ಕಾಗೆ
ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಕಾಗೆಗಳಿಗೆ ಇರುವ ಸ್ಥಾನ ದೊಡ್ಡದು,…
ಇವೆರಡೂ ಪಕ್ಷಿಗಳೆ, ಆದರೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗದಂತಿರುವ ಕಾಗೆಗಳ ಸಂತತಿ ಅಳಿವಿನ ಅಂಚಿನಲ್ಲಿದೆ, ಹಾಗೂ ವಿದೇಶಿ ಸಂತತಿಯ ಪಾರಿವಾಳಗಳು ಹೇರಳವಾಗುತ್ತಿವೆ,
ಪಾರಿವಾಳಗಳ ಬಗ್ಗೆ ಬೇಸರವಲ್ಲ. ಕಾಗೆಗಳ ಬಗ್ಗೆ ಚಿಂತಯಷ್ಟೆ,
ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಕಾಗೆಗಳಿಗೆ ಇರುವ ಸ್ಥಾನ ದೊಡ್ಡದು, ಅದು ಶನಿರಾಜನ ವಾಹನ, ಮತ್ತು ಅದು ಪಿತ್ರು ಸ್ವರೂಪಿ,
ಕಾಗೆಗಳು ಮರಣಿಸಿದ ಪಿತೃಗಳ ಸ್ವರೂಪ ಎಂದು ನಾವು ಅದಕ್ಕೇ ಪಿಂಡವನ್ನು ಇಡುತ್ತೇವೆ, ಅಂದರೆ ನಾವು ಹಾಕಿದ ಪಿಂಡವನ್ನು ಆಕಾಶ ಮಾರ್ಗವಾಗಿ ಕಾಗೆಯರೂಪದಲ್ಲಿ ಪಿತ್ರುಗಳು ಬಂದು ಸ್ವೀಕರಿಸುತ್ತಾರೆ ಎಂದು ಪುರಾಣದಲ್ಲಿನ ಉಲ್ಲೇಖಿಸಿದೆ, ಹಾಗಾಗಿ ಪಿಂಡವೇ ನಮ್ಮ ಹಿರಿಯರಿಗೆ ಆಹಾರ ಎಂದು ನಂಬಿದ್ದೇವೆ, ಮತ್ತು ಕಾಗೆಗೇ ಪಿಂಡ ತಿನ್ನಲು ಪ್ರಥಮ ಆದ್ಯತೆ ಕೂಡುತ್ತೇವೆ, ಹೀಗಿರುವಾಗ ಕಾಗೆಗಳೇ ಇಲ್ಲದಿದ್ದರೆ ಯಾವ ಪಕ್ಷಿಗೆ ಪಿಂಡವಿಡಬೇಕು?
ದಯವಿಟ್ಟು ಪಾರಿವಾಳಗಳಿಗೆ ಹಾಕುವ ಆಹಾರವನ್ನು ಕಾಗೆಗಳಿಗೂ ಹಾಕೂಣ, ಮತ್ತು ಕಾಗೆ ಗಳಿಗೆ ಪ್ರಥಮ ಆದ್ಯತೆ ಕೊಡೂಣ,
ಇಂದು ಆಶ್ಚರ್ಯದ ಸಂಗತಿಯೆಂದರೆ ಕಾಗೆಗಳೇ ಕಾಣಸಿಗುತ್ತಿಲ್ಲ, ಪೇಟೆಯ ಮಾತಿರಲಿ ನಮ್ಮ ಕುಗ್ರಾಮಗಳಲ್ಲೂ ಕಾಗೆಗಳನ್ನು ಹುಡುಕಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ, ಕಾಗೆ ನಮ್ಮ ಹಿಂದೂ ಸಂಸ್ಕೃತಿಯ ಸಂಕೇತ ಅದನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಅಲ್ಲವೆ?,
ಇಂದೇ ನಾವು ಸಂಕಲ್ಪ ಮಾಡುವ, ಇನ್ನು ಮುಂದಾದರೂ ಕಾಗೆಗಳನ್ನು ಎಂಜಲ ಕೈಯಲ್ಲಿ ಓಡಿಸದೆ ಅದಕ್ಕೂ ಆಹಾರ ಹಾಕೋಣ, ಅದರ ಸಂತತಿಯನ್ನು ಮುಂದಿನ ಪೀಳಿಗೆಗೆ ಉಳಿಸುವ, ಮುಂದೂದು ದಿನ ನಮ್ಮ ಪಿಂಡಕ್ಕೆ ದಾರಿ ಮಾಡಿ ಕೊಳ್ಳುವ,👏
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!