ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶಿವನ ತಂದೆ ತಾಯಿ ಯಾರು ? – ಶಿವ ಮಹಿಮೆ

ಶಿವ ಪುರಾಣದಲ್ಲಿ ಶಿವನ ಮಹಿಮೆಯ ಬಗ್ಗೆ ಬಹಳಷ್ಟು ವಿಷಯ ಗಳಿವೆ,
ಅಂತಹದೇ ಒಂದು ಮಹಿಮೆ,

ಶಿವನೆಲ್ಲಿಂದ ಬಂದ?

ಇವನತಂದೆ ತಾಯಿ ಯಾರು ?

ಶಿವನೇಕೆಲಿಂಗರೂಪ ತಾಳಿದ ?

(ಒಂದು ನಿಮಿಷ ಸಮಯವಿದ್ದರೆ ಈ ಅದ್ಭುತ ಕತೆಯನ್ನೊಮ್ಮೆ ತಪ್ಪದೇ ಓದಿ..‌)

ದೇವಲೋಕದಲ್ಲಿ ಒಮ್ಮೆ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ವಾಗ್ವಾದಗಳು ನಡೆಯುತ್ತಿದ್ದವು..

ಮಹಾ ದೇವತೆಗಳಿಬ್ಬರನ್ನೂ ಸಮಾಧಾನ ಮಾಡುವುದು ಆಗದು ಎನಿಸಿದಾಗ, ದೇವತೆಗಳೆಲ್ಲ ಹೋಗಿ ಪರಶಿವನನ್ನು ಬೇಡಿಕೊಳ್ಳುತ್ತಾರೆ. ವಿಷ್ಣು ಹಾಗೂ ಬ್ರಹ್ಮರ ಜಗಳವನ್ನು ತಡೆಯುವಂತೆ ಬೇಡಿಕೊಳ್ಳುತ್ತಾರೆ

ಆಗ ವಿಷ್ಣು ಮತ್ತು ಬ್ರಹ್ಮರ ನಡುವೆ ಶಿವ, ಅಗ್ನಿ ಕಂಭದ ರೂಪದಲ್ಲಿ ಅಂದರೆ ಲಿಂಗದ ರೂಪದಲ್ಲಿ ಬಂದು ನಿಂತು ತನ್ನ ಮೂಲವನ್ನು ಕಂಡುಹಿಡಿಯಲು ಹೇಳುತ್ತಾನೆ.ಆಗ ಹಂಸದ ರೂಪ ತಾಳಿದ ಬ್ರಹ್ಮ ಅಗ್ನಿ ಕಂಭದ ರೂಪದ ಶಿರವನ್ನು ಹುಡುಕಲು ಮೇಲ್ಮುಖವಾಗಿ ಹೊರಡುತ್ತಾನೆ. ವಿಷ್ಣು ವರಾಹವತಾರ’ ‘ತಾಳಿ ಕಂಭದ ತಳವನ್ನು ನೋಡುವುದಕ್ಕಾಗಿ ಪಾತಾಳಕ್ಕೆ ಇಳಿಯುತ್ತಾನೆ.

ಎಷ್ಟೇ ಮುಂದೆ ಸಾಗಿದರೂ ಬ್ರಹ್ಮ ಹಾಗೂ ವಿಷ್ಣು ಇವರಿಬ್ಬರಿಗೂ ಕಂಭದ ಅಂತ್ಯವೇ ಕಾಣುವುದಿಲ್ಲ. ಅನಂತವಾಗಿರುವ ಶಿವನ ಶಕ್ತಿಯನ್ನು ನೋಡಿದ ವಿಷ್ಣು ಹಾಗೂ ಬ್ರಹ್ಮರಿಗೆ ಸತ್ಯದ ಅರಿವಾಗುತ್ತದೆ. ಆದರೆ ಶಿವನ ಜಡೆಯಿಂದ ಕೆಳಗೆ ಬೀಳುತ್ತಿದ್ದ ‘ಕೇತಕಿ’ ಪುಷ್ಫದ ಬಳಿ ಬ್ರಹ್ಮ , ನೀನು ಎಲ್ಲಿಂದ ಬೀಳುತ್ತಿದ್ದೀಯ ಎಂದು ಪ್ರಶ್ನಿಸುತ್ತಾನೆ. ಆಗ ಆ ಪುಷ್ಪವು ನಾನು ಅಗ್ನಿ ಕಂಭದ ಶಿರದಿಂದ ಬೀಳುತ್ತಿದ್ದೇನೆ ಎಂಬ ಉತ್ತರ ನೀಡುತ್ತದೆ.

