ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ವಿಭೂತಿಯನ್ನು ಹಣೆಗೆ ಏಕೆ ಹಚ್ಚಿಕೊಳ್ಳಲಾಗುತ್ತದೆ

ವಿಭೂತಿಯನ್ನು ಹಣೆಗೆ ಏಕೆ ಹಚ್ಚಿಕೊಳ್ಳಲಾಗುತ್ತದೆ..?

ಮೊದಲಿಗೆ ವಿಭೂತಿಯನ್ನು ಅಥವಾ ಭಸ್ಮವನ್ನು ಹಣೆಗೆ ಹಚ್ಚಿಕೊಳ್ಳುವ ಹಿಂದೆ ಇರುವ ಕಥೆಯನ್ನು ನಿಮಗೆ ಹೇಳುತ್ತೇವೆ. ಇದರ ಹಿಂದೆ ಒಂದು ಪ್ರಮುಖ ಕಾರಣ ಇದೆ, ಅದೇ ಈಶ್ವರ. ಹೌದು, ಸ್ವಾಮಿ ಈಶ್ವರನು ತನ್ನ ಇಡೀ ದೇಹಕ್ಕೆ ಭಸ್ಮದಿಂದ ಲೇಪಿಸಿಕೊಂಡಿರುತ್ತಾನೆ. ಪುರಾಣದ ಪ್ರಕಾರ ಭೃಗು ಎಂಬ ಮಹರ್ಷಿಯು ಇದ್ದ. ಈತನು ಒಮ್ಮೆ ಒಂದು ಘೋರ ತಪಸ್ಸನ್ನು ಮಾಡಿದನು. ಆ ಸಮಯದಲ್ಲಿ ಈತ ಕಾಡಿನಲ್ಲಿ ಹಣ್ಣು ಮತ್ತು ಸೊಪ್ಪುಗಳನ್ನು ಮಾತ್ರ ಸೇವಿಸುತ್ತಿದ್ದನು.
ಈ ಭೃಗು ಒಂದು ದಿನ ದರ್ಬೆಯನ್ನು ಕತ್ತರಿಸುವಾಗ ಆಕಸ್ಮಿಕವಾಗಿ ತನ್ನ ಕೈಬೆರಳುಗಳನ್ನು ಕತ್ತರಿಸಿಕೊಂಡನು. ಆಗ ಅವನ ಕತ್ತರಿಸಿದ ಬೆರಳಿನಿಂದ ರಕ್ತ ಬರುವ ಬದಲು, ಗಿಡದ ಕಾಂಡ ಕತ್ತರಿಸಿದಾಗ ಬರುವ ರಸದಂತಹ ದ್ರವ ಒಸರತೊಡಗಿತು. ಇದನ್ನು ನೋಡಿದ ಭೃಗುವಿಗೆ ತನ್ನ ಮೇಲೆ ತನಗೆ ಹೆಮ್ಮೆ ಮೂಡಿತು. ಆತ ಈ ಬೆಳವಣಿಗೆಯಿಂದ ಖುಷಿಗೊಂಡನು ಮತ್ತು ಸಹ ಬೆಳೆಸಿಕೊಂಡನು.
ಇದನ್ನು ಗ್ರಹಿಸಿದ ಈಶ್ವರನು ಭೃಗುವಿಗೆ ಪಾಠ ಕಲಿಸಲು ಮನಸ್ಸು ಮಾಡಿದನು. ಆದ್ದರಿಂದ ಭೃಗುವಿನ ಬಳಿಗೆ ಮಾರು ವೇಷದಲ್ಲಿ ಮುದುಕನಂತೆ ಇವರ ಮುಂದೆ ಕಾಣಿಸಿಕೊಂಡನು. ಹೀಗೆ ಮುದುಕನಾಗಿ ಬಂದು ಶಿವನು ಭೃಗುವಿಗೆ ಏಕೆ ಸಂತೋಷನಾಗಿದ್ದೀಯಾ ಎಂದು ಕೇಳಿದನು.
ಈ ಪ್ರಶ್ನೆಯಿಂದ ಕುಪಿತನಾದ ಭೃಗುವು ಆ ಮುದುಕನಿಗೆ ಹೀಗೆ ಹೇಳಿದನು. ನಾನು ಮಾಡಿದ ತಪಸ್ಸು ಫಲವನ್ನು ನೀಡಿದೆ. ಆದ್ದರಿಂದ ನನ್ನ ರಕ್ತವು ಒಂದು ಪವಿತ್ರ ಮರವನ್ನು ಕತ್ತರಿಸಿದರೆ ಬರುವ ರಸದಂತೆ ಪರಿವರ್ತನೆಯಾಗಿದೆ ಎಂದನು. ಆಗ ಮುದುಕನ ರೂಪದಲ್ಲಿದ್ದ ಶಿವನು ಇದರಲ್ಲಿ ಹೆಚ್ಚುಗಾರಿಕೆ ಏನಿದೆ. ಒಂದು ಗಿಡ ಅಥವಾ ಮರವನ್ನು ಕತ್ತರಿಸಿ ಸುಟ್ಟರೆ ಭಸ್ಮವಾಗುತ್ತದೆ ಎಂದು ತನ್ನ ಬೆರಳನ್ನು ಕತ್ತರಿಸಿಕೊಂಡನು, ಆಗ ಬೆರಳಿನಿಂದ ರಕ್ತ ಬರುವ ಬದಲು, ವಿಭೂತಿ ಬರಲು ಆರಂಭಿಸಿತು.

