ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಧನುರ್ಮಾಸದಲ್ಲಿ ಸೂರ್ಯಗ್ರಹಣದ ಆಚರಣೆ ಹೇಗೆ?

ವಿಕಾರಿ ಸಂವತ್ಸರದ ಮಾರ್ಗಶಿರ ಕೃಷ್ಣ ಅಮಾವಾಸ್ಯೆಯಂದು ಬೆಳಗ್ಗೆ 8:04 ರಿಂದ 11:03ರ ವರೆಗೆ ನಡೆಯುವ ಸೂರ್ಯಗ್ರಹಣದ ಆಚರಣೆಯನ್ನು ಹೇಗೆ ಆಚರಿಸಬೇಕು ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಶ್ರೀ ವಿಷ್ಣುದಾಸ ನಾಗೇಂದ್ರ ಆಚಾರ್ಯ ರು ಶಾಸ್ತ್ರ ಸಮ್ಮತವಾದ ನಿರೂಪಣೆಯೊಂದಿಗೆ ಪೂರ್ಣ ಲೇಖನವನ್ನು pdf ರೂಪದಲ್ಲಿ ನೀಡಿದ್ದಾರೆ. ಅವರ ಲೇಖನದ ಕೊಂಡಿಯೊಂದಿಗೆ ಸೂರ್ಯಗ್ರಹಣದ ಇತರ ವಿಷಯಗಳನ್ನು ಸಂಗ್ರಹಿಸಿ ಈ ಕೆಳಗೆ ನೀಡಲಾಗಿದೆ.

ಕೇತುಗ್ರಸ್ತ ಕಂಕಣಾಕೃತಿ ಸೂರ್ಯಗ್ರಹಣ

ದಿನಾಂಕ 26 ಡಿಸೆಂಬರ 2019 ಗುರುವಾರ (ಬೆಳಿಗ್ಗೆ)

ಶ್ರೀಶಕೆ 1941 ಶ್ರೀವಿಕಾರಿ ನಾಮ ಸಂವತ್ಸರ ಮಾರ್ಗಶಿರ ಕೃಷ್ಣ ಅಮಾವಾಸ್ಯೆ (ಎಳ್ಳ ಅಮಾವಾಸ್ಯೆ)

ಕರ್ನಾಟಕ,ತಮಿಳನಾಡು ಹಾಗೂ ಕೇರಳದ ಕೆಲವು ಪ್ರದೇಶದಲ್ಲಿ ಮಾತ್ರ ಕಂಕಣಾಕೃತಿಯು ಅಂದರೆ ವಜ್ರದ ಉಂಗುರದಂತೆ ಕಾಣಿಸುವದು. ಉಳಿದಂತೆ ಭಾರತದಾದ್ಯಂತ ಖಂಡಗ್ರಾಸವಾಗಿ ಕಾಣಿಸುವದು.

ವಜ್ರದುಂಗುರ ಕಾಣಿಸುವ ಕೆಲವು ಪ್ರದೇಶಗಳು–
ಮಡಿಕೇರಿ,ಕಟೀಲು,ಸೂರತ್ಕಲ್,ಮಂಗಳೂರು, ಹಂಪನಕಟ್ಟೆ, ಉಳ್ಳಾಲ, ಸರಗೂರು, ಬಂಟ್ವಾಳ, ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ಬಯಲುಕುಪ್ಪೆ, ಕಾಸರಗೋಡು, ತಲಕಾವೇರಿ, ಗುಂಡ್ಲುಪೇಟೆ, ನಂಜನಗೂಡು, ಹುಣಸೂರು. ಪಿರಯಾಪಟ್ಟಣ.
ಹೆಚ್,ಡಿ. ದೇವನಕೋಟೆ, ಪೊನ್ನಂಪೇಟೆ, ವಿರಾಜಪೇಟೆ.
ಕೋಝಿಕೋಡ್,ಮಲ್ಲಪುರಂ,ಊಟಿ, ಕೋಯಿಮುತ್ತುರ್, ತಿರುಪ್ಪುರ್, ಈರೋಡ್,ಮಧುರೈ, ತಿರುಚನಾಪಳ್ಳಿ, ಮಧುರೈ. ಪುದುಕ್ಕೊಟೈ, ಪಟ್ಟುಕೊಟೈ, ಶಿವಗಂಗಾ, ಕರೈಕುಡಿ, ರಾಮೇಶ್ವರ.