ಆಗ ಬ್ರಹ್ಮ ಶಿವನಲ್ಲಿಗೆ ಬಂದು ಕೇತಕಿ, ಪುಪ್ಪವನ್ನು ತೋರಿಸಿ, ತಾನು ಅಗ್ನಿ ಕಂಭದ ಶಿರಭಾಗವನ್ನು ನೋಡಿರುವುದಾಗಿಯೂ ಅಲ್ಲಿಂದಲೇ ಕೇತಕಿ ಪುಷ್ಪವನ್ನು ತಂದಿರುವುದಾಗಿಯೂ ಹೇಳುತ್ತಾನೆ. *ಆಗ ಮೋಸವನ್ನು ಅರಿತ ಶಿವ, *ಬ್ರಹ್ಮನನ್ನು ಯಾರೂ ಪೂಜಿಸಕೂಡದು*
ಎಂದು ಶಾಪ ನೀಡಿ ಲಿಂಗರೂಪ ತಾಳುತ್ತಾನೆ .

  ತೆನಾಲಿ ರಾಮ - ತಟ್ಟಾಚಾರಿ ಪಿತೂರಿ ಕಥೆ

ಶಿವನು ಬಾಲಕನಿರುವಾಗಲೇ,

*ಶಿವನು ಎಲ್ಲಿಂದ ಬಂದ? ಈತನ ತಂದೆ ತಾಯಿಗಳಾದರೂ ಯಾರು? ಇದೇ ಪ್ರಶ್ನೆ ಎಲ್ಲರನ್ನು ಕಾಡುತ್ತದೆ.

ಒಮ್ಮೆ ಒಬ್ಬ ಋಷಿಗೂ ಕೂಡ ಇದೇ ರೀತಿ ದಿಗ್ಭ್ರಮೆಗೊಳಿಸಿತ್ತು.

ಒಬ್ಬ ಋಷಿ ಶಿವನಿಗೆ ನಿನ್ನ ತಂದೆ ಯಾರು ? ಎಂದು ಕೇಳಿದಾಗ ಶಿವನು

ಬ್ರಹ್ಮ ನನ್ನ ತಂದೆ ಎಂದು ಉತ್ತರಿಸಿದನು. ನಂತರ ಆತ ನಿನ್ನ
ಜನಕನ ತಂದೆಯಾರು ? ಎಂದು ಕೇಳಲು “ವಿಷ್ಣು ನನ್ನ ಅಜ್ಜ*
ಎಂದು ಶಿವನು ಹೇಳಿದನು .
ಮತ್ತಷ್ಟು ಕುತೂಹಲಗೊಂಡು, ಹಾಗಾದರೆ ನಿನ್ನ ಮುತ್ತಾತ ಯಾರು ಕೇಳಿದಾಗ, ಶಿವ ತನ್ನ ಮುತ್ತಾತ ಸ್ವತಃ ತಾನೆ* ಎಂದು ಉತ್ತರಿಸಿದಾಗ ಆ ಸಂತನಿಗೆ ದಿಗಿಲಾಯಿತು.

ಸಾಮಾನ್ಯ ನಂಬಿಕೆಯ ಪ್ರಕಾರ ಶಿವನಿಗೆ,ಯಾವುದೆ ಜನನ ಅಂತ್ಯ ಇಲ್ಲ. ಆದ್ದರಿಂದ ಯಾವುದೇ ಪೋಷಕರೂ ಇಲ್ಲ ಎಂದು ಹೇಳಲಾಗುತ್ತದೆ. ಶಿವನಿಗೆ ‘ಅನಾದಿ’ ಎಂದು ಕೂಡ ಕರೆಯಲಾಗುತ್ತದೆ.

