ವಿಶ್ವದ ಏಕೈಕ ಗರುಡ ದೇವಾಲಯ..!
ಕೋಲಾರದ ಈ ಗರುಡನ ದರ್ಶನ ಪಡೆದ್ರೆ ಅದೃಷ್ಟ ಪ್ರಾಪ್ತಿಯಾಗುತ್ತಂತೆ!
ಕೋಲಾರ ಜಿಲ್ಲೆಯಲ್ಲಿರುವ ಗರುಡ ದೇವಸ್ಥಾನವು ಒಂದು ಮಹಿಮಾನ್ವಿತ ದೇವಸ್ಥಾನವಾಗಿದ್ದು, ಸಾಕಷ್ಟು ಸಂಖ್ಯೆಯ ಭಕ್ತರು ಇಲ್ಲಿಗೆ ಬರುತ್ತಾರೆ. ಒಂದು ಕೈಯಲ್ಲಿ ನಾರಾಯಣ ಇನ್ನೊಂದು ಕೈಯಲ್ಲಿ ಲಕ್ಷ್ಮೀಯನ್ನು ಕಾಣಬಹುದು. ಇಲ್ಲಿನ ಗರುಡ ದೇವನ ದರ್ಶನ ಮಾಡಿದ್ರೆ ಅದೃಷ್ಟ ಪ್ರಾಪ್ತಿಯಾಗುತ್ತಂತೆ.
ಈ ದೇವಾಲಯವು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಲ್ಲಿದೆ ಕೊಲದೇವಿ ದೇವಸ್ಥಾನ . ಮುಳಬಾಗಿಲಿನಿಂದ 14 ಕಿ.ಮಿ ದೂರದಲ್ಲಿದೆ. ವಿಷ್ಣುವಿನ ಆಜ್ಞೆಯಂತೆ ಜಟಾಯು ಗರುಡನಾಗಿ ಈ ಸ್ಥಳದಲ್ಲಿ ನೆಲೆಸಿದ್ದಾನೆ. ಇಲ್ಲಿನ ಗರುಡನ ದರ್ಶನದಿಂದ ಅದೃಷ್ಟ ಪ್ರಾಪ್ತಿಯಾಗುತ್ತಂತೆ .
ಜಟಾಯುವಿನ ರೆಕ್ಕೆ ಬಿದ್ದ ಜಾಗ:
ರಾವಣನ ಸೀತಾಪಹರಣ ಸಂದರ್ಭದಲ್ಲಿ ರಾವಣ ಕತ್ತರಿಸಿದ ಜಟಾಯುವಿನ ರೆಕ್ಕೆ ಬಿದ್ದ ಜಾಗ ಇದಾಗಿದೆ ಎನ್ನಲಾಗುತ್ತದೆ. ರಾವಣ ಜಟಾಯುವನ್ನು ಕೊಲ್ಲಲ್ಪಟ್ಟ ಸ್ಥಳ ಇದಾಗಿದ್ದು ಇದನ್ನು ಕೊಲಾದೇವಿ ಎನ್ನಲಾಗುತ್ತದೆ.
ಸರ್ಪದೋಷ_ನಿವಾರಣೆ:
ಸಾವಿರ ವರ್ಷ ಹಿಂದಿನ ದೇವಸ್ಥಾನ ಇದಾಗಿದೆ. ಎಂಟು ರೀತಿಯ ಸರ್ಪದೋಷ ನಿವಾರಣೆಯಾಗುತ್ತದೆ. ಸಂತಾನ ಭಾಗ್ಯ, ಕಲ್ಯಾಣ ಭಾಗ್ಯ, ರೋಗಗಳು ಗುಣವಾಗುತ್ತವಂತೆ. ಮಾಟ ಮಂತ್ರ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ.