ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಬದುಕಿನ ಪಾಠ, life lesson

ಬದುಕಿನ  ಪಾಠ

ಇತ್ತೀಚಿನ 4 ಘಟನೆಗಳು ನಮ್ಮನ್ನು ಯೋಚಿಸುವಂತೆ ಮಾಡಿವೆ ಮತ್ತು ನಾವು ಎಲ್ಲಿಗೆ ಹೋಗುತ್ತಿದ್ದೇವೆ  ಎಂಬುದನ್ನು ನಮಗೆ ಪುನರ್ವಿಮರ್ಶಿಸಲು ಪ್ರೇರೇಪಿಸಿವೆ….

1. 👇
ರೂ. 12000 ಕೋಟಿ ಮೌಲ್ಯದ ‘ರೇಮಂಡ್ಸ್’ ಸಾಮ್ರಾಜ್ಯದ ಮಾಲೀಕ   ಇದೀಗ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಾ
ಅಗತ್ಯದ ಆಹಾರವಷ್ಟೇ  ಸೇವಿಸುತ್ತ ಇರಲು ಕಾರಣ  ಅವರ ಮಗನು ಅವರನ್ನು   ಮನೆಯಿಂದ ಹೊರಗಟ್ಟಿರುವುದೇ ಆಗಿದೆ.

2. 👇
ಕೋಟ್ಯಾದಿಪತಿ ಮಹಿಳೆಯೊಬ್ಬಳ ಶವ ಅಸ್ಥಿಪಂಜರದ ಸ್ಥಿತಿಯಲ್ಲಿ ಮುಂಬೈಯ ಆಕೆಯ  ಫ್ಲಾಟ್ನಲ್ಲಿ  ಆಕೆ ನಿಧನಳಾಗಿ   ಒಂದು ವರ್ಷದ ನಂತರ   ಪತ್ತೆಯಾಯಿತು. ಅವಳ ಕೋಟ್ಯಾದಿಪತಿ ಮಗ ಕಳೆದ ಒಂದು ವರ್ಷದಲ್ಲಿ ಒಮ್ಮೆಯೂ ಅವಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿರಲಿಲ್ಲ.

3. 👇
ಐಎಎಸ್ ಮಟ್ಟದ ಅಧಿಕಾರಿಯೊಬ್ಬರು ಕುಟುಂಬದ ಸಮಸ್ಯೆಗಳ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾದರು.

4👇

ಫಾರ್ಮುಲಾ 1 ರ ಶ್ರೇಷ್ಠ ಚಾಲಕರಲ್ಲಿ ಒಬ್ಬರಾದ ಮೈಕೆಲ್ ಷೂಮೇಕರ್, ನಮಗೆ ಮರೆತು ಹೋದರೂ, 2013 ರಲ್ಲಿ ಸ್ಕೀ ಅಪಘಾತದ ನಂತರ  ತಲೆಗೆ ತೀವ್ರತರವಾದ ಪೆಟ್ಟಾಗಿ ಪ್ರತಿದಿನ ಅವನ ಜೀವನಕ್ಕಾಗಿ ಹೋರಾಡುತ್ತಿದ್ದಾನೆ. ಅವನು ಇಂದು ಕೇವಲ 40 ಪೌ೦ಡುಗಳಷ್ಟು ತೂಕ ಹೊಂದಿದ್ದಾನೆ.

