ತುಳಸಿ ಪೂಜಾ ವಿಧಾನ – ತುಳಸಿ ಹಬ್ಬ

☘️ತುಳಸಿ ಪೂಜಾ ವಿಧಾನ

ಉತ್ಥಾನ ದ್ವಾದಶಿ ಅಥವಾ ತುಳಸಿ ಹಬ್ಬ

ಉತ್ಥಾನ ದ್ವಾದಶಿ ಅಥವಾ ತುಳಸಿ ಹಬ್ಬವನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸುವರು. ಈ ದಿನ ತುಳಸಿ ಕಟ್ಟೆ /ವೃಂದಾವನವನ್ನು ಅಲಂಕಾರ ಮಾಡುತ್ತಾರೆ. ತುಳಸಿಯ ಗಿಡದ ಜೊತೆ ನಲ್ಲಿಕಾಯಿ ಗಿಡವನ್ನು ಇಟ್ಟು ಪೂಜೆ ಮಾಡುತ್ತಾರೆ. ತುಳಸಿಯು ಶ್ರೀ ಕೃಷ್ಣನನ್ನು ಈ ದಿನ ವಿವಾಹ ಆದಳು ಎಂಬ ನಂಬಿಕೆ ಇದೆ. ಯೋಗ ನಿದ್ರೆಯಲ್ಲಿರುವ ಶ್ರೀಮಹಾವಿಷ್ಣುವು ಈ ದಿನ ಎಚ್ಚರಗೊಂಡು ತುಳಸಿಯ ಸಾನಿಧ್ಯದಲ್ಲಿ ಪೂಜೆಯನ್ನು ಪಡೆಯುತ್ತಾನೆ. ಆದ್ದರಿಂದ ತುಳಸಿಯ ಜೊತೆ ಕೃಷ್ಣನ ಮೂರ್ತಿ ಅಥವ ಸಾಲಿಗ್ರಾಮಗಳನ್ನು ಇಟ್ಟು ಪೂಜೆ ಮಾಡುತ್ತಾರೆ, ನೆಲ್ಲಿಕಾಯಿಯಲ್ಲಿ ತುಪ್ಪದ ಆರತಿ ಮಾಡುತ್ತಾರೆ. ತುಳಸಿ ಸಾನಿಧ್ಯದಲ್ಲಿ ಹಾಲಿನಿಂದ
ಅರ್ಘ್ಯವನ್ನು ಕೊಟ್ಟು ಉತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ ನೆಂದು ಪರಮಾತ್ಮನನ್ನು ಎಚ್ಚರಗೊಳಿಸುವ ಪ್ರಕ್ರಿಯೆಯು ಇಲ್ಲಿ ಇದೆ

ಸಂಕ್ಷಿಪ್ತ ತುಳಸಿ ಪೂಜಾ ವಿಧಾನ

ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು. ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ , ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ ಮಾಡಬೇಕು ಅಷ್ಟೆ.
ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದು.
||ಅಥ ತುಳಸಿ ಪೂಜಾ ||
1)ಆಚಮನ

2)ಪ್ರಾಣಾಯಾಮ

2)ಸಂಕಲ್ಪ
ವರ್ತಮಾನೇ ವ್ಯಾವಹಾರಿಕೇ
ಪ್ಲವನಾಮ
ಸಂವತ್ಸರೇ, ದಕ್ಷಿಣಾಯನೇ ,…
ಶರತ್ಋತೌ , ಕಾರ್ತಿಕ ಮಾಸೇ ,ಶುಕ್ಲ ಪಕ್ಷೇ , …
ದ್ವಾದಶಿಯಾಂ ತಿಥಿ ,ಭೃಗುವಾಸರ ಯುಕ್ತಾಯಾಂ , ಪೂರ್ವಕ ಎವಂ ಗುಣವಿಶೇಷಣ ವಿಶಿಷ್ಟಾಯಾಂ ಶುಭ ಪುಣ್ಯ ತಿಥೌ , ಶ್ರೀವಿಷ್ಣು ಪ್ರೇರಣೆಯ ಶ್ರೀವಿಷ್ಣು ಪ್ರೀತ್ಯರ್ಥಂ
ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ
ವಿಜಯ ವೀರ್ಯ ಅಭಯ ಆಯುರಾರೋಗ್ಯ
ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ
ದುರಿತೋಪಶಮನಾರ್ಥಂ ಸಮಸ್ತ
ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ
ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ
ಪುರುಷಾರ್ಥ ಸಿಧ್ಧ್ಯರ್ಥಂ ಯಾವತ್ ಜೀವನ ಸೌಮಾಂಗಲ್ಯ ಪ್ರಾಪ್ಯರ್ಥಂ ಶ್ರೀ ತುಳಸಿ ಸಹಿತ ದಾಮೋದರ ಪ್ರೀತ್ಯರ್ಥಂ ಯಾಥಾ ಶಕ್ತ್ಯಾ
ಧ್ಯಾನಾವಾಹನಾದಿ ಷೋಡಶೋಪಚಾರ
ಪೂಜಾಂ ಅಹಂ ಕರಿಷ್ಯೇ.

