ಚಾಲುಕ್ಯರು ಕಟ್ಟಿದ ಗುಜರಾತಿನ ಸೂರ್ಯ ಕುಂದ ದೇವಾಲಯ…!~~~~~~
ಚಾಲುಕ್ಯರ ಆಳ್ವಿಕೆಯಲ್ಲಿ ಕಲೆ ಸಂಸ್ಕೃತಿಗೆ ಅವರ ಕೊಡುಗೆ ಅಪಾರ.. ಅವರು ಕಟ್ಟಿಸಿದ ದೇವಾಲಯಗಳು ಲೆಕ್ಕವಿಲ್ಲ.. ಅಧ್ಬುತ ವಾಸ್ತುಶಿಲ್ಪ ವಿಶಾಲ ಪ್ರಾಂಗಣ ಹೊಂದಿರುವ ದೇವಾಲಯಗಳನ್ನು ನೋಡಲೆರೆಡು ಕಣ್ಣು ಸಾಲುವುದಿಲ್ಲ.. ಅಂತಹ ದೇವಾಲಯಗಳ ಪೈಕಿ ಸೂರ್ಯ ಕುಂದ ದೇವಾಲಯವೂ ಒಂದು..
ಇದರ ಕಟ್ಟಡ ವಿನ್ಯಾಸ #ವಾಸ್ತುಶಿಲ್ಪವನ್ನು ನೋಡಿದರೇ #ತಾಜ್ ಮಹಲ್ ಇದರ ಮುಂದೆ ಏನೇನು ಅಲ್ಲ ಎಂದು ಅನಿಸುವುದಂತೂ ಸತ್ಯ..ಇದು ಒಂದು ಹಿಂದೂ ದೇವಾಲಯವಾಗಿದೆ..
ಇದು ಕ್ರಿ.ಶ. 1026-1027 ರಲ್ಲಿ #ಚಾಲುಕ್ಯರ ಅವಧಿಯಲ್ಲಿ ಕಟ್ಟಲ್ಪಟ್ಟಿದೆ. ಈ ಅಧ್ಬುತ ದೇವಾಲಯ ಇರುವುದು ಗುಜರಾತಿನ #ಮೆಹಸಾನ ಜಿಲ್ಲೆಯ #ಮೋದರ ಎಂಬ ಗ್ರಾಮದಲ್ಲಿ..
ಪುಶ್ಪಾವತಿ ನದಿಯ ದಂಡೆಯಲ್ಲಿ ರಮಣೀಯವಾಗಿ ನಿರ್ಮಾಣಗೊಂಡಿತುವ ಈ ದೇವಾಲಯ ಚಾಲುಕ್ಯರ ದೊರೆ ಮೊದಲನೇ ಭೀಮ ಮಹಾರಾಜನಿಂದ ಕಟ್ಟಲ್ಪಟ್ಟಿದೆ.. ಆದರೇ ಈ ದೇವಾಲಯದಲ್ಲಿ ಈಗ ಯಾವುದೇ ಪೂಜೆಗಳು ನೆರವೇರುತ್ತಿಲ್ಲ.. ಇದನ್ನು ಸರ್ಕಾರದಿಂದ ಒಂದು ಸ್ಮಾರಕವಾಗಿ ಪರಿವರ್ತಿಸಲಾಗಿದೆ.. ಇಂತಹ ಅಧ್ಬುತ ಹಿಂದೂ ದೇವಾಲಯವೊಂದು ಯಾರಿಗೂ ತಿಳಿಯದಿರುವುದು ದುರಂತವೇ ಸರಿ..
~~~~~~~