ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ವಿಭೂತಿ, ಭಸ್ಮ ಮಹಿಮೆ

ವಿಭೂತಿ, ಭಸ್ಮ..!

ವಿಭೂತಿಯನ್ನು ಆಕಳ ಸೆಗಣಿಯಿಂದಲೇ ತಯಾರಿಸಬೇಕಾಗುತ್ತದೆ. ಆಕಳ ಸೆಗಣಿಯನ್ನೇ ಏಕೆ ಆಯ್ಕೆ ಮಾಡಿಕೊಂಡರು? ಅಮೆರಿಕದವರು ಆಕಳ ಸೆಗಣಿ ಹಾಗೂ ಮೂತ್ರದಲ್ಲಿ ಇರುವ ಕ್ರಮಿನಾಶಕ ಶಕ್ತಿ ಅಥವಾ ರೋಗಾಣುವನ್ನು ಕೊಲ್ಲುವಂಥ ಶಕ್ತಿ ಬೇರೆ ಯಾವ ಔಷಧದಲ್ಲಿ ಇರುವುದಿಲ್ಲವೆಂದು ಸಂಶೋಧನೆಯ ಮೂಲಕ ಕಂಡುಕೊಂಡಿದ್ದಾರೆ. ಗಬ್ಬಾದ ಆಕಳ ಅಥವಾ ಕರು ಹಾಕಿದ ಆಕಳುಗಳಾಗಿರಬೇಕೆಂದು ಸೂಚಿಸಿದ್ದಾರೆ. ಏಕೆಂದರೆ ಇಂಥ ಆಕಳಿನ ಸೆಗಣಿಯಲ್ಲಿ, ‘ಲೆಕ್ಟೋಸ್’ ಎಂಬ ಔಷಧಿ ಗುಣ ಹೆಚ್ಚಾಗಿರುತ್ತದೆಂದೂ (ಆದರೆ ಬರಡು ಆಕಳು ಇಲ್ಲವೆ ವಯಸ್ಸಾದ ಆಕಳ ಸೆಗಣಿಯನ್ನು ಉಪಯೋಗಿಸಬಾರದೆಂದು) ಸೂಚಿಸಿದ್ದಾರೆ. ಇಂಥ ಆಕಳ ಸೆಗಣಿಯಿಂದ ಹಾಗೂ ಮೂತ್ರದಿಂದ ತಯಾರಿಸಿದ ಬಿಭೂತಿಯನ್ನೆ ನಾವು ಪೂಜೆಯ ವೇಳೆಯಲ್ಲಿ ಹೊಟ್ಟೆ, ಎದೆ, ಬೆನ್ನು, ಕೈ ಹಾಗೂ ಮುಖಗಳಲ್ಲಿ ಲೇಪನಮಾಡುತ್ತೇವೆ ನಂತರ ಧರಿಸಕೊಳ್ಳುತ್ತೇವೆ.

ವಿಜ್ಞಾನಿಗಳ ಇತ್ತೀಚಿನ ಸಂಶೋಧನೆಯ ಪ್ರಕಾರ ಮನುಷ್ಯನ ಉಸಿರಾಟದಲ್ಲಿ ಹೊಟ್ಟೆ, ಎದೆ ಮತ್ತು ಬೆನ್ನಿನ ಚರ್ಮಗಳು ವಿಶೇಷವಾಗಿ ಉಸಿರಾಡಿಸುತ್ತವೆಂದು (ಶೇಕಡ 2%) ಆಕ್ಸಿಜನ್ ತೆಗೆದುಕೊಂಡು ಕಾರ್ಬನ್ ಡೈ ಆಕ್ಸೈಡನ್ನು ಹೊರಹಾಕುತ್ತವೆಂದು ಕಂಡುಕೊಂಡಿದ್ದಾರೆ. ಆದರೆ ನಾವು ಮೂಗಿನಿಂದ ಉಸಿರಾಡಿಸುವಾಗ ವಾತಾವರಣದಲ್ಲಿಯ ಭಯಾನಕ ರೋಗಾಣುಗಳು ಒಳಕ್ಕೆ ಹೊಗಲಾರವು. ಕಾರಣ ಮೂಗಿನಲ್ಲಿ ಕೂದಲುಗಳು ಜಿಗುಟಾದ ಪದಾರ್ಥವು ಹಾಗೂ ಶ್ವಾಸನಾಳಗಳಲ್ಲಿ ಸಣ್ಣ ಸಣ್ಣ ರೋಮಗಳಿರುವುದರಿಂದ ಅಲ್ಲಿ ರೋಗಾಣುಗಳನ್ನು ತಡೆಯುವ ಸಾಮಥ್ರ್ಯವಿದೆ. ಆದರೆ ಹೊಟ್ಟೆ, ಬೆನ್ನಿನ ಚರ್ಮಗಳು ವಿಶೇಷವಾಗಿ ಉರಿರಾಡಿಸುವುದರಿಂದ ವಾತಾವರಣದಲ್ಲಿಯ ರೋಗಾಣುಗಳು ಶರೀರವನ್ನು ಪ್ರವೇಶಿಸಬಹುದು. ಹೀಗಾಗಬಾರದೆಂದೇ ಇಂಥ ಕ್ರಿಮಿನಾಶಕ ವಿಭೂತಿಯನತನು ಧರಿಸಲು ಸೂಚಿಸಿದ್ದಾರೆ.

