ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ರಾಮಾಯ ರಾಮಭದ್ರಾಯ ಶ್ಲೋಕ ಗೂಢಾರ್ಥ

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ|ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ ॥

ಇದು ಬಹು ಪ್ರಸಿದ್ಧವಾದ ಶ್ಲೋಕ. ಆದರೆ ಆ ಪದಪ್ರಯೋಗಗಳಿಗೆ ಇರುವ ಗೂಢಾರ್ಥ ವಿಶೇಷವಾಗಿದ್ದು ಮನಸ್ಸಿಗೆ ಮುದವನ್ನುಂಟು ಮಾಡುವಂತಹುದು.

ರಾಮಾ:
ಶ್ರೀರಾಮಚಂದ್ರನನ್ನು ದಶರಥ ಚಕ್ರವರ್ತಿ ಮಾತ್ರ “ರಾಮಾ” ಎಂದು ಕರೆಯುತ್ತಿದ್ದನಂತೆ.ಆ ರೀತಿಯ ಅಧಿಕಾರ ತಂದೆಯಾದವನಿಗೆ ಮಾತ್ರ.

ರಾಮಭದ್ರ
ಇನ್ನು ತಾಯಿಯಾದ ಕೌಸಲ್ಯೆ ಮಗನನ್ನು “ರಾಮಭದ್ರ” ಎನ್ನುತ್ತಿದ್ದಳಂತೆ.ಅದು ವಾತ್ಸಲ್ಯಭರಿತವಾದ ಸಂಬೋಧನೆ.

ರಾಮಚಂದ್ರ
ಚಿಕ್ಕಮ್ಮ ಕೈಕೇಯಿ ರಾಮಚಂದ್ರ ಎನ್ನುತ್ತಿದ್ದಳು.ಬಾಲ್ಯದಲ್ಲಿ ಬಾನಿನಲ್ಲಿರುವ ಚಂದ್ರ ಬೇಕೆಂದು ಅಳುತ್ತಿದ್ದ ಶ್ರೀರಾಮನಿಗೆ ಕೈಕೇಯಿ-ಮಂಥರೆಯರು ಕನ್ನಡಿಯೊಳಗೆ ಚಂದ್ರಬಿಂಬ ತೋರಿಸಿ ಸಮಾಧಾನಪಡಿಸಿದ್ದರು.! ಆ ಕಾರಣದಿಂದ “ರಾಮಚಂದ್ರ” ಎಂಬ ಅನ್ವರ್ಥನಾಮ.

ವೇದಸೇ
ಬ್ರಹ್ಮರ್ಷಿಗಳಾದ ವಶಿಷ್ಠರು ಶ್ರೀರಾಮನನ್ನು ಪರತತ್ತ್ವವೆಂದು ತಿಳಿದು “ವೇಧಸೇ” ಎಂದು ಕರೆಯುತ್ತಿದ್ದರು.

ರಘುನಾಥ
ಆದರೆ ಅಯೋಧ್ಯೆಯ ಪುರಜನರೆಲ್ಲಾ ’ನಮ್ಮ ರಘುವಂಶದ ಅರಸು’ ಎಂಬರ್ಥದಲ್ಲಿ “ರಘುನಾಥ” ಎಂದು ಕರೆಯುತ್ತಿದ್ದರು.

ನಾಥ
ಇನ್ನು “ನಾಥ” ಎಂದಷ್ಟೆ ಕರೆಯುತ್ತಿದ್ದವಳು ಸೀತಾದೇವಿ ಮಾತ್ರ.ಹಾಗೆ ಕರೆಯುವುದು ಅವಳೊಬ್ಬಳ ಹಕ್ಕು.!

ಸೀತಾಯ ಪತಯೇ

ಆದರೆ ಮಿಥಿಲೆಯ ಜನರೆಲ್ಲರೂ ’ನಮ್ಮ ಸೀತೆಯ ಗಂಡ’ ಎಂಬ ಅಭಿಮಾನದಿಂದ “ಸೀತಾಯ ಪತಯೇ” ಎನ್ನುತ್ತಿದ್ದರು.


