ಈ ಜೆನ್ ಕಥೆಯ ವಿಷಯ ಎಲ್ಲದಕ್ಕೂ ಒಂದು ಅಂತ್ಯವಿದೆ ಎಂದು ಅರ್ಥ ಮಾಡಿಸಲು ಇಕ್ಕಿ ಜೆನ್ ಮಾಸ್ಟರ್ರವರ ಬಾಲ್ಯದ ಘಟನೆಯನ್ನು ಸುಂದರವಾದ ಜೆನ್ ಕಥೆಯ ಮೂಲಕ ವಿಷಯವನ್ನು ಅರ್ಥ ಮಾಡಿಸಲಾಗಿದೆ.
” ಸಾಯುವ ಸಮಯ ” ಜೆನ್ ಕಥೆ ವಿಷಯ
ಝೆನ್ ಮಾಸ್ಟರ್ ಇಕ್ಕಿಯು ಹುಡುಗನಾಗಿದ್ದಾಗಲೂ ಬಹಳ ಬುದ್ಧಿವಂತರಾಗಿದ್ದರು. ಅವರ ಬಾಲ್ಯದ ಒಂದು ಜೆನ್ ಕಥೆ ಇಲ್ಲಿದೆ. ಇಕ್ಕಿಯು ಅವರ ಶಿಕ್ಷಕರು ಒಂದು ಅಮೂಲ್ಯವಾದ ಟೀ ಕಪ್ ನ್ನು ಬಹಳ ಜತನದಿಂದ ಕಾಪಾಡಿಕೊಂಡು ಇಟ್ಟಿಕೊಂಡಿದ್ದರು, ಅಪರೂಪದ ಪುರಾತನವಾದ ಈ ಕಪ್ ಶಿಕ್ಷರಿಗೆ ತುಂಬ ಪ್ರಿಯವಾಗಿತ್ತು.
ಒಮ್ಮೆ ಅಕಸ್ಮಾತ್ಆಗಿ ಇಕ್ಕಿಯು ಈ ಕಪ್ ಅನ್ನು ಕೆಳಗೆ ಬೀಳಿಸಿ ಮುರಿದು ಹಾಕಿದನು. ಇದು ತನ್ನ ಶಿಕ್ಷಕರಿಗೆ ಗೊತ್ತಾದರೆ ಬಹಳ ಕೋಪಗೊಳ್ಳುವರು ಎಂದು ತಿಳಿದ್ದಿದ್ದನು. ಅದೇ ಸಮಯಕ್ಕೆ ತನ್ನ ಶಿಕ್ಷಕರು ಅವನ ಕಡೆಯೇ ನಡೆದು ಬರುತ್ತಿರುವುದನ್ನು ನೋಡಿದನು. ಕೂಡಲೇ ಒಡೆದ ಕಪ್ಪಿನ ತುಣುಕುಗಳನ್ನು ಆರಿಸಿ ತನ್ನ ಹಿಂದೆ ಹಿಡಿದಿಟ್ಟುಕೊಂಡನು.
ಮಾಸ್ಟರ್ ಕಾಣಿಸಿಕೊಂಡಾಗ, ಇಕ್ಕಿಯು, “ಜನರು ಯಾಕೆ ಸಾಯತ್ತಾರೆ ?” ಎಂದು ಪ್ರಶ್ನೆ ಮಾಡಿದನು.
” ಅದು ನೈಸರ್ಗಿಕವಾಗಿದೆ” ಎಂದು ಶಿಕ್ಷಕನು ವಿವರಿಸುತ್ತ. ” ಬದುಕಲು ಬಹಳ ಸಮಯ ಹೊಂದಿದ್ದರು, ಪ್ರತಿಯೊಂದೂ ಸಾಯಬೇಕಿದೆ. ಎಲ್ಲದ್ದಕ್ಕೂ ಒಂದು ಅಂತ್ಯವಿರುತ್ತದೆ .” ಎಂದು ಹೇಳಿದರು.
ಇಕ್ಕಿಯು , ಛಿದ್ರಗೊಂಡ ಕಪ್ನ ತುಣುಕುಗಳನ್ನು ತೋರಿಸುತ್ತ : “ಇದು ನಿಮ್ಮ ಕಪ್ ಸಾಯುವ ಸಮಯ, ಹಾಗಾಗಿ ಒಡೆದು ಹೋಗಿದೆ.” ಎಂದು ಹೇಳಿದನು.
ಇದನ್ನು ನೋಡಿ ಒಂದು ಕ್ಷಣ ದಂಗಾದ ಶಿಕ್ಷಕರು , ಸಾವರಿಸಿಕೊಂಡು ನಗುನಗುತ್ತಾ ಇಕ್ಕಿಯ ಕೆನ್ನೆ ಹಿಂಡಿದರು ಹಾಗು ಅವನ ಚಾಣಾಕ್ಷವಾಗಿ ಈ ಸಂದರ್ಭವನ್ನು ನಿಭಾಯಿಸಿದ್ದನ್ನು ನೋಡಿ ಮೆಚ್ಚಿದರು.