  ಆಧ್ಯಾತ್ಮಿಕ ತೊಂದರೆಗಳು ಎಂದರೇನು? ಲಕ್ಷಣಗಳು ?

ಆಗ ಭೃಗುವಿಗೆ ಇಲ್ಲಿ ಮುದುಕನ ರೂಪದಲ್ಲಿ ಬಂದಿರುವುದು ಶಿವ ಎಂದು ಅರ್ಥವಾಗಲು ತಡವಾಗಲಿಲ್ಲ. ಆಗ ತನ್ನ ಬಗ್ಗೆ ಇರಿಸಿಕೊಂಡಿದ್ದ ಹೆಮ್ಮೆ ಮತ್ತು ಅಹಂಕಾರವನ್ನು ಆತ ತ್ಯಜಿಸಿದನು. ಅಂದಿನಿಂದ ಭಸ್ಮವು ಸಾಕ್ಷಾತ್ ಶಿವನ ರೂಪವಾಗಿ ಪರಿಗಣಿಸಲ್ಪಟ್ಟಿತು.

ಪವಿತ್ರ ವಸ್ತುಗಳಲ್ಲಿ ವಿಭೂತಿಗೂ ಸ್ಥಾನ :-
ಹಿಂದೂ ಧರ್ಮದಲ್ಲಿ ಶಿವನಿಗೆ ಸಂಬಂಧಿಸಿದ ಪವಿತ್ರ ವಸ್ತುಗಳಲ್ಲಿ ಇದನ್ನು ಸಹ ಒಂದಾಗಿ ಪರಿಗಣಿಸಲಾಯಿತು. ಪ್ರತಿದಿನ ನಾವು ಈ ಭಸ್ಮವನ್ನು ಶಿವನ ಸ್ವರೂಪವಾಗಿ, ನಕಾರಾತ್ಮಕ ಅಂಶಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಬಳಸುತ್ತೇವೆ. ಈಗ ನಿಮಗೆ ಅರ್ಥವಾಯಿತಲ್ಲವೇ, ನಾವು ಏಕೆ ವಿಭೂತಿಯನ್ನು ಧರಿಸುತ್ತೇವೆ ಎಂದು.🙏

Leave a Reply

Your email address will not be published. Required fields are marked *

Translate »