  ನಿತ್ಯ ಪಠನಾ ಶ್ಲೋಕಗಳು

ವಿಭೂತಿಯನ್ನು ದೇಹದ ಅಂಗಾಂಗಗಳಿಗೆ ಧರಿಸುವ ಅಭ್ಯಾಸ ಸಾವಿರಾರು ವರ್ಷಗಳಿಂದ ಇದೆ. ಋಷಿ ಮುನಿಗಳು, ಸನ್ಯಾಸಿಗಳು, ಸಾಧು ಸಂತರು, ಧರಿಸುವುದನ್ನು ನಾವು ಕಾಣಬಹುದು. ಇದಕ್ಕೆ ಕಾರಣ ಈ ಭಸ್ಮದಲ್ಲಿ ಆಡಗಿರುವ ಔಷಧದ ಗುಣ. ವಿಭೂತಿಯಲ್ಲಿರುವ ವಿಶೇಷ ಗುಣವೆಂದರೆ, ದೇಹದ ಉಷ್ಣಾಂಶವನ್ನು ಹೊರಕ್ಕೆ ಬಿಡುವುದಿಲ್ಲ. ಅಂತೆಯೇ ಹೊರಗಿನ ತೇವಾಂಶ ದೇಹದೊಳಕ್ಕೆ ಪ್ರವೇಶದಂತೆ ತಡೆಗಟ್ಟುತ್ತದೆ. ರಕ್ತ ಹೆಪ್ಪು ಗಟ್ಟುವಂತಹ ಚಳಿಯಲ್ಲೂ ದೇಹದ ಉಷ್ಣಾಂಶವನ್ನು ಕಾಪಾಡುತ್ತದೆ. ಆದ ಕಾರಣವೇ ಚಳಿ ಪ್ರದೇಶದಲ್ಲಿ ವಾಸಿಸುವ ಸನ್ಯಾಸಿಗಳು ಅತಿ ಕಡಿಮೆ ಬಟ್ಟೆ, ಅಥವಾ ಬಟ್ಟೆಯೇ ಇಲ್ಲದಿದ್ದರೂ ಮೈಗೆಲ್ಲಾ ವಿಭೂತಿ ಲೇಪನ ಮಾಡಿರುತ್ತಾರೆ.

