ಹೌಂದೇರಾಯನ ಕುಣಿತವು ಮೂಲತಃ ತುಳಸಿ ಪೂಜೆಯ ಸಂದರ್ಭದಲ್ಲಿ ದೇವತಾರಾಧನೆಯ ಭಾಗವಾಗಿ ಜನಪ್ರಿಯವಾದ ಜಾನಪದ ಕಲಾ ಪ್ರಕಾರ. ಉಡುಪಿ ಜಿಲ್ಲೆಯ ಕುಂದಾಪುರ ಕರಾವಳಿ ಪ್ರದೇಶದಲ್ಲಿ ಈ ನೃತ್ಯಾರಾಧನೆ ಹೆಚ್ಚು ಪ್ರಸಿದ್ಧ.
ಕುಂದಾಪುರ, ಅಂಪಾರು ಭಾಗಗಳಲ್ಲಿ ಆಳ್ವಿಕೆ ನಡೆಸುತ್ತಿದ್ದ ನಂದೂರಾಯನೆಂಬ ಒರ್ವ ದೊರೆಯ ಭಂಡಾರವೆಲ್ಲ ಒಮ್ಮೆ ದಿವಾಳಿಯಾಗಿ ಹೋದಾಗ ಆತನ ಮಂತ್ರಿ ಹೌಂದೇರಾಯನು ಪುನಃ ತುಂಬಿಸಿಕೊಟ್ಟನೆಂಬ ಸ್ಮರಣಾರ್ಥವಾಗಿ ಸಮೃದ್ಧಿ ತುಂಬುವ ಕುಣಿತವಾಗಿ ಇದು ಸಂಪ್ರದಾಯದಲ್ಲಿದೆ.
“ಹೌಂದೇರಾಯನವಾಲ್ಗಸಂಧಿ ” ತುಳಸೀ ಕುಣಿತ
ಹೌಂದರಾಯನ ವಾಲ್ಗುವೇ…
ಹೋಹೋ ವಾಲ್ಗುವೇ… ||
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ…
ಸ್ವಾಮಿ ಭೂಮಿ ವಾಲ್ಗುವೇ…
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ… |
ದೇವ ದೇವತೆಗೆ ವಾಲ್ಗುವೇ..
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ… |
ಧನಿಗಳಿಗೆ ವಾಲ್ಗುವೇ…
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ… |
ಧನಿಗಳ ಮನಿಗೆ ಹೊದ್ನಲ್ಲೇ…
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ… |
ತಾಯಿ ತುಳ್ಸೀ ಪೂಜಿಗೇ
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ… |
ದವಸ ಧಾನ್ಯ ಬೇಕಲ್ಲಾ…
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ… |
ಏನೋ ಬಂದೆ ಒಕ್ಕಲೇ ??
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ… |
ಈ ಶುಕ್ರವಾರ ದಿನದಂದೂ
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ… |
ಸ್ವಾಮೀ ಪೂಜಾ ಮಾಡ್ಬೇಕು
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ… |
ದವಸ ಧಾನ್ಯ ಕೊಡಬೇಕು
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ… |
ಧನಿಗಳ ತಾಯಿ ಕರದ್ರಲ್ಲಾ
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ… |
ಒಕ್ಕಲು ಮಗ ಬಂದ್ನಲ್ಲಾ..
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ… |
ಅಂವ್ನಿಗೆ ದವಸ ಕೊಡಬೇಕು
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ… |
ತಾಯೀಲಕ್ಷ್ಮೀಬಂದ್ರಲ್ಲಾ..
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ… ||
ದವಸ ಧಾನ್ಯ ಕೊಟ್ರಲ್ಲಾ..
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ… |
ಈ ಶುಕ್ರವಾರ ದಿನದಂದು
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ… |
ಸ್ವಾಮೀಪೂಜೆಇಟ್ಕೊಂಡು
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ… |
ಧನಿಗಳನ್ನಾವು ಕರಸ್ಕೊಂಡೂ
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ… |
ಪೂಜೇನ್ನಾವು ಮಾಡ್ದುವಲ್ಲಾ
ಹೌಂದರಾಯನ ವಾಲ್ಗುವೇ…
ಹೋ ಹೋ ವಾಲ್ಗುವೇ… |
ಶ್ರೀ ರಾಮ ರಾಮ ಗೋವಿಂದೋ.. ಗೋವಿಂದೋ..
-ಸಂಗ್ರಹ : ಪ್ರವೀಣ್ ಡಿ. ಕಟೀಲ್