ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಆದಿ ಶಂಕರಾಚಾರ್ಯ ವಿರಚಿತ “ಭಜ ಗೋವಿಂದಂ” ಗದ್ಯಾರ್ಥ ಸಹಿತ..!

ಆದಿ ಶಂಕರಾಚಾರ್ಯ ವಿರಚಿತ “ಭಜ ಗೋವಿಂದಂ” ಗದ್ಯಾರ್ಥ ಸಹಿತ..!
ಜೀವನದಲ್ಲಿ ಒಮ್ಮೆ ಓದಲೇ ಬೇಕಾದಂಥ ಪವಿತ್ರ ಕೃತಿ.

ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ|
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನ ಹಿ ನ ಹಿ ರಕ್ಷತಿ ಡುಕುರುಞ್ ಕರಣೇ || 1||

ಗೋವಿಂದನನ್ನು ಭಜಿಸು, ಗೋವಿಂದನನ್ನು ಭಜಿಸು, ಎಲೈ ಮೂಢ..!
ಅಂತ್ಯ ಕಾಲವು ಸಮೀಪಿಸಿರುವಾಗ ಈ ಹಣ ದ್ರವ್ಯ ನಿನ್ನನ್ನು ಎಂದಿಗೂ ರಕ್ಷಿಸುವುದಿಲ್ಲ.

ಮೂಢ ಜಹೀಹಿ ಧನಾಗಮತೃಷ್ಣಾಮ್
ಕುರುಸದ್ಬುದ್ಧಿಂ ಮನಸಿ ವಿತೃಷ್ಣಾಮ್|
ಯಲ್ಲಭಸೇ ನಿಜಕರ್ಮೋಪಾತ್ತಂ
ವಿತ್ತಂ ತೇನ ವಿನೋದಯ ಚಿತ್ತಮ್||2||

ಎಲೈ ಮೂಢ..! ಹಣವು ಬರಲೆಂಬ ಆಸೆಯನ್ನು ಬಿಡು.
ಮನಸ್ಸಿನಲ್ಲಿರುವ ಆಸೆಯನ್ನು ತೊರೆದು ಸದ್ವಿಚಾರವನ್ನು ಮಾಡಬೇಕೆಂಬ ಬುದ್ಧಿಯನ್ನು ತಂದುಕೊ.
ನೀನು ಮಾಡುವ ಕೆಲಸದಿಂದ ಎಷ್ಟು ಹಣ ನಿನಗೆ ದೊರೆಯುತ್ತದೆಯೋ ಅಷ್ಟನ್ನು ಬಳಸಿ ಮನಸ್ಸಿಗೆ ತೃಪ್ತಿಯನ್ನು ತಂದುಕೊ.

ನಾರೀ ಸ್ತನಭರನಾಭೀದೇಶಂ
ದೃಷ್ಟ್ವಾಮಾ ಗಾ ಮೋಹಾವೇಶಮ್|
ಏತನ್ಮಾಂಸವಸಾದಿವಿಕಾರಂ
ಮನಸಿ ವಿಚಿಂತಯ ವಾರಂ ವಾರಮ್ ||3||

ಸ್ತೀಯರ ಸ್ತನಗಳನ್ನು ನಾಭಿ ಪ್ರದೇಶವನ್ನು ನೋಡಿ ಮೋಹಾವಿಷ್ಟನಾಗಬೇಡ.
ಅದೆಲ್ಲವೂ ಮಾಂಸ, ಕೊಬ್ಬು ಮುಂತಾದವುಗಳ ವಿಕಾರವೆಂದು ಮನಸ್ಸಿನಲ್ಲಿ ಮತ್ತೆ ಮತ್ತೆ ಗುಣಿಸಿ ನೋಡು.

ನಲಿನೀದಲಗತಜಲಮತಿತರಲಂ
ತದ್ವಜ್ಜೀವಿತಮತಿಶಯಚಪಲಮ್|
ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ
ಲೋಕಂ ಶೋಕಹತಂ ಚ ಸಮಸ್ತಮ್ ||4||

ತಾವರೆಗಿಡದ ಎಲೆಯ ಮೇಲಿನ ನೀರು ಒಂದೆಡೆ ನಿಲ್ಲದೆ ಬಹುಬೇಗನೆ ಜಾರುತ್ತದೆ.
ಹಾಗೆಯೇ ಮನುಷ್ಯನ ಜೀವಿತವು ಅತ್ಯಂತ ಚಂಚಲ.ಯಾವ ಕ್ಷಣದಲ್ಲಾದರೂ ಜಾರಿ ಹೋಗಬಹುದು.
ಈ ಲೋಕವು ರೋಗ ದುರಂಹಕಾರಗಳಿಂದ ತುಂಬಿದೆಯೆಂದೂ ಸಮಸ್ತರೂ ಒಂದಲ್ಲ ಒಂದು ಶೋಕದಿಂದ ನರಳುತ್ತಿದ್ದಾರೆಂದೂ ತಿಳಿದುಕೋ.