ವಿಭೂತಿಯನ್ನು ಹಣೆಯ ಮೇಲೆ, ಕುತ್ತಿಗೆಯಲ್ಲಿ, ಕಿವಿಯ ಹಿಂದೆ, ಭುಜಗಳು, ಮೊಳಕೈ, ಮುಂಗೈ, ಕಾಲಿನ ಮಂಡಿ, ಪಾದ ಮುತಾದ ಭಾಗಗಳಲ್ಲಿ ಧರಿಸುವುದು, ಕಾರಣವೇನೆಂದರೆ, ದೇಹದ ಈ ಭಾಗದಲ್ಲಿರುವ ಕೀಲುಗಳಲ್ಲಿ ಶೀತದಿಂದ ಕೊಬ್ಬು ಹೆಪ್ಪುಗಟ್ಟಿ ತೊಂದರೆಯಾಗದಂತೆ ದೇಹದಲ್ಲಿ ಉಷ್ಣತೆಯನ್ನು ತಡೆಗಟ್ಟಿ ಸಹಕರಿಸುತ್ತದೆ. ಹಣೆ, ಕಿವಿ, ಕುತ್ತಿಗೆಗಳಲ್ಲಿ ಧರಿಸುವುದರಿಂದ ಹೊರಗಿನ ಗಾಳಿಯಲ್ಲಿರುವ ತೇವಾಂಶ ದೇಹದೊಳಕ್ಕೆ ಪ್ರವೇಸಿಸದಂತೆ ರಕ್ಷಿಸುತ್ತದೆ.

  ನಕ್ಕು ನಗಿಸಲು ಒಂದಿಷ್ಟು ಕನ್ನಡ ಜೋಕ್ಸ್

ಮನುಷ್ಯನ ದೇಹದಲ್ಲಿನ ಉಷ್ಣತೆ ಕಡಿಮೆಯಾಗಿ ಅಂತಿಮ ಅವಸ್ಥೆ ತಲುಪಿದಾಗ ಅಂಗಾಲು ಮತ್ತು ಅಂಗೈಗಳಿಗೆ ’ವಿಭೂತಿ’ಯನ್ನು ಉಜ್ಜುವ ಕ್ರಮವಿದೆ. ವಿಭೂತಿಯನ್ನು ಕೆಲವು ಕಾಯಿಲೆಗಳಿಗೆ ಔಷಧವಾಗಿಯು ಬಳಸುತ್ತಾರೆ.

ಉತ್ತಮವಾದ ಭಸ್ಮವನ್ನು ತಯಾರಿಸಲು ಕೆಲವು ನಿಯಮಗಳಿವೆ. ಆದರೆ ಈಗಿನ ದಿನಗಳಲ್ಲಿ ಎಲ್ಲವೂ ಕಲಬೆರಕೆಯಾಗಿದೆ. ಉತ್ತಮ ವಿಭೂತಿಯನ್ನು ಕೊಂಡು ಧರಿಸಬೇಕು.

ಶ್ರೀ ವಿಭೂತಿ ರುದ್ರಾಕ್ಷಿಯೇ ಭಕ್ತಿ ಮುಕ್ತಿಗೆ ಸಾಧನವೋ ಎನ್ನ ತಂದೆ
ಶಿವಶಿವಾ ಎಂಬ ಮಂತ್ರ ಎನಗಮೃತಾರೋಗಣೇಯೋ ಎನ್ನ ತಂದೆ
ಕೂಡಲ ಸಂಗಮದೇವಾ, ನಿಮ್ಮ ನಾಮದ ರುಚಿ ತುಂಬಿತೋ ಎನ್ನ ತನುವ. — ಬಸವಣ್ಣನವರು

ಧರ್ಮದಲ್ಲಿ ಪೂಜ್ಯ ವಸ್ತುಗಳನ್ನು ಆರಾಧಿಸಲಿಕ್ಕೆ ಪೂಜಾ ಸಾಧನಗಳಿರುತ್ತವೆ ವಿಭೂತಿ-ರುದ್ರಾಕ್ಷಿ-ಮಂತ್ರ ಅಂತಹ ಮುಕ್ತಿಯ ಸಾಧನಗಳು. “ಶಿವಶಿವಾ” ಎಂಬ ಮಂತ್ರ ಅಮೃತದಷ್ಟು ರುಚಿ ; ಪರಮಾತ್ಮಾ ನಿನ್ನ ಪವಿತ್ರ ನಾಮದ ರುಚಿ ನನ್ನ ಸರ್ವಾಂಗವನ್ನು ತುಂಬಿದೆ.

