ನೀನು ನಿನ್ನಲ್ಲಿನ ಒಳ್ಳೆಯತನ
ಹುಡುಕು…
ಕೊರತೆಗಳನ್ನು ಹುಡುಕಲು ಜನರಿದ್ದಾರೆ.
ಹೆಜ್ಜೆ ಇಡುವುದೇ ಆದರೆ..
ಮುಂದಕ್ಕೆ ಇಡು,
ಹಿಂದಕ್ಕೆ ಎಳೆಯಲು
ಜನ ಇದ್ದಾರೆ.
ಕನಸು ಕಾಣುವುದೇ…
ಆದರೆ ಎತ್ತರಕ್ಕೆ ನೋಡು,
ಕೀಳುಗಳಿಯಲು ಜನ ಇದ್ದಾರೆ.
ನಿನ್ನೊಳಗಿನ ಹುಚ್ಚಿನ ಕಿಡಿ ಬೆಳಗಿಸು,
ಉರಿಯುವುದಕ್ಕೆ ಜನ ಇದ್ದಾರೆ.
ಏನಾದರೂ ಮಾಡುವುದು
ಇದ್ದರೆ ನೆನಪಾಗುವಂತೆ ಮಾಡು,
ಮಾತಾಡುವುದಕ್ಕೆ ಜನರಿದ್ದಾರೆ.
ಪ್ರೀತಿ ಮಾಡುವುದಿದ್ದರೆ…
ಸ್ವತಃ ನಿನ್ನನ್ನೇ ಮಾಡು,
ದ್ವೇಷ ಮಾಡುವುದಕ್ಕೆ ಜನ ಇದ್ದಾರೆ.
ಇರುವುದಿದ್ದರೆ..
ಮಗುವಿನ ಹಾಗೆ ಇದ್ದು ಬಿಡು,
ವಿವೇಕವಂತರಾಗಿ ಇರಲು
ಜನರಿದ್ದಾರೆ.
ಭರವಸೆ ಇಡುವುದಾದರೆ…
ನಿನ್ನಲ್ಲಿ ನೀನು ಇಡು,
ಅನುಮಾನಿಸಲು ಜನರಿದ್ದಾರೆ.
ನೀನು ನಿನ್ನನ್ನು ಸಂಭಾಳಿಸಿಕೋ…
ಕನ್ನಡಿ ತೋರಿಸಲು ಜನರಿದ್ದಾರೆ.
ನಿನ್ನದೇ ಆದ ಬೇರೆ ಪರಿಚಯ ಮಾಡಿಕೋ…
ಗುಂಪಿನಲ್ಲಿ ನಡೆಯಲು ಜನರಿದ್ದಾರೆ.
ನೀನು ಏನಾದರೂ ಸಾಧಿಸಿ ಜಗಕ್ಕೆ ತೋರಿಸು…
ಏನಾದರೂ ಸಾಧಿಸಿ
ತೋರಿಸು ಸಾಕು,
ಚಪ್ಪಾಳೆ ತಟ್ಟಲು ಜನರಿದ್ದಾರೆ.