ಯಾವದ್ವಿತ್ತೋಪಾರ್ಜನಸಕ್ತಃ
ಸ್ತಾವನ್ನಿಜಪರಿವಾರೋ ರಕ್ತಃ|
ಪಶ್ಚಾಜ್ಜೀವತಿ ಜರ್ಜರದೇಹೇ
ವಾರ್ತಾಂ ಕೋsಪಿ ನ ಪೃಚ್ಛತಿ ಗೇಹೇ ||5||

ನೀನು ಧನ ಸಂಪಾದನೆಯಲ್ಲಿ ತೊಡಗಿರುವವರೆಗೆ ನಿನ್ನ ಕುಟುಂಬದವರು ನಿನ್ನನ್ನು ಪ್ರೀತಿಯಿಂದ ಆದರಿಸುತ್ತಾರೆ.
ಆಮೇಲೆ ಹಣವನ್ನು ಸಂಪಾದಿಸಲಾರದೆ ಮುದಿತನದಿಂದ ದೇಹವು ಜರ್ಝರಿತವಾಗುತ್ತದೆ.
ಆಗ ಮನೆಯಲ್ಲಿರುವ ಯಾರೂ ನಿನ್ನ ಸುದ್ದಿಯನ್ನು ವಿಚಾರಿಸದೆ ದೂರವಾಗಿ ಬಿಡುತ್ತಾರೆ.

ಯಾವತ್ಪವನೋ ನಿವಸತಿ ದೇಹೇ
ತಾವತ್ಪೃಚ್ಛತಿ ಕುಶಲಂ ಗೇಹೇ|
ಗತವತಿ ವಾಯೌ ದೇಹಾಪಾಯೇ
ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ||6||

ಎಲ್ಲಿಯವರೆಗೆ ದೇಹದಲ್ಲಿ ಪ್ರಾಣವಾಯು ಇರುತ್ತದೆಯೋ ಅಲ್ಲಿಯವರೆಗೆ ನಿನ್ನ ದೇಹಸ್ಥಿತಿ ಹೇಗಿದೆಯೆಂದು ಕುಶಲವನ್ನು ಮನೆಯಲ್ಲಿ ವಿಚಾರಿಸಬಹುದು.
ಯಾವಾಗ ಪ್ರಾಣವಾಯು ದೇಹದಿಂದ ಹೊರಟು ಹೋಗುತ್ತದೆಯೋ ಆಗ ಆ ದೇಹದ ಬಳಿಗೆ ಬರಲು ಹೆಂಡತಿಯರು ಸಹ ಹೆದರುತ್ತಾರೆ.

ಬಾಲಸ್ತಾವತ್ಕ್ರೀಡಾಸಕ್ತ-
ಸ್ತರುಣಸ್ತಾವತ್ತರುಣೀಸಕ್ತಃ|
ವೃದ್ಧಸ್ತಾವತ್ಚಿಂತಾಮಗ್ನಃ
ಪರೇ ಬ್ರಹ್ಮಣಿ ಕೋsಪಿ ನ ಸಕ್ತಃ ||7||

ಹುಡುಗನಿಗಾದರೋ ಆಟದಲ್ಲಿ ಆಸಕ್ತಿ.
ಯುವಕನಿಗೆ ತರುಣಿಯರಲ್ಲಿ ಆಸಕ್ತಿ.ಮುದುಕನು ಯಾವುದೋ ಒಂದು ಚಿಂತೆಯಲ್ಲಿ ಮುಳುಗಿರುತ್ತಾನೆ.
ಏವಂಚ ಪರಬ್ರಹ್ಮದ ವಿಷಯದಲ್ಲಿ ಯಾರಿಗೂ ಆಸಕ್ತಿ ಇಲ್ಲ!

ಕಾ ತೇ ಕಾಂತಾ ಕಸ್ತೇ ಪುತ್ರಃ
ಸಂಸಾರೋsಯಮತೀವ ವಿಚಿತ್ರಃ|
ಕಸ್ಯ ತ್ವಂ ಕಃ ಕುತ ಆಯಾತ-
ಸ್ತತ್ತ್ವಂ ಚಿಂತಯ ತದಿಹ ಭ್ರಾತಃ ||8||

ಈ ಸಂಸಾರವು ಅತೀವ ವಿಚಿತ್ರವಾದದ್ದು.ನಿನ್ನ ಕಾಂತೆ ಎಂದುಕೊಳ್ಳುವೆಯಲ್ಲ, ಅವಳು ಯಾರು?
ನನ್ನ ಪುತ್ರ ಎಂದುಕೊಳ್ಳುವೆಯಲ್ಲ ಅವನು ಮೂಲದಲ್ಲಿ ಯಾವನಾಗಿದ್ದ? ನೀನಾದರೂ ಯಾರು? ಯಾರ ಮಗ? ಎಲ್ಲಿಂದ ಇಲ್ಲಿಗೆ ಏಕೆ ಬಂದಿರುವೆ?
ಎಲೈ ಸೋದರನೇ. ಈ ವಿಷಯದಲ್ಲಿ ಸತ್ಯಸ್ಥಿತಿ ಏನೆಂಬುದನ್ನು ಆಲೋಚಿಸಿ ನೋಡು.