  ನವದಂಪತಿ, new husband wife story

ಯೋಚಿಸಲೇ ಸಾಧ್ಯವಾಗುತ್ತಿಲ್ಲ..!! 
ಅವನು 91 ಗ್ರಾಂಡ್ ಪಿಕ್ಸ್ ಗೆದ್ದಿದ್ದಾನೆ ಮತ್ತು 7 (ಏಳು) ಬಾರಿ ವಿಶ್ವ ಚಾಂಪಿಯನ್ ಆಗಿದ್ದ. ವೇಗವು ಅವನ ಆತ್ಮದಲ್ಲಿದೆ ಆದರೆ ….
ಒಂದು ಸ್ಕೀ ರೆಸಾರ್ಟ್ನಲ್ಲಿ ವಿಶ್ರಾಂತಿ ದಿನದಂದು, ಅದೃಷ್ಟ ಮಧ್ಯಪ್ರವೇಶಿಸಿತು ಮತ್ತು ಅವನ ಜೀವನ ಶಾಶ್ವತವಾಗಿ ಬದಲಾಯಿತು!
ಇಲ್ಲಿಯವರೆಗೆ, ಅವನ ವೈದ್ಯಕೀಯ ಬಿಲ್ ಸುಮಾರು 14 ಮಿಲಿಯನ್ ಯುರೊಗಳು.
ವೈದ್ಯಕೀಯ ವೆಚ್ಚಗಳನ್ನು ಪಾವತಿಸಲು ಅವನ ಹೆಂಡತಿ ತನ್ನ ಆಸ್ತಿಗಳನ್ನು ಮಾರಬೇಕಾಯಿತು.
ಅವನ ದುರಂತವು ನಮಗೆ ಎಲ್ಲರಿಗೂ ಜೀವನದಲ್ಲಿ ಪಾಠವಾಗಿರಬಹುದು.

ತಂದೆಯನ್ನು ಮಗ ಮನೆಯಿಂದ ಹೊರ ಹಾಕಿದನೆಂದರೆ ಚಿಕ್ಕಂದಿನಲ್ಲಿ ತಂದೆ ಹಣ ಸಂಪಾದಿಸಲು ಹೆಚ್ಚು ಗಮನ ಕೊಟ್ಟು ಮಗನ ಬೇಕು -ಬೇಡಗಳಿಗೆ ಗಮನ ಹರಿಸದೇ ಎಲ್ಲಾ ಕೆಲಸದವರ ಸುಪರ್ದಿಗೆ ಒಪ್ಪಿಸಿದ್ದಿರಬಹುದು..ಮಗನಿಗೆ ತಂದೆ ಮೇಲಿನ ಪ್ರೀತಿಗಿಂತಲೂ ಅಧಿಕ ಹಣದ ಮೇಲೆ ಪ್ರೀತಿ ಇರಬಹುದು.. ಹಾಗೆಯೇ ತಾಯಿಯನ್ನು ತೀರಿಕೊಂಡು
ವರ್ಷ ಕಳೆಯುವವರೆಗೂ ನೋಡಲು ಮಗ ಬಂದಿಲ್ಲವೆಂದರೆ ಅವನು ಸಣ್ಣವನಿರುವಾಗ ತಾಯಿ
ಎಲ್ಲಾ ಕೆಲಸಗಳನ್ನು ಕೆಲಸದವರಿಂದಲೇ ಮಾಡಿಸುತ್ತಿದ್ದು ಅವನ ಲಾಲನೆ ಪಾಲನೆಯಲ್ಲಿ  ಹೆಚ್ಚು ಸಮಯ ಕಳೆದಿಲ್ಲದಿರಬಹುದು….
3ನೇ ಘಟನೆಯಲ್ಲಿ ಬರುವ ಅಧಿಕಾರಿಯು ಇದೇ ರೀತಿ ಕುಟುಂಬಕ್ಕೆ ಅಗತ್ಯ ಗಮನ ಹರಿಸದೇ ಕೊನೆಗೆ ಒತ್ತಡ ನಿಭಾಯಿಸಲು ಸೋತಿರಬಹುದು…
ಶ್ರೇಷ್ಟ ಚಾಲಕ ಷೂಮೇಕರ್ ದುರಾದೃಷ್ಟದಿಂದ ಕಷ್ಟ ಅನುಭವಿಸಿದರೂ ಉತ್ತಮನಾಗಿದ್ದರಿಂದ ಇಂದಿಗೂ ಜೀವಂತವಾಗಿರಲು ಸಹಾಯ ಪಡೆಯುತ್ತಿದ್ದಾನೆ  ..
ಇಂಥಾ ಘಟನೆಗಳು ನಮಗೆ ಬದುಕಿನ ಪಾಠವಾಗುವುವು.

  ಹಿಂದೂ ಧರ್ಮದಲ್ಲಿ ಅರಿಶಿನ ಹಾಗೂ ಕುಂಕುಮದ ಮಹತ್ವ"

ನಿಮ್ಮ ಜೀವನದಲ್ಲಿ ಇಂದು ನಿಮಗೆ  ಏನೇ ಇರಲಿ, ದಯವಿಟ್ಟು ಅದರ ಬಗ್ಗೆ ಸಂತೋಷವಾಗಿರಿ.