ಶ್ರೀ ಗುರುಭ್ಯೋ ನಮಃ: ಹರಿ: ಓಂ

  ಹನುಮಾನ್ ಚಾಲೀಸಾ

॥ನಾಮರಾಮಾಯಣಂ॥
॥ಬಾಲಕಾಂಡಃ॥
ಶುದ್ಧಬ್ರಹ್ಮಪರಾತ್ಪರ ರಾಮ॥೧॥
ಕಾಲಾತ್ಮಕಪರಮೇಶ್ವರ ರಾಮ॥೨॥
ಶೇಷತಲ್ಪಸುಖನಿದ್ರಿತ ರಾಮ॥೩॥
ಬ್ರಹ್ಮಾದ್ಯಮರಪ್ರಾರ್ಥಿತ ರಾಮ॥೪॥
ಚಂಡಕಿರಣಕುಲಮಂಡನ ರಾಮ॥೫॥
ಶ್ರೀಮದ್ದಶರಥನಂದನ ರಾಮ॥೬॥
ಕೌಸಲ್ಯಾಸುಖವರ್ಧನ ರಾಮ॥೭॥
ವಿಶ್ವಾಮಿತ್ರಪ್ರಿಯಧನ ರಾಮ॥೮॥
ಘೋರತಾಟಕಾಘಾತಕ ರಾಮ॥೯॥
ಮಾರೀಚಾದಿನಿಪಾತಕ ರಾಮ॥೧೦॥
ಕೌಶಿಕಮಖಸಂರಕ್ಷಕ ರಾಮ॥೧೧॥
ಶ್ರೀಮದಹಲ್ಯೋದ್ಧಾರಕ ರಾಮ॥೧೨॥
ಗೌತಮಮುನಿಸಂಪೂಜಿತ ರಾಮ॥೧೩॥
ಸುರಮುನಿವರಗಣಸಂಸ್ತುತ ರಾಮ॥೧೪॥
ನಾವಿಕಧಾವಿತಮೃದುಪದ ರಾಮ॥೧೫॥
ಮಿಥಿಲಾಪುರಜನಮೋಹಕ ರಾಮ॥೧೬॥
ವಿದೇಹಮಾನಸರಂಜಕ ರಾಮ॥೧೭॥
ತ್ರ್ಯಂಬಕಕಾರ್ಮುಕಭಂಜಕ ರಾಮ॥೧೮॥
ಸೀತಾರ್ಪಿತವರಮಾಲಿಕ ರಾಮ॥೧೯॥
ಕೃತವೈವಾಹಿಕಕೌತುಕ ರಾಮ॥೨೦॥
ಭಾರ್ಗವದರ್ಪವಿನಾಶಕ ರಾಮ॥೨೧॥
ಶ್ರೀಮದಯೋಧ್ಯಾಪಾಲಕ ರಾಮ॥೨೨॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥

॥ಅಯೋಧ್ಯಾಕಾಂಡಃ॥
ಅಗಣಿತಗುಣಗಣಭೂಷಿತ ರಾಮ॥೨೩॥
ಅವನೀತನಯಾಕಾಮಿತ ರಾಮ॥೨೪॥
ರಾಕಾಚಂದ್ರಸಮಾನನ ರಾಮ॥೨೫॥
ಪಿತೃವಾಕ್ಯಾಶ್ರಿತಕಾನನ ರಾಮ॥೨೬॥
ಪ್ರಿಯಗುಹವಿನಿವೇದಿತಪದ ರಾಮ॥೨೭॥
ತತ್ಕ್ಷಾಲಿತನಿಜಮೃದುಪದ ರಾಮ॥೨೮॥
ಭರದ್ವಾಜಮುಖಾನಂದಕ ರಾಮ॥೨೯॥
ಚಿತ್ರಕೂಟಾದ್ರಿನಿಕೇತನ ರಾಮ॥೩೦॥
ದಶರಥಸಂತತಚಿಂತಿತ ರಾಮ॥೩೧॥
ಕೈಕೇಯೀತನಯಾರ್ಥಿತ ರಾಮ॥೩೨॥
ವಿರಚಿತನಿಜಪಿತೃಕರ್ಮಕ ರಾಮ॥೩೩॥
ಭರತಾರ್ಪಿತನಿಜಪಾದುಕ ರಾಮ॥೩೪॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥

॥ಅರಣ್ಯಕಾಂಡಃ॥
ದಂಡಕಾವನಜನಪಾವನ ರಾಮ॥೩೫॥
ದುಷ್ಟವಿರಾಧವಿನಾಶನ ರಾಮ॥೩೬॥
ಶರಭಂಗಸುತೀಕ್ಷ್ಣಾರ್ಚಿತ ರಾಮ॥೩೭॥
ಅಗಸ್ತ್ಯಾನುಗ್ರಹವರ್ಧಿತ ರಾಮ॥೩೮॥
ಗೃಧ್ರಾಧಿಪಸಂಸೇವಿತ ರಾಮ॥೩೯॥
ಪಂಚವಟೀತಟಸುಸ್ಥಿತ ರಾಮ॥೪೦॥
ಶೂರ್ಪಣಖಾರ್ತ್ತಿವಿಧಾಯಕ ರಾಮ॥೪೧॥
ಖರದೂಷಣಮುಖಸೂದಕ ರಾಮ॥೪೨॥
ಸೀತಾಪ್ರಿಯಹರಿಣಾನುಗ ರಾಮ॥೪೩॥
ಮಾರೀಚಾರ್ತಿಕೃತಾಶುಗ ರಾಮ॥೪೪॥
ವಿನಷ್ಟಸೀತಾಂವೇಷಕ ರಾಮ॥೪೫॥
ಗೃಧ್ರಾಧಿಪಗತಿದಾಯಕ ರಾಮ॥೪೬॥
ಶಬರೀದತ್ತಫಲಾಶನ ರಾಮ॥೪೭॥
ಕಬಂಧಬಾಹುಚ್ಛೇದನ ರಾಮ॥೪೮॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥

  ಆರು ಕನ್ನಡ ಸಣ್ಣ ಕಥೆಗಳು - 6 small kannada stories

॥ಕಿಷ್ಕಿಂಧಾಕಾಂಡಃ॥
ಹನುಮತ್ಸೇವಿತನಿಜಪದ ರಾಮ॥೪೯॥
ನತಸುಗ್ರೀವಾಭೀಷ್ಟದ ರಾಮ॥೫೦॥
ಗರ್ವಿತವಾಲಿಸಂಹಾರಕ ರಾಮ॥೫೧॥
ವಾನರದೂತಪ್ರೇಷಕ ರಾಮ॥೫೨॥
ಹಿತಕರಲಕ್ಷ್ಮಣಸಂಯುತ ರಾಮ॥೫೩॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥

॥ಸುಂದರಕಾಂಡಃ॥
ಕಪಿವರಸಂತತಸಂಸ್ಮೃತ ರಾಮ॥೫೪॥
ತದ್ಗತಿವಿಘ್ನಧ್ವಂಸಕ ರಾಮ॥೫೫॥
ಸೀತಾಪ್ರಾಣಾಧಾರಕ ರಾಮ॥೫೬॥
ದುಷ್ಟದಶಾನನದೂಷಿತ ರಾಮ॥೫೭॥
ಶಿಷ್ಟಹನೂಮದ್ಭೂಷಿತ ರಾಮ॥೫೮॥
ಸೀತಾವೇದಿತಕಾಕಾವನ ರಾಮ॥೫೯॥
ಕೃತಚೂಡಾಮಣಿದರ್ಶನ ರಾಮ॥೬೦॥
ಕಪಿವರವಚನಾಶ್ವಾಸಿತ ರಾಮ॥೬೧॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥

॥ಯುದ್ಧಕಾಂಡಃ॥
ರಾವಣನಿಧನಪ್ರಸ್ಥಿತ ರಾಮ॥೬೨॥
ವಾನರಸೈನ್ಯಸಮಾವೃತ ರಾಮ॥೬೩॥
ಶೋಷಿತಸರಿದೀಶಾರ್ಥಿತ ರಾಮ॥೬೪॥
ವಿಭೀಷಣಾಭಯದಾಯಕ ರಾಮ॥೬೫॥
ಪರ್ವತಸೇತುನಿಬಂಧಕ ರಾಮ॥೬೬॥
ಕುಂಭಕರ್ಣಶಿರಶ್ಛೇದಕ ರಾಮ॥೬೭॥
ರಾಕ್ಷಸಸಂಘವಿಮರ್ದಕ ರಾಮ॥೬೮॥
ಅಹಿಮಹಿರಾವಣಚಾರಣ ರಾಮ॥೬೯॥
ಸಂಹೃತದಶಮುಖರಾವಣ ರಾಮ॥೭೦॥
ವಿಧಿಭವಮುಖಸುರಸಂಸ್ತುತ ರಾಮ॥೭೧॥
ಖಃಸ್ಥಿತದಶರಥವೀಕ್ಷಿತ ರಾಮ॥೭೨॥
ಸೀತಾದರ್ಶನಮೋದಿತ ರಾಮ॥೭೩॥
ಅಭಿಷಿಕ್ತವಿಭೀಷಣನತ ರಾಮ॥೭೪॥
ಪುಷ್ಪಕಯಾನಾರೋಹಣ ರಾಮ॥೭೫॥
ಭರದ್ವಾಜಾಭಿನಿಷೇವಣ ರಾಮ॥೭೬॥
ಭರತಪ್ರಾಣಪ್ರಿಯಕರ ರಾಮ॥೭೭॥
ಸಾಕೇತಪುರೀಭೂಷಣ ರಾಮ॥೭೮॥
ಸಕಲಸ್ವೀಯಸಮಾನತ ರಾಮ॥೭೯॥
ರತ್ನಲಸತ್ಪೀಠಾಸ್ಥಿತ ರಾಮ॥೮೦॥
ಪಟ್ಟಾಭಿಷೇಕಾಲಂಕೃತ ರಾಮ॥೮೧॥
ಪಾರ್ಥಿವಕುಲಸಮ್ಮಾನಿತ ರಾಮ॥೮೨॥
ವಿಭೀಷಣಾರ್ಪಿತರಂಗಕ ರಾಮ॥೮೩॥
ಕೀಶಕುಲಾನುಗ್ರಹಕರ ರಾಮ॥೮೪॥
ಸಕಲಜೀವಸಂರಕ್ಷಕ ರಾಮ॥೮೫॥
ಸಮಸ್ತಲೋಕಾಧಾರಕ ರಾಮ॥೮೬॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥

  ಶ್ರೀ ಶಿವ ದಶಾವತಾರ ಮೂಲಾಕ್ಷರ ಸಹಸ್ರ ನಾಮಾವಳಿ

॥ಉತ್ತರಕಾಂಡಃ॥
ಆಗತಮುನಿಗಣಸಂಸ್ತುತ ರಾಮ॥೮೭॥
ವಿಶ್ರುತದಶಕಂಠೋದ್ಭವ ರಾಮ॥೮೮॥
ಸಿತಾಲಿಂಗನನಿರ್ವೃತ ರಾಮ॥೮೯॥
ನೀತಿಸುರಕ್ಷಿತಜನಪದ ರಾಮ॥೯೦॥
ವಿಪಿನತ್ಯಾಜಿತಜನಕಜ ರಾಮ॥೯೧॥
ಕಾರಿತಲವಣಾಸುರವಧ ರಾಮ॥೯೨॥
ಸ್ವರ್ಗತಶಂಬುಕಸಂಸ್ತುತ ರಾಮ॥೯೩॥
ಸ್ವತನಯಕುಶಲವನಂದಿತ ರಾಮ॥೯೪॥
ಅಶ್ವಮೇಧಕ್ರತುದೀಕ್ಷಿತ ರಾಮ॥೯೫॥
ಕಾಲಾವೇದಿತಸುರಪದ ರಾಮ॥೯೬॥
ಆಯೋಧ್ಯಕಜನಮುಕ್ತಿದ ರಾಮ॥೯೭॥
ವಿಧಿಮುಖವಿಬುಧಾನಂದಕ ರಾಮ॥೯೮॥
ತೇಜೋಮಯನಿಜರೂಪಕ ರಾಮ॥೯೯॥
ಸಂಸೃತಿಬಂಧವಿಮೋಚಕ ರಾಮ॥೧೦೦॥
ಧರ್ಮಸ್ಥಾಪನತತ್ಪರ ರಾಮ॥೧೦೧॥
ಭಕ್ತಿಪರಾಯಣಮುಕ್ತಿದ ರಾಮ॥೧೦೨॥
ಸರ್ವಚರಾಚರಪಾಲಕ ರಾಮ॥೧೦೩॥
ಸರ್ವಭವಾಮಯವಾರಕ ರಾಮ॥೧೦೪॥
ವೈಕುಂಠಾಲಯಸಂಸ್ಥಿತ ರಾಮ॥೧೦೫॥
ನಿತ್ಯಾನಂದಪದಸ್ಥಿತ ರಾಮ॥೧೦೬॥
ರಾಮ ರಾಮ ಜಯ ರಾಜಾ ರಾಮ॥೧೦೭॥
ರಾಮ ರಾಮ ಜಯ ಸೀತಾ ರಾಮ॥೧೦೮॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥

॥ ಇತಿ ನಾಮರಾಮಾಯಣಂ ಸಂಪೂರ್ಣಂ ॥


Leave a Reply

Your email address will not be published. Required fields are marked *

Translate »