ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ರವಿ ಪುಷ್ಯ ಯೋಗ ಅಮೃತಸಿದ್ಧಿ ಯೋಗ

‌ ‌ ‌ ‌ ರವಿ ಪುಷ್ಯ ಯೋಗ ಅಮೃತಸಿದ್ಧಿ ಯೋಗ

ರವಿ ಪುಷ್ಯ ಯೋಗವನ್ನು ಅತ್ಯಂತ ಮಂಗಳಕರ ಯೋಗವೆಂದು ಪರಿಗಣಿಸಲಾಗುತ್ತದೆ. ಈ ಯೋಗದಲ್ಲಿ ಶುಭ ಮಂಗಳಕರ ವಸ್ತುಗಳ ಖರೀದಿ ಮಾಡುವುದರಿಂದ, ನೂತನ ಚಟುವಟಿಕೆಗಳನ್ನು ಆರಂಭಿಸುವುದರಿಂದ ಎಲ್ಲವೂ ಶುಭವಾಗುತ್ತದೆ ಎನ್ನುವ ನಂಬಿಕೆಯಿದೆ.

ರವಿ ಪುಷ್ಯ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಯೋಗದಲ್ಲಿ ಮಾಡಿದ ಕೆಲಸವು ಪ್ರಗತಿಯನ್ನು ನೀಡುತ್ತದೆ. ರವಿ ಪುಷ್ಯ ಯೋಗದಲ್ಲಿ ವಿವಾಹವಲ್ಲದೆ ಇತರ ಶುಭ ಕಾರ್ಯಗಳನ್ನು ಮಾಡಬಹುದು. ಈ ಯೋಗದಲ್ಲಿ, ನೀವು ಯಾವುದೇ ಹೊಸ ಕೆಲಸವನ್ನು ಮಾಡಲು ಬಯಸಿದರೆ, ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಅದು ನಿಮಗೆ ಮಂಗಳಕರ ಮತ್ತು ಪ್ರಗತಿಪರವಾಗಿರುತ್ತದೆ. ರವಿ ಪುಷ್ಯ ಯೋಗದಲ್ಲಿ ಚಿನ್ನ, ವಾಹನ, ಮನೆ ಇತ್ಯಾದಿಗಳನ್ನು ಖರೀದಿಸುವುದು ಶುಭ. ಇದು ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ಯೋಗವಾಗಿದೆ.


ರವಿ ಪುಷ್ಯ ಯೋಗ ಮುಹೂರ್ತ :

ಪುಷ್ಯ ನಕ್ಷತ್ರ ಪ್ರಾರಂಭ : ಈ ಸಮಯದಲ್ಲಿ ಸರ್ವಾರ್ಥ ಸಿದ್ಧಿ ಯೋಗವೂ ರೂಪುಗೊಳ್ಳುತ್ತದೆ. ಈ ದಿನ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಆಯುಷ್ಮಾನ್ ಯೋಗವಿದ್ದು, ಬಳಿಕ ಸೌಭಾಗ್ಯ ಯೋಗ ರೂಪುಗೊಳ್ಳುತ್ತಿದೆ. ರವಿ ಪುಷ್ಯ ಯೋಗದ ಜೊತೆಗೆ ಎರಡು ಶುಭ ಯೋಗಗಳು ನಿಮ್ಮ ಯಶಸ್ಸನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗಿದೆ. ಕಾರ್ಯಗಳ ಸಾಧನೆಗೆ ಸರ್ವಾರ್ಥ ಸಿದ್ಧಿ ಯೋಗ ಮುಖ್ಯವಾದ ಯೋಗವಾಗಿದೆ. ಮಾಘ ಪೂರ್ಣಿಮಾವನ್ನೂ ಇದೇ ದಿನ ಆಚರಿಸಲಾಗುತ್ತದೆ.

  ಮಣ್ಣಿನ ಉಂಡೆಗಳ ಬೆಲೆ

ರವಿ ಪುಷ್ಯ ಯೋಗ ಯಾವಾಗ ರೂಪುಗೊಳ್ಳುತ್ತದೆ ?

ಪಂಚಾಂಗದ ಪ್ರಕಾರ ರವಿ ಪುಷ್ಯ ನಕ್ಷತ್ರವು ಭಾನುವಾರದಂದು ಸಂಭವಿಸಿದಾಗ ರವಿ ಪುಷ್ಯ ಯೋಗವು ಆ ದಿನದಂದು ರೂಪುಗೊಳ್ಳುತ್ತದೆ. ರವಿ ಪುಷ್ಯ ನಕ್ಷತ್ರವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಯೋಗವನ್ನು ರವಿ ಪುಷ್ಯ ನಕ್ಷತ್ರ ಯೋಗ ಎಂದೂ ಕರೆಯುತ್ತಾರೆ.

