ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗುರುಪೂರ್ಣಿಮೆ


🤍ಗುರುಪೂರ್ಣಿಮೆ🤍
🌹, ತಾರೀಕು,21/07/2024 ರಂದು ಭಾನುವಾರ ಆಷಾಢ ಪೂರ್ಣಿಮೆ ಬಹಳ ಮಹತ್ವ ಹೊಂದಿದ ದಿವಸ. ಈ ದಿವಸವನ್ನು ಹಿಂದೂಗಳು “ಗುರು ಪೂರ್ಣಿಮೆ ” ಅಥವಾ “ವ್ಯಾಸಪೂರ್ಣಿಮೆ” ಎಂತಲೂ ಆಚರಿಸುತ್ತಾರೆ,
ಅಲ್ಲದೇ ಇದು ಬೌದ್ದರಿಗೂ ,
ಜೈನರಿಗೂ ಶ್ರೇಷ್ಟವಾದ ದಿವಸ.
ಬುದ್ದರು ತಮಗೆ ಜ್ಞಾನೋದಯವಾದ ಎಂಟು ವಾರಗಳ ನಂತರ ,ಅವರು ತಮ್ಮ ಜೊತೆಯಲ್ಲಿ ಜ್ಞಾನೋದಯಕ್ಕಿಂತ ಮುಂಚೆ ಇದ್ದ ಐದು ಜನ ಸ್ನೇಹಿತರನ್ನು ಹುಡುಕಿಕೊಂಡು ಸಾರನಾಥಕ್ಕೆ ಹೋಗಿ,ಅಲ್ಲಿಅವರಿಗೆ ತಾನು ಸಾಕ್ಷಾತ್ಕರಿಸಿಕೊಂಡ ಜ್ಞಾನವನ್ನು ಮೊಟ್ಟ ಮೊದಲು ಭೋದನೆ ಮಾಡಿದ ದಿವಸ “ಆಷಾಡ ಪೂರ್ಣಿಮೆ” ಇದನ್ನು “ಧಮ್ಮ ಚಕ್ಕ ಪವತ್ತನ ಸುತ್ತ”ಎನ್ನುತ್ತಾರೆ. ಅಂದರೆ ಧರ್ಮ ಪ್ರವರ್ತನ ಸೂತ್ರ. {ಧರ್ಮ ಚಕ್ರ ಉರುಳುವಿಕೆ}ಎಂದು ಕರೆಯುತ್ತಾರೆ. {ಬರುವ ಆಷಾಡ ಪೂರ್ಣಿಮೆಯ ಧರ್ಮ ಚಕ್ರ ಉರುಳಿದ2613ನೆಯದಾಗಿರುತ್ತದೆ} ಈ ದಿನವನ್ನು ಬೌದ್ಧರು ತಮ್ಮ ಸಾಂಪ್ರದಾಯಕ ಪ್ರಕಾರ ಹಬ್ಬವನ್ನು ಆಚರಿಸುತ್ತಾರೆ. 🪷,ಇನ್ನುಜೈನತೀರ್ಥಂಕರನಾದ ಮಹಾವೀರರು ಕೈವಲ್ಯ ಪಡೆದ ನಂತರ ಇಂದ್ರಭೂತಿ ಗೌತಮ ಎನ್ನುವವರನ್ನು ಶಿಷ್ಯನಾಗಿ ಸ್ವೀಕರಿಸಿ ಭೋದನೆ ಮಾಡಿದ ದಿನವೇ, “ಆಷಾಡಪೂರ್ಣಿಮೆ” ಆದ್ದರಿಂದ ಜೈನರೂ ಈ ದಿವಸವನ್ನು ಗುರುಪೂರ್ಣಿಮೆ ಎಂದು ಆಚರಿಸುತ್ತಾರೆ.

🪷,ವ್ಯಾಸ ಪೂರ್ಣಿಮೆ🪷 ಆಷಾಡ ಮಾಸದ ಶುಕ್ಲಪಕ್ಷದ ಪೂರ್ಣಿಮೆಯ ವೇದ ವ್ಯಾಸರು ಜನಿಸಿದ ಶುಭದಿವಸ ಆದ್ದರಿಂದ ಈ ದಿನವನ್ನು, “ವ್ಯಾಸಪೂರ್ಣಿಮೆ” ಅಥವಾ “ಗುರುಪೂರ್ಣಿಮೆ” ಎಂದ ಕರೆಯುತ್ತಾರೆ ವೇದ ವ್ಯಾಸರು ವಸಿಷ್ಠರ ಮರಿಮಗ. ಶಕ್ತಿ ಮಹರ್ಷಿಗಳ ಮೊಮ್ಮಗ. ಪರಾಶರ ಋಷಿಗಳ ಮಗ.ಅವರ ತಾಯಿ ಸತ್ಯವತಿ ಬೆಸ್ತರ ಕುಲದವಳು. ಹೀಗೆ ವ್ಯಾಸರಿಗೆ ಅನೇಕ ಹೆಸರುಗಳುಂಟು. ವ್ಯಾಸರನ್ನು ವಶಿಷ್ಠ ವಂಶದಲ್ಲಿ ಹುಟ್ಟಿದುದರಿಂದ “ವಾಸಿಸ್ಠ* “,ಎಂತಲೂ, ಪರಾಶರರ ಮಗನಾದುದರಿಂದ “ಪರಾಶರ” ಎಂತಲೂ. ವೇದಗಳನ್ನು ವಿಭಾಗಿಸಿದ ಕಾರಣ, “ವೇದವ್ಯಾಸ“ಎಂತಲೂ,
ಬದರೀಕ್ಷೇತ್ರದಲ್ಲಿ ತಪಸ್ಸು ಮಾಡಿದ್ದರಿಂದ “ಬಾದ ನಾರಾಯಣ“ಎಂತಲೂ,ಕಪ್ಪು ಮೈಬಣ್ಣ ಮತ್ತು ದ್ವೀಪದಲ್ಲಿ ಹುಟ್ಟಿದ್ದರಿಂದ, “ಕೃಷ್ಣದ್ವೈಪಾಯಣ,” ಎಂತಲೂ.ಇನ್ನೂ ಅನೇಕ ಹೆಸರುಗಳುಂಟು.ಆದ್ದರಿಂದ ಆಷಾಡ ಮಾಸದ ಈ ಪೂರ್ಣಿಮೆ ಆಚರಣೆ ಮಹತ್ವದ್ದಾಗಿದೆ.ನೇಪಾಳದಲ್ಲಿ ಗುರು ಪೂರ್ಣಿಮೆ ಯನ್ನೂ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ💐🙏
🚩 ಭಗವಂತ ಶ್ರೀ ಪರಶುರಾಮ🚩
ಇಂತಿ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

Leave a Reply

Your email address will not be published. Required fields are marked *

Translate »