಕು ನಮ್ಮ ಸನಾತನ ಹಿಂದೂ ಧರ್ಮದ ಸಾಧು ಸಂತರ ನಮಗೆ ತಿಳಿದ ಎಲ್ಲರ ಜಯಂತಿ ಪುಣ್ಯತಿಥಿ ಯಂದು ನಾವು ಕನಿಷ್ಠ ಅವರನ್ನು ಸ್ಮರಿಸಬೇಕು. ಸಾಧ್ಯವಾದಲ್ಲಿ ನಮ್ಮ ಸಂತರು ಅಂದು ಅವರ ಬಗ್ಗೆ ನಾಲ್ಕು ಒಳ್ಳೆಯ ಮಾತಾಡಬೇಕು. ಮಕ್ಕಳಿಗೆ ಇಂತಹ ಸದ್ವಿಚಾರಗಳನ್ನು ಹೇಳಬೇಕು,
ಕಬೀರ್ ದಾಸರು ಹೇಳುತ್ತಾರೆ
जात न पूछो साधु की। पूछ लीजिए ज्ञान। मोल करो तलवार की। पड़ी रहने दो म्यान।।
ಅಂದರೆ ಸಾಧು ಸಂತರ ಜಾತಿಯನ್ನು ಕೇಳಬೇಡಿ, ಖಡ್ಗದ ಮಹತ್ವ ನೋಡಿ ಖಡ್ಗ ಇಡುವ ವ್ಯಕ್ತಿಯ ತೊಗಲಿನ ಚೀಲದ ಕಡೆ ಲಕ್ಷ ಕೊಡಬೇಡಿ.
ಬನ್ನಿ ನಮ್ಮ ಋಗ್ವೇದ ಮಂತ್ರ ಹೇಳಿದ ಪ್ರಕಾರ ಒಳ್ಳೆಯದು ಎಲ್ಲಿ ಸಿಗುತ್ತದೆಯೋ ಅಲ್ಲಿಂದ ಅದನ್ನು ಸ್ವೀಕರಿಸೋಣ.
ಅಮರ ದೀಕ್ಷಿತ ಕೃಷ್ಣ
9448757587