ತುಳಸಿ…🍃
ತುಳಸೀ ದಳಗಳನ್ನು ಹೇಗೆ ಉಪಯೋಗಿಸಬೇಕು…?
ದೇವರ ಪೂಜೆ ಅಥವ ಆರಾಧನೆಯ ಸಮಯದಲ್ಲಿ ತುಳಸಿ ಗಿಡದ ಎಲೆಗಳನ್ನು ಬಳಸುವುದು ಸಾಮಾನ್ಯ ಮತ್ತು ಪ್ರಮುಖವಾದುದು. ಇದರ ಪರಿಮಳ ಇನ್ನಿತರೆ ಸುವಾಸನೆಯುಕ್ತ ಹೂವುಗಳಿಗಿಂತಲೂ ವಿಭಿನ್ನವಾಗಿದ್ದು ಶ್ರೇಷ್ಠವಾಗಿದೆ. ಸುಗಂಧ ಹೂವು ಅರಳಿದಾಗ ಮಾತ್ರ ಪರಿಮಳವನ್ನು ಬೀರುತ್ತವೆ, ಆದರೆ ತುಳಸಿ ಸಸ್ಯದ ಪ್ರತಿ ಭಾಗವೂ ಪರಿಮಳವನ್ನು ಹೊಂದಿರುತ್ತದೆ. ಇದರ ಬೀಜಗಳು, ಕಾಂಡ, ಬೇರು ಎಲ್ಲವೂ ವಿಶೇಷ ಪರಿಮಳವನ್ನು ಹೊಂದಿದ್ದು ಹಲವಾರು ಗುಣಗಳಿಂದ ಕೂಡಿದೆ. ಅಷ್ಟೆ ಅಲ್ಲದೆ ತುಳಸಿಯನ್ನು ಬೆಳೆಸುವ ಮಣ್ಣು ಮತ್ತು ಸುತ್ತಲಿನ ಪರಿಸರ ಸಹ ಅದರ ಪರಿಮಳವನ್ನು ಹೊಂದಿರುತ್ತದೆ. ನಾವು ಮಾಡಬೇಕಾದುದು, ಪ್ರತಿನಿತ್ಯದಲ್ಲೂ ಕೇವಲ 18 ತುಳಸೀ ದಳಗಳನ್ನು ಉಪಯೋಗಿಸಿದರೆ ಸಾಕು, ನಮ್ಮ ಬದುಕು ಹಸನಾಗುತ್ತದೆ. ಅಷ್ಟೇ ಅಲ್ಲದೆ ಒಂದು ಪ್ರತೀತಿಯ ಪ್ರಕಾರ ಒಂದು ತುಳಸಿ ದಳವನ್ನು ಭಗವಂತನಾದ ಶ್ರೀಮನ್ ನಾರಾಯಣನಿಗೆ ಅರ್ಪಿಸಿದರೆ ಸಾಕು, ಸಂತೃಪ್ತನಾಗುತ್ತಾನೆ ಎಂಬ ನಂಬಿಕೆ ಭಕ್ತರದು.
ಚತುಃ ಕರ್ಣೇ, ಮುಖೇ ಚೈಕಂ, ನಾಭಾವೇಕಂ, ತಥೈವ ಚ |
ಶಿರಸ್ಯೇಕಂ, ತಥಾ ಪ್ರೋಕ್ತಂ, ತೀರ್ಥೇ ತ್ರಯಮುದಾಹೃತಮ್ ||
ಅನ್ನೋಪರಿ ತಥಾ ಪಂಚ, ಭೋಜನಾಂತೇ ದಲತ್ರಯಮ್ |
ಏವಂ ಶ್ರೀತುಳಸೀ ಗ್ರಾಹ್ಯಾ, ಅಷ್ಟಾದಶದಲಾ ಸದಾ ||
ಒಂದೊಂದು ಕಿವಿಯಲ್ಲಿ ಎರಡರಂತೆ ಎರಡು ಕಿವಿಗಳಲ್ಲಿ ನಾಲ್ಕು ದಳಗಳನ್ನು, ಬಾಯಿಯಲ್ಲಿ ಒಂದು ದಳವನ್ನು, ನಾಭಿಯಲ್ಲಿ ಒಂದು ದಳವನ್ನು, ಶಿರಸ್ಸಿನಲ್ಲಿ ಒಂದು ದಳವನ್ನು ಧರಿಸಿ, ಮೂರು ದಳಗಳನ್ನು ತೀರ್ಥಪಾನ ಮಾಡುವಾಗ, ಪಂಚಪ್ರಾಣಾಹುತಿಯ ಸಮಯದಲ್ಲಿ ಐದು ದಳಗಳನ್ನು, ಭೋಜನದ ತರುವಾಯ ಎರಡು ದಳಗಳನ್ನು ಉಪಯೋಗಿಸಬೇಕು, ಹೀಗೆ ಪ್ರತಿನಿತ್ಯದಲ್ಲೂ 18 ತುಳಸೀ ದಳಗಳನ್ನು ಉಪಯೋಗಿಸಬೇಕು.
ಓಂ ನಮೋ ಭಗವತೇ ವಾಸುದೇವಾಯ
ಕೃಷ್ಣ…ಕೃಷ್ಣ..ಕೃಷ್ಣ