3)ಘಂಟಾನಾದ
“ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಾಕ್ಷಸಾಂ ಕುರು ಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ|

4)ಕಲಶ ಪೂಜೆ
ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತೀ।
ನರ್ಮದೇ ಸಿಂಧೂ ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು।।

5)ಶಂಖ ಪೂಜೆ
ತ್ವಂ ಪುರಾ ಸಾಗರೋತ್ಪನ್ನೋ ವಿಷ್ಣುನಾ ವಿಧ್ರತಃ ಕರೇ |
ನಮಿತ ಸರ್ವ ದೇವೈಶ್ಚ ಪಾಂಚಜನ್ಯ ನಮೋಸ್ತುತೆ ||

6)ಧ್ಯಾನ
ಪ್ರಸೀದ ತುಳಸೀದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದಮಥನೋದ್ಭೂತೇ ತುಳಸೀ ತ್ವಾಂ ನಮಾಮ್ಯಹಮ್ ||

(ನೀವು ಪೂಜೆ ಮಾಡುತ್ತಿರುವ
ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ
ಮಾಡುವುದು. ಸಾಮಾನ್ಯವಾಗಿ
ಷೋಡಶೋಪಚಾರದಿಂದ ಪೂಜೆ
ಅಂತ ನೀವು ಕೇಳಿರಬಹುದು. ಷೋಡಶ
ಅಂದರೆ 16.
ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ
ಎಂದರ್ಥ. ಇವುಗಳ ವಿವರ ಕೆಳಗಿದೆ:
ಇಲ್ಲಿ ಅಕ್ಷತೆ ಹಾಕಬೇಕು (ಸ್ತ್ರೀ ಸೂಕ್ತ ತಿಳಿದವರು ಹೇಳುವುದು)

  ಪ್ರಜಾಕೀಯ ಅಭ್ಯರ್ಥಿಯಾಗಿ ಬರುವವರ ಗಮನಕ್ಕೆ

7)ಷೋಡಶೋಪಚಾರ

1.ಆವಾಹನೆ – (ಅಂದರೆ ಆಹ್ವಾನ. ದೇವರನ್ನು ನಿಮ್ಮ
ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ
ಆಹ್ವಾನ ಮಾಡುವುದು….ಶ್ರೀ ತುಳಸಿಯೇ ನಮಃ ಆವಾಹಯಾಮಿ ಆವಾಹನಂ ಸಮರ್ಪಯಾಮಿ

2.ಆಸನ – ಅಂದರೆ ಕುಳಿತುಕೊಳ್ಳುವ ಜಾಗ . ದೇವರ
ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಅಕ್ಷತೆ
ಹಾಕುವುದು….ಶ್ರೀ ತುಳಸಿಯೇ ನಮಃ ಆಸನಂ ಸಮರ್ಪಯಾಮಿ

3.ಪಾದ್ಯ – ಕಾಲು ತೊಳೆದುಕೊಳ್ಳುವುದಕ್ಕೆ
ನೀರು ಕೊಡುವುದು…..ಶ್ರೀ ತುಳಸಿಯೇ ನಮಃ ಪಾದ್ಯಂ ಸಮರ್ಪಯಾಮಿ (ಹರಿವಾಣದಲ್ಲಿ ನೀರು ಬಿಡುವುದು)