  ಅಷ್ಟ ಲಕ್ಷ್ಮಿ ಸ್ತೋತ್ರ ಮಂತ್ರದ ಅರ್ಥ

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಮ್|
ನಿರ್ಮೋಹತ್ವೇ ನಿಶ್ಚಲತತ್ತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ ||9||

ಸಜ್ಜನರ ಸಂಪರ್ಕದಲ್ಲಿದ್ದರೆ ಧನಾದಿ ವಿಷಯಗಳ ಚಿಂತೆ ತಪ್ಪುತ್ತದೆ.
ಈ ಚಿಂತೆ ಹೋದಾಗ ಅವುಗಳ ಮೋಹವೂ ಹೋಗುತ್ತದೆ.
ಅಜ್ಞಾನದಿಂದಾದ ಮೋಹವು ಹೋದರೆ ಶಾಶ್ವತವಾದ ಸತ್ಯವೇನೆಂಬುದರ ಜ್ಞಾನವಾಗುತ್ತದೆ.
ಅಂತಹ ಜ್ಞಾನ ಉದಿಸಿದರೆ ಜೀವನ್ಮುಕ್ತಿಯೇ ಪ್ರಾಪ್ತವಾಯಿತೆಂದು ತಿಳಿಯಬೇಕು.

ವಯಸಿ ಗತೇ ಕಃ ಕಾಮವಿಕಾರಃ
ಶುಷ್ಕೇ ನೀರೇ ಕಃ ಕಾಸಾರಃ|
ಕ್ಷೀಣೇ ವಿತ್ತೇ ಕಃ ಪರಿವಾರೋ
ಜ್ಞಾತೇ ತತ್ತ್ವೇ ಕಃ ಸಂಸಾರಃ ||10||

ವಯಸ್ಸು ಕಳೆದು ಹೋದ ಮೇಲೆ ಕಾಮವಿಕಾರವೆಲ್ಲಿರುತ್ತದೆ?
ನೀರು ಒಣಗಿದ ಮೇಲೆ ಕೆರೆಯೆಂದರೆ ಯಾವುದು?
ಹಣವು ಕ್ಷೀಣಿಸಿ ಇಲ್ಲವಾದಾಗ ಸಂಸಾರದ ಪರಿವಾರವೆಲ್ಲಿರುತ್ತದೆ?
ತತ್ತ್ವಜ್ಞಾನವಾದಾಗ ಈ ಸಂಸಾರ ಎಲ್ಲಿದ್ದೀತು?

ಮಾ ಕುರು ಧನಜನಯೌವನಗರ್ವಂ
ಹರತಿ ನಿಮೇಷಾತ್ಕಾಲಃ ಸರ್ವಮ್|
ಮಾಯಾಮಯಮಿದಮಖಿಲಂ ಮತ್ವಾ
ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ||11||

ಎಲೈ ಮಾನವ, “ನನಗೆ ಧನಬಲವಿದೆ, ಜನಬಲವಿದೆ, ಯೌವನವಿದೆ” ಎಂದು ಗರ್ವಪಡಬೇಡ.
ಒಂದು ನಿಮಿಷದಲ್ಲಿ ಕಾಲವು ಇದೆಲ್ಲವನ್ನು ನಾಶ ಮಾಡಬಲ್ಲದು.
ಇದೆಲ್ಲವೂ ಮಾಯಾ ಕಲ್ಪಿತವಾದದ್ದು (ವಸ್ತುತಃ ಇಲ್ಲ) ಎಂದು ನಿಶ್ಚಯಿಸಿ, (ಶಾಶ್ವತವಾದ) ಬ್ರಹ್ಮವೆಂದರೇನೆಂಬುದನ್ನರಿತು ಅದರಲ್ಲಿ ಸೇರಿಕೋ.

ದಿನಯಾಮಿನ್ಯೌ ಸಾಯಂ ಪ್ರಾತಃ
ಶಿಶಿರವಸಂತೌ ಪುನರಾಯಾತಃ|
ಕಾಲಃಕ್ರೀಡತಿ ಗಚ್ಛತ್ಯಾಯು-
ಸ್ತದಪಿ ನ ಮುಂಚತ್ಯಾಶಾವಯುಃ ||12||

ಹಗಲು ರಾತ್ರಿ, ಸಂಜೆ, ಪ್ರಾತಃಕಾಲ ಶಿಶಿರಋತು, ವಸಂತಋತು ಮುಂತಾದವೆಲ್ಲವೂ ಬರುತ್ತದೆ, ಹೋಗುತ್ತವೆ, ಇದು ಕಾಲಪುರುಷನ ಒಂದು ಆಟ.
ಈ ಆಟದ ಹೆಸರಿನಲ್ಲಿ ಮನುಷ್ಯನ ಆಯಸ್ಸು ಕಳೆದುಹೋಗುತ್ತದೆ.
ಇದೆಲ್ಲ ತಿಳಿದಿದ್ದರೂ ಆಸೆಯೆಂಬ ವಾತರೋಗವು ಬಿಟ್ಟು ಹೋಗುವುದೇ ಇಲ್ಲ.