ವೇಧಕಾಲ :
ಖಂಡಗ್ರಾಸ ಗ್ರಹಣವು ಗುರುವಾರ ಬೆಳಿಗ್ಗೆ ಮೊದಲನೇ ಪ್ರಹರದಲ್ಲಿ ಆಗುವದರಿಂದ ಅದರ ಹಿಂದಿನ ದಿನವಾದ ಬುಧವಾರ ರಾತ್ರಿ 08.05 ರಿಂದ ವೇಧಕಾಲವಿದೆ. ಬುಧವಾರ ರಾತ್ರಿ 08.05ರ ನಂತರ ವೇಧಕಾಲದ ಉಪವಾಸಾದಿ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಗರ್ಭಿಣಿಯರು, ಬಾಲಕರು, ವೃದ್ಧರು ಹಾಗೂ ಅಶಕ್ತರು ಅರ್ಧಯಾಮ ಅಂದರೆ ಬುಧವಾರ ರಾತ್ರಿ 02.05 ನಿಮಿಷದವರೆಗೂ ಉಪಹಾರವನ್ನು ಅಥವಾ ಔಷಧೋಪಚಾರವನ್ನು ಮಾಡಬಹುದು. ಅದೂ ಕೂಡ ಸಾಧ್ಯವಾಗದರು ತೀವ್ರ ಅನಾರೋಗ್ಯದ ಸಂದರ್ಭದಲ್ಲಿ ಮುಹೂರ್ತ ಮಾತ್ರ ಅಂದರೆ ಗುರುವಾರ ಬೆಳಿಗ್ಗೆ 07.17ರ ಒಳಗೆ ಔಷಧಿ ಅಥವಾ ಅಲ್ಪ ಆಹಾರವನ್ನು ತೆಗೆದುಕೊಳ್ಳಬಹುದು. ಗ್ರಹಣಕಾಲದಲ್ಲಿ ಎಲ್ಲರೂ ಉಪವಾಸಾದಿ ನಿಯಮಗಳನ್ನು ಪಾಲಿಸಬೇಕು.

  ಚಾಲುಕ್ಯರು ಕಟ್ಟಿದ ಗುಜರಾತಿನ ಸೂರ್ಯ ಕುಂದ ದೇವಾಲಯ…!

ಸೂರ್ಯಗ್ರಹಣ ಫಲ

ಶುಭ ಕರ್ಕ ತುಲಾ ಕುಂಭ ಮೀನ
ಮಿಶ್ರ ಮೇಷ ಮಿಥುನ ತುಲಾ ವೃಶ್ಚಿಕ
ಅನಿಷ್ಟ ವೃಷಭ ಕನ್ಯಾ ಧನು ಮಕರ

ಈ ಗ್ರಹಣವು ಮೂಲಾ ನಕ್ಷತ್ರ ಧನು ರಾಶಿಯಲ್ಲಿ ಸಂಭವಿಸುವದರಿಂದ ಈ ನಕ್ಷತ್ರ-ರಾಶಿಯವರು ಮತ್ತು ಅನಿಷ್ಟ ಫಲವಿರುವ ಎಲ್ಲರೂ ಗ್ರಹಣಶಾಂತಿ, ಜಪ,ತಪ,ದಾನಾದಿಗಳನ್ನು ಮಾಡಬೇಕು. ಗ್ರಹಣದ ಅವಧಿಯು ಪೂರ್ಣವಾಗಿ ಲಭ್ಯವಿರುವದರಿಂದ ಪಿತೃತರ್ಪಣ, ನದಿ, ಸಮುದ್ರ ಸ್ನಾನ, ಅಭೀಷ್ಟ ಮಂತ್ರ ಜಪವನ್ನು ಮಾಡುವದರಿಂದ ಫಲಸಿದ್ಧಿಯಾಗುವದು.

