ಪರಮ ಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ…
ನಮ್ಮ ನಾಡಿನ ಶ್ರೇಷ್ಠ ಸಂತ ಪರಮ ಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ಕಳೆದ 25 ವರ್ಷಗಳಿಂದ ಮಾಡುತ್ತಿರುವ ಸಮಾಜ ಸೇವೆಗಳು
25000 ಕ್ಕೂ ಅಧಿಕ ಜನರನ್ನು ಸನಾತನ ಧರ್ಮಕ್ಕೆ ಮರಳಿ ಕರೆತಂದಿದ್ದಾರೆ ಅಲ್ಲದೆ ಪ್ರತಿವರ್ಷ 500 ಕ್ಕೂ ಅಧಿಕ ಕುಟುಂಬಗಳನ್ನು ಮರಳಿ ಸನಾತನ ಧರ್ಮಕ್ಕೆ ಕರೆತರುತ್ತಾರೆ
28 ಕ್ಕೂ ಅಧಿಕ ದೇಶಿಯ ತಳಿಯ 2000 ಗೋವುಗಳನ್ನು ಸಾಕುತ್ತಿದ್ದಾರೆ
ಕಳೆದ 8 ವರ್ಷಗಳಿಂದ ಊಟ ವಸತಿ ಶಿಕ್ಷಣ ಮಾರಾಟಕ್ಕಲ್ಲ ಎಂಬ ಸಂಕಲ್ಪದೊಂದಿಗೆ 400 ಕ್ಕೂ ಅಧಿಕ ಮಕ್ಕಳಿಗೆ ಭಾರತೀಯ ಪರಂಪರೆಯ ಗುರುಕುಲ ದ ಶಿಕ್ಷಣ ನೀಡಿ ನಮ್ಮ ಭರತ ಭೂಮಿಯ ಸಂಸ್ಕೃತಿ ಜ್ಞಾನ ಪರಂಪರೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ
600 ಕ್ಕೂ ಅಧಿಕ ವಯೋವೃದ್ಧರಿಗೆ ತಾವೇ ಗೌರವಧನ ನೀಡಿ ಸಾಕಿ ಸಲಹುತ್ತಿದ್ದಾರೆ
ವಿಶ್ವದರ್ಜೆಯ ಆಯುರ್ವೇದ ಹಾಗೂ ಅಲೋಪೆತಿಕ ಆಸ್ಪತ್ರೆ ಕಟ್ಟಿಸಿ ಲಕ್ಷಾಂತರ ಬಡವರಿಗೆ ಅತ್ಯಲ್ಪ ಖರ್ಚಿನಲ್ಲಿ ಅರೋಗ್ಯ ಸೇವೆ ಕೊಡಿಸುತ್ತಿದ್ದಾರೆ
1000 ಕ್ಕೂ ಅಧಿಕ ಅನಾಥ ಮಕ್ಕಳನ್ನು ದತ್ತು ಪಡೆದು ಅವರಿಗೆ ಉಚಿತ ಊಟ ವಸತಿ ಶಿಕ್ಷಣ ನೀಡುವುದಲ್ಲದೆ ಉದ್ಯೋಗವನ್ನೂ ಒದಗಿಸುತ್ತಿದ್ದಾರೆ
ಹಿಂದುಳಿದ ಗ್ರಾಮಗಳ 500 ಕ್ಕೂ ಅಧಿಕ ಶಾಲೆಗಳನ್ನು ದತ್ತು ಪಡೆದು ಅಲ್ಲಿ ಅವಶ್ಯಕ ಶಿಕ್ಷಕರನ್ನು ನೇಮಿಸಿ ಅಲ್ಲಿನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಒದಗಿಸುತ್ತಿದ್ದಾರೆ
ಸಮಾಜಕ್ಕೆ ಮಾರ್ಗದರ್ಶನ ನೀಡಲು ಬ್ರಹ್ಮಚಾರ್ಯ ಗುರುಕುಲವನ್ನು ನಿರ್ಮಿಸಿ 100 ಕ್ಕೂ ಅಧಿಕ ವೀರ ಸನ್ಯಾಸಿಗಳನ್ನು ಬೆಳೆಸುತ್ತಿದ್ದಾರೆ
ಕಳೆದ 20 ವರ್ಷಗಳಿಂದ 15 ಲಕ್ಷ ಕ್ಕೂ ಅಧಿಕ ರೈತರಿಗೆ ಗೋ ಆಧಾರಿತ / ಸಾವಯವ / ನೈಸರ್ಗಿಕ ಕೃಷಿಯ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ
10000 ಕ್ಕೂ ಅಧಿಕ ದೇಶಿಯ ಬೀಜಗಳನ್ನು ಬೆಳೆಸಿ ಭಾರತದಾದ್ಯಂತ ಹಂಚುತ್ತಿದ್ದಾರೆ
ಭಾರತದ ಮೊಟ್ಟಮೊದಲ ಸಾವಯವ ಕೃಷಿ ವಿಜ್ಞಾನ ಕೇಂದ್ರ ವನ್ನು ನಿರ್ಮಿಸಿ ಲಕ್ಷಾಂತರ ರೈತರಿಗೆ ಸಮಗ್ರ ವಿಷಮುಕ್ತ ಗೋಆಧಾರಿತ ಕೃಷಿಯ ಜ್ಞಾನ ನೀಡುತ್ತಿದ್ದಾರೆ
ಇದೆಲ್ಲದರ ಜೊತೆಗೆ ಕೋಟ್ಯಂತರ ಭಾರತೀಯರಿಗೆ ನಮ್ಮ ದೇಶ ಧರ್ಮದ ಆದ್ಯಾತ್ಮ ಸಂಸ್ಕೃತಿ ಪರಂಪರೆ ಆಚಾರ ವಿಚಾರಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಲೇ ಇರುತ್ತಾರೆ
ಕಲಿಯುಗದಲ್ಲಿ ಹುಟ್ಟಿದ ನಾನು ಚಿಕ್ಕವನಿದ್ದಾಗ ಯುಗಪುರುಷನ ಬಗ್ಗೆ ಓದಿದ್ದೆ ಕೇಳಿದ್ದೆ ಆದರೆ ಸಾಕ್ಷಾತ್ ಯುಗಪುರುಷನ ಸನ್ನಿಧಿಯಲ್ಲಿ ಕೃಷಿ ಕಾಯಕವನ್ನು ಕಲಿತು ಬೆಳೆದ ಹೆಮ್ಮೆ ನನಗಿದೆ
ನನ್ನಂತಹ ಲಕ್ಷಾಂತರ ಭಾರತೀಯ ರೈತರಿಗೆ ಈ ಯುಗಪುರುಷ ಸಂತನೆ ದೇವರು 🙏🏻
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!
ಕೃಪೆ – ವಾಟ್ಸಾಪ್ ಮೂಲದಿಂದ