ಗ್ರಾಮೀಣ ಪ್ರದೇಶಗಳ ಭೂ ಮಾಲಿಕತ್ವದ ದಾಖಲೆಗಳು ಆನ್‍ಲೈನ್‍ನಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಇ ಸ್ವತ್ತು ಪೋರ್ಟಲ್ ಆರಂಭಿಸಿದೆ. ಇದರಲ್ಲಿ ಆಸ್ತಿಯ ದಾಖಲೆಗಳು ದೊರಕುತ್ತವೆ. ಈ ಮೂಲಕ ಭೂಮಿ ಮತ್ತು ಸ್ವತ್ತುಗಳಿಗೆ ಸಂಬಂಧಪಟ್ಟ ವಂಚನೆ, ಪೋರ್ಜರಿಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿದೆ. ಅನಧಿಕೃತ ಬಡಾವಣೆ ನಿರ್ಮಾಣವನ್ನೂ ತಡೆಯಲು ಈ ಪೋರ್ಟಲ್ ಸಹಕರಿಸುತ್ತದೆ.
• ಈ – ಸ್ವತ್ತು ಕಾರ್ಯ
ಪ್ರತಿಯೊಂದು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಪ್ರಪಾರ್ಟಿಗಳ ರೆಕಾರ್ಡ್ ಆಫ್ ಓನರ್‍ಶಿಪ್ ಮತ್ತು ಇತರ ವಿವರಗಳನ್ನು ಇ- ಸ್ವತ್ತು ಕರ್ನಾಟಕದ ಮೂಲಕ ನಿರ್ವಹಣೆ ಮಾಡಲಾಗುತ್ತದೆ. ವಂಶಪಾರಂಪರ್ಯ ದಾಖಲೆಗಳು, ಮಾಲೀಕತ್ವ ವರ್ಗಾವಣೆ ಅಥಾವ ಪ್ರಾಪರ್ಟಿ ಗಿಪ್ಟ್, ಕೋರ್ಟ್ ಕೇಸ್ ಇತ್ಯಾದಿ ವಿವರಗಳನ್ನು ಇದರಲ್ಲಿ ಅಪಡೇಟ್ ಮಾಡಲಾಗುತ್ತದೆ. ಈ ಪೋರ್ಟಲ್ ಮೂಲಕ ಗ್ರಾಮಪಂಚಾಯತ್ ಅಥವಾ ಇತರೆ ಸಂಬಂಧಪಟ್ಟ ಸರಕಾರದ ಇಲಾಖೆಗಳು, ಕೋರ್ಟ್‍ಗಳು, ನಗರ ಪ್ರಾಧಿಕಾರ ಕಛೇರಿಗಳ ಜೊತೆಗೆ ಪ್ರಾಪರ್ಟಿ ವಿವರವನ್ನು ಹಂಚಿಕೊಳ್ಳುವ ಮೂಲಕ ಪೋರ್ಜರಿ ತಡೆಯಬಹುದು.
# ಇ- ಸ್ವತ್ತಿನಲ್ಲಿ ಯಾವೆಲ್ಲ ದಾಖಲೆಗಳು ಲಭ್ಯ
ಇ -ಸ್ವತ್ತು ಪೋರ್ಟಲ್‍ನಲ್ಲಿ ನಮೂನೆ 9 ಮತ್ತು ನಮೂನೆ 11 ದಾಖಲೆಗಳು ಇರುತ್ತವೆ.
# ನಮೂನೆ 9 :
ಫಾರ್ಮ 9 ಗೆ ಎ – ಖಾತಾ ದಾಖಲೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಗ್ರಾಮ ಪಂಚಾಯತಿಗಳು ತಮ್ಮ ವ್ಯಾಪ್ತಿಯಲ್ಲಿ ಕೃಷಿಯೇತರ ಭೂಮಿಗಳನ್ನು ಈ ದಾಖಲೆ ಮೂಲಕ ನಿರ್ವಹಿಸುತ್ತದೆ. ಗ್ರಾಮ ಪಂಚಾಯಿತಿಯು ನಮೂನೆ 9 ನೀಡಬೇಕಿದ್ದರೆ ಈ ಮುಂದಿನ ನಿಯಮಗಳನ್ನು ಪಾಲಿಸಬೇಕು.