ಅನಾದಿ ಎಂದರೆ ಆರಂಭ ಮುಕ್ತಾಯ ಇಲ್ಲದವನು ಎಂದಾಗಿದೆ.
ಶಿವನ ಪತ್ನಿಯಾದ ಪಾರ್ವತಿಗೆ, ‘#ಪೂರ್ವಜ’ ಅಂದರೆ ಎಲ್ಲಾ ಪ್ರಾರಂಭಗಳಿಗೂ ಮೊದಲೇ (ಪೂರ್ವವಾಗಿ) ಹುಟ್ಟಿದವಳು ಎಂದಾಗಿದೆ.
ಮತ್ತೊಂದು ಹೆಸರು ‘ಆದ್ಯಾ’ ಎಂದಾಗಿದ್ದು, ಇದರ ಅರ್ಥ ಪ್ರಾರಂಭ ಎಂದಾಗಿದೆ.

ಇದರಿಂದ ಶಿವ ಮತ್ತು ಪಾರ್ವತಿಯರು ಎಲ್ಲಾ ಸೃಷ್ಟಿ-ಆರಂಭಕ್ಕಿಂತಲೂ ಹೊರತಾಗಿದ್ದಾರೆ ಎಂದು ನಂಬಲಾಗಿದೆ.

ಈಗ, ನಾವು ಶಿವನ ಉತ್ತರಗಳನ್ನು ಪರಿಗಣಿಸಿದಾಗ ತಿಳಿಯುವುದೆಂದರೆ ಮೂಲದ ಹುಡುಕುವುದರಲ್ಲಿ ಅರ್ಥವಿಲ್ಲ. ಈ ಉತ್ತರಗಳು ವೃತ್ತಾಕಾರದಲ್ಲಿ (ವರ್ತುಳ, ಸೊನ್ನೆಯ ಆಕಾರದಲ್ಲಿ) ವ್ಯವಸ್ಥೆಗೊಂಡಿವೆ. ಯಾವುದೇ ಹಂತವನ್ನಾದರು ಆರಂಭಿಕ ಅಂಶವಾಗಿ ಪರಿಗಣಿಸಬಹುದು. ಹೀಗೆ ಶಿವನು ತಾನು ‘ಅನಾದಿ’ ಎಂದು ಮತ್ತೊಮ್ಮೆ ಸಾಬೀತು ಪಡಿಸಿದನು.

  ರಥ ಸಪ್ತಮಿ ಮಹತ್ವ ಮತ್ತು ಪೌರಾಣಿಕ ಹಿನ್ನೆಲೆ

ಮಹಾದೇವ, ಮಹಾಯೋಗಿ, ಪಶುಪತಿ, ನಟರಾಜ, ಭೈರವ, ವಿಶ್ವನಾಥ, ಭಾವ, ಭೋಲೆನಾಥ ಇತ್ಯಾದಿ.
ಅತಿ ಪರಾಕ್ರಮಿಯಾಗಿದ್ದರೂ ಅಗತ್ಯಬೀಳದೇ ಉಪಯೋಗಿಸದ, ಭವ್ಯತೆಯಲ್ಲಿರುವ ಅವಕಾಶವಿದ್ದರೂ ಸರಳವಾದ, ಹಿಮಾಚ್ಛಾದಿತ ಪ್ರದೇಶದಲ್ಲಿ ನೆಲೆಸುವ, ವಜ್ರ ವೈಢೂರ್ಯಗಳಿಂದ ಭೂಷಿತನಾಗಬಹುದಾದರೂ ಸರಳವಾದ ಉಡುಗೆಗಳಿಂದ, ಭಕ್ತನ ನೆರವಿಗೆ ಸದಾ ಧಾವಿಸುವ, ಕೋಪಗೊಂಡರೆ ಭೂಮಿಯನ್ನೇ ಸುಟ್ಟುಬಿಡುವ ಸಾಮರ್ಥ್ಯವಿರುವ ಶಿವ ಇತರ ದೇವರುಗಳಿಗಿಂತ ಭಿನ್ನನೂ, ಜಟಿಲನೂ ಆಗಿದ್ದಾನೆ.