ನೀರಿಂಗೆ ನೈದಿಲೆಯೆ ಶೃಂಗಾರ ; ಸಮುದ್ರಕ್ಕೆ ತೆರೆಯೆ ಶೃಂಗಾರ ;
ನಾರಿಗೆ ಗುಣವೇ ಶೃಂಗಾರ ; ಗಗನಕ್ಕೆ ಚಂದ್ರಮನೇ ಶೃಂಗಾರ ;
ನಮ್ಮ ಕೂಡಲ ಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ. — ಬಸವಣ್ಣನವರು

ವಿಶಾಲವಾದ ಹರವಿಕೊಂಡು ನಿಂತ ನೀರು ನೈದಿಲೆಯಿಂದ ಹೆಚ್ಚು ಸುಂದರವಾಗಿ ಕಾಣುವಂತೆ ಸಮುದ್ರವು ತೆರೆಗಳಿಂದ ಚೆಲುವಾಗಿ ಕಾಣುವಂತೆ, ಸ್ತ್ರೀಗೆ ಗುಣವೇ ಸೌಂದರ್ಯವನ್ನು ಹೆಚ್ಚಿಸುವ ಅಂಶ, ಆಕಾಶದ ಚೆಲುವು ಚಂದ್ರಮನಿಂದ ವೃದ್ಧಿಗೊಳ್ಳುವಂತೆ, ಶರಣರ ಚೆಲುವು ನೊಸಲ ವಿಭೂತಿಯಿಂದ ಹೆಚ್ಚುತ್ತದೆ. ಇಲ್ಲವಾದರೆ ಆ ಹಣೆ ಬೋಳು ಬೋಳಾಗಿ ಕಾಣುತ್ತದೆ

  ನವವಧುವಿನ ಕೈಯಲ್ಲಿ ಯಾಕೆ ಸೇರು ಒದ್ದೆಸುವುದು?

ಬಸವ ಬಸವಾ ಎಂದು ಭಸಿತಮಂ ಧರಿಸಿದರೆ
ಬಸವಾದಿ ಪ್ರಮಥರಿಗೆ ಪ್ರೀತಿಯಯ್ಯಾ
ಬಸವ ಷಟಸ್ಥಲ ಚನ್ನಬಸವ ಪ್ರಭು ಮುಖ್ಯರು
ಭಸಿತಮಂ ಧರಿಸಿ ಬಯಲಾದರಯ್ಯ
ಎಸೆವ ಅಂಗುಲಿತ್ರಯವು ಭಸಿತರೇಖೆಗಳೆಲ್ಲ
ಬಸವಾಕ್ಷರತ್ರಯಗಳೆಂದು ಮುದದಿ
ಭಸಿತದಿಂ ನವ ಪ್ರಣವ ಹಸನಾಗಿ ಅಂಗದಲಿ
ಬಸವ ಬಸವಾ ಎಂದು ಸಂಬಂಧಿಸುವೆನು
ದುರುಳ ಕರಣಂಗಳೆಂಬ ಬೆರಣಿಗಳನುರುಹಿದ
ಪರಮಚಿದ್ಭಸಿತವೆಂದರಿದು ನಾನು
ಹರಬಸವ ಗುರುಬಸವ ಚರಬಸವ ಎಂದೆನುತ
ಶಿರವಾದಿ ಚರಣಾಂತ್ಯದೊಳು ಧರಿಸುವೆ
ನೀನು ಧರಿಸಿದೆಯಾಗಿ ಆನು ಧರಿಸುವೆನಯ್ಯ
ಸ್ನಾನಧೂಳನ ಧಾರಣಗಳಿಂದ
ಹೀನ ಮಾನವರಿದರ ಜ್ಞಾನವಿಲ್ಲದೆ ಭವದ,
ಕಾನನದೊಳಗೆ ತಾವು ಬೀಳುತಿಹರು
ತ್ರಿನಯನ ಮಹಾಂತೇಶ ದಣಿ ಬಸವರಾಜನ
ಅಣಿಯರದಿ ಸ್ಮರಿಸುತ್ತ ಭಜಿಸುತ್ತಲಿ
ಅಣುಮಾತ್ರ ಭಸಿತವನು ಹಣೆಯೊಳಿಟ್ಟಾಕ್ಷಣವೆ
ಒಣಗುವವು ದುರಿತಂಗಳೆಂಬ ಕುಜವು. – ಬಾಲ ಲೀಲಾ ಮಹಾಂತ ಶಿವಯೋಗಿಗಳು

Leave a Reply

Your email address will not be published. Required fields are marked *

Translate »