ಕಾ ತೇ ಕಾಂತಾ ಧನಗತಚಿಂತಾ
ವಾತುಲ ಕಿಂ ತವ ನಾಸ್ತಿ ನಿಯಂತಾ|
ತ್ರಿಜಗತಿ ಸಜ್ಜನಸಂಗತಿರೇಕಾ
ಭವತಿ ಭವಾರ್ಣವತರಣೇ ನೌಕಾ ||13||

ಎಲೈ ವಾತರೋಗಿ! ನಿನಗೆ ಪ್ರಿಯಳಾದ ಮಡದಿ ಯಾರು? ಏನು ಮಾಡಿಯಾಳು? ಇನ್ನೂ ಹಣದ ಆಸೆ ಏಕೆ?
ನಿನಗೆ ಬುದ್ದಿ ಹೇಳು ದಾರಿ ತೋರಿಸತಕ್ಕವರಿಲ್ಲವೇನು?
ಮೂರು ಲೋಕಗಳಲ್ಲಿ ಹುಡುಕಿದರೂ ಸತ್ಸಂಗವೆಂಬುದೊಂದೇ ಸಂಸಾರಸಾಗರವನ್ನುದಾಟಿಸಬಲ್ಲ ದೋಣಿಯಾಗಿರುತ್ತದೆ.

ಜಟಿಲೋ ಮುಂಡೀ ಲುಂಚಿತಕೇಶಃ
ಕಾಷಾಯಾಂಬರಬಹುಕೃತ ವೇಷಃ|
ಪಶ್ಯನ್ನಪಿ ಚ ನ ಪಶ್ಯತಿ ಮೂಢಃ
ಉದರನಿಮಿತ್ತಂ ಬಹುಕೃತವೇಷಃ ||14||

ಒಬ್ಬನು ಜಟೆಬಿಟ್ಟವನು, ಇನ್ನೊಬ್ಬನು ತಲೆಬೋಳಿಸಿಕೊಂಡವನು, ಮತ್ತೊಬ್ಬನು ಕೇಶವನ್ನು ಎಳೆದೆಳೆದು ಕಿತ್ತುಹಾಕಿಕೊಂಡವನು, ಮಗದೊಬ್ಬನು ಕಾವಿ ಬಟ್ಟೆಯನ್ನುಟ್ಟು ಬಹುವಿಧವಾಗಿ ಅಲಂಕರಿಸಿಕೊಂಡವನು.
ಕಣ್ಣಿಂದ ಕಾಣುತ್ತಿದ್ದರೂ ಸತ್ಯವನ್ನು ಕಾಣಲಾರದ ಇಂತಹ ಮೂಢರಿದ್ದಾರೆ.
ಇವರು ಹೊಟ್ಟೆಪಾಡಿಗಾಗಿ ಇಂತಹ ನಾನಾ ವೇಷವನ್ನು ಧರಿಸಿರುತ್ತಾರೆ.

ಅಂಗಂ ಗಲಿತಂ ಪಲಿತಂ ಮುಂಡಂ
ದಶನವಿಹೀನಂ ಜಾತಂ ತುಂಡಮ್|
ವೃದ್ಧೋ ಯಾತಿ ಗೃಹೀತ್ವಾ ದಂಡಂ
ತದಪಿ ನ ಮುಂಚತ್ಯಾಶಾಪಿಂಡಮ್||15||

ವಯಸ್ಸಾದ ಮೇಲೆ ಅವಯವವು ಬಲಹೀನವಾಗಿರುತ್ತದೆ. ಕೂದಲು ನೆರೆತು ತಲೆಯು ಬೆಳ್ಳಗಾಗಿರುತ್ತದೆ.
ಬಾಯಿಯಲ್ಲಿದ್ದ ಹಲ್ಲುಗಳೆಲ್ಲ ಉದುರಿಹೋಗಿರುತ್ತವೆ.ಇಷ್ಟಾದರೂ ಮುದುಕನು ದೊಣ್ಣೆಯನ್ನು ಹಿಡಿದು ಎಲ್ಲಿಗೋ ಹೋಗುತ್ತಲೇ ಇರುತ್ತಾನೆ.
ವಯಸ್ಸಾದರೂ ಆಶೆಯು ಶರೀರವನ್ನು ಬಿಟ್ಟು ಹೋಗುವುದಿಲ್ಲ.

ಅಗ್ರೇ ವಹ್ನಿಃ ಪೃಷ್ಠೇ ಭಾನುಃ
ರಾತ್ರೌ ಚುಬುಕಸಮರ್ಪಿತಜಾನುಃ|
ಕರತಲಭಿಕ್ಷಸ್ತರುತಲವಾಸ-
ಸ್ತದಪಿ ನ ಮುಂಚತ್ಯಾಶಾಪಾಶಃ ||16||