4.ಅರ್ಘ್ಯ – ಕೈ ತೊಳೆದುಕೊಳ್ಳುವುದಕ್ಕೆ
ನೀರು ಕೊಡುವುದು….ಶ್ರೀ ತುಳಸಿಯೇ ನಮಃ ಅರ್ಘ್ಯಂ ಸಮರ್ಪಯಾಮಿ(ಹರಿವಾಣದಲ್ಲಿ ನೀರು ಬಿಡುವುದು)

5.ಆಚಮನ – ಕುಡಿಯುವುದಕ್ಕೆ
ನೀರು ಕೊಡುವುದು…. .ಶ್ರೀ ತುಳಸಿಯೇ ನಮಃ ಆಚಮನಂ ಸಮರ್ಪಯಾಮಿ

6.ಸ್ನಾನ – ಶುದ್ಧೋದಕ (ನೀರು)
ಮತ್ತು ಪಂಚಾಮೃತದಿಂದ ಸ್ನಾನ (ಹೂವಿನಿಂದ ತುಳಸಿಯ ಮೇಲೆ ಶುದ್ದ ನೀರನ್ನು ಪ್ರೋಕ್ಷಣೆ ಮಾಡುವುದು)

… .ಶ್ರೀ ತುಳಸಿಯೇ ನಮಃ ಸ್ನಾನಂ ಸಮರ್ಪಯಾಮಿ

7.ವಸ್ತ್ರ – ಧರಿಸಲು ಉಡುಪು ಕೊಡುವುದು .
ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ
( ಜನಿವಾರ), ಆಭರಣವನ್ನು (ಬಳೆ-
ಬಿಚ್ಚೋಲೆ )ಸಮರ್ಪಿಸುವುದು… .ಶ್ರೀ ತುಳಸಿಯೇ ನಮಃ ವಸ್ತ್ರಂ ಸಮರ್ಪಯಾಮಿ

8.ಹರಿದ್ರ, ಕುಂಕುಮ-
ಗಂಧ, ಅಕ್ಷತ – ಅರಿಶಿನ , ಕುಂಕುಮ, ಶ್ರೀಗಂಧ ,
ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು…..ಶ್ರೀ ತುಳಸಿಯೇ ನಮಃ.ನಾನಾ ಸೌಭಾಗ್ಯ ದೃವ್ಯಾಣಿಂ ಸಮರ್ಪಯಾಮಿ

9.ಪುಷ್ಪ ಮಾಲ – ಹೂವು, ಪತ್ರೆಗಳಿಂದ ದೇವರಿಗೆ
ಅಲಂಕಾರ ಮಾಡುವುದು…..ಶ್ರೀ ತುಳಸಿಯೇ ನಮಃ ಪುಷ್ಪಂ ಸಮರ್ಪಯಾಮಿ

ಅಂಗಪೂಜಾ

ಪತ್ರಪೂಜಾ (

ಪುಷ್ಪಪೂಜಾ

  1. ಅರ್ಚನೆ/ಅಷ್ಟೋತ್ತರ – ನೂರೆಂಟು ನಾಮಗಳಿಂದ
    ದೇವರನ್ನು ಸ್ಮರಣೆ ಮಾಡುವುದು
    ಶ್ರೀ ತುಳಸಿಯೇ ನಮಃ ಅಷ್ಟೋತ್ತರ ಶತ ನಾಮ ಪೂಜಾಂ ಸಮರ್ಪಯಾಮಿ

