ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಹನುಮಾನ್‌ ಚಾಲೀಸಾ ಪಠಿಸುವ ಸರಿಯಾದ ವಿಧಾನ

ಹನುಮಾನ್‌ ಚಾಲೀಸಾ ಪಠಿಸುವ ಸರಿಯಾದ ವಿಧಾನ…ಮಹತ್ವ..!

ಭಗವಾನ್‌ ಹನುಮಂತನು ಶಿಸ್ತನ್ನು ಪ್ರೀತಿಸುತ್ತಾನೆ. ಅದಕ್ಕಾಗಿಯೇ ಹನುಮಂತನ ಭಕ್ತರು ಸಹ ಶಿಸ್ತನ್ನು ಅನುಸರಿಸುತ್ತಾರೆ. ಹನುಮಂತನು ತನ್ನ ಭಕ್ತರ ಎಲ್ಲಾ ತೊಂದರೆಗಳನ್ನು ಬಹುಬೇಗ ಈಡೇರಿಸುತ್ತಾನೆ. ಅಂದರೆ, ಹನುಮಂತನು ತನ್ನ ಭಕ್ತರನ್ನು ಸಂಕಟಗಳಿಂದ ದೂರವಿಡುತ್ತಾನೆ. ಹನುಮಂತನ ತನ್ನೆಲ್ಲಾ ಭಕ್ತರ ಸಂಕಟಗಳನ್ನು ದೂರಾಗಿಸುವುದರಿಂದ ಆತನನ್ನು ಸಂಕಟ ಮೋಚನ ಎಂದು ಕರೆಯುತ್ತಾರೆ.

ಹಿಂದೂ ಧರ್ಮದಲ್ಲಿ ಪ್ರತೀ ದಿನವು ತನ್ನದ ಆದ ವಿಶಿಷ್ಟತೆಯನ್ನು ಒಳಗೊಂಡಿದೆ. ಪ್ರತೀ ದಿನವೂ ಒಂದೊಂದು ದೇವರನ್ನು ಪೂಜಿಸಲಾಗುತ್ತದೆ. ಅದೇ ರೀತಿ ಮಂಗಳವಾರ ಮತ್ತು ಶನಿವಾರದ ದಿನದಂದು ಭಗವಾನ್‌ ಹನುಮಂತನನ್ನು ಪೂಜಿಸಲಾಗುತ್ತದೆ. ಈ ದಿನಗಳಲ್ಲಿ ಭಗವಾನ್‌ ಹನುಮಂತನನ್ನು ಪೂಜಿಸುವುದರಿಂದ ಶನಿ ಮತ್ತು ಮಂಗಳ ಗ್ರಹಗಳಿಗೆ ಸಂಬಂಧಿಸಿದ ಸಮಸ್ಯೆಗಳು ದೂರಾಗುತ್ತದೆ ಮತ್ತು ಅನೇಕ ರೀತಿಯ ಅಡೆತಡೆಗಳು ನಾಶವಾಗುತ್ತದೆ ಎಂದು ಹೇಳಲಾಗಿದೆ.

ಸಂತ ತುಳಸಿದಾಸರಿಂದ ರಚಿಸಲ್ಪಟ್ಟ ಹನುಮಾನ್‌ ಚಾಲೀಸಾವನ್ನು ಪ್ರತಿನಿತ್ಯ ಲಕ್ಷಾಂತರ ಮಂದಿ ಪಾರಾಯಣ ಮಾಡುತ್ತಾರೆ. ಹನುಮಾನ್‌ ಚಾಲೀಸಾ ಕೇವಲ ಶ್ಲೋಕವಲ್ಲ. ಅದರಲ್ಲಿಇಡೀ ಬ್ರಹ್ಮಾಂಡದ ರಹಸ್ಯವೇ ಅಡಗಿದೆ. ಉದಾಹರಣೆಗೆ ಸೂರ್ಯ ಮತ್ತು ಭೂಮಿಯ ನಡುವಿನ ಅಂತರವೆಷ್ಟು ಎಂಬುದನ್ನು ಸಂತ ತುಳಸಿದಾಸರು 15ನೇ ಶತಮಾನದಲ್ಲೇ ಹೇಳಿದ್ದರು. ಹನುಮಾನ್‌ ಚಾಲೀಸಾದ ಪಾರಾಯಣದಿಂದ ನಕಾರಾತ್ಮಕ ಶಕ್ತಿಗಳು ಕಳೆದು ಹೋಗಿ, ಸಕಾರಾತ್ಮಕ ಶಕ್ತಿಯ ಪರಿಣಾಮ ಸೃಷ್ಟಿಯಾಗುತ್ತದೆ. ಅದರಲ್ಲಿನ 40 ಶ್ಲೋಕಗಳು 40 ಬಗೆಯ ದೋಷಗಳನ್ನು ನಿವಾರಣೆ ಮಾಡುತ್ತವೆ ಎಂಬ ಉಲ್ಲೇಖವಿದೆ.

  ಬಾಳೆ ಎಲೆಯಲ್ಲಿ ಏಕೇ ಊಟ ಮಾಡಬೇಕು?