ಛಳಿಯನ್ನು ತಡೆಯಲಾರದೆ ಎದುರಿಗೆ ಬೆಂಕಿಯನ್ನು ಹಾಕಿಕೊಂಡು ಮೈಯನ್ನು ಕಾಯಿಸುತ್ತಾನೆ.
ಸೂರ್ಯನ ಕಡೆಗೆ ಬೆನ್ನು ಮಾಡಿ ಬಿಸಿಲು ಕಾಯಿಸುತ್ತಾನೆ. ರಾತ್ರಿಯಲ್ಲಿ ಮೊಳಕಾಲು ಗದ್ದವನ್ನು ಮುಟ್ಟುವಂತೆ ಬಾಗಿ ಮಲಗುತ್ತಾನೆ. ಭಿಕ್ಷಾಪಾತ್ರೆಯೂ ಇಲ್ಲದ್ದರಿಂದ ಕೈಯಲ್ಲಿಯೇ ಭಿಕ್ಷೆ ಬೇಡಿ ತಿನ್ನುತ್ತಾನೆ.
ಮರದ ಬುಡದಲ್ಲಿ ಮಲಗುತ್ತಾನೆ.ಇಷ್ಟಾದರೂ ಆಸೆಯೆಂಬ ವಾತರೋಗವು ಇವನನ್ನು ಬಿಡುವುದೇ ಇಲ್ಲವಲ್ಲ!

  ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಉತ್ಸವ

ಕುರುತೇ ಗಂಗಾಸಾಗರಗಮನಂ
ವ್ರತಪರಿಪಾಲನಮಥವಾ ದಾನಮ್|
ಜ್ಞಾನವಿಹೀನಃ ಸರ್ವಮತೇನ
ಮುಕ್ತಿಂ ಭಜತಿ ನ ಜನ್ಮಶತೇನ||17||

ಮೋಕ್ಷವನ್ನು ಪಡೆಯುವುದಕ್ಕಾಗಿ ಕೆಲವರು ಗಂಗಾನದಿಗೆ ಹೋಗಿ ಸ್ನಾನ ಮಾಡುತ್ತಾರೆ. ಸಮುದ್ರ ಸ್ನಾನ ಮಾಡುತ್ತಾರೆ!
ನಾನಾ ಬಗೆಯ ವ್ರತಗಳನ್ನು ಮಾಡುತ್ತಾರೆ, ದಾನ ಕೊಡುತ್ತಾರೆ.
ಆದರೆ ಆತ್ಮಜ್ಞಾನವಿಲ್ಲದ ನೂರು ಜನ್ಮಗಳನ್ನು ಕಳೆದರೂ ಅವರಿಗೆ ಮೋಕ್ಷವು ಸಿಗುವುದಿಲ್ಲ.
ಜ್ಞಾನ ಒಂದೇ ಮೋಕ್ಷಕ್ಕೆ ಸಾಧನ.ಇದು ಎಲ್ಲ ಉಪನಿಷತ್ತುಗಳ ಸಿದ್ಧಾಂತ.

ಸುರಮಂದಿರತರುಮೂಲನಿವಾಸಃ
ಶಯ್ಯಾ ಭೂತಲಮಜಿನಂ ವಾಸಃ|
ಸರ್ವಪರಿಗ್ರಹಭೋಗತ್ಯಾಗಃ
ಕಸ್ಯ ಸುಖಂ ನ ಕರೋತಿ ವಿರಾಗಃ ||18||

ವಿರಾಗಿಯಾದವನು ದೇವಾಲಯಗಳಲ್ಲಿ ಅಥವಾ ಮರಗಳ ಬುಡದಲ್ಲಿ ವಾಸ ಮಾಡುತ್ತಾ, ನೆಲವನ್ನೇ ಹಾಸಿಗೆಯನ್ನಾಗಿ ಮಾಡಿಕೊಂಡು ಕೃಷ್ಣಾಜಿನವನ್ನು ಹೊದ್ದುಕೊಂಡು ಸಕಲ ಸುಖಸಾಧನಗಳನ್ನು ತ್ಯಜಿಸುತ್ತಾನೆ.
ಇಂಥ ವೈರಾಗ್ಯವು ಯಾರಿಗೆ ತಾನೆ ಸುಖ ನೀಡದು?

ಯೋಗರತೋ ವಾ ಭೋಗರತೋ ವಾ
ಸಂಗರತೋ ವಾ ಸಂಗವಿಹೀನಃ|
ಯಸ್ಯ ಬ್ರಹ್ಮಣಿ ರಮತೇ ಚಿತ್ತಂ
ನಂದತಿ ನಂದತಿ ನಂದತ್ಯೇವ ||19||

ಒಬ್ಬನು ಯೋಗಿಯಾಗಿರಲಿ, ಭೋಗಿಯಾಗಿರಲಿ, ಸತ್ಸಂಗದಲ್ಲಿ ಇರಲಿ ಅಥವಾ ಸಂಗರಹಿತನಾಗಿರಲಿ.
ಯಾವಾತನ ಚಿತ್ತವು ಬ್ರಹ್ಮಚಿಂತನೆಯಲ್ಲಿ ನಿರತವಾಗಿರುವುದೋ ಆತನು ಆನಂದದಲ್ಲಿ ಮುಳುಗುತ್ತಾನೆ.
ಆನಂದದಲ್ಲಿರುತ್ತಾನೆ, ಆನಂದಿಸುತ್ತಲೇ ಇರುತ್ತಾನೆ, ಇದು ನಿಶ್ಚಿತ.