• ಕರ್ನಾಟಕ ಲ್ಯಾಂಡ್ ರೆವೆನ್ಯೂ ಕಾಯಿದೆ 1964 ರ ಅನ್ವಯ ಸಂಬಂಧಪಟ್ಟ ಕಂದಾಯ ಇಲಾಕೆಯಡಿ ಕೃಷಿಯೇತರ ಭೂಮಿಯೆಂದು ಪ್ರಾಪರ್ಟಿಯನ್ನು ಕಾನೂನು ಪ್ರಕಾರವಾಗಿ ಕನ್ವರ್ಟ್ ಮಾಡಿರಬೇಕು.
• ಸಂಬಂಧಪಟ್ಟ ಸರ್ಕಾರದ ಇಲಾಖೆಯಿಂದ ಟೌನ್ ಮತ್ತು ಕಂಟ್ರಿ ಪ್ಲಾನಿಂಗ್ ಕಾಯಿದೆಯಡಿ ಯೋಜನೆಗೆ ಅನುಮತಿ ಪಡೆದಿರಬೇಕು.
• ಈ ಪ್ರಾಪರ್ಟಿ ದಾಖಲೆಗಳನ್ನು ಮತ್ತು ಸ್ಥಳವನ್ನು ತಹಶೀಲ್ದಾರ್ ಮೂಲಕ ದೃಡೀಕರಿಸಬೇಕು.(ಸ್ಕೆಚ್ ಜೊತೆಗೆ)
# ಫಾಮ್ 9 ಗೆ ಅಗತ್ಯವಿರುವ ದಾಖಲೆಗಳು
• ಪ್ರಾಪರ್ಟಿಯು ಗ್ರಾಮಠಾಣದ ವ್ಯಾಪ್ತಿಗೆ ಬರುವುದಾದರೆ ಈ ಮುಂದಿನ ದಾಖಲೆಗಳು ಬೇಕು. ಸರ್ವೇ ಮಾಡಿದ ಮತ್ತು ತಹಶೀಲ್ದಾರ್‍ರಿಂದ ದೃಢೀಕರಿಸಿದ ಗ್ರಾಮಾಠಾಣ ಸ್ಕೆಚ್
• ಕನ್ವರ್ಟಡ್ ಪ್ರಾಪರ್ಟಿಯಾಗಿದ್ದರೆ ಮಾಲಿಕತ್ವ ದಾಖಲೆಗಳು. ಕಂದಾಯ ಇಳಾಖೆ ನಿಡಿದ ಕನ್ವರ್ಷನ್ ಆದೇಶ. ಸಂಬಂಧಪಟ್ಟ ಪ್ರಾಧಿಕಾರವು ಪ್ಲಾನ್‍ಗೆ ನೀಡಿದ ಅನುಮತಿ.
• ಸರಕಾರದ ವಸತಿ ಯೋಜನೆಯಡಿ ನಿಡಿರುವ ಪ್ರಾಪರ್ಟಿಯಾಗಿದ್ದರೆ ಸಂಬಂಧಪಟ್ಟ ಪ್ರಾಧಿಕಾರವು ನೀಡಿದ ಹಕ್ಕು ಪತ್ರ ಮತ್ತು ಸಾಂಕ್ಷನ್ ಆರ್ಡರ್
• ಈ ಎಲ್ಲ ರೀತಿ ಪ್ರಾಪರ್ಟಿಗಳಿಗೂ ಮುಂದಿನ ದಾಖಲೆಗಳು ಅಗತ್ಯ ಅರ್ಜಿದಾರರ ಭಾವಚಿತ್ರ, ಗುರುತಿನ ಪತ್ರ, ವಿಳಾಸ ದಾಖಲೆ( ರೇಷನ್ ಕಾರ್ಡ್, ಪಾನ್ ಕಾರ್ಡ್, ಪಾಸ್‍ಪೋರ್ಟ್ ಅಥವಾ ಆಧಾರ ಕಾರ್ಡ್ ಇತ್ಯಾದಿ)