ರವಿ ಪುಷ್ಯ ಯೋಗದಲ್ಲಿ ಖರೀದಿ:

ರವಿ ಪುಷ್ಯ ಯೋಗದಲ್ಲಿ ಚಿನ್ನ, ಬೆಳ್ಳಿ ಆಭರಣಗಳು, ವಾಹನ, ಆಸ್ತಿ ಇತ್ಯಾದಿಗಳನ್ನು ಖರೀದಿಸುವುದು ಶುಭ. ಈ ಯೋಗದಲ್ಲಿ ನಾವು ಶಾಪಿಂಗ್‌ ಮಾಡುವುದರಿಂದ ಅದು ನಮ್ಮ ಪ್ರಗತಿಗೆ ಕಾರಣವಾಗುತ್ತದೆ. ಇದು ಸಂಪತ್ತನ್ನು ಹೆಚ್ಚಿಸುತ್ತದೆ ಎಂದು ಭಾವಿಸಲಾಗಿದೆ. ರವಿ ಪುಷ್ಯ ಯೋಗದಲ್ಲಿ ವ್ಯಾಪಾರ ಆರಂಭಿಸುವುದು ಕೂಡ ಶುಭವಾಗಿರುತ್ತದೆ.

  ಪೊಳಲಿ - ಶ್ರೀ ಗಂಧಾಡಿ ಸೋಮನಾಥೇಶ್ವರ

ರವಿ ಪುಷ್ಯ ಯೋಗದ ಪರಿಹಾರಗಳು:

ಭಾನುವಾರ ಸೂರ್ಯ ದೇವರ ಆರಾಧನೆಯ ದಿನವಾಗಿದೆ ಮತ್ತು ಈ ದಿನ ರವಿ ಪುಷ್ಯ ಯೋಗವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ರವಿ ಪುಷ್ಯ ಯೋಗದ ಸಮಯದಲ್ಲಿ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ. ನೀರಿನಲ್ಲಿ ಕೆಂಪು ಚಂದನ ಮತ್ತು ಬೆಲ್ಲವನ್ನು ಹಾಕಿ ಅರ್ಘ್ಯವನ್ನು ಅರ್ಪಿಸಿ. ಈ ದಿನ ಸೂರ್ಯನ ಆರಾಧನೆ ಮಾಡಿದರೆ ನಿಮ್ಮ ಸಂಪತ್ತು, ಧಾನ್ಯಗಳು, ಸಂತಾನ ಮತ್ತು ಪರಾಕ್ರಮದಲ್ಲಿ ಹೆಚ್ಚಳವಾಗುತ್ತದೆ. ಜಾತಕದಲ್ಲಿನ ಸೂರ್ಯ ದೋಷವೂ ದೂರವಾಗುತ್ತದೆ.

ಭದ್ರ ಕಾಲ:

ಭದ್ರಕಾಲದಲ್ಲಿ ಖರೀದಿ, ಶುಭ ಕಾರ್ಯ ಮಾಡುವುದನ್ನು ನಿಲ್ಲಿಸಿ, ಭದ್ರ ಮುಗಿದ ನಂತರ ಶುಭ ಕಾರ್ಯಗಳನ್ನು ಆರಂಭಿಸಬಹುದು.

  ಇದು ನಿಮಗೆ ಯಾವಾಗಲೂ ತಿಳಿದಿರಲಿ …

ರವಿ ಪುಷ್ಯ ಯೋಗದಲ್ಲಿ ಹೂಡಿಕೆ:
ಈ ನಕ್ಷತ್ರದಲ್ಲಿ ಮಂಗಳಕರ ಕೆಲಸ ಮತ್ತು ಹೂಡಿಕೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವುದರಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸಲಾಗುತ್ತದೆ. ರವಿ ಪುಷ್ಯ ನಕ್ಷತ್ರದಲ್ಲಿ ಸೂರ್ಯ ದೇವರನ್ನು ಪೂಜಿಸುವುದು ಮತ್ತು ಅವರ ಮಂತ್ರಗಳನ್ನು ಪಠಿಸುವುದರಿಂದ ಉತ್ತಮ ಆರೋಗ್ಯದ ವರವನ್ನು ಪಡೆದುಕೊಳ್ಳಬಹುದು ಮತ್ತು ಸಮಾಜದಲ್ಲಿ ನಮ್ಮ ಗೌರವ, ಖ್ಯಾತಿಯು ಹೆಚ್ಚಾಗುತ್ತದೆ. ಈ ದಿನದಂದು ಶಿಕ್ಷಣವನ್ನು ಪ್ರಾರಂಭಿಸುವುದರಿಂದ, ಆ ಮಗು ಭವಿಷ್ಯದಲ್ಲಿ ಪ್ರಗತಿಯನ್ನು ಸಾಧಿಸುತ್ತದೆ.

Leave a Reply

Your email address will not be published. Required fields are marked *

Translate »