ಶಿವನ ತಾಂಡವ ನೃತ್ಯದಲ್ಲಡಗಿದೆ ಜಗತ್ತಿನ ಸೃಷ್ಟಿಯ ತತ್ವಗಳು ಶಿವನ ಈ ಶಕ್ತಿ ಮತ್ತು ವೈಶಿಷ್ಟ್ಯಗಳನ್ನು ಕಂಡ ಭಕ್ತರು ಶಿವನಿಗೆ ಪ್ರತ್ಯೇಕವಾದ ಗುಡಿಗಳನ್ನು ಕಟ್ಟಿದ್ದಾರೆ.

ಶಿವನ ಪರಾಕ್ರಮ ಮತ್ತು ಲೀಲೆಗಳ ಬಗ್ಗೆ ಹಲವಾರು ಕಥೆಗಳಿದ್ದರೂ, ಶಿವನ ಎಂಟು ಶೃಂಗಾರ ಆಭರಣಗಳ ಬಗ್ಗೆ ಹೆಚ್ಚಿನವರಿಗೆ ಹೆಚ್ಚಿನವರಿಗೆ ತಿಳಿದೇ ಇಲ್ಲ. ಇದು ಮಹತ್ವದ ರಹಸ್ಯಗಳನ್ನು ತನ್ನಲ್ಲಿ ಒಳಗೊಂಡಿದೆ. ತಲೆಯಲ್ಲಿರುವ ಅರ್ಧ ಚಂದ್ರ ಮತ್ತು ಬಿಚ್ಚಿದ ಕೂದಲಿನಲ್ಲಿ ಗಂಗೆಯ ಹರಿವು ಅವರ ಡಮರು, ಸೃಷ್ಟಿಯ ನಾದವಾಗಿದೆ. ಆಧ್ಯಾತ್ಮಿಕ ಮಹತ್ವಗಳನ್ನು ಈ ಆಭರಣಗಳು ಒಳಗೊಂಡಿವೆ.

ಶಿವ ದೇವರ ಮೂರು ಆಭರಣಗಳು ಮೂರು ಶಕ್ತಿಗಳನ್ನು ಈ ಮೂರು ಆಭರಣಗಳು ಎತ್ತಿ ತೋರಿಸುತ್ತಿದ್ದು ಜ್ಞಾನ, ಬಯಕೆ ಮತ್ತು ಅನುಷ್ಟಾನ ಹೀಗೆ ಮೂರೂ ಶಕ್ತಿಗಳನ್ನು ಇದು ಪ್ರತಿನಿಧಿಸುತ್ತದೆ.ಡಮರು ವಿಶೇಷತೆ ಡಮರು ಶಬ್ಧವನ್ನು ಪ್ರತಿನಿಧಿಸುತ್ತದೆ. ವೇದಗಳ ಶಬ್ಧವಾಗಿ, ಇದನ್ನು ಪರಿಗಣಿಸಲಾಗಿದ್ದು, ಈ ಪವಿತ್ರ ಗ್ರಂಥಗಳಲ್ಲಿರುವ ಸಾರವು ದೇವರ ಮೂಲಕ ನಮ್ಮ ಜೀವನಕ್ಕೆ ಮಾರ್ಗದರ್ಶನ ಮಾಡುತ್ತದೆ.

ಕೊರಳಲ್ಲಿರುವ ಸರ್ಪ ದೇವರ ಕೊರಳಲ್ಲಿ ಹಾರವಾಗಿರುವ ಸರ್ಪವು ಮಾನವನ ಅಹಂಕಾರದ ಪ್ರತೀಕವಾಗಿದೆ.ದೇವರ ಕೈಯಲ್ಲಿರುವ ಜಪಮಾಲೆ ದೇವರ ಕೈಯಲ್ಲಿರುವ ಜಪಮಾಲೆಯನ್ನು ರುದ್ರಾಕ್ಷಿ ಮಣಿಗಳಿಂದ ತಯಾರಿಸಲಾಗಿದೆ. ಇದು ಶುದ್ಧತೆಯ ಸಂಕೇತವಾಗಿದೆ. ಈ ಮಾಲೆಯು, ದೇವರ ಬಲಗೈಯಲ್ಲಿ ಇದ್ದು ಏಕಾಗ್ರತೆಯ ಸಂಕೇತವಾಗಿದೆ.