ಹನುಮಾನ್ ಚಾಲೀಸಾ ಪ್ರಾಮುಖ್ಯತೆ:

ಹನುಮಾನ್‌ ಚಾಲೀಸಾವನ್ನು ಪ್ರತಿನಿತ್ಯ ಪಠಿಸಬೇಕು. ಅದರಲ್ಲೂ, ಶನಿವಾರ ಹನುಮಾನ್ ಚಾಲೀಸಾ ಪಠಿಸುವುದರಿಂದ ಶನಿ ದೇವನು ಅವರ ಎಲ್ಲಾ ಕಷ್ಟಗಳನ್ನು ತೆಗೆದುಹಾಕುತ್ತಾನೆ. ರಾಮಾಯಣದ ಸಂದರ್ಭದಲ್ಲಿ ಭಗವಾನ್‌ ಹನುಮಂತನು ರಾವಣನಿಂದ ಶನಿಯನ್ನು ರಕ್ಷಿಸುತ್ತಾನೆ. ಆ ಕಾರಣದಿಂದ ಹನುಮಂತನ ಭಕ್ತರಿಗೆ ಯಾವುದೇ ತೊಂದರೆಯನ್ನು ನೀಡುವುದಿಲ್ಲವೆಂದು ಭರವಸೆಯನ್ನು ನೀಡಿರುತ್ತಾನೆ. ಯಾವ ವ್ಯಕ್ತಿ ಶನಿ ದೋಷವನ್ನು, ಸಾಡೇಸಾತಿ ಶನಿ ದೋಷವನ್ನು ಮತ್ತು ಶನಿ ಮಹಾದಶಾ ಸೇರಿದಂತೆ ಶನಿಗೆ ಸರಿದಂತೆ ಇನ್ನಿತರ ಸಮಸ್ಯೆಗಳನ್ನು ತಮ್ಮ ಜೀವನದಲ್ಲಿ ಎದುರಿಸುತ್ತಿದ್ದರೆ ಅವರು ಪ್ರತಿನಿತ್ಯ ಸಾಧ್ಯವಾಗದಿದ್ದರೆ ಮಂಗಳವಾರ ಮತ್ತು ಶನಿವಾರದಂದು ತಪ್ಪದೇ ಹನುಮಾನ್‌ ಚಾಲೀಸಾವನ್ನು ಪಠಿಸಬೇಕು.

  ಭಾಗವತ ಪುರಾಣ ಏನು ಹೇಳುತ್ತದೆ?

ಹನುಮಾನ್ ಚಾಲೀಸಾ ಪಠಿಸುವ ಸರಿಯಾದ ವಿಧಾನ:

ಹನುಮಾನ್ ಚಾಲೀಸಾಗೆ ಸಂಬಂಧಿಸಿದಂತೆ, ಅದರ ಪಠಣವನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಮಾತ್ರ ಪೂರ್ಣ ಲಾಭವನ್ನು ಪಡೆಯಲಾಗುತ್ತದೆ ಎಂಬ ನಂಬಿಕೆ ಇದೆ. ಹನುಮಾನ್ ಚಾಲೀಸಾ ಪಠಿಸಲು ಸರಿಯಾದ ಮಾರ್ಗವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ‌ ‌ ‌ ಹನುಮಾನ್ ಚಾಲೀಸಾವನ್ನು ಪಠಿಸುವ, ಮೊದಲು ಸ್ನಾನ ಮಾಡಿ, ಸ್ವಚ್ಚವಾದ ಬಟ್ಟೆಗಳನ್ನು ಧರಿಸಿದ ನಂತರ, ಹನುಮನ ವಿಗ್ರಹ ಅಥವಾ ಚಿತ್ರದ ಮುಂದೆ ಕುಳಿತು ಹನುಮಾನ್‌ ಚಾಲೀಸಾವನ್ನು ಪಠಣ ಮಾಡಬೇಕು. ಮಲ್ಲಿಗೆ ಎಣ್ಣೆ ಮತ್ತು ಸಿಂಧೂರವನ್ನು ಹನುಮನಿಗೆ ಅರ್ಪಿಸಿ.

  ಪಂಚಮುಖಿ ಆಂಜನೇಯ ಸ್ವಾಮಿ ಹಿನ್ನಲೆ ಕಥೆ

ಹನುಮಾನ್‌ ಚಾಲೀಸಾ ಪಾರಾಯಣವನ್ನು ಪ್ರಾರಂಭಿಸುವ ಮೊದಲು ಪ್ರಭ ಶ್ರೀರಾಮ ದೇವರನ್ನು ಸ್ಮರಿಸಬೇಕು. ಹನುಮಂತ ದೇವರ ಚಿತ್ರ ಅಥವಾ ಮೂರ್ತಿಯ ಮುಂದೆ ಕಮಂಡಲದಲ್ಲಿ ನೀರನ್ನು ಇರಿಸಿ. ಬೆಳಗ್ಗೆ ಮತ್ತು ಸಂಜೆ ಎರಡೂ ಹೊತ್ತು ಹನುಮಾನ್ ಚಾಲೀಸಾ ಪಠಿಸುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹನುಮಾನ್ ಚಾಲೀಸಾ ಪಠಣದ ನಂತರ, ಆ ನೀರನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಬೇಕು. ಅಲ್ಲದೇ, ಈ ನೀರನ್ನು ಮನೆಯ ಮೂಲೆ ಮೂಲೆಗಳಲ್ಲಿ ಸಿಂಪಡಿಸಬೇಕು. ಇದನ್ನು ಮಾಡುವುದರಿಂದ ಮನೆಯ ಋಣಾತ್ಮಕ ಶಕ್ತಿಯು ನಾಶವಾಗುತ್ತದೆ.

Leave a Reply

Your email address will not be published. Required fields are marked *

Translate »