ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ವಿಭೂತಿ ಧರಿಸಿದವರ ಮಹತ್ವ

ವಿಭೂತಿ ಧರಿಸಿದವರ ಮಹತ್ವ..!

ವಿಭೂತಿ ಧರಿಸುವುದರಿಂದ ಭವ ರೋಗ ನಿವಾರಣೆಯಾಗುವುದಲ್ಲದೆ ಕಾಯ ಶಿವಮಯವಾಗುವುದು . ವಿಭೂತಿ ಧರಿಸಿದವರ ಮೊಗವು
ಸಾವಿರಾರು ಜನರ ಮಧ್ಯೆ ನಿಂತರು ಎದ್ದು ಕಾಣುತ್ತದೆ .
ವಿಭೂತಿ ಹಚ್ಚಿ ಕೊಂಡವರ ಮುಖದಲ್ಲಿ ತೇಜಸ್ಸು ಮತ್ತು ರಾಜ ಕಳೆ ತುಂಬಿರುತ್ತದೆ .
ಲಿಂಗ ವಿಭೂತಿ ರುದ್ರಾಕ್ಷಿ ನಮ್ಮ
ನಮ್ಮ ಬದುಕಿನ ಸಂಪತ್ತು . ಇದಕ್ಕೆ ಸರಿಸಮಾನವಾದ ಯಾವ ಐಶ್ವರ್ಯಾ ಇಲ್ಲ . ಹುಟ್ಟಿನಿಂದ ಬಂದು ಸಾವಿನ ಮನೆ ಅಂದ್ರೆ,ಮಣ್ಣಲ್ಲಿ ಮಣ್ಣಾಗುವ ತನಕ ನಮ್ಮ
ಜೊತೆಗೆ ಬರುವ. ಸಿರಿಸಂಪತ್ತು .
ನಮ್ಮ ಹಿಂದೂ ಧರ್ಮದ ಸಂಪ್ರದಾಯಗಳು ಮನೆಗೆ ಅಡಿಪಾಯವಾಗಿರಬೇಕು . ಏಕೆಂದರೆ ?
ನಮ್ಮ ಬದುಕು ಕಟ್ಟಿಕೊಡುವುದು .ನಮ್ಮ ಆಚಾರ ವಿಚಾರ ಸಂಸ್ಕಾರ ಸಂಸ್ಕೃತಿಯಿಂದ .ನಮ್ಮ ಪೂರ್ವಜರು ಎಲ್ಲಾ ಸಂಪ್ರದಾಯಗಳು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು.
“ನಾವು ಚಿಕ್ಕವರಿದ್ದಾಗ ಬೆಳಿಗ್ಗೆ ಎದ್ದ ತಕ್ಷಣ ಹೊರಗೆ ಬಂದು ನೋಡಿದರೆ ಪ್ರತಿಯೊಬ್ಬರ ಹಣೆಯ ಮೇಲೆ ವಿಭೂತಿ ಎದ್ದು ಕಾಣುತ್ತಿತ್ತು .
ಮನೆಯ ಆಚಾರ ಹೇಗಿರುತ್ತಿತ್ತು.ಅಂದ್ರೆ ಬೆಳೆಗೆ ಬೇಗ ಏಳಬೇಕು ಸ್ನಾನ ಮಾಡಿ ವಿಭೂತಿ ಹಚ್ಚಿ ಕೊಳ್ಳಬೇಕು.
ಪ್ರತಿಯೊಂದು ಮನೆ ಮನೆಗಳಲ್ಲಿ ಎಲ್ಲರ ಹಣೆ ಮೇಲೆ ವಿಭೂತಿ ನೋಡಿದಾಗ ಎಂತಹವರಿಗೂ ಭಕ್ತಿ ಮೂಡುತ್ತಿತ್ತು . ಒಬ್ಬರ ಮುಖ ಮತ್ತೊಬ್ಬರು ನೋಡುವುದರಿಂದ ಮುಂದೆ ಬರುವ ಕಂಟಕಗಳು ದೂರ ಆಗುತ್ತಿದ್ದವು . ಯಾವ ದುಷ್ಟ ಶಕ್ತಿಯೂ ಸನಿಯ ಸುಳಿಯುತ್ತಿರಲಿಲ್ಲ . ಮನೆಯಿಂದ ಹೊರಗೆ ಯಾವ ಕೆಲಸಕ್ಕೆ ಹೋಗಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಕೊಂಡು ಹಿಂದುರುಗಿ ಬರುತ್ತಿದ್ದರು.
ಲಿಂಗ ಪೂಜೆ ಮಾಡಿಕೊಳ್ಳುವಾಗ ಮೈತುಂಬಾ ವಿಭೂತಿ ಹಚ್ಚಿ ಕೊಳ್ಳುವುದರಿಂದ ಯಾವ ರೋಗಗಳು ಬರುತ್ತಿರಲಿಲ್ಲ .ಕಾಯ ಸದೃಢವಾಗಿ ಇರುತ್ತಿತ್ತು . ರೋಗ ನಿರೋಧಕ ಶಕ್ತಿ ವರ್ಧಕ ಚಿಕಿತ್ಸೆ ಅದಾಗಿತ್ತು.
ಯಾವ ವೈರಸ್ ಮೈಯಿಗೆ ಸೊಂಕುತ್ತಿರಲಿಲ್ಲ . ಅಷ್ಟೇಕೆ ಇಡೀ ದಿನ ಚೈತನ್ಯ ತುಂಬಿ ಮನಸ್ಸು ಉಲ್ಲಾಸದಿಂದ ಕೂಡಿ ಅನ್ಯ ವಿಚಾರಗಳಿಗೆ ಆಸ್ಪದ ಇರುತ್ತಿರಲಿಲ್ಲ.