ಶ್ರೀ ತುಲಸೀ ಅಷ್ಟೋತ್ತರ ಶತನಾಮಾವಳಿ

  1. ಓಂ ಹ್ರೀಂ ತುಲಸೀದೇವ್ಯೈ ನಮಃ
  2. ಓಂ ಸಖ್ಯೈ ನಮಃ
  3. ಓಂ ಭದ್ರಾಯೈ ನಮಃ
  4. ಓಂ ಮನೋಜ್ಞಾನ ಪಲ್ಲವಾಯೈ ನಮಃ
  5. ಓಂ ಪುರಂದರ ಸತೀಪೂಜ್ಯಾಯೈ ನಮಃ
  6. ಓಂ ಪುಣ್ಯದಾಯೈ ನಮಃ
  7. ಓಂ ಪುಣ್ಯರೂಪಿಣ್ಯೈ ನಮಃ
  8. ಓಂ ಜ್ಞಾನವಿಜ್ಞಾನಜನನ್ಯೈ ನಮಃ
  9. ಓಂ ತತ್ವಜ್ಞಾನ ಸ್ವರೂಪಿಣ್ಯೈ ನಮಃ
  10. ಓಂ ಜಾನಕೀ ದುಃಖಶಮನ್ಯೈ ನಮಃ
  11. ಓಂ ಜನಾರ್ಧನಪ್ರಿಯಾಯೈ ನಮಃ
  12. ಓಂ ಸರ್ವಕಲ್ಮಷ ಸಚಿಹರ್ತ್ಯೈ ನಮಃ
  13. ಓಂ ಸರ್ವಕೋಟಿ ಸಮಪ್ರಭಾಯೈ ನಮಃ
  14. ಓಂ ಗೌರೀ ಶಾರದಾ ಸಂಸೇವಿತಾಯೈ ನಮಃ
  15. ಓಂ ವಂದಾರುಜನಮಂದಾರಾಯೈ ನಮಃ
  16. ಓಂ ನಿಲಿಂಪಾಭರಣಾಸಕ್ತಾಯೈ ನಮಃ
  17. ಓಂ ಲಕ್ಷ್ಮೀಚಂದ್ರ ಸಹೋದರ್ಯೈ ನಮಃ
  18. ಓಂ ಸನಕಾದಿ ಮುನಿಧ್ಯೇಯಾಯೈ ನಮಃ
  19. ಓಂ ಕೃಷ್ಣಾನಂದ ಜನೀತ್ಯೈ ನಮಃ
  20. ಓಂ ಚಿದಾನಂದ ಸ್ವರೂಪಿಣ್ಯೈ ನಮಃ
  21. ಓಂ ನಾರಾಯಣ್ಯೈ ನಮಃ
  22. ಓಂ ಸತ್ಯರೂಪಾಯೈ ನಮಃ
  23. ಓಂ ಮಾಯಾತೀತಾಯೈ ನಮಃ
  24. ಓಂ ಮಹೇಶ್ವರ್ಯೈ ನಮಃ
  25. ಓಂ ಶುಭಪ್ರದಾಯೈ ನಮಃ
  26. ಓಂ ವದನಚ್ಚವಿನಿರ್ಧೂತರಾಕಾಪೂರ್ಣನಿಶಾಕರಾಯೈ ನಮಃ
  27. ಓಂ ರೋಚನಾಪಂಕ ತಿಲಕಲಸನ್ನಿಟಲಭಾಸುರಾಯೈ ನಮಃ
  28. ಓಂ ಶುದ್ಧಾಯೈ ನಮಃ
  29. ಓಂ ಪಲ್ಲವೋಷ್ಟ್ಯೈ ನಮಃ
  30. ಓಂ ಪದ್ಮಮುಖ್ಯೈ ನಮಃ
  31. ಓಂ ಪುಲ್ಲಪದ್ಮದಳೇಕ್ಷಣಾಯೈ ನಮಃ
  32. ಓಂ ಚಾಂಪೇಯಕಲಿಕಾಕಾರನಾಸಾದಮ್ಡವಿರಾಜಿತಾಯೈ ನಮಃ
  33. ಓಂ ಮಂದಸ್ಮಿತಾಯೈ ನಮಃ