ಪ್ರಮುಖ ಊರುಗಳಲ್ಲಿ ಸೂರ್ಯಗ್ರಹಣದ ಸಮಯ

ಊರು ಸ್ಪರ್ಷ ಮಧ್ಯ ಮೋಕ್ಷ

ವಿಜಯಪುರ 08.05 09.26 11.03
ಬಾಗಲಕೋಟ 08.05 09.26 11.04
ಧಾರವಾಡ 08.04 09.24 11.02
ಹುಬ್ಬಳ್ಳಿ 08.04 09.25 11.03
ಹಾವೇರಿ 08.04 09.25 11.04
ಗದಗ 08.05 09.25 11.04
ಬೆಳಗಾವಿ 08.04 09.24 11.01
ಕಲಬುರ್ಗಿ 08.06 09.28 11.06
ಯಾದ್ಗೀರ 08.06 09.28 11.07
ಕೊಪ್ಪಳ 08.05 09.24 11.05
ರಾಯಚೂರ 08.06 09.28 11.08
ಬಳ್ಳಾರಿ 08.06 09.28 11.08
ಹೊಸಪೇಟೆ 08.05 09.27 11.06
ಬೀದರ 08.07 09.28 11.07
ಶಿವಮೊಗ್ಗ 08.05 09.26 11.05
ದಾವಣಗೆರೆ 08.05 09.26 11.05
ಮೈಸೂರು 08.06 09.28 11.09
ಮಂಡ್ಯ 08.06 09.29 11.10
ಚಿತ್ರದುರ್ಗ 08.05 09.27 11.07
ತುಮಕೂರು 08.06 09.29 11.10
ಗಂಗಾವತಿ 08.06 09.27 11.06
ಬಸವಕಲ್ಯಾಣ 08.06 09.28 11.06
ಸುಳ್ಯ 08.06 09.27 (ಕಂ) 11.05
ನೆಲಮಂಗಲ 08.06 09.29 11.11
ಕನಕಪುರ 08.06 09.29 11.11
ಮುಳಬಾಗಿಲು 08.07 09.31 11.13
ಶಿಕಾರಿಪುರ 08.05 09.26 11.04
ಸವದತ್ತಿ 08.04 09.25 11.03
ಹಾನಗಲ್ಲ 08.04 09.25 11.03
ಮಂಗಳೂರು 08.04 09.25 (ಕಂ) 11.03
ಹಾಸನ 08.05 09.27 11.07
ಉಡುಪಿ 08.04 09.25 11.03
ಧರ್ಮಸ್ಥಳ 08.04 09.25 11.03
ಚಾಮರಾಜನಗರ 08.05 09.29 11.10
ಮಡಿಕೇರಿ 08.05 09.27(ಕಂ) 11.06
ಬೆಂಗಳೂರು 08.06 09.30 11.11
ಸೋಲಾಪುರ 08.05 09.26 11.03
ಜತ್ತ 08.05 09.25 11.02
ಕೊಲ್ಹಾಪುರ 08.04 09.23 11.00
ಪುಣೆ 08.04 09.23 10.58
ಚಿಕ್ಕಮಗಳೂರು 08.05 09.26 11.06
ಕಾರವಾರ 08.04 09.24 11.00
ಗೋಕಾಕ 08.04 09.24 11.01
ಗೋಕರ್ಣ 08.04 09.24 11.01
ಚಿಕ್ಕೋಡಿ 08.04 09.24 11.01
ಜಮಖಂಡಿ 08.05 09.25 11.02
ಬದಾಮಿ 08.05 09.26 11.04
ಮುಧೋಳ 08.05 09.25 11.02
ರಾಣೆಬೆನ್ನೂರ 08.04 09.26 11.04
ಶಿರಸಿ 08.04 09.25 11.02
ಶೃಂಗೇರಿ 08.04 09.25 11.04
ರೋಣ 08.05 09.26 11.04
ಮುಂಬೈ 08.04 09.21 10.55
ಅಹ್ಮದನಗರ 08.05 09.24 10.59
ಸಾಂಗ್ಲಿ 08.04 09.24 11.00
ಸಾತಾರಾ 08.04 09.23 10.58
ಹೈದರಾಬಾದ 08.08 09.30 11.10
ಚಿನೈ 08.09 09.35 11.19
ವಿಶಾಖಪಟ್ಟಣ 08.13 09.40 11.24
ಪಣಜಿ 08.04 09.23 10.59
ಅಹಮದಾಬಾದ 08.06 09.21 10.52
ಜೈಪುರ 08.13 09.28 10.55
ಉಜೈನ್ 08.09 09.26 10.58
ದೆಹಲಿ 08.17 09.31 10.57


Leave a Reply

Your email address will not be published. Required fields are marked *

Translate »