ಹೀಗಾಗಿ ನಮ್ಮ ಸಂಪ್ರದಾಯದಲ್ಲಿ ವಿಶಿಷ್ಟ ಶಕ್ತಿ ಇದೆ.
ಉದಾಹರಣೆಗೆ ಒಂದು ಮಾತು
” ಒಬ್ಬ ಹುಡುಗ ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗಲಿಲ್ಲ.
ಓದಿ ವಿದ್ಯಾವಂತನಾಗಿ ಬಂದರು ನೌಕರಿ ಇಲ್ಲ.ಕಷ್ಟಪಟ್ಟು ಏನಾದರೂ ಮಾಡಿದರು ಎಲ್ಲವೂ ಎದುರಾಗುತ್ತಿತ್ತು .
ಹೀಗಾಗಿ ಒಂದು ದಿನ ತನ್ನ ಗೆಳೆಯನ ಹತ್ತಿರ ತನ್ನ ದುಃಖ ತೊಡಗಿಕೊಂಡ . ಇಬ್ಬರೂ ಸೇರಿ ಯಾರಿಗಾದರೂ ಕೇಳಿ ನೋಡೋಣ ಎಂದು ಬರುತ್ತಿರುವಾಗ ಒಬ್ಬಳು ಅಜ್ಜಿ ಎದುರಿಗೆ ಬಂದಳು.
ಇವರ ಒಣಗಿದ ಮುಖ ನೋಡಿ “ಯಾಕ್ರಪ್ಪ ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೇಳಿದಳು “
ಅಜ್ಜಿ ನಮ್ಮ ಕಥೆ ಏನು ಕೇಳುತ್ತಿ.
ಓದಿ ಬಂದರು ನೌಕರಿ ಇಲ್ಲ
ವ್ಯವಸಾಯ ನಮಗೆ ತಿಳಿಯದು ವ್ಯಾಪಾರ ಮಾಡಿದರೆ ಎಲ್ಲವೂ ಎದುರು ಆಗುವುದು ಅದಕ್ಕೆ ಏನು ಮಾಡಬೇಕು ಎಂಬುದನ್ನು ತಿಳಿಯದಾಗಿದೆ “
ಅಜ್ಜಿ ಹೇಳಿದಳು ಮಕ್ಕಳೆ ಮುಂಜಾನೆ ಎದ್ದು ವಿಭೂತಿ ಹಚ್ಚಿ ಕೊಂಡವರ ಮುಖ ನೋಡ್ರಿ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳಿದಳು .
ಆಯ್ತು ಅಜ್ಜಿ ಇಷ್ಟೇನಾ ಪರಿಹಾರ ನೋಡೋಣ ಎಂದು ಇಬ್ಬರೂ ತಾವು ವಿಭೂತಿ ಹಚ್ಚಿ ಕೊಂಡು ವಿಭೂತಿ ಹಚ್ಚಿ ಕೊಂಡವರ ಮುಖ ನೋಡಿ ಹೋಗುತ್ತಿದ್ದರು .
ಎರಡು ದಿನಗಳಲ್ಲಿ ನೌಕರಿಗೆ ಕರೆ ಬಂತು .ಒಂದರ ಮೇಲೊಂದು ಜೀವನದ ಮೌಲ್ಯ ಹೆಚ್ಚುತ್ತಾ ಹೋಯಿತು .
ಅವರು ದಿನ ನಿತ್ಯವೂ ತಾವು ಮತ್ತು ಮನೆಯವರೆಲ್ಲರೂ ವಿಭೂತಿಯನ್ನು ಭಕ್ತಿಯಿಂದ ಹಚ್ಚಿಕೊಳ್ಳುವುದರ ಜೊತೆಗೆ ಪ್ರತಿಯೊಬ್ಬರಿಗೂ ವಿಭೂತಿ ಮಹಿಮೆ ತಿಳಿಸುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದರು .
ಅದಕ್ಕಾಗಿ ನಮ್ಮ ಸನಾತನ ಧರ್ಮದ ಪ್ರತಿಯೊಂದು ಆಚಾರ ವಿಚಾರಗಳು ನಡೆ ನುಡಿ ಪಾಲಿಸಿದರೆ ಜೀವನ ಸಾರ್ಥಕವಾಗುತ್ತದೆ . ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದ್ ಎಲ್ಲದರಲ್ಲೂ ಅದ್ಬುತವಾದ ಶಕ್ತಿ ಅಡಗಿದೆ.

  ಪುತ್ರದಾ ಏಕಾದಶಿ , ಪೂಜೆ ವಿಧಾನ, ಮಹತ್ವ

ಶ್ರೀಮತಿ ಅಮರಾವತಿ ಹಿರೇಮಠ.🙏

Leave a Reply

Your email address will not be published. Required fields are marked *

Translate »