ಭಗವದ್ಗೀತಾ ಕಿಂಚಿದಧೀತಾ
ಗಂಗಾಜಲ ಲವ ಕಣಿಕಾ ಪೀತಾ|
ಸಕೃದಪಿ ಯೇನ ಮುರಾರಿಸಮರ್ಚಾ
ಕ್ರಿಯತೇ ತಸ್ಯ ಯಮೇನ ನ ಚರ್ಚಾ ||20||

ಭಗವದ್ಗೀತೆಯನ್ನು ಸ್ವಲ್ಪ ಅಧ್ಯಯನ ಮಾಡಿದರೂ ಸಾಕು. ಗಂಗಾಜಲದ ಒಂದು ಹನಿಯನ್ನು ಕುಡಿದರೂ ಸಾಕು.
ಶ್ರೀಮನ್ನಾರಾಯಣನನ್ನು ಒಂದು ಸಲ ಪೂಜಿಸಿದರೂ ಸಾಕು, ಆತನ ವಿಷಯದಲ್ಲಿ ಯಮನು ಯಾವ ಚರ್ಚೆಯನ್ನೂ ಮಾಡುವುದಿಲ್ಲ. (ಯಮನಿಂದ ಅವನಿಗೆ ಯಾವ ಬಾಧೆಯೂ ಇರುವುದಿಲ್ಲ).

ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀಜಠರೇ ಶಯನಮ್|
ಇಹ ಸಂಸಾರೇ ಬಹುದುಸ್ತಾರೇ
ಕೃಪಯಾsಪಾರೇ ಪಾಹಿ ಮುರಾರೇ ||21||

ಮತ್ತೆ ಹುಟ್ಟುವುದು, ಮತ್ತೆ ಸಾಯುವುದು, ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಈ ರೀತಿಯಲ್ಲಿರುವ ಸಂಸಾರಕ್ಕೆ ಪಾರವೇ ಇಲ್ಲ. ಇದನ್ನು ಸುಲಭವಾಗಿ ದಾಟಲಾಗುವುದಿಲ್ಲ.
ಹೇ ಮುರಾರಿ, ನಾರಾಯಣ, ಕೃಪೆಯಿಟ್ಟು ನನ್ನನ್ನು ಪಾಲಿಸು.

ಕಸ್ತ್ವಂ ಕೋsಹಂ ಕುತ ಆಯಾತಃ
ಕಾ ಮೇ ಜನನೀ ಕೋ ಮೇ ತಾತಃ |
ಇತಿ ಪರಿಭಾವಯ ಸರ್ವಮಸಾರಂ
ವಿಶ್ವಂ ತ್ಯಕ್ತ್ವಾ ಸ್ವಪ್ನವಿಚಾರಮ್ ||22||

ನೀನು ಯಾರು? ನಾನು ಯಾರು? ಎಲ್ಲಿಂದ ಏಕೆ ಬಂದಿದ್ದೀಯೇ? ಯಾರು ನನ್ನ ತಾಯಿ? ಯಾರು ನನ್ನ ತಂದೆ? ಎಂಬುದನ್ನು ಸರಿಯಾಗಿ ವಿಚಾರ ಮಾಡಿ ನೋಡು.
ಈ ವಿಶ್ವವೆಲ್ಲವೂ ನಿಸ್ಸಾರವಾದ ಸ್ವಪ್ನದ ವಿಚಾರವೇ ಎಂದು ತಿಳಿದು ದೂರವಿಟ್ಟು ಪರ್ಯಾಲೋಚಿಸು.

ರಥ್ಯಾಕರ್ಪಟವಿರಚಿತಕಂಥಃ
ಪುಣ್ಯಾಪುಣ್ಯವಿವರ್ಜಿತಪಂಥಃ|
ಯೋಗೀ ಯೋಗನಿಯೋಜಿತ ಚಿತ್ತೋ
ರಮತೇ ಬಾಲೋನ್ಮತ್ತವದೇವ ||23||

ಯೋಗದಲ್ಲಿಯೇ ಮನಸ್ಸನ್ನು ಇಟ್ಟ ಯೋಗಿಯು ಬೀದಿಯಲ್ಲಿ ಬಿದ್ದಿರುವ ಚಿಂದಿಯನ್ನೇ ತೇಪೆ ಹಾಕಿಕೊಂಡು ಮೈಮುಚ್ಚಿಕೊಳ್ಳುತ್ತಾನೆ.
ಪಾಪ-ಪುಣ್ಯಗಳನ್ನು ನೋಡದೆ ಮನಬಂದ ದಾರಿಯಲ್ಲಿ ನಡೆಯುತ್ತಾನೆ.
ಕೆಲವೊಮ್ಮೆ ಮಗುವಿನಂತೆಯೂ, ಕೆಲವೊಮ್ಮೆ ಹುಚ್ಚನಂತೆಯೂ ನಡೆದುಕೊಳ್ಳುತ್ತಾನೆ.