  ಮಹಾಭಾರತದಲ್ಲಿ ರಚಿತವಾದ ವಿಷ್ಣುಸಹಸ್ರನಾಮ ನಮ್ಮ ವರೆಗೆ ಹೇಗೆ ತಲುಪಿತು ?

ದೇವರ ಶಿರಭಾಗ ದೇವರ ಶಿರವು ಪವಿತ್ರ ನದಿ ಗಂಗೆಯನ್ನು ಪ್ರತಿನಿಧಿಸಿದೆ. ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ, ಹಾದುಹೋಗುವ ಬುದ್ಧಿವಂತಿಕೆ ಧರ್ಮಗ್ರಂಥಗಳ ಬೋಧನೆಯ ಹರಿವನ್ನು ಇದು ಸಂಕೇತಿಸಿದೆ. ಶಿವನ ತಲೆಯನ್ನು ಅಲಂಕರಿಸುವ ಚಂದ್ರ ಶಿವನು ಸಮಯಕ್ಕೆ ಅಧಿಪತಿಯಾಗಿದ್ದು ಆತ ಸಮಯಾತೀತ (ಅಂದರೆ ಸಮಯದ ಕಟ್ಟುಪಾಡಿಗೆ ಬಗ್ಗದವರು) ಎಂಬುದಾಗಿ ಚಂದ್ರನು ಸಂಕೇತಿಸಿದ್ದಾನೆ.

ಹಣೆಯಲ್ಲಿರುವ ತಿಲಕ ಶಿವನ ಹಣೆಯಲ್ಲಿರುವ ಗೋಲಾಕಾರದ ತಿಲಕವು ಜ್ಞಾನದ ಮೂರನೇ ಕಣ್ಣು ಎಂದೇ ಪ್ರಸಿದ್ಧವಾಗಿದೆ. ಮೂರನೇ ಕಣ್ಣು ತೆರೆದಲ್ಲಿ, ಎದುರಿಗಿರುವವರನ್ನೇ ಇದು ಸುಟ್ಟು ಬೂದಿ ಮಾಡುತ್ತದೆ ಎಂದೇ ಹೇಳಲಾಗಿದೆ.ದುಷ್ಟ ನಾಶ ಮತ್ತು ಅಜ್ಞಾನದ ಅಂತ್ಯವನ್ನು ಇದು ಸಂಕೇತಿಸುತ್ತದೆ.ಹುಲಿಯ ಚರ್ಮದ ಮೇಲೆ ಕುಳಿತಿರುವುದು ಶಿವನು ಸ್ವತಃ ಹುಲಿಯ ಚರ್ಮವನ್ನು ಧರಿಸಿದ್ದು ಅದೇ ಪ್ರಾಣಿಯ ಚರ್ಮದ ಮೇಲೆ ಕುಳಿತಿದ್ದಾರೆ ಇದು ಶಿವನು ಕಾಲ ಜ್ಞಾನಿ ಧೈರ್ಯಶಾಲಿ ಎಂಬುದನ್ನು ಸುಚಿಸುತ್ತದೆ.

ಶಿವನ ಈ ಕಥೆಯನ್ನು ಓದಿದವರಿಗೂ ಕೇಳಿದವರಿಗೂ ಜೀವನದಲ್ಲಿ ಯಶಸ್ಸುಂಟಾಗಿ ಐಶ್ವರ್ಯವಂತರಾಗಲಿ.. ಶಿವಾರ್ಪಣಮಸ್ತು.. ಓಂ ನಮಃ ಶಿವಾಯ.

ಓಂ ತತ್ಸತ್, ಶಿವಾರ್ಪಣಮಸ್ತು,
,🙏🙏🙏🍁🍁🍁🙏🙏🙏

Leave a Reply

Your email address will not be published. Required fields are marked *

Translate »