  34. ಓಂ ಮಂಜುಲಾಂಗ್ಯೈ ನಮಃ
  35. ಓಂ ಮಾಧವಪ್ರಿಯ ಭಾವಿನ್ಯೈ ನಮಃ
  36. ಓಂ ಮಾಣಿಕ್ಯಕಂಕಣಾರಾಯೈ ನಮಃ
  37. ಓಂ ಮನಿಕುಂಡಲ ಮಂಡಿತಾಯೈ ನಮಃ
  38. ಓಂ ಇಂದ್ರಸಂಪತ್ಕರ್ಯೈ ನಮಃ
  39. ಓಂ ಶಕ್ತ್ಯೈ ನಮಃ
  40. ಓಂ ಇಂದ್ರಗೋಪನಿಭಾಂಶುಕಾಯೈ ನಮಃ
  41. ಓಂ ಇಂದ್ರಗೋಪನಿಭಾಂಶುಕಾಯೈ ನಮಃ
  42. ಓಂ ಕ್ಷೀರಸಾಗರ ಸಂಭವಾಯೈ ನಮಃ
  43. ಓಂ ಶಾಂತಿಕಾಂತಿಗುಣೋಪೇತಾಯೈ ನಮಃ
  44. ಓಂ ಬೃಂದಾಮರಗುಣ ಸಂಪತ್ಯೈ ನಮಃ
  45. ಓಂ ಪೂತಾತ್ಮನಾಯೈ ನಮಃ
  46. ಓಂ ಪೂತನಾದಿ ಸ್ವರೂಪಿಣ್ಯೈ ನಮಃ
  47. ಓಂ ಯೋಗಧ್ಯೇಯಾಯೈ ನಮಃ
  48. ಓಂ ಯೋಗಾನಂದ ವಿದಾಯೈ ನಮಃ
  49. ಓಂ ಚತುರ್ವರ್ಗ ಪ್ರದಾರಾಮಾಯೈ ನಮಃ
  50. ಓಂ ತ್ರಿಲೋಕ ಜನನ್ಯೈ ನಮಃ
  51. ಓಂ ಗೃಹಮೇಧಿಸಮಾರಾಧ್ಯಾಯೈ ನಮಃ
  52. ಓಂ ಸದನಾಂಗಣಪಾವನಾಯೈ ನಮಃ
  53. ಓಂ ಮುನೀಂದ್ರ ಹೃದಯವಾಸಾಯೈ ನಮಃ
  54. ಓಂ ಮೂಲಪ್ರಕೃತಿ ಸಂಜ್ಞಿಕಾಯೈ ನಮಃ
  55. ಓಂ ಬ್ರಹ್ಮರೂಪಿಣ್ಯೈ ನಮಃ
  56. ಓಂ ಪರಂಜ್ಯೋತಿಷೇ ನಮಃ
  57. ಓಂ ಅವಾಜ್ಞಾನಸಗೋಚರಾಯೈ ನಮಃ
  58. ಓಂ ಪಂಚಭೂತಾತ್ಮಿಕಾಯೈ ನಮಃ
  59. ಓಂ ಯೋಗಾಚ್ಯುತಾಯೈ ನಮಃ
  60. ಓಂ ಯಜ್ಞರೂಪಿಣ್ಯೈ ನಮಃ
  61. ಓಂ ಸಂಸಾರದುಃಖಶಮನ್ಯೈ ನಮಃ
  62. ಓಂ ಸೃಷ್ಟಿಸ್ಥಿತ್ಯಂತರಕಾರಿಣ್ಯೈ ನಮಃ
  63. ಓಂ ಸರ್ವಪ್ರಪಂಚನಿರ್ಮಾತ್ರ್ಯೈ ನಮಃ
  64. ಓಂ ವೈಷ್ಣವ್ಯೈ ನಮಃ
  65. ಓಂ ಮಧುರಸ್ವರಾಯೈ ನಮಃ
  66. ಓಂ ನಿರೀಶ್ವರಾಯೈ ನಮಃ
  67. ಓಂ ನಿರ್ಗುಣಾಯೈ ನಮಃ
  68. ಓಂ ನಿತ್ಯಾಯೈ ನಮಃ
  69. ಓಂ ನಿರಾತಂಕಾಯೈ ನಮಃ