ತ್ವಯಿ ಮಯಿ ಚಾನ್ಯತ್ರ್ಯಕೋ ವಿಷ್ಣುಃ
ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ|
ಭವ ಸಮಚಿತ್ತಃ ಸರ್ವತ್ರ ತ್ವಂ
ವಾಛಂಸ್ಯಚಿರಾದ್ಯದಿ ವಿಷ್ಣುತ್ವಮ್||24||

  ಗಾಯತ್ರಿ ಮಂತ್ರ

ನಿನ್ನಲ್ಲಿ ನನ್ನಲ್ಲಿ ಅನ್ಯತ್ರ ಎಲ್ಲೆಲ್ಲಿಯೂ ಒಬ್ಬನೇ ವಿಷ್ಣುವಿದ್ದಾನೆ.
ಸಹನೆಯನ್ನು ಕಳೆದಕೊಂಡು ವ್ಯರ್ಥವಾಗಿ ನನ್ನ ಮೇಲೇಕೆ ಕೋಪಿಸಿಕೊಳ್ಳುತ್ತೀಯೆ.
ಎಲೈ ಮಾನವ, ಶೀಘ್ರವಾಗಿ ನೀನೇ ವಿಷ್ಣುವಾಗಬೇಕೆಂಬ ಬಯಕೆ ಇದ್ದರೆ, ಸರ್ವತ್ರ ವಿಷ್ಣು ಒಬ್ಬನೇ ಇದ್ದಾನೆಂದು ತಿಳಿದು ಸಮಚಿತ್ತನಾಗು.

ಶತ್ರೌ ಮಿತ್ರೇ ಪುತ್ರೇ ಬಂಧೌ
ಮಾ ಕುರು ಯತ್ನಂ ವಿಗ್ರಹಸಂಧೌ|
ಸರ್ವಸ್ಮಿನ್ನಪಿ ಪಶ್ಯಾತ್ಮಾನಂ
ಸರ್ವತ್ರೋತ್ಸೃಜ ಭೇದಜ್ಞಾನಮ್ ||25||

ಶತ್ರು, ಮಿತ್ರ, ಪುತ್ರ, ಬಂಧು ಮೊದಲಾದವರಲ್ಲಿ ಭೇದ ಭಾವನೆಯಿಂದ ಕಲಹ, ಸಂಧಾನಗಳಲ್ಲಿ ಯತ್ನಿಸಬೇಡ.
ಎಲ್ಲದರಲ್ಲಿಯೂ ನಾನೇ ಆತ್ಮನಾಗಿ ಇದ್ದೇನೆ ಎಂಬುದನ್ನು ತಿಳಿದುಕೋ.
ಸರ್ವ ವಸ್ತುಗಳಲ್ಲಿಯೂ ಭೇದ ಬುದ್ಧಿಯನ್ನು ತೊಡೆದು ಹಾಕು.

ಕಾಮಂ ಕ್ರೋಧಂ ಲೋಭಂ ಮೋಹಂ
ತ್ಯಕ್ತ್ವಾತ್ಮಾನಂ ಭಾವಯ ಕೋsಹಮ್|
ಆತ್ಮಜ್ಞಾನವಿಹೀನಾ ಮೂಢಾ-
ಸ್ತೇ ಪಚ್ಯಂತೇ ನರಕನಿಗೂಢಾಃ ||26||

ವಿವೇಕಿಯಾದವನು ಕಾಮ, ಕ್ರೋಧ, ಲೋಭ, ಮೋಹಗಳನ್ನು ತೊಡೆದು ಹಾಕಿ ಸರ್ವತ್ರ ಆತ್ಮನೊಬ್ಬನೇ ಇದ್ದಾನೆಂದೂ ಅವನೇ ನಾನು ಎಂದೂ ತಿಳಿದು ಸೋsಹಂ ಎಂದೇ ನಿಶ್ಚಯಿಸುತ್ತಾನೆ.
ಆತ್ಮಜ್ಞಾನವನ್ನು ಪಡೆಯದೇ ಇರುವ ಮೂಢ ಜನರು ನರಕದಲ್ಲಿ ಬಿದ್ದು ಯಾತನೆಗಳನ್ನು ಅನುಭವಿಸುತ್ತಾರೆ.

ಗೇಯಂ ಗೀತಾನಾಮಸಹಸ್ರಂ
ಧ್ಯೇಯಂ ಶ್ರೀಪತಿರೂಪಮಜಸ್ರಮ್|
ನೇಯಂ ಸಜ್ಜನಸಂಗೇ ಚಿತ್ತಂ
ದೇಯಂ ದೀನಜನಾಯ ಚ ವಿತ್ತಮ್ ||27||

ಭಗವದ್ಗೀತೆಯನ್ನು, ಭಗವಂತನ ಸಹಸ್ರನಾಮಗಳನ್ನು ಹಾಡಿ ಪಾರಾಯಣ ಮಾಡುತ್ತಿರಬೇಕು.
ಶ್ರೀಹರಿಯ ದಿವ್ಯರೂಪವನ್ನು ಸತತವೂ ಧ್ಯಾನಿಸುತ್ತಿರಬೇಕು.
ಸಜ್ಜನರ ಸಹವಾಸದಲ್ಲಿರುವಂತೆ ಮನಸ್ಸನ್ನು ಪ್ರೇರಿಸಬೇಕು.ದೀನ ಜನರಿಗೆ ಹಣದ ಸಹಾಯವನ್ನು ಮಾಡಬೇಕು.