ನಮ್ಮೆಲ್ಲರ ಈ
ಭೂಮಿಯ ಸಣ್ಣ ಪ್ರವಾಸ  ದಲ್ಲಿ ಶಾಶ್ವತತೆ ಇಲ್ಲ. ನಾವು ಎಲ್ಲರೂ ವ್ಯತ್ಯಾಸವಿಲ್ಲದೆಯೇ
ತಲೆಬುರುಡೆಗಳು ಮತ್ತು ಅಸ್ಥಿಪಂಜರಗಳಾಗುವುದರಿಂದ  ಜಾತಿ, ಜನಾಂಗ ಮತ್ತು ಧರ್ಮದ ಬಗ್ಗೆ ಯಾಕೆ ಜಗಳವಾಡುತ್ತೇವೆ.. ??
ಬದುಕುಳಿಯಲು ನಮಗೆ ಹಣ ಬೇಕಾಗುತ್ತದೆ ಆದರೆ ಅದಕ್ಕಾಗಿ ಹಣ ಸಂಪಾದಿಸುವುದು ಮಾತ್ರ ಗುರಿಯಾಗಿ ಮಕ್ಕಳಿಗೆ ಒಳ್ಳೆಯ ನಡತೆ, ಸರಳ ಜೀವನ, ಪರೋಪಕಾರ ಮನಸ್ಸು ಎಲ್ಲಾ ಕಲಿಸುವ ಕರ್ತವ್ಯ ಮರೆಯಬಾರದು. ಮಾಡಿದ ಹಣ, ಅಂತಸ್ತು, ಎಲ್ಲಾ ಮಕ್ಕಳಿಗೇ ಬಿಟ್ಟು ಜೀವನದಲ್ಲಿ ಇತರರಿಗೆ ಸಹಾಯ ಮಾಡಿ ಅವರ ಮನಸ್ಸಲ್ಲುಳಿಯುವ ಅವಕಾಶವನ್ನು ಕಳೆದುಕೊಳ್ಳಬಾರದು.
 ನಾಳೆ ಬಹುಶಃ ಬರಲಾರದೆಂದು ಊಹಿಸಿ ” ನಾಳೆ ನಾವು ಆನಂದಿಸುವೆವು “ಎಂದು ಹೇಳುವ ಮೂಲಕ ನಮ್ಮ ಆತ್ಮಕ್ಕೆ ನಾವೇ ವಂಚಿಸಬಾರದು.ಮಕ್ಕಳೊಂದಿಗೆ ಮಾತ್ರವಲ್ಲದೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಹೊಂದಲು ಇರುವ ಅವಕಾಶಗಳನ್ನು ಕ್ಷುಲ್ಲಕ ಕಾರಣ ನೀಡಿ ತಪ್ಪಿಸಬೇಡಿ. ಯಾಕೆಂದರೆ ಕೊನೆಯಲ್ಲಿ, ಅವರು ಮಾತ್ರ ನೆರವಾಗುವವರು.
ಇವತ್ತು ನಮಗೆ ಇರುವುದು
ಇಂದಿನ ಸಮಯ. ಒಳ್ಳೆಯದು ಮಾಡೋಣ ಮತ್ತು ಸಂತೃಪ್ತಿಯ ಜೀವನ ಜೀವಿಸಲು  ಕಲಿಯೋಣ!

  ರಥ ಸಪ್ತಮಿ : ಪೂಜೆ ವಿಧಾನ, ಶುಭ ಮುಹೂರ್ತ, ಮಹತ್ವ ಮತ್ತು ಪ್ರಯೋಜನ ..!

ಯಾವುದೇ ಜನರೊಂದಿಗೆ ಯಾವುದೇ ದ್ವೇಷವನ್ನು ಹೊಂದಬೇಡಿ,

ನಮಗೆ ಇಂದು ಮಾತ್ರ ಇದೆ ..

Leave a Reply

Your email address will not be published. Required fields are marked *

Translate »