ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕನಕಧಾರಾ ಸ್ತೋತ್ರ ಹಿನ್ನೆಲೆ

“ಕನಕಧಾರಾ ಸ್ತೋತ್ರ”

ಶ್ರೀ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಅದ್ವೈತಕೇಸರಿ ಜಗದ್ಗುರು ಶ್ರೀ ಶಂಕರಾಚಾರ್ಯರಿಂದ ವಿರಚಿತವಾದ ಕನಕಧಾರಾ ಸ್ತೋತ್ರವನ್ನು ನಿತ್ಯವೂ ಪಠಿಸುವುದರಿಂದ ನಮ್ಮ ಸಕಲ ಮನೋಕಾಮನೆಗಳು ಪೂರ್ಣಗೊಳ್ಳುವುದರ ಜೊತೆಗೆ ಪ್ರಾಪಂಚಿಕ, ಪಾರಮಾರ್ಥಿಕ ಎರಡೂ ಸಾಧನೆಗಳು ಪೂರ್ಣಗೊಳ್ಳುತ್ತವೆ. ನಮಗೆ ಧನ – ಕನಕ, ಸಿರಿ – ಸಂಪತ್ತು, ಐಶ್ವರ್ಯ, ಯಶಸ್ನು, ಸೌಭಾಗ್ಯ, ವಿಜಯಗಳನ್ನು ದಯಪಾಲಿಸುವ ಮಹಾ ಕಾಮಧೇನು
“ಕನಕಧಾರಾ ಸ್ತೋತ್ರ”


