ಶ್ರೀ ಜುಷ್ಟಃ ಪಂಚಮೀಂ ಸ್ಕಂದಸ್ತಮಾಚ್ಛ್ರೀ ಪಂಚಮೀ ಸ್ಮೃತಾ | ಷಷ್ಠ್ಯಾಂ ಕೃತಾರ್ಥೋ ಭೂದ್ಯಸ್ಮಾತ್ತಸ್ಮಾತ್ ಷಷ್ಠೀ ಮಹಾತಿಥಿಃ ||🙏ಸ್ಕಂದನು ದೇವಸೇನೆಯನ್ನು ವಿವಾಹ ಮಾಡಿಕೊಂಡು ಶ್ರೀ ಯೋಗವನ್ನು ಪಡೆದ ದಿವಸ ಶ್ರೀ ಪಂಚಮಿ. ಅವನು ತಾರಕಾಸುರನ ಸಂಹಾರ ಮಾಡಿ ಕೃತಕೃತ್ಯನಾದ ದಿನ ಷಷ್ಠಿ. ಆದುದರಿಂದ ಅವೆರಡೂ ಸ್ಕಂದನಿಗೆ ಪ್ರಿಯವಾದ ಮಹಾತಿಥಿಗಳು ಎಂದು ಶ್ರೀಮನ್ಮಹಾಭಾರತವು ತಿಳಿಸುತ್ತದೆ.
ಷಷ್ಠಿ ಹಾಗೂ ಪಂಚಮಿ ದಿನಗಳನ್ನು ಸ್ಕಂದನಿಗೆ ವಿಶೇಷ ಪ್ರಿಯ ದಿನಗಳು ಎಂದು ಪರಿಗಣಿಸಿ ಆ ದಿನ ವಿಶೇಷವಾದ ಪೂಜೆ , ಪುನಸ್ಕಾರ ಹಾಗೂ ಅರ್ಚನೆಗಳನ್ನು ಮಾಡಿಸುತ್ತಾರೆ ಜೊತೆಗೆ ಈ ಎರಡು ದಿನಗಳಲ್ಲಿ ಭಕ್ತರು ಬೇಡಿದನ್ನು ವಿಶೇಷವಾಗಿ ಕರುಣಿಸುತ್ತಾನೆ ಅನ್ನೋ ನಂಬಿಕೆ ಭಕ್ತರಲ್ಲಿದೆ.