ಅರ್ಥಮನರ್ಥಂ ಭಾವಯ ನಿತ್ಯಂ
ನಾಸ್ತಿ ತತಃ ಸುಖಲೇಶಃ ಸತ್ಯಮ್|
ಪುತ್ರಾದಪಿ ಧನಭಾಜಾಂ ಭೀತಿಃ
ಸರ್ವತ್ರೈಷಾ ವಿಹಿತಾ ರೀತಿಃ ||28||

ಧನವು ಅನರ್ಥಕಾರಿಯೆಂದು ಸದಾ ಭಾವಿಸುತ್ತಿರು. ಧನದಿಂದ ಸುಖಲೇಶವೂ ಸತ್ಯವಾಗಿ ಇಲ್ಲ.
ಹಣವಿದ್ದವರಿಗೆ ತಮ್ಮ ಮಗನಿಂದಲೂ ಸಹ ವಿಪತ್ತು ಬಂದೀತೆಂಬ ಭಯವಿರುತ್ತದೆ.
ಈ ಪರಿಸ್ಥಿತಿಯು ಸರ್ವತ್ರ ಇರತಕ್ಕದ್ದೇ ಸರಿ.

ಪ್ರಾಣಾಯಾಮಂ ಪ್ರತ್ಯಾಹಾರಂ
ನಿತ್ಯಾನಿತ್ಯವಿವೇಕವಿಚಾರಮ್|
ಜಾಪ್ಯಸಮೇತ ಸಮಾಧಿವಿಧಾನಂ
ಕುರ್ವವಧಾನಂ ಮಹದವಧಾನಮ್ ||29||

ಪ್ರಾಣಾಯಾಮ, ಪ್ರತ್ಯಾಹಾರ, ಜಪ, ಸಮಾಧಿ ಇವುಗಳನ್ನು ಮಾಡು.
ಭಗವಂತನಲ್ಲಿ ಮನಸ್ಸನ್ನು ನಿಲ್ಲಿಸು.
ಮಹಾತ್ಮರು ಆದರಿಸಿದ ಪೂರ್ವಚರಿತೆ ಇದು.

ಸುಖತಃ ಕ್ರಿಯತೇ ರಾಮಾಭೋಗಃ
ಪಶ್ಚಾದ್ಧಂತ ಶರೀರೇ ರೋಗಃ|
ಯದ್ಯಪಿ ಲೋಕೇ ಮರಣಂ ಶರಣಂ
ತದಪಿ ನ ಮುಂಚತಿ ಪಾಪಾಚರಣಮ್ ||30||

ಜನರು ಸುಖಕ್ಕಾಗಿ ವೇಶ್ಯಾ ಸಹವಾಸವನ್ನೂ ಮಾಡುತ್ತಾರೆ.
ಅಯ್ಯೋ! ಆಮೇಲೆ ಶರೀರ ರೋಗದ ಗೂಡಾಗುತ್ತದೆ. ಕೊನೆಯಲ್ಲಿ ಎಲ್ಲರಿಗೂ ಮರಣವೇ ಗತಿ.
ಆದರೂ ಪಾಪಾಚರಣೆಯನ್ನು ಬಿಡುವುದಿಲ್ಲ.

ಗುರುಚರಣಾಂಬುಜನಿರ್ಭರಭಕ್ತಃ
ಸಂಸಾರಾದಚಿರಾದ್ಭವ ಮುಕ್ತಃ|
ಸೇಂದ್ರಿಯಮಾನಸನಿಯಮಾದೇವಂ
ದ್ರಕ್ಷ್ಯಸಿ ನಿಜಹೃದಯಸ್ಥಂ ದೇವಮ್ ||31||

ಶ್ರೀಗುರುಚರಣಕಮಲದಲ್ಲಿ ದೃಢವಾದ ಭಕ್ತಿಯನ್ನಿಡು. ಆದಷ್ಟು ಬೇಗನೆ ಸಂಸಾರ ಬಂಧನದಿಂದ ಬಿಡುಗಡೆ ಹೊಂದು.
ಇಂದ್ರಿಯಗಳನ್ನು ಮನಸ್ಸನ್ನು ಈ ಪ್ರಕಾರವಾಗಿ ನಿಗ್ರಹಿಸಿರು.
ಶೀಘ್ರದಲ್ಲಿಯೇ ನಿನ್ನ ಹೃದಯದಲ್ಲಿಯೇ ಇರುವ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುತ್ತೀಯೆ.

ಭಜಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ ||

||ಇತಿ ಶ್ರೀಮಜ್ಜಗದ್ಗುರುಶಂಕರಾಚಾರ್ಯವಿರಚಿತಂ ಭಜಗೋವಿಂದಸ್ತೋತ್ರಂ ಸಂಪೂರ್ಣಮ್||

Leave a Reply

Your email address will not be published. Required fields are marked *

Translate »