ಭಾಗ್ಯವಂತರ ಮನೆಗಳಲ್ಲಿ ಐಶ್ವರ್ಯ ಸ್ವರೂಪಳಾಗಿ, ಜ್ಞಾನಿಗಳ ಅಂತರಂಗದಲ್ಲಿ ಬುದ್ಧಿಸ್ವರೂಪಳಾಗಿ, ಭಕ್ತರ ಹೃದಯದಲ್ಲಿ ಶ್ರದ್ಧಾ ಸ್ವರೂಪಳಾಗಿ, ಮೋಕ್ಷೇಚ್ಛುಗಳ ಆಂತರ್ಯದಲ್ಲಿ ಮುಕ್ತಿಸ್ವರೂಪಳಾಗಿ ರಾರಾಜಿಸುತ್ತಿರುವ ಮಹಾಲಕ್ಷ್ಮಿಯ ಕರುಣಾ ಕಟಾಕ್ಷ ಶ್ರೀ ಶಂಕರಾಚಾರ್ಯರ ಕೃಪಾಶೀರ್ವಾದದಿಂದ ಚಿನ್ನದ ಮಳೆಯನ್ನೇ ಕರೆದ ಮಹಾಸ್ತೋತ್ರವೇ ” ಕನಕಧಾರಾ ಸ್ತೋತ್ರ “. ಅದರ ಹಿನ್ನೆಲೆ ಹೀಗಿದೆ.
ಪರಮಹಂಸ ಪರಿವ್ರಾಜಕ ಶ್ರೀ ಶಂಕರಭಗವತ್ಪಾದರು ಸನ್ಯಾಸಿಗಳಾದ್ದರಿಂದ ಮಧುಕರ ( ಭಿಕ್ಷೆ ) ವೃತ್ತಿಯನ್ನು ಅನುಸರಿಸುತ್ತಿದ್ದರು. ತಮ್ಮ ದಿಗ್ವಿಜಯ ಸಂಚಾರ ಕಾಲದಲ್ಲಿ ಒಮ್ಮೆ ಕೇರಳದ ಕುಗ್ರಾಮವೋಂದಕ್ಕೆ ಬರುತ್ತಾರೆ. ತಮ್ಮ ಶಿಷ್ಯರೊಡಗೂಡಿ ದೈವಭಕ್ತನಾದ ಒಬ್ಬ ಬಡ ಬ್ರಾಹ್ಮಣನ ಮನೆಯ ಮುಂದೆನಿಂತು, “ಭವತಿ ಭಿಕ್ಷಾಂದೇಹಿ ” ಎಂದು ಭಿಕ್ಷೇಯನ್ನು ಬೇಡುತ್ತಾರೆ. ಆ ಬ್ರಾಹ್ಮಣನಾದರೋ ಕಡು ಬಡವ. ಮನೆ ಮಂದಿಗೆ ಊಟಕ್ಕಿಲ್ಲದ ಪರಿಸ್ಥಿತಿ. ಮನೆಗೆ ಭಿಕ್ಷೆಗೆ ಬಂದಿರುವವರು ಮಹಾ ಮಹಿಮರಾದ ಶಂಕರಾಚಾರ್ಯರು. ಬ್ರಾಹ್ಮಣ ತನ್ನ ಹೆಂಡತಿಗೆ ಏನಾದರೂ ಭಿಕ್ಷೆ ಇದ್ದರೆ ಯತಿಗಳಿಗೆ ನೀಡಲು ಹೇಳುತ್ತಾನೆ. ಆ ಸಾದ್ವಿಮಣಿಯೂ ಮಹಾ ದೈವ ಭಕ್ತೆ. ಕೊಡಲು ಮನೆಯಲ್ಲಿ ಏನೂ ಇಲ್ಲ. ಮನೆಗೆ ಬಂದ ಅತಿಥಿ ರೂಪದ ದೇವರನ್ನು ಬರಿಗೈಯಲ್ಲಿ ಕಳುಹಿಸುವುದು ಮಹಾಪಾಪವೆಂದರಿತು, ಮನೆಯಲ್ಲಿ ಹುಡುಕಿದಾಗ, ಒಂದು ಜಲಡಿಯಲ್ಲಿ ಇಟ್ಟಿದ್ದ ಒಣಗಿದ ನೆಲ್ಲಿಕಾಯಿಯೊಂದು ದೊರಕುತ್ತದೆ. ಆ ದಿನ ಆ ಒಣ ನೆಲ್ಲಿ ಕಾಯಿಯ ಪಾನಕ ಮಾಡಿ ಮನೆಯವರ ಹಸಿವು ನೀಗಿಸುವುದೆಮದು ಇಟ್ಟಿದ್ದುದು. ಅದನ್ನೇ ಯತಿಗಳಿಗೆ ನೀಡುವುದೆಂದು ನಿರ್ಧರಿಸುತ್ತಾಳೆ.
ತನ್ನ ಗುಡಿಸಲು ಮುಂದೆ ಭಿಕ್ಷೆಗಾಗಿ ಕಾಯುತ್ತಿರುವ ಶಂಕರರಿಗೆ ನಮಸ್ಕರಿಸಿ, ” ಸ್ವಾಮಿ ನಾವು ಕಡುಬಡವರು, ಮಹಾತ್ಮರಾದ ತಮ್ಮನ್ನು ಉಪಚರಿಸಲು ಮನೆಯಲ್ಲಿ ಏನು ಇಲ್ಲ. ಇದ್ದ ಒಂದು ನೆಲ್ಲಿಕಾಯಿಯನ್ನೇ ತಮಗೆ ಭಕ್ತಿಯಿಂದ ಅರ್ಪಿಸುತ್ತಿದ್ದೇನೆ, ದಯಮಾಡಿ ಸ್ವೀಕರಿಸಿ ಅನುಗ್ರಹಿಸಬೇಕು ” ಎಂದು ಕಾಲಿಗೆ ಬೀಳುತ್ತಾಳೆ. ಸಾಕ್ಷಾತ್ ಶಿವನ ಅವತಾರವಾಗಿದ್ದ, ಸರ್ವಜ್ಞರಾದ ಶಂಕರರು, ಆ ಬಡ ಹೆಂಗಸಿನ ತ್ಯಾಗ ಬುದ್ಧಿಯನ್ನೂ, ಭಕ್ತಿಯನ್ನೂ ಮನಗಂಡು ಆ ಕುಟುಂಬದ ಬಡತನವನ್ನು ಹೋಗಲಾಡಿಸಬೇಕೆಂದು ಸಂಕಲ್ಪಮಾಡಿ, ಆಕ್ಷಣವೇ ಜಗನ್ಮಾತೆ ಮಹಾಲಕ್ಷ್ಮಿಯನ್ನು ಕುರಿತು ಸ್ತೋತ್ರವೊಂದನ್ನು ರಚಿಸುತ್ತಾರೆ. ಹಾಗೂ ಮಹಾಲಕ್ಷ್ಮಿಯಲ್ಲಿ ಈ ಬಡ ಕುಟುಂಬವನ್ನು ಉದ್ಧಾರ ಮಾಡಬೇಕೆಂದು ಪ್ರಾರ್ಥಿಸುತ್ತಾರೆ. ಮಹಾಲಕ್ಷ್ಮಿಯ ದಿವ್ಯಾನುಗ್ರಹದಿಂದ ಆ ಬ್ರಾಹ್ಮಣನ ಮನೆಯ ಮುಂದೆ ಬಂಗಾರದ ನೆಲ್ಲಿಕಾಯಿಗಳ ಮಳೆಯೇ ಆಯಿತು. ಆ ಮಹಾಮಹಿಮ ಸ್ತೋತ್ರವೇ ” ಕನದಧಾರ ಸ್ತೋತ್ರ “. ಇದನ್ನು ‘ಕನಕವೃಷ್ಟಿಸ್ತೋತ್ರ’ ವೆಂದೂ ಕರೆಯುವುದುಂಟು. ಶಂಕರಭಗವತ್ಪಾದರ ಪವಾಡ, ಅನುಗ್ರಹಗಳಿಂದ ಬ್ರಾಹ್ಮಣನ ಕುಟುಂಬದವರೆಲ್ಲರೂ ಆನಂದ ತುಂಬಿರಲಾಗುತ್ತಾರೆ. ಶಂಕರರ ಶಿಷ್ಯವೃಂದ ದಿಗ್ಮೂಢವಾಗುತ್ತದೆ. ಬಡ ದಂಪತಿಗಳ ಕಣ್ಣಲ್ಲಿ ಆನಂದಾಶ್ರುಗಳು ದಾರಾಕಾರವಾಗಿ ಹರಿಯುತ್ತದೆ.

  ಭಾರತದ ಮಹಾನ್ ಪುರಾಣಗಳು ‌- ಅಷ್ಟಾದಶ ಪುರಾಣಗಳೆಂದು ಪ್ರಖ್ಯಾತವಾಗಿರುವ ಹದಿನೆಂಟು ಪುರಾಣ

ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)

Leave a Reply

Your email address will not be published. Required fields are marked *

Translate »