  70. ಓಂ ದೀನಜನಪಾಲನತತ್ಪರಾಯೈ ನಮಃ
  71. ಓಂ ಕ್ವಣತ್ಮಿಂಕಿಣಿಕಾಜಾಲರತ್ನಕಾಂಚೀಲಸತ್ಕಜ್ಯೈ ನಮಃ
  72. ಓಂ ಚಲನ್ಮಂಜೀರಚರಣಾಯೈ ನಮಃ
  73. ಓಂ ಚತುರಾವಲಿಸೇವಿತಾಯ್ತೈ ನಮಃ
  74. ಓಂ ಅಹೋರಾತ್ರಕಾರಿಣ್ಯೈ ನಮಃ
  75. ಓಂ ಯುಕ್ತಾಹಾರಭರಾಕ್ರಾಂತಾಯೈ ನಮಃ
  76. ಓಂ ಮುದ್ರಿಕಾರತ್ನಭಾಸುರಾಯೈ ನಮಃ
  77. ಓಂ ಸಿದ್ಧಪ್ರದಾಯೈ ನಮಃ
  78. ಓಂ ಅಮಲಾಯೈ ನಮಃ
  79. ಓಂ ಕಮಲಾಯೈ ನಮಃ
  80. ಓಂ ಲೋಕಸುಂದರ್ಯೈ ನಮಃ
  81. ಓಂ ಹೇಮಕುಂಭಕುಚಧ್ವಯಾಯೈ ನಮಃ
  82. ಓಂ ಲಸಿತಕುಂಭಕುಚದ್ವಯೈ ನಮಃ
  83. ಓಂ ಚಂಚಲಾಯೈ ನಮಃ
  84. ಓಂ ಲಕ್ಷ್ಮ್ಯೈ ನಮಃ
  85. ಓಂ ಶಂಕರ್ಯೈ ನಮಃ
  86. ಓಂ ಶಂಕರ್ಯೈ ನಮಃ
  87. ಓಂ ಶಿವಶಂಕರ್ಯೈ ನಮಃ
  88. ಓಂ ತುಲಸ್ಯೈ ನಮಃ
  89. ಕುಂದಲಕುಟ್ಮಿಲರದನಾಯೈ ನಮಃ
  90. ಓಂ ಪಕ್ವಬಿಂಬೋಷ್ಟ್ಯೈ ನಮಃ
  91. ಓಂ ಶರಶ್ಚಂದ್ರಿಕಾಯೈ ನಮಃ
  92. ಓಂ ಚಾಂಪೇಯನಾಸಿಕಾಯೈ ನಮಃ
  93. ಓಂ ಕಂಬುಸುಂದರಗಳಾಯೈ ನಮಃ
  94. ಓಂ ತಟಿಲ್ಲತಾಂಗ್ಯೈ ನಮಃ
  95. ಓಂ ಮತ್ತಬಂಭರಕುಂತಲಾಯೈ ನಮಃ
  96. ಓಂ ನಕ್ಷತ್ರನಿಭನಖಾಯೈ ನಮಃ
  97. ಓಂ ರಂಭಾನಿಭೋರುಯುಗ್ಮಾಯೈ ನಮಃ
  98. ಓಂ ಸೈಕತಶ್ರೋಣ್ಯೈ ನಮಃ
  99. ಓಂ ಮಂದಕಂಠೀರವಮಧ್ಯೈ ನಮಃ
    100 ಓಂ ಕೀರವಾಣ್ಯೈ ನಮಃ
  100. ಓಂ ಶ್ರೀ ಮಹಾತುಲಸ್ಯೈ ನಮಃ
  Challenging Star DBOSS Darshan House Address Location ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್ ಮನೆ ವಿಳಾಸ

ಇತಿ ಶ್ರೀ ತುಲಸೀ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಂ

11.ಧೂಪ – ಪರಿಮಳಯುಕ್ತವಾದ
ಧೂಪವನ್ನು ಅರ್ಪಿಸುವುದು…. .ಶ್ರೀ ತುಳಸಿಯೇ ನಮಃ ಧೂಪಂ ಸಮರ್ಪಯಾಮಿ

12.ದೀಪ – ದೀಪ
ಸಮರ್ಪಣೆ ಮಾಡುವುದು..
ಶ್ರೀ ತುಳಸಿಯೇ
ನಮಃ ದೀಪಂ ಸಮರ್ಪಯಾಮಿ

13.ನೈವೇದ್ಯ, ತಾಂಬೂಲ –
ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ
ಅರ್ಪಿಸುವುದು .ವೀಳೆಯ, ಅಡಿಕೆ,
ತೆಂಗಿನಕಾಯಿ ತಾಂಬೂಲ ಕೊಡುವುದು…. .
ಶ್ರೀ ತುಳಸಿಯೇ ನಮಃ ನೈವೇದ್ಯಂ ಸಮರ್ಪಯಾಮಿ

  1. ನೀರಾಜನ – ಮಂಗಳಾರತಿ
    ಮಾಡುವುದು…..ಶ್ರೀ ತುಳಸಿಯೇ ನಮಃ ನೀರಾಜನಂ ಸಮರ್ಪಯಾಮಿ
  2. ನಮಸ್ಕಾರ
    ನಮಸ್ತುಲಸಿ ಕಲ್ಯಾಣಿ ನಮೋ ವಿಷ್ಟು ಪ್ರಿಯೇ ಶುಭೇ | ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪದಾಯಿಕೇ ||
    ಯನ್ನೂಲೇ ಸರ್ವತೀರ್ಥಾನಿ ಯನ್ಮಧೈ ಸರ್ವದೇವತಾಃ | ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್ || ತುಲಸೈ ನಮಃ | ನಮಸ್ಕಾರನ್ ಸಮರ್ಪಯಾಮಿ ||
  ಹನುಮಾನ್ ಚಾಲೀಸಾ hanuman chalisa

ಪ್ರಾರ್ಥನಾ

ನಮೋ ನಮೋ ಜಗದ್ಧಾತ್ರೆ ಜಗದಾ ನಮೋ ನಮಃ | ನಮೋ ನಮೋ ಜಗದ್ರೂ ನಮಸ್ತೆ ಪರಮೇಶ್ವರಿ || ಪ್ರಸಿದ ಮಮ ದೇವೇಶಿ ಕೃಪಯಾ ಪರಯಾ ಸದಾ | ಅಭೀಷ್ಟಫಲ ಸಿಧ್ಯರ್ಥಂ ಕುರು ಮೇ ಮಾಧವಪ್ರಿಯೇ || ಮನಃಪ್ರಸಾದಜನನೀ ಸುಖಸೌಭಾಗ್ಯವರ್ಧಿನೀ | ಆಧಿಂ ವ್ಯಾಧಿಂ ಚ ಹರ ಮೇ ತುಲಸಿ ತ್ವಾಂ ನಮಾಮ್ಯಹಮ್ || ಶ್ರಿಯಂ ದೇಹಿ ಯಶೋ ದೇಹಿ ಕೀರ್ತಿಮಾಯುಸ್ತಥಾ ಸುಖಮ್ | ಬಲಂ ಪುಷ್ಟಿಂ ತಥಾ ಧರ್ಮ ೦ ತುಲಸಿ ತ್ವಂ ಪ್ರಯಚ್ಛ ಮೇ || ಯಾ ದೃಷ್ಟಾ ನಿಖಲಾಘಸಂಘಶಮನೀ ಸ್ಪಷ್ಕಾ ವಪುಪಾವನೀ ರೋಗಾಣಾಮಭಿವಂದಿತಾ ನಿರಸನೀ ಸಿಕ್ಕಾಂತಕತ್ರಾಸಿನೀ ಪ್ರತ್ಯಾಸವಿಧಾಯಿನೀ ಭಗವತ : ಕೃಷ್ಣಸ್ಯ ಸಂರೋಪಿತಾ ನೃಸ್ತಾ ತಚ್ಛರಣೇ ವಿಮುಕ್ತಿ ಫಲದಾ ತಸ್ಮ ತುಲಸ್ಯೆ ನಮ : || ಪಾಪಾನಿ ಯಾನಿ ರವಿಸೂನುಷಟಸ್ಥಿತಾನಿ

  • ಪ್ರದಕ್ಷಿಣೆ ಮಾಡಿ ದೇವರಿಗೆ
    ಸಾಷ್ಟಾಂಗ ನಮಸ್ಕಾರ ಮಾಡುವುದು…. .ಶ್ರೀ ತುಳಸಿಯೇನಮಃ ನಮಸ್ಕಾರಂ ಸಮರ್ಪಯಾಮಿ
  1. ಪ್ರಾರ್ಥನೆ – ನಿಮ್ಮ ಇಷ್ಟಗಳನ್ನು ನಡೆಸಿ
    ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ
    ಮಾಡುವುದು.

ಅರ್ಘ್ಯಪ್ರಧಾನಂ

ಕೃಷ್ಣಾರ್ಪಣಂ

ಪೂಜೆಯ
ನಂತರ ದೇವರು ಅನುಗ್ರಹಿದ ನೈವೇದ್ಯವನ್ನು ಪ್ರಸಾದ
ರೂಪವಾಗಿ ಸ್ವೀಕಾರ
ಮಾಡುವುದು.

Leave a Reply

Your email address will not be published. Required fields are marked *

Translate »

You cannot copy content of this page